For Quick Alerts
ALLOW NOTIFICATIONS  
For Daily Alerts

ರಂಜಾನ್ ಮಾಸದಲ್ಲಿ ಮಧುಮೇಹಿ ರೋಗಿಗಳ ಪಾಡೇನು?

By Arshad
|

ರಂಜಾನ್ ತಿಂಗಳ ಉಪವಾಸ ಈಗ ಸುಮಾರು ಹದಿನಾಲ್ಕು ಹದಿನೈದು ಗಂಟೆಗಳಷ್ಟು ದೀರ್ಘವಾಗಿದೆ. ಸ್ವೀಡನ್ ಮೊದಲಾದ ದೇಶಗಳಲ್ಲಿ ಇದು ಸುಮಾರು ಇಪ್ಪತ್ತು ಗಂಟೆಗಳಷ್ಟಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಹದಿನೈದು ಗಂಟೆಗಳಷ್ಟಿದ್ದು ಭಾರೀ ಬಿಸಿಯ ಬೇಸಿಗೆಯ ನಡುವೆ ಈ ವರ್ಷದ ರಂಜಾನ್ ಬಂದಿದೆಯಂತೆ. ಆರೋಗ್ಯವಂತರಿಗೇ ಸುಸ್ತಾಗುವ ಈ ದೀರ್ಘಕಾಲದ ಉಪವಾಸ ಅಶಕ್ತರು ಮತ್ತು ರೋಗಿಗಳಿಗೆ ಇನ್ನಷ್ಟು ಕಷ್ಟಕರವಾಗಿದೆ.

ಅದರಲ್ಲೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿರುವ ಮಧುಮೇಹಿಗಳಿಗೆ ಊಟ ಬಿಟ್ಟಿರುವುದು ಆರೋಗ್ಯದ ಏರುಪೇರಿಗೆ ಆಹ್ವಾನ ನೀಡಿದಂತೆ. ಆದರೆ ಧಾರ್ಮಿಕ ಮನೋಭಾವದ ಮಧುಮೇಹಿಗಳು ರಂಜಾನ್ ಮಾಸದಲ್ಲಿ ಪುಣ್ಯವನ್ನುಗಳಿಸುವ ಬಯಕೆಗೇ ಹೆಚ್ಚಿನ ಪ್ರಾಮುಖ್ಯತೆ ನೀಡಿ ತಮ್ಮ ಕಾಯಿಲೆಯನ್ನು ಕಡೆಗಣಿಸುವುದು ಮಧುಮೇಹಿಗಳಿರುವ ಹೆಚ್ಚಿನ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ.

ಎಲ್ಲರೂ ಉಪವಾಸದಲ್ಲಿದ್ದು ಪ್ರಾರ್ಥನೆಗಳನ್ನು ಮಾಡುತ್ತಿರುವಾಗ ನನಗೆ ಈ ವರ್ಷ ದೇವರು ನೀಡಿರುವ ಆಯಸ್ಸನ್ನು ಊಟ ಮಾಡಿ ಕಳೆದುಕೊಳ್ಳಲೇ? ಸ್ವಲ್ಪ ಸುಸ್ತಾದರೆ ಏನಾಯಿತು, ಸಂಜೆ ಏಳು ಗಂಟೆಗೆ ಊಟ ಮಾಡುತ್ತೇನಲ್ಲಾ, ಎಂದೆಲ್ಲಾ ಮಧುಮೇಹಿ ಹಿರಿಯರು ತಮ್ಮ ವೈದ್ಯರಲ್ಲಿ ಮತ್ತು ಮಕ್ಕಳು, ಸೊಸೆಯರಲ್ಲಿ ಅಂಗಲಾಚುವುದನ್ನು ಕಂಡಾಗ ಮನ ಮುದುಡುತ್ತದೆ.

ಇಸ್ಲಾಂ ಪ್ರಕಾರ ಊಟ ಮಾಡದಿರಲು ಸಾಧ್ಯವಿಲ್ಲದ ರೋಗಿಗಳು, ಗರ್ಭಿಣಿಯರು, ಬಾಣಂತಿಯರು, ಪ್ರಯಾಣದಲ್ಲಿದ್ದು ಉಪವಾಸ ಸಾಧ್ಯವಿಲ್ಲದೇ ಇರುವವರು, ಉಪವಾಸವನ್ನು ತಾಳಿಕೊಳ್ಳಲಾರದ ವೃದ್ಧರು ಮತ್ತು ಮಕ್ಕಳಿಗೆ ಕಡ್ಡಾಯ ಉಪವಾಸದಿಂದ ರಿಯಾಯಿತಿಯಿದೆ. ಆದರೆ ರೋಗದ ಕಾರಣ ಉಪವಾಸ ಹಿಡಿಯಲಾಗದಿರುವವರು, ಪ್ರಯಾಣದಲ್ಲಿದ್ದವರು ಈ ಉಪವಾಸವನ್ನು ಬಳಿಕ ಮುಂದಿನ ದಿನಗಳಲ್ಲಿ ಪೂರೈಸಬೇಕು. ಇದೂ ಸಾಧ್ಯವಾಗದ ರೋಗಿಗಳು ಇತರ ಉಪವಾಸಿಗರಿಗೆ ಆಹಾರವನ್ನು ನೀಡುವ ಮೂಲಕ ನೆರವಾಗುವ ಮೂಲಕ ಉಪವಾಸದ ಪುಣ್ಯ ದೊರಕುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಉಪವಾಸ ಹಿಡಿಯುತ್ತೇನೆಂದು ಹಠ ಹಿಡಿದಿದ್ದರೆ ಈ ಕೆಳಗಿನ ಮಾಹಿತಿಗಳನ್ನು ಅನುಸರಿಸುವುದು ಉತ್ತಮ...

ಮೊತ್ತ ಮೊದಲು ನಿಮ್ಮ ವೈದ್ಯರು ಏನು ಹೇಳುತ್ತಾರೆ ಕೇಳಿ

ಮೊತ್ತ ಮೊದಲು ನಿಮ್ಮ ವೈದ್ಯರು ಏನು ಹೇಳುತ್ತಾರೆ ಕೇಳಿ

ಉಪವಾಸ ಹಿಡಿಯಲೇಬೇಕೆಂಬ ನಿಮ್ಮ ನಿಶ್ಚಯವನ್ನು ನೀವೇ ನಿರ್ಧರಿಸುವ ಮೊದಲು ನಿಮ್ಮ ವೈದ್ಯರನ್ನು ಭೇಟಿಯಾಗಿ. ನಿಮ್ಮ ದೇಹದ ಸ್ಥಿತಿಯ ಬಗ್ಗೆ ಅವರಿಗೆ ಹೆಚ್ಚಿನ ಅರಿವಿರುತ್ತದೆ. ನಿಮ್ಮ ಈಗಿನ ದೇಹಸ್ಥಿತಿ ಮತ್ತು ಉಪವಾಸದಿಂದಾಗುವ ಬಳಲಿಕೆಯನ್ನು ತಾಳಿಕೊಳ್ಳಲು ಸಾಧ್ಯವಿದೆಯೇ ಎಂದು ಅವರು ನಿರ್ಧರಿಸುತ್ತಾರೆ. ಒಂದು ವೇಳೆ ಕುಸಿದು ಬೀಳುವ ಸಾಧ್ಯತೆ ಇದ್ದರೆ ವೈದ್ಯರು ಸುತಾರಾಂ ಒಪ್ಪುವುದಿಲ್ಲ. ದೇಹಸ್ಥಿತಿ ಚೆನ್ನಾಗಿದೆ ಎಂದರೆ ಸೂಕ್ತ ಆಹಾರ, ಸಾಕಷ್ಟು ವಿಶ್ರಾಂತಿ ಮತ್ತು ಸೂಚಿಸಿದ ಔಷಧಿಗಳನ್ನು ಕ್ರಮಬದ್ದವಾಗಿ ಸೇವಿಸಿದ ಬಳಿಕವೇ ಉಪವಾಸ ಕೈಗೊಳ್ಳಿ.

ನಿಮ್ಮ ವೈದ್ಯರು ಸೂಚಿಸುವ ಸಲಹೆಗಳನ್ನು ಪಾಲಿಸಿ

ನಿಮ್ಮ ವೈದ್ಯರು ಸೂಚಿಸುವ ಸಲಹೆಗಳನ್ನು ಪಾಲಿಸಿ

ಒಂದು ವೇಳೆ ನಿಮ್ಮ ವೈದ್ಯರು ನಿಮಗೆ ಉಪವಾಸವಿರುವುದು ಬೇಡ ಎಂದು ಹೇಳಿದರೆ ಅದಕ್ಕೂ ಹೊರತಾಗಿ ಉಪವಾಸವನ್ನು ಹಿಡಿಯುವ ಹಠ ಮಾಡಬೇಡಿ. ಏಕೆಂದರೆ ಉಪವಾಸದ ಅವಧಿಯಲ್ಲಿ ಊಟವಿಲ್ಲದಿದ್ದರೆ ನಿಮ್ಮ ದೇಹಕ್ಕೆ ಯಾವ ಗಂಡಾಂತರ ಎದುರಾಗಬಹುದು ಎಂದು ನಿಮಗಿಂತ ಅವರಿಗೆ ಹೆಚ್ಚು ಗೊತ್ತಿರುತ್ತದೆ. ಒಂದು ವೇಳೆ ಉಪವಾಸವಿರಲು ಅನುಮತಿ ನೀಡಿದರೆ ಅವರು ಸಲಹೆ ಮಾಡುವ ಎಚ್ಚರಿಕೆಗಳನ್ನೂ ಕಡ್ಡಾಯವಾಗಿ ಪಾಲಿಸಿ. ಪ್ರಯಾಣ, ನಿತ್ಯದ ನಡಿಗೆ, ಬಿಸಿಲು ಮೊದಲಾದ ಎಲ್ಲಾ ವಿಷಯಗಳಲ್ಲೂ ವೈದ್ಯರು ನೀಡುವ ಸಲಹೆಯನ್ನು ಪಾಲಿಸಿ.

ಸೂಕ್ತ ಪ್ರಮಾಣದಲ್ಲಿ ಆಹಾರ ಸೇವಿಸಿ, ಹೆಚ್ಚು ತಿನ್ನಲು ಹೋಗಬೇಡಿ

ಸೂಕ್ತ ಪ್ರಮಾಣದಲ್ಲಿ ಆಹಾರ ಸೇವಿಸಿ, ಹೆಚ್ಚು ತಿನ್ನಲು ಹೋಗಬೇಡಿ

ಮಧುಮೇಹಿಗಳಿಗೆ ವೈದ್ಯರು ಉಪವಾಸವನ್ನು ಹಿಡಿಯಲು ಅನುಮತಿ ನೀಡಿರುತ್ತಾರಾದರೂ ಎಲ್ಲಾ ಉಪವಾಸಗಳನ್ನು ಹಿಡಿಯಲು ಅನುಮತಿ ನೀಡುವುದಿಲ್ಲ. ಒಂದು ದಿನ ಹಿಡಿದರೆ ಎರಡು ದಿನ ಬಿಟ್ಟು ಮೂರನೆಯ ದಿನ, ಹೀಗೇ ವೈದ್ಯರು ನಿಗದಿಪಡಿಸಿದ ಪ್ರಕಾರವೇ ಹಿಡಿಯಿರಿ. ಇಡಿಯ ದಿನ ಉಪವಾಸವಿರಬೇಕು ಎಂದು ಅತಿ ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಡಿ. ಮುಂದೆ ಓದಿ

ಸೂಕ್ತ ಪ್ರಮಾಣದಲ್ಲಿ ಆಹಾರ ಸೇವಿಸಿ, ಹೆಚ್ಚು ತಿನ್ನಲು ಹೋಗಬೇಡಿ

ಸೂಕ್ತ ಪ್ರಮಾಣದಲ್ಲಿ ಆಹಾರ ಸೇವಿಸಿ, ಹೆಚ್ಚು ತಿನ್ನಲು ಹೋಗಬೇಡಿ

ಅಂತೆಯೇ ಉಪವಾಸ ಸಂಪನ್ನಗೊಳಿಸುವಾಗಲೂ ಅತಿ ಹೆಚ್ಚಾಗಿ ತಿನ್ನಬೇಡಿ. ನಿಮ್ಮ ಆಹಾರ ಸಂತುಲಿತವಾಗಿದ್ದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಆರೋಗ್ಯಕರ ಮಿತಿಯಲ್ಲಿರುವಂತೆ ನೋಡಿಕೊಳ್ಳಿ. ನಿಮ್ಮ ಆಹಾರ ನಿಧಾನವಾಗಿ ಜೀರ್ಣಗೊಳ್ಳುವ ಮತ್ತು ನಿಧಾನವಾಗಿ ರಕ್ತಕ್ಕೆ ಬಿಡುಗಡೆಯಾಗುವಂಹದ್ದೇ ಆಗಿರಲಿ. ಉದಾಹರಣೆಗೆ ಗೋಧಿ, ರಾಗಿ ಇತ್ಯಾದಿ.

ಇನ್ಸುಲಿನ್ ಪ್ರಮಾಣ ಮತ್ತು ಸಮಯವನ್ನು ಬದಲಿಸಿ

ಇನ್ಸುಲಿನ್ ಪ್ರಮಾಣ ಮತ್ತು ಸಮಯವನ್ನು ಬದಲಿಸಿ

ಒಂದು ವೇಳೆ ಉಪವಾಸಕ್ಕೆ ವೈದ್ಯರು ಅನುಮತಿ ನೀಡಿದರೆ ಮತ್ತು ನೀವು ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದರೆ ಇದರ ಪ್ರಮಾಣ ಮತ್ತು ತೆಗೆದುಕೊಳ್ಳಬೇಕಾದ ಸಮಯವನ್ನು ವೈದ್ಯರು ಸಲಹೆ ನೀಡಿದ ಪ್ರಕಾರ ತೆಗೆದುಕೊಳ್ಳಿ. ಇಸ್ಲಾಂ ಪಂಡಿತರ ಪ್ರಕಾರ ಇಂಜೆಕ್ಷನ್ ತೆಗೆದುಕೊಳ್ಳುವ ಉದ್ದೇಶ ಕೇವಲ ಆರೋಗ್ಯ ನಿಮಿತ್ತವಾಗಿದ್ದು ಇದರಲ್ಲಿ ಆಹಾರ ಅಥವಾ ಉಪವಾಸಕ್ಕೆ ಭಂಗತರುವಂತಹ ಅಂಶ ಇಲ್ಲದಿದ್ದರೆ ತೆಗೆದುಕೊಳ್ಳಬಹುದಾದುದರಿಂದ ಉಪವಾಸದ ಅವಧಿಯಲ್ಲಿಯೂ ಇನ್ಸುಲಿನ್ ಇಂಜೆಕ್ಷನ್ನುಗಳನ್ನು ತೆಗೆದುಕೊಳ್ಳಬಹುದಾಗಿದೆ.

ಮಧುಮೇಹಿಗಳು ಉಪವಾಸದಲ್ಲಿ ಈ ತೊಂದರೆಗಳನ್ನು ಎದುರಿಸಬೇಕಾಗಬಹುದು

ಮಧುಮೇಹಿಗಳು ಉಪವಾಸದಲ್ಲಿ ಈ ತೊಂದರೆಗಳನ್ನು ಎದುರಿಸಬೇಕಾಗಬಹುದು

ಅತಿ ಹೆಚ್ಚು ಕಾಲ ಆಹಾರ ಸೇವಿಸದೇ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ವಿಪರೀತವಾಗಿ ತಗ್ಗುತ್ತದೆ. hypoglycaemia ಎಂದು ಕರೆಯುವ ಈ ಸ್ಥಿತಿ ಆರೋಗ್ಯವಂತರಿಗೂ ಸುಸ್ತು ತರಿಸಬಲ್ಲದು. ಆದರೆ ಮಧುಮೇಹಿಗಳಿಗೆ ಈ ಸ್ಥಿತಿ ಮಾರಕವಾಗಿದೆ. ಇದು ದೇಹದ ಜಲಾಂಶದ ಕೊರತೆಗೂ (dehydration) ಕಾರಣವಾಗಬಹುದು. ಒಂದು ವೇಳೆ ಮೂತ್ರಪಿಂಡಗಳೂ ದುರ್ಬಲವಾಗಿದ್ದು, ಮೂತ್ರಪಿಂಡದ ಕಲ್ಲಿನ ತೊಂದರೆಯಿಂದ ಈಗಾಗಲೇ ಬಳಲಿದ್ದರೆ ದೇಹದ ನಿರ್ಜಲೀಕರಣವೂ ಮಾರಕವಾಗಿ ಪರಿಣಮಿಸಬಹುದು. ಹೃದಯದ ತೊಂದರೆ ಇದ್ದರೆ ಇಲ್ಲಿಯೂ ತೊಂದರೆ ಕಂಡುಬರಬಹುದು.

ಉಪವಾಸದಲ್ಲಿ ಎದುರಾಗುವ ಸಮಸ್ಯೆ

ಉಪವಾಸದಲ್ಲಿ ಎದುರಾಗುವ ಸಮಸ್ಯೆ

ಉಪವಾಸದ ಅವಧಿಯಲ್ಲಿಯೂ ಕೊಂಚ ದೈಹಿಕ ಚಟುವಟಿಕೆ ಅಗತ್ಯ. ಕೆಲಸಮಯದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಬಳಿಕ ಕಡಿಮೆಯಾಗಬಹುದು. ಕೆಲವೊಮ್ಮೆ ಅತಿ ಹೆಚ್ಚಿನ ವಿಶ್ರಾಂತಿಯ ಬಳಿಕ ರಕ್ತದಲ್ಲಿ ಸಕ್ಕರೆಯ ಅಂಶ ವಿಪರೀತವಾಗಿ ಹೆಚ್ಚಾಗಿದ್ದರೆ ಇದು DKA ಅಥವಾ diabetic ketoacidosis ಎಂಬ ಸ್ಥಿತಿಗೆ ತಂದೊಡ್ಡಬಹುದು. ಈ ಸ್ಥಿತಿಗೆ ತಲುಪಿದರೆ ಕುಸಿದುಬಿದ್ದು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಗುವ ಅಪಾಯ ಎದುರಾಗಬಹುದು.

ಮಧುಮೇಹಿಗಳು ಯಾವ ತರಹದ ಆಹಾರಗಳನ್ನು ಸೇವಿಸುವುದು ಸೂಕ್ತ?

ಮಧುಮೇಹಿಗಳು ಯಾವ ತರಹದ ಆಹಾರಗಳನ್ನು ಸೇವಿಸುವುದು ಸೂಕ್ತ?

ಮಧುಮೇಹಿಗಳಿಗೆ ಇತರ ಸಮಯದಲ್ಲಿಯೂ ಕೆಲವು ಆಹಾರಗಳನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಆದರೆ ಉಪವಾಸದ ಅವಧಿಯಲ್ಲಿ ಸರಿಯಾದ ಆಹಾರದ ಆಯ್ಕೆ ತುಂಬಾ ಕಷ್ಟ. ನಿಮಗೆ ಸಲಹೆ ನೀಡಿರುವ ತರಕಾರಿ, ಹಣ್ಣುಗಳು (ಸೇಬು, ಬಾಳೆಹಣ್ಣು) ಮತ್ತು ತರಕಾರಿಗಳನ್ನೇ ಸೂಕ್ತ ಪ್ರಮಾಣದಲ್ಲಿ ಸೇವಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಧುಮೇಹಿಗಳು ಯಾವ ತರಹದ ಆಹಾರಗಳನ್ನು ಸೇವಿಸುವುದು ಸೂಕ್ತ?

ಮಧುಮೇಹಿಗಳು ಯಾವ ತರಹದ ಆಹಾರಗಳನ್ನು ಸೇವಿಸುವುದು ಸೂಕ್ತ?

ಹೆಚ್ಚುವರಿಯಾಗಿ ನಿಧಾನವಾಗಿ ಜೀರ್ಣವಾಗುವ ಆಹಾರಗಳಾದ ಅಕ್ಕಿರೊಟ್ಟಿ, ಅಕ್ಕಿಯ ಕಡುಬು, ಬೇಕರಿಯಲ್ಲಿ ಎಣ್ಣೆಯಿಲ್ಲದೇ ತಯಾರಿಸಿದ ಮೈದಾಹಿಟ್ಟಿನ ರೊಟ್ಟಿ (pitta bread), ರಾಗಿ ಮುದ್ದೆ ಮೊದಲಾದವುಗಳನ್ನು ಸೇವಿಸಿ. ಇದಕ್ಕೆ ಸೂಕ್ತ ಪ್ರಮಾಣದಲ್ಲಿ ಇನ್ಸುಲಿನ್ ಇಂಜೆಕ್ಷನ್ ಸೇವಿಸುತ್ತಾ ದಿನವಿಡೀ ನಿಮ್ಮಾ ಅರೋಗ್ಯ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಸಾಕಷ್ಟು ನೀರು ಕುಡಿಯುವುದು ತುಂಬಾ ಅಗತ್ಯವಾಗಿದೆ.

ಯಾವುದೇ ತೊಂದರೆ ಎದುರಾದರೂ ಉಪವಾಸ ತೊರೆಯಲು ಸಿದ್ಧರಾಗಿರಿ

ಯಾವುದೇ ತೊಂದರೆ ಎದುರಾದರೂ ಉಪವಾಸ ತೊರೆಯಲು ಸಿದ್ಧರಾಗಿರಿ

ಮಧುಮೇಹಿಗಳ ಆರೋಗ್ಯಸ್ಥಿತಿ ತುಂಬಾ ಸಂಕೀರ್ಣವಾಗಿದ್ದು ವೈದ್ಯರಿಗೇ ಹಲವು ಬಾರಿ ತಬ್ಬಿಬ್ಬಾಗಿಸುತ್ತದೆ. ಉಪವಾಸದ ಅವಧಿಯಲ್ಲಿ ವೈದ್ಯರೂ ನಿರೀಕ್ಷಿಸಿರದ ಕೆಲವು ಏರುಪೇರುಗಳಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ವಿಪರೀತ ಸುಸ್ತು, ತಲೆ ತಿರುಗುವುದು, ಕಣ್ಣು ಕಪ್ಪಾಗುವುದು ಮೊದಲಾದ ಯಾವುದೇ ತೊಂದರೆ ಕಂಡುಬಂದರೆ ತಕ್ಷಣ ಉಪವಾಸ ತೊರೆದುಬಿಡಿ. ಏಕೆಂದರೆ ಆರೋಗ್ಯಕ್ಕಿಂತ ದೊಡ್ಡದು ಇನ್ನಾವುದೂ ಇಲ್ಲ.

ಯಾವುದೇ ತೊಂದರೆ ಎದುರಾದರೂ ಉಪವಾಸ ತೊರೆಯಲು ಸಿದ್ಧರಾಗಿರಿ

ಯಾವುದೇ ತೊಂದರೆ ಎದುರಾದರೂ ಉಪವಾಸ ತೊರೆಯಲು ಸಿದ್ಧರಾಗಿರಿ

ಯಾವುದೇ ಕ್ಷಣದಲ್ಲಿ ಉಪವಾಸ ತೊರೆಯಲು ನಿಮ್ಮ ಆಹಾರಗಳನ್ನು ಮತ್ತು ಔಷಧಿಗಳನ್ನು ಸುಲಭವಾಗಿ ಕೈಗೆ ಸಿಗುವಂತಿಡಿ. ಎಲ್ಲಾದರೂ ಹೋಗುವುದಿದ್ದರೆ ಒಂದು ಚಿಕ್ಕ ಚೀಲದಲ್ಲಿ ಕೊಂಡು ಹೋಗಿ. ಒಬ್ಬರೇ ಎಂದಿಗೂ ಪಯಣಿಸಬೇಡಿ. ಅನಿವಾರ್ಯವಲ್ಲದ ಸ್ಥಿತಿಯಲ್ಲಿ ಪ್ರಯಾಣಿಸಬೇಡಿ. ದೂರದ ಪ್ರಯಾಣವಾದರೆ ರಮಧಾನ್ ತಿಂಗಳ ಬಳಿಕ ಬರುವಂತೆ ಮುಂದೂಡಿ. ಇದೂ ಅನಿವಾರ್ಯವಾದರೆ ಎರಡು ಹಂತಗಳಲ್ಲಿ ತಲುಪುವಂತೆ ಹೊರಡಿ.

English summary

Healthy Diet Plan For Diabetic Patients During Ramadan

Healthy fasting has many benefits and is sometimes also required of us due to certain religious obligations. It is easy for young and healthy people to observe fasts and get through the day. But, it is not easy for people who suffer from any ailments, especially if the ailment is diabetes.
X
Desktop Bottom Promotion