For Quick Alerts
ALLOW NOTIFICATIONS  
For Daily Alerts

ಮಧುಮೇಹಿ ರೋಗಿಗಳ ಪಾಲಿನ ಸಂಜೀವಿನಿ- ಕುಂಬಳಕಾಯಿ

|

ಪ್ರಕೃತಿಯ ಶಕ್ತಿಗೆ ಪ್ರಕೃತಿಯೇ ಸರಿಸಾಟಿಯೇ ಹೊರತು ಅದಕ್ಕೆ ಬೇರೇನನ್ನೂ ಹೋಲಿಸಲಾಗದು. ಮಾನವ ಸಮುದಾಯದಲ್ಲಿ ಕ೦ಡುಬರುವ ಅತ್ಯ೦ತ ಸಾಮಾನ್ಯವಾದ ರೋಗಗಳಲ್ಲಿ ಮಧುಮೇಹವೂ ಕೂಡ ಒ೦ದಾಗಿದೆ! ಹೌದು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುವುದು ತುಂಬಾ ವಿಚಿತ್ರವೆನ್ನಬಹುದಾದ ಕಾಯಿಲೆ.

ಇದಕ್ಕೆ ಹೆಚ್ಚು ತಿಂದರೂ ಆಗಲ್ಲ, ತಿನ್ನದೆ ಇದ್ದರೂ ಆಗಲ್ಲ ಎನ್ನುವಂತಹ ಪರಿಸ್ಥಿತಿ. ಈ ಕಾಯಿಲೆಯಿರುವ ವ್ಯಕ್ತಿ ಹೆಜ್ಜೆ ಹೆಜ್ಜೆಗೂ ಜಾಗೃತೆ ವಹಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಇದನ್ನು ಮೌನವಾಗಿ ಕೊಲ್ಲುವ ರೋಗ ಎಂದು ಕರೆಯುತ್ತಾರೆ. ಬಹುಪಯೋಗಿ ಔಷಧಿಗಳ ಸಂಜೀವಿನಿ 'ಕುಂಬಳಕಾಯಿ'

Is Pumpkin Good For Diabetics?

ಹಾಗಾಗಿ ದಿನನಿತ್ಯದ ಆಹಾರಕ್ರಮ ಹಾಗೂ ನಿಯಮಿತವಾದ ವ್ಯಾಯಾಮ, ಇವೆರಡೂ ಕೂಡ ಮಧುಮೇಹಿಯ ವಿಚಾರದಲ್ಲಿ ಜೊತೆಜೊತೆಯಾಗಿ ಮಧುಮೇಹಿಗಳ ಹಿತಕ್ಕಾಗಿ ಕಾರ್ಯವೆಸಗುವ ಎರಡು ಪ್ರಮುಖವಾದ ಅ೦ಶಗಳಾಗಿವೆ. ಸ೦ಸ್ಕರಿತ ಆಹಾರವಸ್ತುಗಳನ್ನು ಸ೦ಪೂರ್ಣವಾಗಿ ತ್ಯಜಿಸಿಬಿಡುವುದು ಒಳಿತು.

ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರವಸ್ತುಗಳನ್ನೇ ಸೇವಿಸಲು ಪ್ರಯತ್ನಿಸುವುದು ಆರೋಗ್ಯಕಾರಿ. ಹಾಗಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ, ಕುಂಬಳಕಾಯಿ ಮಧುಮೇಹಿಗಳ ಪಾಲಿಗೆ ಅತ್ಯಂತ ಶ್ರೀಮಂತ ಆಹಾರವಾಗಿದೆ, ಬನ್ನಿ ಇದರ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ..

ವಿಟಮಿನ್ ಸಿ ಯಥೇಚ್ಛವಾಗಿದೆ
ಮಧುಮೇಹವನ್ನು ನಿಯಂತ್ರಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಮಧುಮೇಹಿಯಲ್ಲಿ ಇನ್ಸುಲಿನ್ ಅನುಕರಿಸುತ್ತದೆ. ದೇಹದಲ್ಲಿ ಇನ್ಸುಲಿನ್ ನ್ನು ಅನುಕರಿಸುವಲ್ಲಿ ವಿಟಮಿನ್ ಸಿ ತುಂಬಾ ಒಳ್ಳೆಯದು. ವಿಟಮಿನ್ ಸಿಯನ್ನು ಆಹಾರದ ಮೂಲಕ ಸೇವಿಸಿದರೆ ಅದು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವ ಕಾರಣದಿಂದಾಗಿ ಮಧುಮೇಹಿಗಳು ಇದನ್ನು ತಿನ್ನಲು ಯಾವುದೇ ಅಡ್ಡಿಯಿಲ್ಲ. ಮಧುಮೇಹದ ನಿಯಂತ್ರಣಕ್ಕೆ ತ್ಯಜಿಸಲೇಬೇಕಾದ ಆಹಾರಗಳಿವು!

ಕಬ್ಬಿನಾಂಶ ಮತ್ತು ಅಪರ್ಯಾಪ್ತ ಕೊಬ್ಬು
ಕುಂಬಳಕಾಯಿಯ ಬೀಜಗಳಲ್ಲಿ ಅತ್ಯಧಿಕ ಮಟ್ಟದ ಕಬ್ಬಿನಾಂಶ ಮತ್ತು ಅಪರ್ಯಾಪ್ತ ಕೊಬ್ಬು ಇದೆ. ಇದು ಮಧುಮೇಹಿಗಳಿಗೆ ಮಾತ್ರವಲ್ಲದೆ ಹೃದರೋಗಿಗಳಿಗೂ ಒಳ್ಳೆಯದು. ಮಧುಮೇಹಿಗಳು ಕುಂಬಳಕಾಯಿ ಬಳಸುವ ಮತ್ತೊಂದು ಕಾರಣ ಇದಾಗಿದೆ. ಇದನ್ನು ತಿಂಡಿ ಅಥವಾ ಸಲಾಡ್ ಮಾಡಿ ತಿನ್ನಬಹುದು. ಕುಂಬಳಕಾಯಿ ಮಧುಮೇಹಿಗಳಿಗೆ ಒಳ್ಳೆಯದೇ ಎಂದು ಯೋಚಿಸುತ್ತಿದ್ದರೆ ನೀವೀಗ ಧನಾತ್ಮಕವಾಗಿ ಚಿಂತಿಸಬೇಕಾಗಿದೆ.

ಉತ್ಕರ್ಷಣ ನಿರೋಧಕ
ದೇಹದಲ್ಲಿ ಇನ್ಸುಲಿನ ಸ್ರವಿಸುವಿಕೆಯ ಮಟ್ಟ ಕಡಿಮೆಯಾದಾಗ ಅದರಿಂದ ಕಾರ್ಬೋಹೈಡ್ರೇಟ್, ಮೇದಸ್ಸು ಮತ್ತು ಪ್ರೋಟೀನ್ ಚಯಾಪಚಯಾ ಕ್ರಿಯೆ ಮೇಲೆ ಪರಿಣಾಮ ಉಂಟಾಗುತ್ತದೆ. ಚಯಾಪಚಾಯ ಅಸ್ವಸ್ಥತೆಯಿಂದಾಗಿ ಉತ್ಕರ್ಷಣಶೀಲ ಒತ್ತಡ ಉಂಟಾಗುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಉತ್ಕರ್ಷಣ ನಿರೋಧಕಗಳನ್ನು ಒದಗಿಸುವುದರಿಂದ ಅದು ಮಧುಮೇಹವನ್ನು ನಿಯಂತ್ರಿಸಲು ಚಿಕಿತ್ಸಾತ್ಮಕವಾಗಿ ಕೆಲಸ ಮಾಡುತ್ತದೆ. ಕುಂಬಳಕಾಯಿಯಲ್ಲಿ ಉತ್ತಮ ಗುಣಮಟ್ಟದ ಉತ್ಕರ್ಷಣ ನಿರೋಧಕವಿದ್ದು, ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

ಫಾಲಿಕ್ ಆಮ್ಲ
ಮಧುಮೇಹವಿರುವ ರೋಗಿಗಳಲ್ಲಿ ನಿರ್ನಾಳ ಭಾಗದ ನಿಷ್ಕ್ರೀಯತೆ ಉಂಟಾಗುವುದರಿಂದ ದೇಹದಲ್ಲಿನ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಫಾಲಿಕ್ ಆಮ್ಲವು ಈ ಕ್ರಿಯೆಯನ್ನು ತಡೆದು ನಿರ್ನಾಳ ಭಾಗದ ಕ್ರಿಯೆಯಲ್ಲಿ ನೈಟ್ರಿಕ್ ಆಮ್ಲವು ಬಿಡುಗಡೆಯಾಗುವಂತೆ ಮಾಡುತ್ತದೆ. ಕುಂಬಳಕಾಯಿಯಲ್ಲಿ ಫಾಲಿಕ್ ಆಮ್ಲದ ಮಟ್ಟವು ಅಧಿಕವಾಗಿದೆ ಮತ್ತು ಇದು ಮಧುಮೇಹಿಗಳಿಗೆ ತುಂಬಾ ಲಾಭದಾಯಕ ಎನ್ನುವುದನ್ನು ಗಮನಿಸಬೇಕು.

English summary

Is Pumpkin Good For Diabetics?

Diabetes is a complicated disease; this is commonly referred to as the silent killer. When the blood sugar levels are not under control, various other associated problems may arise. The happy news is that pumpkin, which belongs to the cucurbitaceae family, is one of the best foods for diabetic patients. This family also includes cucumbers, melons and squash. There are various ways in cooking the pumpkin.
X
Desktop Bottom Promotion