For Quick Alerts
ALLOW NOTIFICATIONS  
For Daily Alerts

ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!

|

ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಕಾಯಿಲೆಯಾಗಿದ್ದ ಮಧುಮೇಹ ಇಂದು ಬಡವ ಬಲ್ಲಿದ, ಹಿರಿಯ ಕಿರಿಯನೆಂಬ ಭೇದ ಪರಿಗಣಿಸದೇ ಎಲ್ಲರನ್ನೂ ಆವರಿಸುತ್ತಿದೆ. ಅದರಲ್ಲೂ ಭಾರತೀಯರಲ್ಲಿ ಎಪ್ಪತ್ತರ ದಶಕದಲ್ಲಿ ಅಪರೂಪವಾಗಿದ್ದ ಸಕ್ಕರೆ ಕಾಯಿಲೆ ಇಂದು ಕಾಳಜಿಗೆ ಕಾರಣವಾಗಿದೆ. ಅಲ್ಲದೇ ವಿದೇಶಗಳಲ್ಲಿರುವ ಭಾರತೀಯರಿಗೂ ಮಧುಮೇಹ ಹೆಚ್ಚಿನ ಪ್ರಮಾಣದಲ್ಲಿರುವುದು ಆತಂಕಕಾರಿಯಾಗಿದೆ.

ಇದಕ್ಕೆ ಕಾರಣವನ್ನು ಹುಡುಕಿದರೆ ಲಭ್ಯವಾದ ಸೌಲಭ್ಯಗಳ ಕಾರಣದಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿರುವು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ತಜ್ಞರು ಈ ವಾದವನ್ನು ಸುಲಭವಾಗಿ ಒಪ್ಪದೆ ಇತರ ಕಾರಣಗಳನ್ನೂ ಹೆಸರಿಸುತ್ತಾರೆ. ಅನುವಂಶೀಯ ಕಾರಣಗಳು ಮಧುಮೇಹಕ್ಕೆ ಪ್ರಮುಖವಾದರೆ, ಒತ್ತಡ, ಆಹಾರ ಸೇವನೆಯ ಅಭ್ಯಾಸ, ಆಹಾರದಲ್ಲಿ ನಾರಿನ ಕೊರತೆ, ನಡುರಾತ್ರಿಯ ಊಟ ಮೊದಲಾದವು ಇತರ ಕಾರಣಗಳಾಗಿವೆ. ಮಧುಮೇಹವನ್ನು ನಿಯಂತ್ರಣದಲ್ಲಿಡುವ ಸೂಪರ್ ತರಕಾರಿಗಳು

ಅಷ್ಟಕ್ಕೂ ಮಧುಮೇಹವೆಂದರೇನು? ರಕ್ತದಲ್ಲಿನ ಸಕ್ಕರೆಯನ್ನು ಬಳಸಿಕೊಳ್ಳಲು ಮೇದೋಜೀರಕ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ಅಗತ್ಯವಾಗಿದೆ. ಒಂದು ವೇಳೆ ಇನ್ಸುಲಿನ್ ಉತ್ಪಾದನೆಯಾಗದಿದ್ದರೆ (ಟೈಪ್-1) ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಸಲು ಅಸಮರ್ಥವಾದರೆ (ಟೈಪ್-2) ಮಧುಮೇಹ ಎಂದು ಕರೆಯಲಾಗುತ್ತದೆ. ಆದರೆ ಮಧುಮೇಹಿಗಳಿಗೆ ತಮ್ಮನ್ನು ಈ ರೋಗ ಯಾವಾಗ ಆವರಿಸುತ್ತದೆ ಎಂಬ ಅರಿವೇ ಇರುವುದಿಲ್ಲ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ನಿಧಾನವಾಗಿ ಆವರಿಸಿಕೊಳ್ಳುತ್ತಾ ಒಂದು ಹಂತದಲ್ಲಿ ದಿಢೀರನೇ ಕುಸಿದುಬಿದ್ದಾಗಲೇ ತಪಾಸಣೆಯಿಂದ ಮಧುಮೇಹವಿದ್ದುದು ತಿಳಿದುಬರುತ್ತದೆ. ಆದರೆ ಈ ಪರಿಸ್ಥಿತಿಗೆ ಒಳಗಾಗುವ ಮೊದಲೇ ದೇಹ ಹಲವು ಸೂಚನೆಗಳನ್ನು ನೀಡುತ್ತದೆ. ಮಧುಮೇಹ ಆಗಮಿಸುತ್ತಿರುವ ಸ್ಪಷ್ಟ ಸೂಚನೆಗಳನ್ನು ಕೆಳಗಿನ ಸ್ಲೈಡ್ ಶೋ ಪರಿಚಯಿಸುತ್ತಿದೆ..

ಪದೇ ಪದೇ ಮೂತ್ರವಿಸರ್ಜನೆಗೆ ಅವಸರವಾಗುವುದು

ಪದೇ ಪದೇ ಮೂತ್ರವಿಸರ್ಜನೆಗೆ ಅವಸರವಾಗುವುದು

ಮಧುಮೇಹ ಆವರಿಸುತ್ತಿರುವ ಸ್ಪಷ್ಟ ಸೂಚನೆ ಎಂದರೆ ಮೂತ್ರಕ್ಕೆ ಪದೇ ಪದೇ ಅವಸರವಾಗುವುದು. ಏಕೆಂದರೆ ರಕ್ತದಲ್ಲಿನ ಸಕ್ಕರೆ ಬಳಸಲ್ಪಡದೇ ತ್ಯಾಜ್ಯದಂತೆ ವಿಸರ್ಜಿಸಲ್ಪಡುತ್ತದೆ. ಈ ಪ್ರಮಾಣ ಮೂತ್ರವನ್ನು ಹೆಚ್ಚಿಸುವುದರಿಂದ ಮೂತ್ರಕ್ಕೆ ಪದೇ ಪದೇ ಅವಸರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪದೇ ಪದೇ ಮೂತ್ರವಿಸರ್ಜನೆಗೆ ಅವಸರವಾಗುವುದು

ಪದೇ ಪದೇ ಮೂತ್ರವಿಸರ್ಜನೆಗೆ ಅವಸರವಾಗುವುದು

ಅಂದರೆ ಸುಮಾರು ಎರಡು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಮೂತ್ರಕ್ಕೆ ಅವಸರವಾದರೆ ಇದು ಮಧುಮೇಹದ ಸೂಚನೆ ಎಂದು ತಿಳಿಯಬಹುದು. ಸಕ್ಕರೆ ಬಳಕೆಯಾಗದೇ ವಿಸರ್ಜಿಸಲ್ಪಡುವುದರಿಂದ ದೇಹದ ಸಕಲ ಜೀವಕೋಶಗಳು ಸೊರಗಿ ಸುಸ್ತು ಆವರಿಸುತ್ತದೆ. ರಕ್ತಪರೀಕ್ಷೆಯಿಂದ ಇದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಪದೇ ಪದೇ ನೀರಡಿಕೆಯಾಗುತ್ತದೆ

ಪದೇ ಪದೇ ನೀರಡಿಕೆಯಾಗುತ್ತದೆ

ದಿನದಲ್ಲಿ ಹಲವು ಬಾರಿ, ಅದರಲ್ಲೂ ಮೂತ್ರ ವಿಸರ್ಜನೆಯಾದ ಕೂಡಲೇ ನೀರು ಕುಡಿಯಬೇಕೆನಿಸಿದರೆ ಇದೂ ಒಂದು ಸೂಚನೆಯಾಗಿದೆ. ಏಕೆಂದರೆ ಸಕ್ಕರೆಯಿಲ್ಲದೇ ಸೊರಗುತ್ತಿರುವ ಜೀವಕೋಶಗಳು ಶಕ್ತಿಗಾಗಿ ಮೆದುಳಿಗೆ ಬೇಡಿಕೆ ಸಲ್ಲಿಸಿದಾಗ ಇದನ್ನು ಪೂರೈಸಲು ಮೆದುಳು ನೀರು ಬೇಕೆಂದು ನೀಡುವ ಸಂಜ್ಞೆಯೇ ಬಾಯಾರಿಕೆಯಾಗಿದೆ.

ತೂಕ ಶೀಘ್ರವಾಗಿ ಇಳಿಮುಖವಾಗುತ್ತದೆ

ತೂಕ ಶೀಘ್ರವಾಗಿ ಇಳಿಮುಖವಾಗುತ್ತದೆ

ನಿಮಗೆ ಅರಿವಿಲ್ಲದೇ ದಿನೇ ದಿನೇ ನಿಮ್ಮ ತೂಕ ಇಳಿಮುಖವಾಗುತ್ತಿರುವುದು ಇನ್ನೊಂದು ಸ್ಪಷ್ಟ ಸೂಚನೆಯಾಗಿದೆ. ರಕ್ತದಲ್ಲಿ ಸಕ್ಕರೆ ಇಲ್ಲದಿದ್ದರೆ ಅಥವಾ ಇದ್ದಿದ್ದೂ ಬಳಕೆಯಾಗದೇ ಇದ್ದರೆ ಜೀವಕೋಶಗಳಾದರೂ ಎಲ್ಲಿಂದ ತಮ್ಮ ಸಾಮರ್ಥ್ಯಕ್ಕೆ ಪೂರಕವಾದ ಕೆಲಸಗಳನ್ನು ನಿರ್ವಹಿಸಲಾಗುತ್ತದೆ? ಆಗ ಅನಿವಾರ್ಯವಾಗಿ ದೇಹಕ್ಕೆ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಇದು ಶೀಘ್ರವಾಗಿ ತೂಕ ಇಳಿಯಲು ಕಾರಣವಾಗುತ್ತದೆ.

ಇಡಿಯ ದಿನ ಸುಸ್ತು ಆವರಿಸುತ್ತದೆ

ಇಡಿಯ ದಿನ ಸುಸ್ತು ಆವರಿಸುತ್ತದೆ

ದಿನಂಪ್ರತಿ ಜೀವಕೋಶಗಳಿಗೆ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದರಿಂದ ದೇಹದ ಸಕಲ ಅಂಗಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಇದರಿಂದಾಗಿ ದಿನದ ಚಟುವಟಿಕೆಗಳಿಗೆ ಶಕ್ತಿ ಸಾಲದೇ ಸುಸ್ತು ಬೇಗನೇ ಆವರಿಸುತ್ತದೆ. ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ತಡಮಾಡದೇ ಪರೀಕ್ಷೆಗೆ ಒಳಗಾಗಬೇಕಾಗಿದೆ.

ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ

ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ

ಆರೋಗ್ಯವಂತರಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಸೆಕೆಂಡುಗಳಲ್ಲಿ ಚಿಕ್ಕ ಗಾಯದಿಂದ ಒಸರುವ ರಕ್ತ ತನ್ನಿಂತಾನೇ ನಿಲ್ಲಬೇಕು. ಉದಾಹರಣೆಗೆ ಸೂಚಿ ಚುಚ್ಚಿದ ಅಥವಾ ಹರಿತವಾದ ಬ್ಲೇಡ್ ತಗಲಿದ ಗಾಯ. ಒಂದು ವೇಳೆ ಇದು ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ ಮಧುಮೇಹ ಆವರಿಸುತ್ತಿದೆ ಎಂದು ತಿಳಿದುಕೊಳ್ಳಬೇಕು. ಮುಂದೆ ಓದಿ

ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ

ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ

ಒಂದು ವೇಳೆ ಎರಡೂವರೆ ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರೆ ಮಧುಮೇಹ ತೀವ್ರತರದಲ್ಲಿದೆ ಎಂಬ ಸೂಚನೆಯಾಗಿದೆ. ತಡಮಾಡದೇ ವೈದ್ಯರ ಬಳಿ ಧಾವಿಸುವುದು ಅನಿವಾರ್ಯ.

ಕಣ್ಣುಗಳು ಮಂಜಾಗತೊಡಗುತ್ತವೆ

ಕಣ್ಣುಗಳು ಮಂಜಾಗತೊಡಗುತ್ತವೆ

ಮಧುಮೇಹದಿಂದ ದೇಹದ ಸೂಕ್ಷ್ಮ ಅಂಗಗಳು ಹೆಚ್ಚು ಪ್ರಭಾವಗೊಳಗಾಗುತ್ತವೆ. ಅದರಲ್ಲಿ ಕಣ್ಣುಗಳು ಪ್ರಮುಖವಾಗಿವೆ. ಮಧುಮೇಹ ತೀವ್ರಗೊಳ್ಳುತ್ತಿದ್ದ ಹಾಗೇ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಬರುವ ಸಂಭವವೂ ಹೆಚ್ಚಾಗುತ್ತದೆ. Diabetic Retinopathy, Glaucoma, Cataract ಮೊದಲಾದ ಗಂಭೀರ ಕಾಯಿಲೆಗಳು ಆವರಿಸಬಹುದು. ಆದ್ದರಿಂದ ಕಣ್ಣು ಮಂಜಾಗುತ್ತಿದ್ದಂತೆಯೇ ಪರೀಕ್ಷೆಗೆ ಒಳಪಡುವುದು ಮುಖ್ಯ.

ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ

ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ

ಮಧುಮೇಹ ಆವರಿಸುತ್ತಿದ್ದಂತೆ ದೇಹದ ಹಲವೆಡೆ ಚರ್ಮ ನಿಧಾನವಾಗಿ ತುರಿಕೆಯಾಗಲು ತೊಡಗುತ್ತದೆ. ತುರಿಸುತ್ತಿದ್ದಂತೆಯೇ ಕೆಂಪಗಾಗಿ ತುರಿಸಿದೆಡೆಯಲ್ಲಿ ಸೂಕ್ಷ್ಮ ಗೀರುಗಳಂತಾಗುವುದು, ಚರ್ಮ ಮಡಚುವಲ್ಲಿ (ಉದಾಹರಣೆಗೆ ಕುತ್ತಿಗೆ ಮತ್ತು ಬೆನ್ನಿನ ನಡುವಣ ಭಾಗ, ಕಂಕುಳು, ಮೊಣಕೈ ಮಡಚುವ ಒಳಭಾಗ) ಚರ್ಮ ಕಪ್ಪಗಾಗುವುದು, ಸೂಕ್ಷ್ಮ ಚರ್ಮವಿರುವಲ್ಲಿ (ಸ್ತನಗಳ ಕೆಳಭಾಗ) ಕೆಂಪಗಾಗುವುದು, ಚಿಕ್ಕ ಚಿಕ್ಕ ಗುಳ್ಳೆಗಳೇಳುವುದು ಮೊದಲಾದವು ಕಂಡುಬರಬಹುದು. ಯಾವುದೇ ಲಕ್ಷಣ ಕಂಡುಬಂದರೂ ಉದಾಸೀನತೆ ತೋರದೇ ವೈದ್ಯರ ಬಳಿ ಧಾವಿಸುವುದು ಅಗತ್ಯ.

ಹಸಿವು ಹೆಚ್ಚಾಗುತ್ತದೆ

ಹಸಿವು ಹೆಚ್ಚಾಗುತ್ತದೆ

ಮಧುಮೇಹ ಆವರಿಸುತ್ತಿದ್ದಂತೆಯೇ ಹಸಿವೂ ಹೆಚ್ಚಾಗತೊಡಗುತ್ತದೆ. ಇಡಿಯ ದಿನ ಏನಾದರೂ ತಿನ್ನುತ್ತಲೇ ಇರಬೇಕೆಂದೆನಿಸುತ್ತದೆ. ಏಕೆಂದರೆ ನಮ್ಮ ಜೀವಕೋಶಗಳಿಗೆ ಸಕ್ಕರೆ ತಲುಪಲೇ ಇಲ್ಲವಾದುದರಿಂದ ಮೆದುಳು ಹೆಚ್ಚಿನ ಸಕ್ಕರೆಯನ್ನು ಒದಗಿಸಲು ಹಸಿವಿನ ಮೂಲಕ ಆಜ್ಞೆ ನೀಡುವ ಕಾರಣ ಹೆಚ್ಚಿನ ಆಹಾರವನ್ನು ಸೇವಿಸಲು ಅವಸರವಾಗುತ್ತದೆ. ಯಾವುದೇ ಸೂಚನೆ ಕಂಡುಬಂದರೂ ಸೂಕ್ತ ಪರೀಕ್ಷೆಗೆ ಒಳಗಾಗುವುದು ಮತ್ತು ವೈದ್ಯರ ಸಲಹೆಯನ್ನು ಪಾಲಿಸುವುದು ಅಗತ್ಯವಾಗಿದೆ.

English summary

Ways To Know If You're Diabetic

Apart from stress, the other leading killer in today's society is diabetes. Those were the years when this health problem was found only in the West. Today, globally Indians have a higher rate with diabetes. The causes of diabetes are many which include family history, stress, eating habits, lack of fibre, midnight snacks and more.
Story first published: Wednesday, July 29, 2015, 14:40 [IST]
X
Desktop Bottom Promotion