For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಜೀವನ ಶೈಲಿಯೇ ಮಧುಮೇಹಕ್ಕೆ ದಿವ್ಯ ಔಷಧ!

By Super
|

ಜಗತ್ತಿನಾದ್ಯ೦ತ ದೊಡ್ಡ ಸ೦ಖ್ಯೆಗಳಲ್ಲಿ ಜನರನ್ನು ಕಾಡುವ ಅತ್ಯ೦ತ ಸಾಮಾನ್ಯವಾದ ಆರೋಗ್ಯಕಾರಿ ಸಮಸ್ಯೆಗಳ ಪೈಕಿ ಮಧುಮೇಹವೂ ಕೂಡಾ ಒ೦ದು. ಮಧುಮೇಹಕ್ಕೆ೦ದು ಶಿಫಾರಸು ಮಾಡಲಾಗುವ ಔಷಧಿಗಳು ಮೆಚ್ಚತಕ್ಕ ಫಲಿತಾ೦ಶಗಳನ್ನು೦ಟು ಮಾಡುತ್ತವೆಯಾದರೂ ಕೂಡ, ಪರಿಸ್ಥಿತಿಯು ಕಟ್ಟುನಿಟ್ಟಾದ ಆಹಾರಕ್ರಮವನ್ನೂ ಕೂಡ ಬೇಡುತ್ತದೆ. ಮಧುಮೇಹವನ್ನು ನಿಯಂತ್ರಿಸುವ ಹತ್ತು ಅತ್ಯುತ್ತಮ ತರಕಾರಿಗಳು

ಇಂದಿನ ಒತ್ತಡಗಳ ಮಧ್ಯೆ ನಡೆಸುತ್ತಿರುವ ಜೀವನ ಶೈಲಿಯಲ್ಲಿ ನಮಗೆ ತಿಳಿಯದೆಯೇ ಮೌನವಾಗಿ ಹಲವು ರೋಗಗಳು ನಮನ್ನು ಆವರಿಸಿ ಬಿಡುತ್ತವೆ! ಮಧುಮೇಹ, ಅಧಿಕ ರಕ್ತದೊತ್ತಡ, ಹೀಗೆ ಅನೇಕ ರೀತಿಯ ಕಾಯಿಲೆಗಳು ಒಳಗೊಳಗೇ ನಿಧಾನವಾಗಿ ಉದ್ಭವಿಸಿ ನಿಮ್ಮನ್ನು ಕಾಡತೊಡಗಲು ಆರಂಭವಾಗಿ ನಿಮ್ಮ ಸಾಮಾನ್ಯ ಜೀವನಶೈಲಿಗೆ ಅಡ್ಡಬರುತ್ತವೆ. ಮಧುಮೇಹವು ಆ ನಿರ್ಣಾಯಕ ರೋಗಗಳಲ್ಲೊಂದಾಗಿದ್ದು ನಿಮಗೆ ಇನ್ನಷ್ಟು ಆರೋಗ್ಯ ಸಮಸ್ಯೆಗಳು, ಉದಾಹರಣೆಗೆ ಹೃದಯರೋಗಗಳು, ಇವುಗಳನ್ನು ಸೃಷ್ಟಿಸುತ್ತದೆ.

ಅಧುನಿಕ ಪ್ರಪಂಚದಲ್ಲಿ, ಮಧುಮೇಹರೋಗದಿಂದ ಬಳಲುತ್ತಿರುವವರು ಅಥವ ಅದರ ಅಪಾಯಕ್ಕೆ ಈಡಾಗಬಹುದಾದ ಜನರು ಶೇಕಡಾವಾರು ಅತಿ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಮಧುಮೇಹವಿರುವವರು ತಮ್ಮ ಜೀವನ ಶೈಲಿಯಲ್ಲಿ ಕೆಲವು ಪದ್ಧತಿಗಳನ್ನು ತಪ್ಪಿಸಬೇಕು. ಆರೋಗ್ಯಕರ ಜೀವನ ನಡೆಸಲು ಕೆಲವು ಸಲಹೆಗಳು ಇಲ್ಲಿವೆ: ಮೌನ ಕೊಲೆಗಾರ 'ಮಧುಮೇಹವನ್ನು' ನಿಯಂತ್ರಿಸುವ ಅದ್ಭುತ ಚಹಾ!

ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ ಅಂಶವನ್ನು ತಿಳಿದುಕೊಳ್ಳಿ

ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ ಅಂಶವನ್ನು ತಿಳಿದುಕೊಳ್ಳಿ

ನಾವು ಸೇವಿಸುವ ಆಹಾರದಲ್ಲಿ ನಿಧಾನವಾಗಿ ಜೀರ್ಣಕ್ರಿಯೆಗೆ ಸಹಾಯಕವಾಗುವ ಕಾರ್ಬೊಹೈಡ್ರೇಟ್ಸ್‌ಯುಕ್ತ ಆಹಾರವನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಅರೋಗ್ಯಕ್ಕೂ ಒಳ್ಳೆಯದು ಜೊತೆಗೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಇತ್ಯಾದಿಗಳನ್ನು ಸೇವಿಸಿದರೂ ಅವು ಒಂದು ಸರಿಯಾದ ಪ್ರಮಾಣದಲ್ಲಿರಬೇಕು. ಉದಾಹರಣೆಗೆ, ಆಲೂಗಡ್ಡೆಯನ್ನು ಊಟದಲ್ಲಿ ಬಳಸುವುದಾದರೆ, ಅನ್ನವನ್ನು ತಪ್ಪಿಸಿ.

ತೂಕವನ್ನು ಇಳಿಸಿಕೊಳ್ಳಿ

ತೂಕವನ್ನು ಇಳಿಸಿಕೊಳ್ಳಿ

ಇದು ಮಧುಮೇಹದಿಂದ ತಪ್ಪಿಸಿಕೊಳ್ಳುವ ಜೀವನ ಶೈಲಿಗಳಲ್ಲಿ ಒಂದಾಗಿದೆ. ಬೊಜ್ಜು, ಮಧುಮೇಹ ಸೇರಿದಂತೆ ಇತರ ಅನೇಕ ಕಾಯಿಲೆಗಳು ಬರುವುದಕ್ಕೆ ಇದು ಒಂದು ನಿರ್ಧಾರಕ ಕಾರಣ. ನೀವು ಒಂದಿಷ್ಟು ತೂಕ ಇಳಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮ

ನಿಮ್ಮ ದೇಹದ ತೂಕವನ್ನು ಹೇಗೆ ಕಡಿಮೆಮಾಡಿಕೊಳ್ಳುವಿರಿ? ನಿಯಮಿತ ವ್ಯಾಯಮವೇ ಒಂದು ಪರಿಹಾರ.ನೀವು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ನಿಮ್ಮ ತೂಕ ಕಡಿಮೆಯಾಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತಿರುವ ಇನ್ಸುಲಿನ್ ಸಾಕಾಗುತ್ತದೆ. ವ್ಯಾಯಾಮ ನಿಮ್ಮ ರಕ್ತದೊತ್ತಡವನ್ನೂ ಕೂಡ ಸರಿಯಾಗಿರುವ ಹಾಗೆ ಮಾಡುತ್ತದೆ.

ಸಾಕಷ್ಟು ನಿದ್ರೆ ಮಾಡಿ

ಸಾಕಷ್ಟು ನಿದ್ರೆ ಮಾಡಿ

ನಿಮ್ಮ ಜೀವನಶೈಲಿಯ ಸಲಹೆಗಳಲ್ಲಿ ನೀವು ಮಧುಮೇಹ ರೋಗವನ್ನು ತಪ್ಪಿಸುವ ದಿಶೆಯಲ್ಲಿ, ನೀವು ಸಾಕಷ್ಟು ನಿದ್ರೆ ಮಾಡಬೇಕು. ತಜ್ಞರು ಪ್ರತಿದಿನ ಏಳರಿಂದ ಎಂಟು ಗಂಟೆ ನಿದ್ರೆಯು ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಟ್ಟಿರಲು ಸಾಕು ಎಂದು ಹೇಳಿದ್ದಾರೆ.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ನಿಮಗೆ ಕಷ್ಟವೆಂದು ಕಾಣಬಹುದಾದರೂ ಅದನ್ನು ಅಭ್ಯಾಸ ಮಾಡಬೇಕು. ನೀವು ಬಹಳಷ್ಟು ಒತ್ತಡ ಹೇರಿಕೊಂಡರೆ, ನಿಮ್ಮ ಹೃದಯ ಬಡಿತ ಹೆಚ್ಚುತ್ತದೆ ಮತ್ತು ಹಾರ್ಮೋನ್(ರಕ್ತಕ್ಕೆ ಸೇರಿ ಅಂಗಾಂಗಗಳನ್ನು ಪ್ರಚೋದಿಸುವ ಪದಾರ್ಥ) ಹರಿಯಲು ಆರಂಭಿಸಿ ಇನ್ಸುಲಿನ್ ಉತ್ಪಾದನೆ ಮತ್ತು ಅದರ ಚಟುವಟಿಕೆಯನ್ನು ಹದಗೆಡಿಸುತ್ತದೆ. ಆದ್ದರಿಂದ ಕೆಲವು ಯೋಗಾಭ್ಯಾಸ, ಧ್ಯಾನ ಅಥವಾ ಕೆಲವು ಹೆಜ್ಜೆ ಲವಲವಿಕೆಯಾಗಿ ನಡೆದಾಡಿ ಒತ್ತಡವನ್ನು ಕಡಿಮೆಮಾಡಿಕೊಳ್ಳಿ.

English summary

Lifestyle Tips to Avoid Diabetes

In today’s hectic lifestyle, there are some diseases which attack silently but affect largely. Diabetes, high blood pressure etc. are those types of creepers which slowly grab you in their trap and hamper your general lifestyle. Here are some to help you to lead a healthy life
X
Desktop Bottom Promotion