For Quick Alerts
ALLOW NOTIFICATIONS  
For Daily Alerts

ಹಿತ್ತಲ ಗಿಡ ತರಕಾರಿಯ ಪವರ್‌ಗೆ ಹ್ಯಾಟ್ಸ್ ಆಫ್

|

ಮಾನವನಲ್ಲಿ ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ. ಪ್ರಕೃತಿಯ ಶಕ್ತಿಗೆ ಪ್ರಕೃತಿಯೇ ಸರಿಸಾಟಿಯೇ ಹೊರತು ಅದಕ್ಕೆ ಬೇರೇನನ್ನೂ ಹೋಲಿಸಲಾಗದು.

ಮಾನವ ಸಮುದಾಯದಲ್ಲಿ ಕ೦ಡುಬರುವ ಅತ್ಯ೦ತ ಸಾಮಾನ್ಯವಾದ ರೋಗಗಳಲ್ಲಿ ಮಧುಮೇಹವೂ ಕೂಡ ಒ೦ದಾಗಿದೆ! ಹೌದು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುವುದು ತುಂಬಾ ವಿಚಿತ್ರವೆನ್ನಬಹುದಾದ ಕಾಯಿಲೆ. ಇದಕ್ಕೆ ಹೆಚ್ಚು ತಿಂದರೂ ಆಗಲ್ಲ, ತಿನ್ನದೆ ಇದ್ದರೂ ಆಗಲ್ಲ ಎನ್ನುವಂತಹ ಪರಿಸ್ಥಿತಿ. ಈ ಕಾಯಿಲೆಯಿರುವ ವ್ಯಕ್ತಿ ಹೆಜ್ಜೆ ಹೆಜ್ಜೆಗೂ ಜಾಗೃತೆ ವಹಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಇದನ್ನು ಮೌನವಾಗಿ ಕೊಲ್ಲುವ ರೋಗ ಎಂದು ಕರೆಯುತ್ತಾರೆ. ಮಧುಮೇಹವನ್ನು ನಿಯಂತ್ರಿಸುವ ಹಿತ್ತಲ ಗಿಡದ ತರಕಾರಿ ಜ್ಯೂಸ್‌

Top Vegetables that should control Diabetics

ಹಾಗಾಗಿ ದಿನನಿತ್ಯದ ಆಹಾರಕ್ರಮ ಹಾಗೂ ನಿಯಮಿತವಾದ ವ್ಯಾಯಾಮ, ಇವೆರಡೂ ಕೂಡ ಮಧುಮೇಹಿಯ ವಿಚಾರದಲ್ಲಿ ಜೊತೆಜೊತೆಯಾಗಿ ಮಧುಮೇಹಿಗಳ ಹಿತಕ್ಕಾಗಿ ಕಾರ್ಯವೆಸಗುವ ಎರಡು ಪ್ರಮುಖವಾದ ಅ೦ಶಗಳಾಗಿವೆ. ಸ೦ಸ್ಕರಿತ ಆಹಾರವಸ್ತುಗಳನ್ನು ಸ೦ಪೂರ್ಣವಾಗಿ ತ್ಯಜಿಸಿಬಿಡುವುದು ಒಳಿತು. ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರವಸ್ತುಗಳನ್ನೇ ಸೇವಿಸಲು ಪ್ರಯತ್ನಿಸುವುದು ಆರೋಗ್ಯಕಾರಿ. ಹಾಗಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ, ಹಿತ್ತಲ ಗಿಡದ ತರಕಾರಿಗಳು ಮಧುಮೇಹಿಗಳ ಪಾಲಿಗೆ ಅತ್ಯಂತ ಶ್ರೀಮಂತ ಆಹಾರವಾಗಿದೆ, ಬನ್ನಿ ಅಂತಹ ಆಹಾರಗಳು ಯಾವುದು ಎಂಬುದನ್ನು ನೋಡೋಣ..

ವಿಟಮಿನ್‌ಗಳ ಆಗರ- ಕುಂಬಳಕಾಯಿ

ಮಧುಮೇಹವನ್ನು ನಿಯಂತ್ರಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಮಧುಮೇಹಿಯಲ್ಲಿ ಇನ್ಸುಲಿನ್ ಅನುಕರಿಸುತ್ತದೆ. ದೇಹದಲ್ಲಿ ಇನ್ಸುಲಿನ್ ನ್ನು ಅನುಕರಿಸುವಲ್ಲಿ ವಿಟಮಿನ್ ಸಿ ತುಂಬಾ ಒಳ್ಳೆಯದು. ವಿಟಮಿನ್ ಸಿಯನ್ನು ಆಹಾರದ ಮೂಲಕ ಸೇವಿಸಿದರೆ ಅದು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವ ಕಾರಣದಿಂದಾಗಿ ಮಧುಮೇಹಿಗಳು ಇದನ್ನು ತಿನ್ನಲು ಯಾವುದೇ ಅಡ್ಡಿಯಿಲ್ಲ ಮಧುಮೇಹಕ್ಕೆ ಆಹ್ವಾನ ನೀಡುವ ಕೆಟ್ಟ ಅಭ್ಯಾಸಗಳಿಂದ ದೂರವಿರಿ!

ಹೀರೇಕಾಯಿ

ಎಳೆಯ ಹೀರೇಕಾಯಿ ಸಹಾ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪೆಪ್ಟೈಡ್ ಮತ್ತು ಆಲ್ಕಲಾಯ್ಡ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮೊದಲ ವಿಧದ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಬೀಟ್ ರೂಟ್

ರಕ್ತದಲ್ಲಿನ ಸಕ್ಕರೆಯ ಮಟ್ಟ ಹಾಗೂ ರಕ್ತದೊತ್ತಡದ ಮಟ್ಟ ಇವೆರಡನ್ನೂ ಕೂಡ ನಿಯಮಿತಗೊಳಿಸುವ ಸಾಮರ್ಥ್ಯವು ಬೀಟ್ ರೂಟ್ ಗಳಿಗಿರುತ್ತವೆ. ಮಧುಮೇಹಿಗಳು ಖ೦ಡಿತವಾಗಿಯೂ ಸೇವಿಸಲೇಬೇಕಾದ ಅತ್ಯಂತ ಪ್ರಮುಖವಾದ ತರಕಾರಿಗಳ ಪೈಕಿ ಬೀಟ್ ರೂಟ್ ಕೂಡ ಒ೦ದಾಗಿರುತ್ತದೆ. ಒ೦ದು ಲೋಟದಷ್ಟು ಬೀಟ್ ರೂಟ್ ನ ರಸವು ಹೆಚ್ಚುಕಡಿಮೆ ಐದು ಪಾಯಿ೦ಟ್ ಗಳಷ್ಟು ಸ೦ಕೋಚನ (systolic) ರಕ್ತದೊತ್ತಡವನ್ನು ಕಡಿಮೆಮಾಡಬಲ್ಲದು. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಹಾಗಲಕಾಯಿ
ಮಧುಮೇಹವನ್ನು ಗುಣಪಡಿಸಲು ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. ಇನ್ಸುಲಿನ್‌ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

ಕ್ಯಾರೆಟ್

ಕ್ಯಾರೆಟ್ಟುಗಳಲ್ಲಿರುವ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಗುಣ ಹೊಂದಿದ್ದು ಕೇವಲ ಮೂವತ್ತು ದಿನಗಳಲ್ಲಿ ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ. ಅಲ್ಲದೇ ಕ್ಯಾರೆಟ್ ತಿನ್ನಲು ಸಿಹಿಯಾಗಿದ್ದರೂ ಇದರಲ್ಲಿರುವ ಸಕ್ಕರೆಯ ಪ್ರಮಾಣ ಕಡಿಮೆಯಾಗಿದ್ದು ಇತರ ಗುಣಗಳಿಂದ ರಕ್ತದಲ್ಲಿ ಕಡಿಮೆ ಇನ್ಸುಲಿನ್ ಇರುವ (ಟೈಪ್ 1 ಮಧುಮೇಹ) ಸ್ಥಿತಿಗೆ ಉತ್ತಮವಾಗಿದೆ.
English summary

Top Vegetables that should control Diabetics

Eating the right kind of foods when suffering from diabetes can actually help you manage your condition. And the reverse of this statement is also true. Diabetics must avoid vegetables that have high sugar content. All root vegetables like carrots, turnips and even too many onions are forbidden in the diet for diabetes. So Here are some of the best vegetables for diabetics to enjoy in their meal.
X
Desktop Bottom Promotion