For Quick Alerts
ALLOW NOTIFICATIONS  
For Daily Alerts

ಮಧುಮೇಹ ರೋಗಿಗಳಿಗೆ ಇಲ್ಲಿದೆ ಬೊಂಬಾಟ್ 'ಸಿಹಿ' ಸುದ್ದಿ!

By manu
|

ನಿಮಗೆ ಮಧುಮೇಹವಿದೆ ಎಂದು ವೈದ್ಯರು ಇತ್ತೀಚೆಗೆ ತಿಳಿಸಿದ್ದಾರೆಯೇ? ವ್ಯಾಕುಲತೆ ಕಾಡುತ್ತಿದೆಯೇ? ಚಿಂತಿಸದಿರಿ, ಇಂದು ಮಧುಮೇಹ ಜಗತ್ತಿನಲ್ಲಿ ವ್ಯಾಪಕವಾಗಿ ಹರಡಿದೆ. ಹಿರಿಯರು ಬಿಡಿ, ಚಿಕ್ಕ ವಯಸ್ಸಿನ ಮಕ್ಕಳನ್ನೂ ಬಾಧಿಸುತ್ತಿದೆ. ಎಷ್ಟು ಎಂದರೆ ಸರಿಸುಮಾರು ಜಗತ್ತಿನ ಅರ್ಧದಷ್ಟು ಜನರು ಮಧುಮೇಹಕ್ಕೆ ಈಗಾಗಲೇ ಒಳಗಾಗಿದ್ದಾರೆ ಅಥವಾ ಮಧುಮೇಹ ಕಾಡುವ ಲಕ್ಷಣಗಳನ್ನು ಹೊಂದಿದ್ದಾರೆ. ಮಧುಮೇಹವಿದ್ದಾಕ್ಷಣ ಜೀವನವೇ ಕೊನೆಯಾದಂತೆ ಎಂದು ಕೆಲವರು ಆತಂಕಕ್ಕೆ ಒಳಗಾಗುತ್ತಾರೆ.

ಆದರೆ ಏನೂ ಆತಂಕಪಡಬೇಕಾದ ಅವಶ್ಯಕತೆಯಿಲ್ಲ. ಇಂದು ಮಧುಮೇಹಕ್ಕೆ ಅತ್ಯುತ್ತಮವಾದ ಚಿಕಿತ್ಸೆ ಲಭ್ಯವಿದೆ. ಅದಕ್ಕೂ ಮುನ್ನ ನಿಸರ್ಗವೇ ನಮಗೆ ಹಲವು ಆಹಾರಗಳನ್ನು ನೀಡಿದ್ದು ಮಧುಮೇಹವನ್ನು ಕೇವಲ ಮೂವತ್ತು ದಿನಗಳಲ್ಲಿ ನಿಯಂತ್ರಣಕ್ಕೆ ತರಲು ನೆರವಾಗುತ್ತದೆ. ಮಧುಮೇಹಿಗಳು ಮಾಡಬೇಕಾಗಿರುವುದು ಇಷ್ಟೇ, ತಮ್ಮ ಆಹಾರಕ್ರಮಗಳನ್ನು ಆರೋಗ್ಯಕರ ನಿಟ್ಟಿನಲ್ಲಿ ಕಟ್ಟುನಿಟ್ಟುಗೊಳಿಸುವುದು. ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ!

ತಜ್ಞರ ಪ್ರಕಾರ ಮಧುಮೇಹವನ್ನು ಔಷಧಿಗಳಿಗಿಂತಲೂ ಪರಿಣಾಮಕಾರಿಯಾಗಿ ಈ ಆಹಾರಗಳೇ ಗುಣಪಡಿಸಬಲ್ಲವು. ಅದರಲ್ಲೂ ಕೆಲವು ಆಹಾರಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣದನ್ನು ಧಿಡೀರನೇ ಇಳಿಸಿಬಿಡುತ್ತವೆ ಮತ್ತು ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಹಾಗಲಕಾಯಿ.

ಕೇರಳದಲ್ಲಂತೂ ಮಧುಮೇಹ ಇದೆ ಎಂದು ಗೊತ್ತಾದ ತಕ್ಷಣ ವೈದ್ಯರ ಬಳಿ ಹೋಗುವ ಮೊದಲು ಹಾಗಲಕಾಯಿಯ ಜ್ಯೂಸ್ ಮಾಡಿ ಮೂಗು ಮುಚ್ಚಿ ಗಟಗಟನೇ ಕುಡಿದು ಬಿಡುತ್ತಾರೆ. ಇದರ ಹೊರತಾಗಿ ಬೇರೆ ಯಾವ ಆಹಾರಗಳು ಮಧುಮೇಹಕ್ಕೆ ಉತ್ತಮವಾಗಿವೆ ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ಟುಗಳಲ್ಲಿರುವ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಗುಣ ಹೊಂದಿದ್ದು ಕೇವಲ ಮೂವತ್ತು ದಿನಗಳಲ್ಲಿ ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ. ಅಲ್ಲದೇ ಕ್ಯಾರೆಟ್ ತಿನ್ನಲು ಸಿಹಿಯಾಗಿದ್ದರೂ ಇದರಲ್ಲಿರುವ ಸಕ್ಕರೆಯ ಪ್ರಮಾಣ ಕಡಿಮೆಯಾಗಿದ್ದು ಇತರ ಗುಣಗಳಿಂದ ರಕ್ತದಲ್ಲಿ ಕಡಿಮೆ ಇನ್ಸುಲಿನ್ ಇರುವ (ಟೈಪ್ 1 ಮಧುಮೇಹ) ಸ್ಥಿತಿಗೆ ಉತ್ತಮವಾಗಿದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ದುಬಾರಿ ಬೆಲೆ ಎಂಬ ಒಂದೇ ಕಾರಣಕ್ಕೆ ಆಲಿವ್ ಎಣ್ಣೆಯನ್ನು ದೂರ ಮಾಡುತ್ತಿರುವವರಿಗೆ ಒಂದು ಅದ್ಭುತವಾದ ಆಹಾರವನ್ನು ದೂರ ಮಾಡುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಏಕೆಂದರೆ ಕೊಲೆಸ್ಟ್ರಾಲ್ ನಿವಾರಿಸಲು ಆಲಿವ್ ಎಣ್ಣೆಗಿಂತ ಇನ್ನೊಂದು ಉತ್ತಮವಾದ ಆಹಾರವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಅಂತೆಯೇ ಈ ಎಣ್ಣೆಯ ಇನ್ನೊಂದು ಗುಣವೆಂದರೆ ರಕ್ತದಲ್ಲಿ ಸೇರಿದ ಬಳಿಕ ಇತರ ಎಣ್ಣೆಗಳಂತೆ ಅಲ್ಪ ಪ್ರಮಾಣದಲ್ಲಿರುವ ಇನ್ಸುಲಿನ್ (ಟೈಪ್ 1 ಮಧುಮೇಹ) ಗೆ ಯಾವುದೇ ಪ್ರತಿರೋಧ ಒಡ್ಡುವುದಿಲ್ಲ. ತನ್ಮೂಲಕ ಕಡಿಮೆ ಪ್ರಮಾಣದಲ್ಲಿರುವ ಇನ್ಸುಲಿನ್ ದೇಹದ ಸಕ್ಕರೆಯನ್ನು ಬಳಸಿಕೊಳ್ಳಲು ಸಾಕಾಗುತ್ತದೆ. ಆದ್ದರಿಂದ ಮಧುಮೇಹಿಗಳು ಅಡುಗೆಯಲ್ಲಿ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ನಿಯಮಿತ ಸೇವನೆಯಿಂದ ಮಧುಮೇಹ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಮೀನು

ಮೀನು

ಮಧುಮೇಹಿಗಳಿಗೆ ಒಮೆಗಾ -೩ ಕೊಬ್ಬಿನ ತೈಲ ಉತ್ತಮವಾದ ಪೋಷಕಾಂಶವಾಗಿದೆ. ಇದು ಸಹಾ ಇನ್ಸುಲಿನ್ (ಟೈಪ್ 1 ಮಧುಮೇಹ) ಗೆ ಯಾವುದೇ ಪ್ರತಿರೋಧ ಒಡ್ಡದ ಕಾರಣ ಟೈಪ್ 1 ಮಧುಮೇಹದವರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದಕ್ಕಾಗಿ ಟ್ಯೂನಾ, ಸಾಲ್ಮನ್ ಮೊದಲಾದ ಒಮೆಗಾ -೩ ಕೊಬ್ಬಿನ ತೈಲ ಹೆಚ್ಚಿರುವ ಮೀನುಗಳನ್ನು ವಾರದಲ್ಲಿ ಎರಡು ಬಾರಿ ಸೇವಿಸಿದರೆ ಸಾಕು.

ಕಂದು ಬ್ರೆಡ್

ಕಂದು ಬ್ರೆಡ್

ವಿಶ್ವವೇ ಮರುಳಾಗಿರುವ ಬಿಳಿ ಬ್ರೆಡ್ ಮಧುಮೇಹಿಗಳಿಗೆ ಹೇಳಿಸಿದ್ದಲ್ಲ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಉಪ್ಪನ್ನು ಬಳಸಲಾಗಿರುತ್ತದೆ. ಆದ್ದರಿಂದ ಇಡಿಯ ಧಾನ್ಯಗಳ ಅಥವಾ ಕಂದು ಬ್ರೆಡ್ ಸೇವಿಸುವುದು ಉತ್ತಮ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು ಮಾತ್ರವಲ್ಲದೇ ಬಿಳಿ ಬ್ರೆಡ್ ಗಿಂತಲೂ ಕಡಿಮೆ ಕ್ಯಾಲೋರಿಗಳನ್ನು ಮತ್ತು ಕೇವಲ ನೈಸರ್ಗಿಕ ಸಕ್ಕರೆಯನ್ನು ನೀಡುವುದರ ಮೂಲಕ ಮಧುಮೇಹಿಗಳು ಸುಲಭವಾಗಿ ಜೀರ್ಣಿಸಿಕೊಳ್ಳುವಂತಿದೆ. ಅಲ್ಲದೇ ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು ಮಲಬದ್ದತೆಯಾಗುವುದನ್ನು ತಡೆಯುತ್ತದೆ ಹಾಗೂ ತೂಕ ಇಳಿಸಲೂ ನೆರವಾಗುತ್ತದೆ.

ಸಿಟ್ರಸ್ ಜಾತಿಯ ಹಣ್ಣುಗಳು

ಸಿಟ್ರಸ್ ಜಾತಿಯ ಹಣ್ಣುಗಳು

ಸಿಟ್ರಸ್ ಆಮ್ಲ ಪ್ರಮುಖವಗಿರುವ ಲಿಂಬೆಯ ಜಾತಿಯ ಹಣ್ಣುಗಳು ಮಧುಮೇಹಿಗಳಿಗೆ ಉತ್ತಮವಾಗಿದೆ. ಅದರಲ್ಲೂ ಕಿತ್ತಳಿ ಮತ್ತು ಮೂಸಂಬಿ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು. ಕಿತ್ತಳೆಯಲ್ಲಿ ಉತ್ತಮ ಪ್ರಮಾಣದ ಫೈಟೋ ನ್ಯೂಟ್ರಿಯೆಂಟ್ ಗಳೆಂಬ ಪೋಷಕಾಂಶಗಳಿದ್ದು ಮಧುಮೇಹವನ್ನು ನಿಯಂತ್ರಣಕ್ಕೆ ತರಲು ನೆರವಾಗುತ್ತದೆ. ಅಲ್ಲದೇ ಫ್ಲೇವನಾಯ್ಡ್, ಕ್ಯಾರೋಟಿನಾಯ್ಡ್, ಟರ್ಪೈನ್ಸ್, ಪೆಕ್ಟಿನ್ ಮತ್ತು ಗ್ಲುಟಾಥಿಯೋನ್ ಎಂಬ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿದ್ದು ವಾರಕ್ಕೆ ಎರಡು ದಿನ ಸೇವಿಸಿದರೆ ಮೂವತ್ತೇ ದಿನದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಬಾದಾಮಿ

ಬಾದಾಮಿ

ಮಧುಮೇಹಿಯ ಉತ್ತಮ ಜೊತೆಗಾರನೆಂದರೆ ಬಾದಾಮಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇದರಲ್ಲಿ ಹಲವಾರು ಪೋಷಕಾಂಶಗಳು, ಕರಗುವ ನಾರು ಮತ್ತು ಪ್ರೋಟೀನ್ ಇದ್ದು ನಿತ್ಯವೂ ನಾಲ್ಕಾರು ಬಾದಾಮಿ ಸೇವಿಸುವ ಮೂಲಕ ಮಧುಮೇಹವನ್ನು ಮೂವತ್ತೇ ದಿನದಲ್ಲಿ ನಿಯಂತ್ರಣಕ್ಕೆ ತರಲು ನೆರವಾಗುತ್ತದೆ.

ಹಸಿರು ಟೀ

ಹಸಿರು ಟೀ

ಹಸಿರು ಟೀ ಯಲ್ಲಿರುವ ಕ್ಯಾಟೆಚಿನ್ ಮತ್ತು ಟ್ಯಾನಿನ್ ಎಂಬ ಫೈಟೋ ನ್ಯೂಟ್ರಿಯೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಇದು ಟೈಪ್ -2 ಮಧುಮೇಹಿಗಳಿಗೆ ವರದಾನವಾಗಿದ್ದು ಉತ್ಪತ್ತಿಯಾದ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ದಿನಕ್ಕೆ ಎರಡು ಕಪ್ ಹಾಲಿಲ್ಲದ ಮತ್ತು ಸಕ್ಕರೆ ಸೇರಿಸದ ಹಸಿರು ಟೀ ಸೇವಿಸುವ ಮೂಲಕ ಮೂವತ್ತೇ ದಿನದಲ್ಲಿ ಮಧುಮೇಹವನ್ನು ಅರೋಗ್ಯಕರ ಮಟ್ಟಕ್ಕೆ ತರಬಹುದು.

ಬೀನ್ಸ್

ಬೀನ್ಸ್

ಬೀನ್ಸ್ ನಲ್ಲಿ ಕೆಲವಾರು ಫೈಟೋ ನ್ಯೂಟ್ರಿಯೆಂಟುಗಳಿದ್ದು ಮಧುಮೇಹ ಅತಿರೇಕಕ್ಕೆ ಹೋಗಿದ್ದರೆ ಶೀಘ್ರವೇ ನಿಯಂತ್ರಣಕ್ಕೆ ತರಲು ನೆರವಾಗುತ್ತದೆ. (ಟೈಪ್ ೧ ಮತ್ತು ೨ ಎರಡಕ್ಕೂ ಅನ್ವಯ) ಬೀನ್ಸ್ ಕಾಳುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸಾಕಾಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವುದರಿಂದ ಮೂವತ್ತೇ ದಿನದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದು ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ.

ಸೇಬು ಹಣ್ಣು

ಸೇಬು ಹಣ್ಣು

ದಿನಕ್ಕೊಂದು ಸೇಬು ವೈದ್ಯರ ಜೊತೆಗೇ ಮಧುಮೇಹವನ್ನೂ ದೂರವಿಡುತ್ತದೆ. ಒಂದು ಹಸಿರು ಅಥವಾ ಕೆಂಪು ಸೇಬುಹಣ್ಣನ್ನು ಸೇವಿಸುವುದು ಮಧುಮೇಹಿಗಳಿಗೆ ಉತ್ತಮವಾಗಿದೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ ರಕ್ತದಲ್ಲಿ ಕಡಿಮೆ ಪ್ರಮಾಣದಲ್ಲಿರುವ (ಟೈಪ್ 1) ಇನ್ಸುಲಿನ್‌‪ಗೆ ಯಾವ ಪ್ರತಿರೋಧವನ್ನೂ ಒಡ್ಡದ ಮೂಲಕ ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ.

ಓಟ್ಸ್

ಓಟ್ಸ್

ಓಟ್ಸ್ ಟೈಪ್ -2 ಮಧುಮೇಹಿಗಳಿಗೆ ಒಂದು ಸೂಕ್ತವಾದ ಆಹಾರವಾಗಿದೆ. ಆಹಾರದಲ್ಲಿರುವ ಪಿಷ್ಟವನ್ನು ಕರಗಿಸಲು ಓಟ್ಸ್ ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಕಾರ್ಬೋ ಹೈಡ್ರೇಟುಗಳು ನಿಧಾನವಾಗಿ ರಕ್ತದಲ್ಲಿ ಹೀರಲ್ಪಡುವ ಮೂಲಕ ಇನ್ಸುಲಿನ್ ಸಹಾ ನಿಧಾನವಾಗಿ ಬಳಕೆಯಾಗಲು ಸಾಧ್ಯವಾಗುತ್ತದೆ. ಮಧುಮೇಹಿಗಳಿಗೆ ಈ ನಿಧಾನವಾದ ಜೀರ್ಣಕ್ರಿಯೆ ವರದಾನವಾಗಿದ್ದು ಮಧುಮೇಹವನ್ನು ಮೂವತ್ತೇ ದಿನದಲ್ಲಿ ನಿಯಂತ್ರಣಕ್ಕೆ ತರಲು ನೆರವಾಗುತ್ತದೆ.

English summary

Miracle Foods That Beat Diabetes In 30 Days

Have you just gotten to know that your diabetic? Well, firstly don't get scared and worry much as it is a common health problem faced by every second person in the world. To get started, you need to know the status of your sugar level and maintain a healthy diet so that you are able to beat diabetes naturally and in the right way in a span of 30 days. So, what are you waiting for? Take a look at some of the miracle foods that help to beat diabetes in a month:
Story first published: Wednesday, October 7, 2015, 12:11 [IST]
X
Desktop Bottom Promotion