For Quick Alerts
ALLOW NOTIFICATIONS  
For Daily Alerts

ಮಧುಮೇಹ ಎಂದಾಕ್ಷಣ ಸಕ್ಕರೆಯಿಂದ ದೂರ ಇರಬೇಕೆಂದಿಲ್ಲ!

By Super
|

ಹಿಂದೆಲ್ಲಾ ಮಧುಮೇಹವೆಂದರೆ ಬ್ರಿಟಿಷರಿಗೇ ಹೆಚ್ಚಾಗಿ ಬರುತ್ತಿದ್ದುದರಿಂದ ಬ್ರಿಟಿಷರ ಕಾಯಿಲೆ ಎಂದೇ ಕರೆಯುತ್ತಿದ್ದರು. ಆದರೆ ಇಂದು ಮಧುಮೇಹ ಭಾರತದ ಒಂದು ಸಾಮಾನ್ಯ ಕಾಯಿಲೆಯಾಗಿದೆ. ಆದರೆ ಈಗಲೂ ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆ ಎಂದರೆ ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದು. ಇದು ನೂರಕ್ಕೆ ನೂರರಷ್ಟು ಸತ್ಯವಲ್ಲ

ನಮ್ಮ ಒಡಲ ಅಂಗವಾದ ಬಾಡಲಿ (pancreas) ನ ಮುಖ್ಯ ಕಾರ್ಯವೆಂದರೆ ಇನ್ಸುಲಿನ್ ಉತ್ಪಾದಿಸಿ ರಕ್ತದಲ್ಲಿನ ಸಕ್ಕರೆ ಕರಗುವಂತೆ ನೋಡಿಕೊಳ್ಳುವುದು. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾದೇ ಇದ್ದರೆ ಟೈಪ್-1 ಮಧುಮೇಹವೆಂದಲೂ, ಇನ್ಸುಲಿನ್ ಉತ್ಪತ್ತಿಯಾದರೂ ಬಳಕೆಯಾಗದೇ ಇದ್ದರೆ ಟೈಪ್-2 ಮಧುಮೇಹವೆಂದೂ ಕರೆಯುತ್ತಾರೆ (insulin resistance).

ಸಾಮಾನ್ಯವಾಗಿ ಮಧುಮೇಹಿಗಳಿಗೆ ಉತ್ತಮ ಪೌಷ್ಠಿಕ ಆಹಾರ ಆರೋಗ್ಯದಾಯಕವಾದ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ. ಅದರಲ್ಲೂ ಹೆಚ್ಚಿನ ಕಾರ್ಬೋಹೈಡ್ರೇಟುಗಳಿರುವ ಆಹಾರ ದಿನದ ಚಟುವಟಿಕೆಗೆ ಅಗತ್ಯವಾದ ಇಂಧನವನ್ನು ನೀಡುತ್ತದೆ. ಆದರೆ ಈ ಇಂಧನ ಸಕ್ಕರೆಯ ರೂಪದಲ್ಲಿರುವುದರಿಂದ ಮಧುಮೇಹಿಗಳಿಗೆ ಹೆಚ್ಚಿನ ಕಾರ್ಬೋಹೈಡ್ರೇಟುಗಳಿರುವ ಆಹಾರ ಸೂಕ್ತವಲ್ಲ. ಆದರೆ ಈ ಆಹಾರಗಳಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮಧುಮೇಹಿಗಳೂ ತಮ್ಮ ಆರೋಗ್ಯದಲ್ಲಿ ಏರುಪೇರಾಗದಂತೆ ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಬಹುದು.

ಮಧುಮೇಹಿ ಎಂದಾಕ್ಷಣ ಪ್ರತಿಯೊಬ್ಬರೂ ಪಠಿಸುವುದು ಒಂದೇ ಮಂತ್ರ, ಅದೆಂದರೆ ಸಕ್ಕರೆ ತಿನ್ನಬಾರದು ಎನ್ನುವುದು. ವಾಸ್ತವವಾಗಿ ಮಧುಮೇಹಿಗಳೂ ಅಲ್ಪ ಪ್ರಮಾಣದಲ್ಲಿ ಸಕ್ಕರೆ ತಿನ್ನಬಹುದು. ಆದರೆ ಇದು ಬಿಳಿಯ ಸಕ್ಕರೆಯಾಗಿರದೇ ಹಣ್ಣುಗಳ ಅಥವಾ ಇತರ ಧಾನ್ಯಗಳ ಮೂಲಕ ದೊರಕಿದಷ್ಟೂ ಉತ್ತಮ. ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ!

ಮಧುಮೇಹಿಗಳು ಹೆಚ್ಚಾಗಿ ಮಾನಸಿಕವಾಗಿ ದುರ್ಬಲರಾಗುವುದರಿಂದ ಮತ್ತು ಕೊಂಚ ಸಡಿಲ ಬಿಟ್ಟರೂ ಅತಿ ಹೆಚ್ಚಾಗಿ ಸಕ್ಕರೆ ತಿನ್ನುವ ಅಭ್ಯಾಸವನ್ನು ಗಮನಿಸಿದ ವೈದ್ಯರು ಇದನ್ನು ತಡೆಯಲು ಸಕ್ಕರೆಯನ್ನು ತಿನ್ನದೇ ಇರದಂತೆ ಕಟ್ಟಪ್ಪಣೆ ಮಾಡುತ್ತಾರಷ್ಟೇ. ಮಧುಮೇಹಿಗಳೂ ತಮ್ಮ ಆರೋಗ್ಯಕ್ಕೆ ಧಕ್ಕೆಮಾಡಿಕೊಳ್ಳದಂತೆ ಉತ್ತಮ ಕಾರ್ಬೋಹೈಡ್ರೇಟುಗಳಿರುವ ಆಹಾರವನ್ನು ಸೇವಿಸಲು ಕೆಲವು ಸಲಹೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ... ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ನೋಡಿ ಬೊಂಬಾಟ್ ಸುದ್ದಿ!

ಕಾರ್ಬೋಹೈಡ್ರೋಟುಗಳಲ್ಲಿ ಹೆಚ್ಚಿನ ಸಕ್ಕರೆ ಇಲ್ಲ ಎಂಬುದನ್ನು ಅರಿಯಿರಿ

ಕಾರ್ಬೋಹೈಡ್ರೋಟುಗಳಲ್ಲಿ ಹೆಚ್ಚಿನ ಸಕ್ಕರೆ ಇಲ್ಲ ಎಂಬುದನ್ನು ಅರಿಯಿರಿ

ಕಾರ್ಬೋಹೈಡ್ರೇಟುಗಳಲ್ಲಿ ಸರಳವಾದ ಮತ್ತು ಸಂಕೀರ್ಣವಾದ (simple ಮತ್ತು complex) ಎಂಬ ಎರಡು ವಿಧಗಳಿವೆ. ಇದರಲ್ಲಿ ಸರಳ ಕಾರ್ಬೋಹೈಡ್ರೇಟು ಕರುಳುಗಳಲ್ಲಿ ಶೀಘ್ರವಾಗಿ ಕರಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಿದರೆ ಸಂಕೀರ್ಣವಾದವು ನಿಧಾನವಾಗಿ ಸಕ್ಕರೆಯನ್ನು ಬಿಡುಗಡೆ ಮಾಡುತ್ತವೆ. ಈ ಸಂಕೀರ್ಣ ಕಾರ್ಬೋಹೈಡ್ರೇಟುಗಳಲ್ಲಿ ನಿಮಗೆ ಸೂಕ್ತವಾದುದನ್ನು ಆರಿಸಿಕೊಳ್ಳಿ.

ಸ್ವಲ್ಪ ಪ್ರಮಾಣದಲ್ಲಿ ನಿಮಗಿಷ್ಟವಾದ ಸಿಹಿಯ ಮೂಲಕ ಸಕ್ಕರೆ ತಿನ್ನಿ

ಸ್ವಲ್ಪ ಪ್ರಮಾಣದಲ್ಲಿ ನಿಮಗಿಷ್ಟವಾದ ಸಿಹಿಯ ಮೂಲಕ ಸಕ್ಕರೆ ತಿನ್ನಿ

ಜನರು ಸಕ್ಕರೆ ಬಗ್ಗೆ ಏನೇ ಹೇಳಲಿ, ನಿಮ್ಮ ವೈದ್ಯರು ಸಲಹೆ ಮಾಡುವ ಸಿಹಿಯನ್ನು, ಅಲ್ಪ ಪ್ರಮಾಣದಲ್ಲಿ ಸೇವಿಸಿ. ಆದರೆ ಮನೋನಿಗ್ರಹ ಅತಿಮುಖ್ಯ. ಸಿಹಿ ಯಾರಿಗಾದರೂ ಇನ್ನಷ್ಟು ತಿನ್ನಲು ಪ್ರೇರೇಪಿಸುತ್ತದೆ. ಎಂದಿಗೂ ಮನಸ್ಸಿನ ಈ ಅಮಿಷಕ್ಕೆ ಬಲಿಯಾಗದೇ ನಿಮ್ಮ ವೈದ್ಯರು ಅವಕಾಶ ನೀಡಿದ ಪ್ರಮಾಣವನ್ನು ಮಾತ್ರವೇ ಸೇವಿಸಿ.

ಸೂಕ್ತವಾದ ಕಾರ್ಬೋಹೈಡ್ರೇಟುಗಳು ಯಾವುವು ಎಂದು ಗಮನಿಸಿ

ಸೂಕ್ತವಾದ ಕಾರ್ಬೋಹೈಡ್ರೇಟುಗಳು ಯಾವುವು ಎಂದು ಗಮನಿಸಿ

ಅಂತರ್ಜಾಲವನ್ನು ಜಾಲಾಡಿದರೆ ಸಕ್ಕರೆ ಕಡಿಮೆ ಇರುವ ಸಂಕೀರ್ಣ ಕಾರ್ಬೋಹೈಡ್ರೇಟುಗಳಿರುವ ಆಹಾರಗಳು ಯಾವುವು ಎಂಬ ಮಾಹಿತಿ ದೊರಕುತ್ತದೆ. ಇದರಲ್ಲಿ ನಿಮಗಿಷ್ಟವಾದ ಆಹಾರವನ್ನೇ ಸೇವಿಸಿ.

ಹಸಿ ಆಹಾರಗಳಿಗೆ ಆದ್ಯತೆ ನೀಡಿ

ಹಸಿ ಆಹಾರಗಳಿಗೆ ಆದ್ಯತೆ ನೀಡಿ

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಮಾಡಿದ ಅಡುಗೆಯಲ್ಲಿ ಉಪ್ಪಿನ ಪ್ರಮಾಣ ಕೊಂಚ ಹೆಚ್ಚೇ ಇರುತ್ತದೆ. ಆದ್ದರಿಂದ ಉಪ್ಪು ಹಾಕಿದ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ ಹಸಿ ತರಕಾರಿ, ನಿಮಗೆ ಸಲಹೆ ಮಾಡಲಾದ ಹಣ್ಣುಗಳು ಮತ್ತು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾದ ಚಪಾತಿ, ರೋಟಿ ಮೊದಲಾದವುಗಳನ್ನೇ ಆಯ್ದುಕೊಳ್ಳಿ. ಹಣ್ಣಿನ ಜ್ಯೂಸ್ ಗಳನ್ನು ಸೇವಿಸಬೇಡಿ, ಏಕೆಂದರೆ ಹೋಟೆಲುಗಳಲ್ಲಿ ತಾಜಾ ಹಣ್ಣಿನ ರಸದ ಬದಲಿಗೆ ಪ್ಯಾಕೆಟ್ ರಸವನ್ನು ನೀಡಲಾಗುತ್ತದೆ. ಇದು ನಿಮಗೆ ಸೂಕ್ತವಲ್ಲ.

ಅಲ್ಪ ಉಪಾಹಾರವಾಗಿ ಹಣ್ಣು ಮತ್ತು ತರಕಾರಿಗಳನ್ನೇ ಸೇವಿಸಿ

ಅಲ್ಪ ಉಪಾಹಾರವಾಗಿ ಹಣ್ಣು ಮತ್ತು ತರಕಾರಿಗಳನ್ನೇ ಸೇವಿಸಿ

ಸಂಜೆಯ ಅಥವಾ ದಿನದ ಇತರ ವೇಳೆಗಳಲ್ಲಿ ಸೇವಿಸುವ ಉಪಾಹಾರಗಳಲ್ಲಿ ಸಾಮಾನ್ಯವಾಗಿ ಸಕ್ಕರೆಯ ಅಂಶ ಹೆಚ್ಚಾಗಿರುವುದರಿಂದ, ಅದರಲ್ಲೂ ಆರ್ಡರ್ ಮಾಡಿ ತರಿಸುವ ಸಿದ್ಧ ಅಡುಗೆಗಳಾದ ಪಿಜ್ಜಾ ಮೊದಲಾದವುಗಳಲ್ಲಿ ಉಪ್ಪು ಮತ್ತು ಸಕ್ಕರೆಯ ಅಂಶ ವಿಪರೀತವಾಗಿರುವುದರಿಂದ ಇದನ್ನು ನೆಚ್ಚಿಕೊಳ್ಳದೇ ನಿಮ್ಮ ನೆಚ್ಚಿನ ಹಣ್ಣು ಮತ್ತು ತರಕಾರಿಗಳನ್ನೇ ಸೇವಿಸಿ.

ಕಾರ್ಬೋಹೈಡ್ರೇಟುಗಳು ಮತ್ತು ಪ್ರೋಟೀನುಗಳನ್ನು ಜೊತೆಯಾಗಿ ಸೇವಿಸಿ

ಕಾರ್ಬೋಹೈಡ್ರೇಟುಗಳು ಮತ್ತು ಪ್ರೋಟೀನುಗಳನ್ನು ಜೊತೆಯಾಗಿ ಸೇವಿಸಿ

ನಿಮ್ಮ ನಿತ್ಯದ ಅಡುಗೆಗಳಲ್ಲಿ ಕೇವಲ ಕಾರ್ಬೋಹೈಡ್ರೇಟುಗಳನ್ನು ಮಾತ್ರ ಸೇವಿಸುವ ಬದಲು ಕಾರ್ಬೋಹೈಡ್ರೇಟು ಮತ್ತು ಪ್ರೋಟೀನುಗಳ ಸಂಯೋಜನೆಯನ್ನು ಸೇವಿಸಿ. ಏಕೆಂದರೆ ಈ ಸಂಯೋಜನೆಯಿಂದ ಜೀರ್ಣಶಕ್ತಿ ನಿಧಾನವಾಗುವುದರ ಜೊತೆಗೇ ಸಕ್ಕರೆಯೂ ನಿಧಾನವಾಗಿ ರಕ್ತಕ್ಕೆ ಸೇರುತ್ತದೆ. ಹಸಿವನ್ನೂ ತೃಪ್ತಿಪಡಿಸಿದಂತಾಗುತ್ತದೆ.

English summary

Ways Diabetes To Enjoy Carbs

Carbohydrates or carbs is a very essential source of energy. But, as carbs changes into blood sugar or glucose, people with diabetics avoid it. There are number of ways for diabetics to enjoy carbs without compromising their diet. So, one of the best ways for diabetics to enjoy carbs is to know how much carbs your body requires. Let’s have a detailed look into ways for diabetics to enjoy carbs.
X
Desktop Bottom Promotion