For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗಾಗಿ ಏಳು 'ಜೀವ ರಕ್ಷಕ' ಪರೀಕ್ಷೆಗಳು

By Deepu
|

ಇತ್ತೀಚೆಗೆ ಮಧುಮೇಹ ಎಂಬುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡಲು ಆರಂಭಿಸಿದೆ. ಮಧುಮೇಹ ಬರಲು ಸರಿಯಾದ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಿರುವುದೇ ಕಾರಣವಾಗಿರುತ್ತದೆ. ಆದರೆ ಒಂದು ವೇಳೆ ಮಧುಮೇಹ ಬಂದರೆ, ಧೃತಿಗೆಡದೆ ಅದನ್ನು ನಿವಾರಿಸಿಕೊಳ್ಳುವ ಮತ್ತು ಅದರ ಜೊತೆಗೆ ಬದುಕುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಮಧುಮೇಹಿಗಳು ನಿರಂತರವಾಗಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದನ್ನು ನಾವು ನೋಡಿರಬಹುದು. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಒಂದು ವೇಳೆ ನೀವು ಮಧುಮೇಹಿಗಳಾಗಿದ್ದಲ್ಲಿ, ನಿರಂತರವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣದ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದಷ್ಟೇ ಸಾಲದು. ಮಧುಮೇಹದಿಂದ ಬರುವ ಡಯಾಬೆಟಿಕ್ ರೆಟಿನೊಪಥಿ, ಡಯಬೆಟಿಕ್ ನೆಫ್ರೋಪತಿ, ಡಯಬೆಟಿಕ್ ನ್ಯೂರೋಪಥಿ, ಡಯಬೆಟಿಕ್ ಫೂಟ್ ಮತ್ತು ಹೃದ್ರೋಗಗಳ ಸಮಸ್ಯೆ ಬರುವುದನ್ನು ತಡೆಯಲು ಹಾಗು ಬಂದಿದೆಯೇ ಎಂಬುದನ್ನು ಸಹ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಬನ್ನಿ ಮಧುಮೇಹಿಗಳು ತಪ್ಪದೆ ಮಾಡಿಸಿಕೊಳ್ಳಬೇಕಾದ 7 ಪರೀಕ್ಷೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ರಕ್ತದ ಒತ್ತಡ

ರಕ್ತದ ಒತ್ತಡ

ಪ್ರತಿ ಬಾರಿ ನೀವು ವೈದ್ಯರ ಬಳಿಗೆ ಹೋದಾಗ ಅವರು ನಿಮ್ಮ ರಕ್ತದೊತ್ತಡವನ್ನು ಪರೀಕ್ಷೆ ಮಾಡುತ್ತಾರೆ. ಇದು ನಿಯಂತ್ರಣದಲ್ಲಿಲ್ಲದೆ ಹೋದಲ್ಲಿ, ಸರಿಯಾದ ಪಥ್ಯವನ್ನು ಅನುಸರಿಸಿ ಮತ್ತು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವ ಔಷಧಗಳನ್ನು ಸೇವಿಸಿ. ಅಧಿಕ ರಕ್ತದೊತ್ತಡವು ನೀವು ಹೃದ್ರೋಗಕ್ಕೆ ಮತ್ತು ಪಾರ್ಶ್ವವಾಯುಗೆ ಗುರಿಯಾಗುವ ಸೂಚನೆಯನ್ನು ನೀಡುತ್ತವೆ. ಆದ್ದರಿಂದ ಉದಾಸೀನ ಮಾಡಬೇಡಿ.

ಲಿಪಿಡ್ ಪ್ರೊಫೈಲ್

ಲಿಪಿಡ್ ಪ್ರೊಫೈಲ್

ಒಂದು ವೇಳೆ ನೀವು ಸ್ಥೂಲಕಾಯವನ್ನು ಹೊಂದಿದ್ದು, ಜಡವಾದ ಜೀವನ ಶೈಲಿಯನ್ನು ಹೊಂದಿದ್ದಲ್ಲಿ, ನೀವು ತಪ್ಪದೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾದಲ್ಲಿ, ಕೊಲೆಸ್ಟ್ರಾಲ್ ಪ್ರಮಾಣವು ಸಹ ಹೆಚ್ಚಾಗುತ್ತದೆ. ಇದು ಸಹ ಹೃದ್ರೋಗಕ್ಕೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ನಿಮ್ಮ ಆಹಾರ ಶೈಲಿ ಬದಲಾಯಿಸಿಕೊಳ್ಳಿ ಮತ್ತು ವ್ಯಾಯಮ ಮಾಡುವ ಅಭ್ಯಾಸವನ್ನು ಇರಿಸಿಕೊಳ್ಳಿ. ಇದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಮತ್ತು ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಕಣ್ಣಿನ ಪರೀಕ್ಷೆ

ಕಣ್ಣಿನ ಪರೀಕ್ಷೆ

ರಕ್ತದಲ್ಲಿ ಸಕ್ಕರೆ ಪ್ರಮಾಣವು ಅನಿಯಂತ್ರಿತ ಮಟ್ಟದಲ್ಲಿದ್ದಲ್ಲಿ, ಅದು ಕಣ್ಣಿನಲ್ಲಿರುವ ರಕ್ತ ನಾಳಗಳನ್ನು ಹಾನಿ ಮಾಡಿ, ಡಯಾಬೆಟಿಕ್ ರೆಟಿನೋಪಥಿ ಎಂದು ಕರೆಯುವ ಒಂದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದ ಗ್ಲೂಕೋಮಾ ಮತ್ತು ಕ್ಯಾಟರಾಕ್ಟ್ ಸಮಸ್ಯೆ ವೃದ್ಧಿಯಾಗುತ್ತದೆ. ಆದ್ದರಿಂದ ವರ್ಷಕ್ಕೊಮ್ಮೆಯಾದರೂ ಕಣ್ಣಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

ಮೂತ್ರಪಿಂಡದ ಕಾರ್ಯವೈಖರಿಯ ಪರೀಕ್ಷೆ

ಮೂತ್ರಪಿಂಡದ ಕಾರ್ಯವೈಖರಿಯ ಪರೀಕ್ಷೆ

ಒಂದು ವೇಳೆ ನೀವು ಮಧುಮೇಹಿಯಾಗಿದ್ದಲ್ಲಿ, ವರ್ಷಕ್ಕೊಮ್ಮೆ ತಪ್ಪದೆ ಮೂತ್ರಪಿಂಡದ ಕಾರ್ಯವೈಖರಿಯ ಪರೀಕ್ಷೆ ಮಾಡಿಸಿಕೊಳ್ಳಿ. ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣವು ಮೂತ್ರಪಿಂಡಲ್ಲಿರುವ ರಕ್ತ ನಾಳಗಳನ್ನು ಹಾಳು ಮಾಡುತ್ತದೆ. ನೆನಪಿಡಿ ಈ ಸಮಸ್ಯೆ ಬಂದಲ್ಲಿ ಅದು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಸಹ ತರುತ್ತದೆ.

ನರ ಹಾನಿಯಾಗಿರುವ ಕುರಿತು ದೈಹಿಕ ಪರೀಕ್ಷೆ

ನರ ಹಾನಿಯಾಗಿರುವ ಕುರಿತು ದೈಹಿಕ ಪರೀಕ್ಷೆ

ಒಮ್ಮೊಮ್ಮೆ ನೀವು ನರ ಸಮಸ್ಯೆಯಿಂದಾಗಿ ಮರಗಟ್ಟುವಿಕೆ, ಡಯೋರಿಯಾ, ಅನಿಯಮಿತ ಮೂತ್ರ ವಿಸರ್ಜನೆ ಮತ್ತು ತಲೆ ತಿರುಗುವಿಕೆ ಮುಂತಾದ ಸಮಸ್ಯೆಗಳನ್ನು ಅನುಭವಿಸಬಹುದು. ಈ ಮೇಲಿನ ಸಮಸ್ಯೆಗಳನ್ನು ನೀವು ಅನುಭವಿಸಿದಲ್ಲಿ, ತಕ್ಷಣ ವೈಧ್ಯರನ್ನು ಸಂಪರ್ಕಿಸಿ. ಅವರು ನಿಮ್ಮ ದೇಹವನ್ನು ಪರೀಕ್ಷಿಸಿ, ನರ ಹಾನಿಯಾಗಿದೆಯೋ ಇಲ್ಲವೋ ಎಂದು ಖಚಿತಪಡಿಸುತ್ತಾರೆ. ಇದಕ್ಕಾಗಿ EMG (ಎಲೆಕ್ಟ್ರೋಮೈಯೊಗ್ರಾಮ್)ಪರೀಕ್ಷೆಯನ್ನು ಮತ್ತು ಇತರೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳ ಬೇಕಾಗಬಹುದು.

ಹಲ್ಲಿನ ಪರೀಕ್ಷೆ

ಹಲ್ಲಿನ ಪರೀಕ್ಷೆ

ದಂತ ಕುಳಿ ಮತ್ತು ದಂತ ಕ್ಷಯ ಸಮಸ್ಯೆಯು ಸಹ ನೀವು ಮದುಮೇಹಿಗಳಾಗಿದ್ದಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಜೊತೆಗೆ ನಿಮಗೆ ದವಡೆಯ ಸಮಸ್ಯೆಯು ಸಹ ಬರಬಹುದು. ಒಮ್ಮೊಮ್ಮೆ ಇದು ನಿವಾರಣೆಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಹಾಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈಧ್ಯರ ಬಳಿ ಪರೀಕ್ಷಿಸಿಕೊಳ್ಳಲು ಮರೆಯಬೇಡಿ.

HbA1C ಪರೀಕ್ಷೆ

HbA1C ಪರೀಕ್ಷೆ

ಇದು ವೈದ್ಯರು ನಿಮಗೆ ನೀಡುತ್ತಿರುವ ಚಿಕಿತ್ಸೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇದು ನೀವು ನಿಯಮಿತವಾಗಿ ಮನೆಯಲ್ಲಿ ಮಾಡಿಕೊಳ್ಳುವ ಪರೀಕ್ಷೆಯೆಂದು ತಪ್ಪು ತಿಳಿಯಬೇಡಿ. HbA1C ಯು ಕಳೆದ ಕೆಲವು ತಿಂಗಳುಗಳಲ್ಲಿ ನಿಮ್ಮ ರಕ್ತದಲ್ಲಿ ಆದ ಸಕ್ಕರೆ ಪ್ರಮಾಣದ ಏರು ಪೇರುಗಳನ್ನು ನಿಖರವಾಗಿ ತಿಳಿಸುತ್ತದೆ.

English summary

Seven life saving tests for every diabetic

If you are a diabetic, regular blood sugar testing and maintaining your blood sugar levels is not enough. You ought to get yourself checked for complications that arise due to diabetes such as diabetic retinopathy, diabetic nephropathy, diabetic neuropathy, diabetic foot and heart disease on a regular basis. Here are 7 common tests you should get undergo without fail!
Story first published: Saturday, November 28, 2015, 20:31 [IST]
X
Desktop Bottom Promotion