For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಸುತ್ತಳತೆ, ಹದ್ದು ಬಸ್ತಿನಲ್ಲಿದ್ದರೇ ಚೆಂದ ಅಲ್ಲವೇ...?

By Suma
|

ಇಡಿಯ ವಿಶ್ವದಲ್ಲಿ ಶೇಖಡಾ ಐವತ್ತಕ್ಕಿಂತಲೂ ಹೆಚ್ಚು ಜನರು ಸ್ಥೂಲಕಾಯರಾಗಿದ್ದು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಕಡಿಮೆಗೊಳಿಸಲು ಇಚ್ಛಿಸುತ್ತಾರೆ. ಹೊಟ್ಟೆಯ ಸುತ್ತಳತೆ ಹೆಚ್ಚಿರುವುದು ಉಳ್ಳವರ ಲಕ್ಷಣ ಎಂದು ಹಿಂದೆ ಭಾವಿಸಲಾಗುತ್ತಿತ್ತು. ಆದರೆ ಇದು ವಾಸ್ತವವಾಗಿ ಅನಗತ್ಯ ಕೊಬ್ಬಿನ ಸಂಗ್ರಹವಾಗಿದ್ದು ಹಲವು ಕಾಯಿಲೆಗಳಿಗೆ ನೀಡುವ ಆಹ್ವಾನವಾಗಿದೆ. ದೇಹದ ಆಕಾರವನ್ನು ಕೆಡಿಸುವುದು ಮಾತ್ರವಲ್ಲ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಮತ್ತು ಮರೆಗುಳಿತನಕ್ಕೂ ಕಾರಣವಾಗಬಹುದು..! ಆದರೆ ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ.

ಏಕೆಂದರೆ ನಮ್ಮ ದೇಹದಲ್ಲಿ ಅಡಕವಾಗಿರುವ ಕಾರ್ಯಸೂಚಿ (programme) ಪ್ರಕಾರ ಸೊಂಟದ ಸುತ್ತ ಕೊಬ್ಬು ಪ್ರಥಮವಾಗಿ ಸಂಗ್ರಹವಾಗುತ್ತಾ ಕಟ್ಟ ಕಡೆಯದಾಗಿ ಮುಖದ ಚರ್ಮದಡಿಯಲ್ಲಿ ಸಂಗ್ರಹವಾಗುತ್ತದೆ. ಅದೇ ಕರಗಿಸುವಾಗ ಮುಖದ ಚರ್ಮದಡಿಯ ಕೊಬ್ಬಿನಿಂದ ಪ್ರಾರಂಭವಾಗಿ ಕಟ್ಟಕಡೆಗೆ ಸೊಂಟದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ.

ಕೆಲವರಿಗೆ ಒಂದು ನಂಬಿಕೆ ಇದೆ ಸಾಕಷ್ಟು ವ್ಯಾಯಮ ಮಾಡಿ ಹೊಟ್ಟೆ ತುಂಬಾ ಬೇಕಾದ್ದು ತಿಂದಲ್ಲಿ ದೇಹದ ತೂಕ ಸಮತೂಕದಲ್ಲಿರುತ್ತದೆ ಎಂದು. ಆದರೆ ಇದು ತಪ್ಪಾದ ನಂಬಿಕೆಯಾಗಿದೆ. ಕೊಬ್ಬು ಕರಗಿಸುವ ಆಹಾರ ಪದಾರ್ಥಗಳನ್ನು ನಿಮ್ಮ ನಿತ್ಯಜೀವನದಲ್ಲಿ ನೀವು ಎಷ್ಟು ಸೇವಿಸುತ್ತೀರಿ ಎಂಬುದೂ ಕೂಡ ಇಲ್ಲಿ ಮುಖ್ಯವಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಹದಿನೈದು ದಿನದಲ್ಲಿ ಇಲ್ಲವೇ 30 ದಿನದಲ್ಲಿ ದೇಹದ ತೂಕ ಕಡಿಮೆ ಮಾಡಿಕೊಳ್ಳಿ ವ್ಯಾಯಮದ ಮೊರೆ ಹೋಗದೇ ದೇಹವನ್ನು ಸುಂದರಗೊಳಿಸಿ ಮೊದಲಾದ ಜಾಹೀರಾತುಗಳು ಕೇವಲ ದುಡ್ಡು ಮಾಡುವ ಗುರಿಯನ್ನು ಹೊಂದಿರುತ್ತವೆಯೇ ಹೊರತು ಆರೋಗ್ಯ ಪೂರ್ಣವಾಗಿರುವುದಿಲ್ಲ ಎಂಬುದು ನೆನಪಿನಲ್ಲಿರಲಿ.

ದೇಹವನ್ನು ದಂಡಿಸದೇ ಮತ್ತು ಕ್ರಮಬದ್ಧ ಆಹಾರ ವಿಧಾನಗಳನ್ನು ಅನುಸರಿಸದೆಯೇ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ನಿಜಕ್ಕೂ ಅಸಂಭವ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಕೊಬ್ಬು ಕರಗಿಸಬಲ್ಲ ನಿಮ್ಮ ನಿತ್ಯದ ಆಹಾರದಲ್ಲಿ ನೀವು ಸೇರಿಸಿಕೊಳ್ಳಬಹುದಾದ ಆಹಾರ ಪದಾರ್ಥಗಳ ಪಟ್ಟಿಯೊಂದಿಗೆ ನಾವು ಬಂದಿದ್ದು ಇದು ಫಲಪ್ರದ ಎಂದೆನಿಸಿದೆ. ಬನ್ನಿ ಆ ಆಹಾರಗಳು ಯಾವುವು ಎಂಬುದನ್ನು ಸ್ಲೈಡರ್‎ಗಳಲ್ಲಿ ಪರಿಶೀಲಿಸಿಕೊಳ್ಳಿ...

ಸೇಬು

ಸೇಬು

ದಿನಕ್ಕೊಂದು ಸೇಬು ತಿನ್ನಿ ವೈದ್ಯರನ್ನು ದೂರವಿಡಿ ಎಂಬ ಆರೋಗ್ಯ ಮಂತ್ರ ನಿಮ್ಮ ದೇಹದ ಕೊಬ್ಬಿಗೂ ಅನ್ವಯ. ದೇಹದಲ್ಲಿರುವ ಕೊಬ್ಬಿನ ಕೋಶಗಳನ್ನು ಕಡಿಮೆ ಮಾಡುವಲ್ಲಿ ಸೇಬು ಮಾಡುವ ಕಾರ್ಯ ಮಹತ್ತರವಾದುದು. ದೇಹ ತೂಕ ಕಡಿಮೆ ಮಾಡುವ ಗುರಿ ನಿಮ್ಮದು ಎಂದಾದಲ್ಲಿ ಈಗಿಂದೀಗಲೇ ಸೇಬು ಸೇವನೆ ಮಾಡಿ. ಕೋಶಗಳ ಮೂಲಕ ಸಂಗ್ರಹವಾಗುವ ಕೊಬ್ಬನ್ನು ಸೇಬಿನಲ್ಲಿರುವ ಪೆಕ್ಟಿನ್ ಸೀಮಿತಗೊಳಿಸುತ್ತದೆ ಮತ್ತು ಅದರ ನೀರು ಬಂಧಿತ ಅಂಶಗಳ ಮೂಲಕ ಕೊಬ್ಬು ನಿಕ್ಷೇಪಗಳನ್ನು ಬಿಡುಗಡೆ ಮಾಡುತ್ತದೆ.

ವಾಲ್ ನಟ್ಸ್

ವಾಲ್ ನಟ್ಸ್

ಒಮೇಗಾ -3 ಫ್ಯಾಟ್ ಆಲ್ಫಾ ಲಿನೊಲಿಂಕ್ ಮತ್ತು ಮೊನೊ ಅಪರ್ಯಾಪ್ತ ಕೊಬ್ಬುಗಳ ಆರೋಗ್ಯಕರ ಪ್ರಮಾಣವನ್ನು ಹೊಂದಿರುತ್ತದೆ. ಮೊನೊ ಅಪರ್ಯಾಪ್ತ ಕೊಬ್ಬು ಹೆಚ್ಚು ಪ್ರಮಾಣದ ಕೊಬ್ಬನ್ನು ಕರಗಿಸುವಲ್ಲಿ ಸಹಾಯವನ್ನು ಮಾಡುತ್ತದೆ ಅಂತೆಯೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮುಷ್ಟಿಯಷ್ಟು ವಾಲ್ ನಟ್‎ಗಳ ಸೇವನೆ ಆರೋಗ್ಯಕರ ವಿಧಾನದಲ್ಲಿ ದೇಹತೂಕ ಇಳಿಸುವ ವಿಧಾನವಾಗಿದೆ. ಲಭ್ಯವಿರುವ ಆರೋಗ್ಯಕರ ನಟ್‎ಗಳಲ್ಲಿ ಇದೂ ಕೂಡ ಒಂದಾಗಿದೆ.

ಬೀನ್ಸ್

ಬೀನ್ಸ್

ಕಡಿಮೆ ಕೊಬ್ಬು, ಕಡಿಮೆ ಗ್ಲೈಸಮಿಕ್ ಸೂಚಿ ಮತ್ತು ಹೆಚ್ಚಿನ ಫೈಬರ್ ‎ಹಾಗೂ ಪ್ರೋಟೀನ್ ಅನ್ನು ಒಳಗೊಂಡಿದೆ. ಪ್ರೋಟೀನ್‎ಯುಕ್ತ ಆಹಾರವಾಗಿ ಬೀನ್ಸ್ ಅನ್ನು ಸಸ್ಯಾಹಾರಿಗಳಿಗೆ ಸೂಚಿಸಲಾಗಿದ್ದು ಕೊಬ್ಬನ್ನು ಕರಗಿಸುವ ಆಹಾರವಾಗಿ ಹೆಸರುವಾಸಿಯಾಗಿದೆ. ಕೊಬ್ಬಿನ ಆಸಿಡ್‎ಗಳನ್ನು ಬಿಡುಗಡೆ ಮಾಡುವ ಮತ್ತು ಚಯಾಪಚಯಿಸುವ ಗುಣ ಬೀನ್ಸ್‎ಗೆ ಇದೆ. ಹಚ್ಚ ಹಸಿರು ಬೀನ್ಸ್‌ನಲ್ಲಿ ಅಡಗಿದೆ ತೂಕ ಇಳಿಸುವ ರಹಸ್ಯ!

ಶುಂಠಿ

ಶುಂಠಿ

ಶುಂಠಿಯು ತನ್ನಲ್ಲಿ ಅದ್ಭುತ ಚಮತ್ಕಾರೀ ಗುಣಗಳನ್ನು ಪಡೆದುಕೊಂಡಿದೆ. ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುವ ಗುಣ ಶುಂಠಿಗಿದ್ದು, ಉರಿಯೂತವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳ ಚೇತರಿಕೆಯನ್ನು ಇದು ಹೆಚ್ಚಿಸುತ್ತದೆ. ತೂಕ ನಷ್ಟ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ನೀವಿದ್ದೀರಿ ಎಂದಾದಲ್ಲಿ ನಿಮ್ಮ ಡಯೆಟ್‎ನಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಿ ಇದು ಕ್ಯಾಲೋರಿ ಮತ್ತು ಆರೋಗ್ಯಕರ ಕೊಬ್ಬು ಹೆಚ್ಚಿಸಲು ಸಹಕಾರಿ.

ಓಟ್ ಮೀಲ್

ಓಟ್ ಮೀಲ್

ನಿಮ್ಮ ವ್ಯಾಯಾಮದ ನಂತರ ಇಲ್ಲವೇ ಬೆಳಗ್ಗಿನ ನಡಿಗೆಯ ಮೇಲೆ ಓಟ್ ಮೀಲ್ ಅನ್ನು ಸೇರಿಸಿಕೊಳ್ಳಿ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಓಟ್ ಮೀಲ್ ನಿಮಗೆ ಸಹಾಯ ಮಾಡಲಿದ್ದು ಕೊಬ್ಬನ್ನು ಶೀಘ್ರವಾಗಿ ಕರಗಿಸುವ ಗುಣವನ್ನು ಹೊಂದಿದೆ. ನಿಧಾನಗತಿಯಲ್ಲಿ ಕರಗುವ ಅಂಶವನ್ನು ಓಟ್ ಮೀಲ್ ಹೊಂದಿದ್ದು ತೂಕ ಇಳಿಸಿಕೊಳ್ಳಲೇಬೇಕು ಎಂಬ ಹಂಬಲವಿರುವವರು ಓಟ್ ಮೀಲ್ ಸೇವನೆ ಖಂಡಿತ ಮಾಡಬೇಕು.

ಗ್ರೀನ್ ಟೀ

ಗ್ರೀನ್ ಟೀ

ಆರೋಗ್ಯಕರ ಜನರಲ್ಲಿ ಉತ್ಕರ್ಷಣ ನಿರೋಧಿ EGCG ಉಪಸ್ಥಿತಿಯು ಚಯಾಪಚಯ ಕ್ರಿಯೆಗಾಗಿ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಮತ್ತು ಕೊಲೆಸ್ಟ್ರಾಲ್ ನಿರ್ವಹಣಾ ಅಂಶಗಳನ್ನು ಗ್ರೀನ್ ಟೀ ಒಳಗೊಂಡಿದೆ.

ಕಾಳುಮೆಣಸು

ಕಾಳುಮೆಣಸು

ಹೆಚ್ಚು ವೇಗದಲ್ಲಿ ಕೊಬ್ಬನ್ನು ಬರ್ನ್ ಮಾಡುವ ಕಾಳುಮೆಣಸು ಚಯಾಪಚಯ ಕ್ರಿಯೆಯನ್ನು ವರ್ಧಿಸುತ್ತದೆ. ಊಟದ ನಂತರ ಒಂದೆರಡು ಕಾಳುಮೆಣಸನ್ನು ಜಗಿದು ಸೇವಿಸುವುದು ಒತ್ತಡ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಕಾರಿ.

ನೀರು

ನೀರು

ನೀರು ಆಹಾರವಲ್ಲದಿದ್ದರೂ, ಸಾಕಷ್ಟು ನೀರು ಸೇವಿಸುವುದು ಅತಿ ಮುಖ್ಯವಾಗಿದೆ. ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಅಂಶ ನೀರಾಗಿದ್ದು ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂದಾದಲ್ಲಿ, ನಿರ್ಜಲೀಕರಣ ನಿಮಗುಂಟಾಗುತ್ತದೆ. ಇದರಿಂದ ಹಸಿವಿನ ಬಯಕೆ ತೀವ್ರವಾಗುತ್ತದೆ ಮತ್ತು ಕುಡಿಯುವುದರ ಬದಲು ನಾವು ಹೆಚ್ಚು ತಿನ್ನುತ್ತೇವೆ. ಆದ್ದರಿಂದ ಕೊಬ್ಬು ಕರಗಲು ಸಾಕಷ್ಟು ನೀರು ಸೇವಿಸುವುದೂ ಅತಿಮುಖ್ಯವಾಗಿದೆ.

ಲಿಂಬೆ ಹಣ್ಣಿನ ರಸ

ಲಿಂಬೆ ಹಣ್ಣಿನ ರಸ

ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ. *ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ. ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ. ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಕ್ಯಾಲ್ಶಿಯಮ್

ಕ್ಯಾಲ್ಶಿಯಮ್

ಮೂಳೆಗಳನ್ನು ಮತ್ತು ಹಲ್ಲನ್ನು ದೃಢವಾಗಿಸುವಲ್ಲಿ ಕ್ಯಾಲ್ಶಿಯಮ್ ಕಾರ್ಯ ಮಹತ್ತರವಾದುದು. ನಿಮ್ಮ ಹಸಿವನ್ನು ನಿಯಂತ್ರಿಸುವಲ್ಲಿ ಕ್ಯಾಲ್ಶಿಯಮ್ ಸಹಾಯ ಮಾಡುತ್ತದೆ. ಹಾಲಿನ ಉತ್ಪನ್ನಗಳು ಮತ್ತು ಕ್ಯಾಲ್ಶಿಯಮ್ ಭರಿತ ಆಹಾರಗಳ ಸೇವನೆಯು ದೇಹದಲ್ಲಿ ಕಡಿಮೆ ಕೊಬ್ಬನ್ನು ಉತ್ಪಾದಿಸುತ್ತವೆ ಮತ್ತು ಹಸಿವಾಗುವಿಕೆಯನ್ನು ತಡೆಯಬಲ್ಲುದು. ಕ್ಯಾಲ್ಶಿಯಮ್ ಭರಿತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ದೇಹವನ್ನು ಕೊಬ್ಬು ಕರಗಿಸುವ ವಿಧಾನಕ್ಕೆ ಮಾರ್ಪಡಿಸಿಕೊಳ್ಳಬಹುದಾಗಿದೆ.

English summary

Foods for belly fat reduction

Believe it or not, your body actually doesn't want to store fat. And the secret to lasting weight loss does not come down to complicated calorie-counting and weight-loss gimmicks. Instead, it's about working with your body's natural hunger and sleep rhythms to curb cravings, burn fat and send your energy levels soaring.
Story first published: Saturday, December 26, 2015, 19:35 [IST]
X
Desktop Bottom Promotion