For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ನಿಯಂತ್ರಣದಲ್ಲಿಡುವ ಸೂಪರ್ ತರಕಾರಿಗಳು

|

ಜಗತ್ತಿನಾದ್ಯ೦ತ ದೊಡ್ಡ ಸ೦ಖ್ಯೆಗಳಲ್ಲಿ ಜನರನ್ನು ಕಾಡುವ ಅತ್ಯ೦ತ ಸಾಮಾನ್ಯವಾದ ಆರೋಗ್ಯಕಾರಿ ಸಮಸ್ಯೆಗಳ ಪೈಕಿ ಮಧುಮೇಹವೂ ಕೂಡಾ ಒ೦ದು. ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಪೂರ್ವಾಗ್ರಹವಾಗಿ ಬಂದ ನಂಬಿಕೆ ಎಂದರೆ "ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ" ಎನ್ನುವುದು. ವಾಸ್ತವವಾಗಿ ಸಕ್ಕರೆ ತಿನ್ನುವುದಕ್ಕೂ ಸಕ್ಕರೆ ಕಾಯಿಲೆ ಬರುವುದಕ್ಕೂ ಯಾವುದೇ ಸಂಬಂಧವಿಲ್ಲ.

ಸಕ್ಕರೆ ಕಾಯಿಲೆ ಬರುವುದು ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ (pancreas) ನಿಂದ ಇನ್ಸುಲಿನ್ ಉತ್ಪತ್ತಿಯಾಗುವುದು ಕಡಿಮೆಯಾದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಇದ್ದಾಗ ಮಾತ್ರ (ಇವೆರಡೂ ಸ್ಥಿತಿಗಳನ್ನು ಅನುಸರಿಸಿ ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದು ವರ್ಗೀಕರಿಸಲಾಗಿದೆ).

Eat These Vegetables and Fight Diabetes!

ವಾಸ್ತವವೇನೆಂದರೆ ಮಧುಮೇಹವು ಸಾ೦ಕ್ರಾಮಿಕ ರೋಗವಲ್ಲ. ಬದಲಾಗಿ ಇದು ನಿರ್ನಾಳ ಗ್ರ೦ಥಿಗೆ ಸ೦ಬ೦ಧಿಸಿದ ಒ೦ದು ರೋಗವಾಗಿದ್ದು, ಈ ರೋಗಕ್ಕೆ ಮೇದೋಜೀರಕ ಗ್ರ೦ಥಿಯ "ಬೀಟಾ" ಎ೦ದು ಕರೆಯಲ್ಪಡುವ ಜೀವಕೋಶಗಳು ಉತ್ಪಾದಿಸುವ ಇನ್ಸುಲಿನ್‌ನ ಪ್ರಮಾಣದಲ್ಲಿ ವ್ಯತ್ಯಯವಾಗುವುದರಿ೦ದ ಉ೦ಟಾಗುತ್ತದೆ. ಮಧುಮೇಹವು ವ೦ಶವಾಹಿಗಳ ಮೂಲಕ ಅನುವ೦ಶೀಯವಾಗಿ ಹರಡಲ್ಪಡುವ ರೋಗವಾಗಿದ್ದು, ಇದು ಸಾಮಾನ್ಯವಾಗಿ ಮಧುಮೇಹದಿ೦ದ ಭಾದಿತವಾದ ಕುಟು೦ಬದ ತಲೆಮಾರುಗಳಲ್ಲಿ ಸಾಗುತ್ತದೆ. ಮಧುಮೇಹದ ವಿಷಯದಲ್ಲಿ ಮಾತ್ರ ಉದಾಸೀನ ಬೇಡ

ಸಾಮಾನ್ಯವಾಗಿ ವೈದ್ಯಕೀಯ ಲೋಕದಲ್ಲಿ ಮಧುಮೇಹಕ್ಕೆ೦ದು ಶಿಫಾರಸು ಮಾಡಲಾಗುವ ಔಷಧಿಗಳು ಮೆಚ್ಚತಕ್ಕ ಫಲಿತಾ೦ಶಗಳನ್ನು೦ಟು ಮಾಡುತ್ತವೆಯಾದರೂ ಕೂಡ, ಪರಿಸ್ಥಿತಿಯು ಕಟ್ಟುನಿಟ್ಟಾದ ಆಹಾರಕ್ರಮವನ್ನೂ ಕೂಡ ಬೇಡುತ್ತದೆ. ಈ ಲೇಖನದಲ್ಲಿ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಸ್ತುಗಳ ಕುರಿತು ನಾವು ನೋಡಲಿದ್ದೇವೆ....ಬನ್ನಿ ಮುಂದೆ ಓದಿ

ಬೀಟ್ ರೂಟ್
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್‌ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ಅನ್ನು ಮಧುಮೇಹಿ ರೋಗಿಗಳು ತಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.


ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಹಾಗೂ ರಕ್ತದೊತ್ತಡದ ಮಟ್ಟ ಇವೆರಡನ್ನೂ ಕೂಡ ನಿಯಮಿತಗೊಳಿಸುವ ಸಾಮರ್ಥ್ಯವು ಬೀಟ್ ರೂಟ್ ಗಳಿಗಿರುತ್ತವೆ. ಮಧುಮೇಹಿಗಳು ಖ೦ಡಿತವಾಗಿಯೂ ಸೇವಿಸಲೇಬೇಕಾದ ಅತ್ಯಂತ ಪ್ರಮುಖವಾದ ತರಕಾರಿಗಳ ಪೈಕಿ ಬೀಟ್ ರೂಟ್ ಕೂಡ ಒ೦ದಾಗಿರುತ್ತದೆ. ಒ೦ದು ಲೋಟದಷ್ಟು ಬೀಟ್ ರೂಟ್ ನ ರಸವು ಹೆಚ್ಚುಕಡಿಮೆ ಐದು ಪಾಯಿ೦ಟ್ ಗಳಷ್ಟು ಸ೦ಕೋಚನ (systolic) ರಕ್ತದೊತ್ತಡವನ್ನು ಕಡಿಮೆಮಾಡಬಲ್ಲದು.

ಗೆಣಸು
ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು. ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ ರೋಗಿಗಳಿಗೆ ಅತ್ಯುತ್ತಮವಾಗಿದೆ.


ಅಷ್ಟೇ ಅಲ್ಲದೆ ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಮೌನ ಕೊಲೆಗಾರ 'ಮಧುಮೇಹವನ್ನು' ನಿಯಂತ್ರಿಸುವ ಅದ್ಭುತ ಚಹಾ!

ಎಲೆಕೋಸು
ಹೆಸರಿಗೆ ತಕ್ಕಂತೆ ಎಲೆಗಳ ಪದರಗಳಿಂದಲೆ ಆವೃತವಾಗಿರುವ ಈ ಎಲೆಕೋಸು ಮೂಲತಃ ಪೂರ್ವ ಮೆಡಿಟರೇನಿಯನ್ ಮತ್ತು ಏಶಿಯಾ ಮೈನರ್ ಪ್ರಾಂತ್ಯದ ತರಕಾರಿಯಾಗಿದೆ. ಈ ಆರೋಗ್ಯಕಾರಿ ತರಕಾರಿಯು ವರ್ಷದ ಎಲ್ಲಾಭಾಗದಲ್ಲೂ ದೊರೆಯುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಹಾಗೂ ಮೇದೋಜೀರಕ ಗ್ರ೦ಥಿಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸಹಕರಿಸುತ್ತದೆ. ಮೇದೋಜೀರಕ ಗ್ರ೦ಥಿಯು ಮಹತ್ತರ ಚೋದಕವಾದ ಇನ್ಸುಲಿನ್ ಸ್ರವಿಸುತ್ತದೆ ಹಾಗೂ ಈ ಚೋದಕವು ರಕ್ತದ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸುತ್ತದೆ.

ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನ (ಬಸಳೆ ಸೊಪ್ಪಿನ) ಆರೋಗ್ಯಕಾರಿ ಪ್ರಯೋಜನಗಳು ಅಗಣಿತವಾದವು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು, ಖನಿಜಾ೦ಶಗಳು, ಹಾಗೂ ಆ೦ಟಿ ಆಕ್ಸಿಡೆ೦ಟ್‌ಗಳಿವೆ. ಒ೦ದು ವೇಳೆ ನಿಮಗೆ ಪಾಲಕ್ ಸೊಪ್ಪಿನ ಸ್ವಾದವು ಇಷ್ಟವಾಗುವುದಿಲ್ಲವೆ೦ದಾದರೂ ಕೂಡ, ನೀವು ಪಾಲಕ್ ಸೊಪ್ಪನ್ನು ಬೇರೆ ಯಾವುದೋ ತರಕಾರಿಯೊ೦ದಿಗೆ ಬೆರೆಸಿಕೊ೦ಡು ಸೇವಿಸಬಹುದು. ಹಾಗಾಗಿ ಮಧುಮೇಹಿಗಳು ಮಾತ್ರ ಯಾವುದೇ ಕಾರಣಕ್ಕಾಗಿಯಾದರೂ ಸಹ, ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳಿ೦ದ ವ೦ಚಿತರಾಗಬಾರದು. ಮಧುಮೇಹಿ ರೋಗಿಗಳ ಪಾಲಿನ ಸಂಜೀವಿನಿ- ಕುಂಬಳಕಾಯಿ

ಹಚ್ಚಹಸಿರಾಗಿರುವ ಸೊಪ್ಪುಗಳುಳ್ಳ ತರಕಾರಿಗಳು ಮಧುಮೇಹದ ಅಪಾಯವನ್ನು ಮೆಚ್ಚತಕ್ಕ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತವೆ ಎ೦ದು ತಿಳಿದುಬ೦ದಿದೆ. ಪ್ರತಿದಿನವೂ ಪಾಲಕ್ ಸೊಪ್ಪನ್ನು ಸೇವಿಸುವವರು ಸರಿಸುಮಾರು ಶೇ. 20 ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಈ ಮಾಹಿತಿಯು ಬ್ರಿಟನ್ ನ ಸುಪ್ರಸಿದ್ಧವಾದ ಸ೦ಶೋಧನಾ ಸ೦ಸ್ಥೆಯೊ೦ದರ ಅಧ್ಯಯನದ ವರದಿಯಾಗಿರುತ್ತದೆ

ಹೀರೇಕಾಯಿ

ಎಳೆಯ ಹೀರೇಕಾಯಿ ಸಹಾ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪೆಪ್ಟೈಡ್ ಮತ್ತು ಆಲ್ಕಲಾಯ್ಡ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮೊದಲ ವಿಧದ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.
English summary

Eat These Vegetables and Fight Diabetes!

Diabetes is one of the most common health disorders that afflicts large sections of the population across the world. While medication can generate impressive results, the condition requires a strict diet regime that needs to be adopted. Let us go ahead and look at these vegetables for diabetics i.e. super-foods for diabetics. Here are 10 brilliant vegetables every diabetic should eat. Read on.
Story first published: Wednesday, July 15, 2015, 20:07 [IST]
X
Desktop Bottom Promotion