For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಣಕ್ಕೆ ಮನೆಯ ಆಹಾರ-ಪದಾರ್ಥಗಳೇ ಸಾಕು

|

ಜಗತ್ತಿನಾದ್ಯ೦ತ ದೊಡ್ಡ ಸ೦ಖ್ಯೆಗಳಲ್ಲಿ ಜನರನ್ನು ಕಾಡುವ ಅತ್ಯ೦ತ ಸಾಮಾನ್ಯವಾದ ಆರೋಗ್ಯಕಾರಿ ಸಮಸ್ಯೆಗಳ ಪೈಕಿ ಮಧುಮೇಹವೂ ಕೂಡಾ ಒ೦ದು. ಮಧುಮೇಹಕ್ಕೆ೦ದು ಶಿಫಾರಸು ಮಾಡಲಾಗುವ ಔಷಧಿಗಳು ಮೆಚ್ಚತಕ್ಕ ಫಲಿತಾ೦ಶಗಳನ್ನು೦ಟು ಮಾಡುತ್ತವೆಯಾದರೂ ಕೂಡ, ಪರಿಸ್ಥಿತಿಯು ಕಟ್ಟುನಿಟ್ಟಾದ ಆಹಾರಕ್ರಮವನ್ನೂ ಕೂಡ ಬೇಡುತ್ತದೆ.

ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಪೂರ್ವಾಗ್ರಹವಾಗಿ ಬಂದ ನಂಬಿಕೆ ಎಂದರೆ "ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ" ಎನ್ನುವುದು. ವಾಸ್ತವವಾಗಿ ಸಕ್ಕರೆ ತಿನ್ನುವುದಕ್ಕೂ ಸಕ್ಕರೆ ಕಾಯಿಲೆ ಬರುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಕ್ಕರೆ ಕಾಯಿಲೆ ಬರುವುದು ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ (pancreas) ನಿಂದ ಇನ್ಸುಲಿನ್ ಉತ್ಪತ್ತಿಯಾಗುವುದು ಕಡಿಮೆಯಾದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಇದ್ದಾಗ ಮಾತ್ರ (ಇವೆರಡೂ ಸ್ಥಿತಿಗಳನ್ನು ಅನುಸರಿಸಿ ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದು ವರ್ಗೀಕರಿಸಲಾಗಿದೆ).

ಒಂದು ವೇಳೆ ನೀವು ಮಧುಮೇಹ ಟೈಪ್ 2, ರೋಗದಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ತೂಕ ಅಧಿಕವಾಗಿದ್ದರೆ ಅದಕ್ಕೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಅಧಿಕವಾಗಿರುವುದೇ ಕಾರಣ. ಬಹುಶಃ ನೀವು ಆರೋಗ್ಯದಲ್ಲಿ ಏರುಪೇರನ್ನು ಉಂಟುಮಾಡುತ್ತಿರುವ ರಕ್ತದಲ್ಲಿ ಅಧಿಕವಾಗಿರುವ ಗ್ಲೂಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡಲು ಹೆಣಗುತ್ತಿರಬಹುದು. ಹತಾಶರಾಗಬೇಡಿ, ಗ್ಲೂಕೋಸ್ ಅನ್ನು ಹತೋಟಿಯಲ್ಲಿಡುವ ಸಾಕಷ್ಟು ಆಹಾರಗಳಿವೆ. ಕೆಲವು ಆಹಾರಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿಡುವಂತಹ ಪೋಷಕಾಂಶಗಳಿದ್ದು, ಆರೋಗ್ಯಕರವಾಗಿರಲು ಸಹಕರಿಸುತ್ತದೆ.

ಸಿಲೋನ್ ದಾಲ್ಚಿನ್ನಿ

ಸಿಲೋನ್ ದಾಲ್ಚಿನ್ನಿ

ದಾಲ್ಚಿನ್ನಿ ಕೇವಲ ಓಟ್ಸ್ , ವೈನ್ ಅಥವಾ ಇತರ ಅಡುಗೆಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಪೋಷಕಾಂಶ ಕೂಡ ಲಭ್ಯವಿದೆ. ದಾಲ್ಚಿನ್ನಿ ಗ್ಲೂಕೋಸ್ ಮಟ್ಟವನ್ನು ಮತ್ತು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದಾಲ್ಚಿನ್ನಿಯನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದು ಒಳ್ಳೆಯದು.

ಓಟ್ಸ್

ಓಟ್ಸ್

ಓಟ್ಸ್‌ನಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಆರೋಗ್ಯಕರವಾದ ನಾರಿನಂಶವಿದೆ. ನಾರಿನಂಶ ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಗ್ಲೂಕೋಸ್ ಅನ್ನು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಓಟ್ಸ್‌ ನಲ್ಲಿ ಇನ್ಸುಲಿನ್ ಪ್ರಮಾಣವನ್ನು ವೃದ್ಧಿಸುವ ಬೀಟ ಗ್ಲೂಕೋನ್ ಎಂಬ ಅಂಶವಿದೆ.

ಮೆಂತೆ ಕಾಳು

ಮೆಂತೆ ಕಾಳು

ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಲು ಮೆಂತೆಕಾಳು ಸಹಾಯಕ. ಮಧುಮೇಹ ಟೈಪ್1 ಅಥವಾ ಟೈಪ್ 2, ಯಾವುದೇ ಆದರೂ ಕೂಡ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಗುಣ ಮೆಂತೆ ಕಾಳಿನಲ್ಲಿದೆ. ಮೆಂತೆಕಾಳಿನಲ್ಲಿರುವ ನಾರಿನಂಶವೇ ಇದಕ್ಕೆ ಮುಖ್ಯ ಕಾರಣ.

ಸಾಲ್ಮನ್

ಸಾಲ್ಮನ್

ಸಾಲ್ಮನ್ ಮೀನು ಕೇವಲ ಪ್ರೋಟೀನ್ ಮತ್ತು ಆರೋಗ್ಯಕರ ಅಂಶಗಳಿಂದ ಕೂಡಿರುವುದು ಮಾತ್ರವಲ್ಲ, ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಲು ಬೇಕಾಗುವ ವಿಟಮಿನ್ ಡಿ ಅಂಶವಿದೆ. ವಿಟಮಿನ್ ಡಿ ಅಂಶ ಕಡಿಮೆಯಾದರೆ ಮಧುಮೇಹ ಟೈಪ್ 2 ಗೆ ಆಗರವಾಗಬಹುದು. ಅದ್ದರಿಂದ ದೇಹಕ್ಕೆ ವಿಟಮಿನ್ ಡಿ ಅವಶ್ಯಕತೆ ಇದೆ. ಇದರಲ್ಲಿರುವ ಒಮೇಗಾ 3 ಅಂಶ ಹೃದಯವನ್ನು ಆರೋಗ್ಯವಾಗಿಟ್ಟು ಇನ್ಸುಲಿನ್ ಪ್ರತಿರೋಧದಿಂದ ಕಂಡುಬರುವ ಊತವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಸ್ವಾದವನ್ನು ಹೆಚ್ಚಿಸುವ ಆಹಾರವಸ್ತುವಾಗಿ ಬೆಳ್ಳುಳ್ಳಿಯು ಅದೆಷ್ಟು ಉಪಯುಕ್ತವೋ ಆರೋಗ್ಯದಾಯಕ ಆಹಾರವಸ್ತುವಿನ ರೂಪದಲ್ಲಿ ಬೆಳ್ಳುಳ್ಳಿಯು ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಮಧುಮೇಹದ ಕುರಿತು ಹೇಳುವುದಾದರೆ, ಮಧುಮೇಹವನ್ನು ತಡೆಗಟ್ಟಲು ಬೆಳ್ಳುಳ್ಳಿಯು ಅತ್ಯ೦ತ ಆರೋಗ್ಯದಾಯಕವಾದ ಆಹಾರವಸ್ತುಗಳ ಪೈಕಿ ಒ೦ದಾಗಿದೆ. ಇದಕ್ಕೆ ಕಾರಣವೇನೆ೦ದರೆ ಬೆಳ್ಳುಳ್ಳಿಯಲ್ಲಿ ಮೆಚ್ಚತಕ್ಕ ಪೋಷಕಾ೦ಶ ತತ್ವಗಳು ಅಡಕವಾಗಿದ್ದು, ಇವು ರಕ್ತದೊತ್ತಡವನ್ನು ನಿಯಮಿತಗೊಳಿಸುತ್ತವೆ, ಕೊಲೆಸ್ಟ್ರಾಲ್‌‪ನ ಮಟ್ಟವನ್ನು ಕಡಿಮೆಮಾಡುತ್ತವೆ, ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಸಹ ಕಡಿಮೆ ಮಾಡುತ್ತವೆ. ಮಧುಮೇಹಿಗಳ ಪಾಲಿಗ೦ತೂ ಇದೊ೦ದು ಸೇವಿಸಲೇ ಬೇಕಾಗಿರುವ೦ತಹ ಆಹಾರವಸ್ತುವಾಗಿದೆ. ಹಾಗೆಯೇ ಈರುಳ್ಳಿಯೂ ಕೂಡ ಬೆಳ್ಳುಳ್ಳಿಯಷ್ಟೇ ಸಹಾಯಕ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ಆರೋಗ್ಯಕರ ಫೈಬರ್ ಅಂಶ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕಬ್ಬಿಣದಂಶ, ಮ್ಯಾಗ್ನಿಶಿಯಂ, ಸತು ಮತ್ತು ಪ್ರೋಟೀನ್ ಹೇರಳವಾಗಿರುವುದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದರಲ್ಲಿ ಅಧಿಕವಾಗಿರುವ ನಾರಿನಂಶ ನೀವು ಸೇವಿಸುವ ಕಾರ್ಬೋಹೈಡ್ರೇಟ್ ಅನ್ನು ನಿಧಾನವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಜೊತೆಗೆ ಬಾದಾಮಿಯು ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿಡಲು ಸಹಾಯಕ.

ಅವಕಾಡೋ (ಬೆಣ್ಣೆ ಹಣ್ಣು)

ಅವಕಾಡೋ (ಬೆಣ್ಣೆ ಹಣ್ಣು)

ಬೆಣ್ಣೆ ಹಣ್ಣಿನಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಏಕಪರ್ಯಾಪ್ತ ಕೊಬ್ಬಿನಂಶಗಳು ಅಧಿಕವಾಗಿರುತ್ತದೆ. ಮಧುಮೇಹವಿರುವ ಕುಟುಂಬದಲ್ಲಿ ಕಂಡು ಬರುವ ಮೆಟಾಬಲಿಕ್ ಸಿಂಡ್ರೋಮ್ ಅನ್ನು ಕೂಡ ಹೋಗಲಾಡಿಸುವ ಗುಣ ಇದರಲ್ಲಿದೆ.

ಕಿತ್ತಳೆ

ಕಿತ್ತಳೆ

ವಿಟಮಿನ್ ಸಿ ಮತ್ತು ಪೆಕ್ಟಿನ್ ಹೇರಳವಾಗಿರುವ ಕಿತ್ತಳೆ ಹಣ್ಣು ಮಧುಮೇಹಕ್ಕೆ ಮದ್ದು.ಪೆಕ್ಟಿನ್ ಎಂಬುದು ನಾರಿನಂಶವಾಗಿದ್ದು ಕೊಲೆಸ್ಟ್ರಾಲ್ ಅನ್ನು ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುತ್ತದೆ. ಕಿತ್ತಳೆಯಲ್ಲಿ GI ಪ್ರಮಾಣ ಹೇರಳವಾಗಿದ್ದು ರಕ್ತದಲ್ಲಿ ಸಕ್ಕರೆ ಅಂಶ ಅಧಿಕವಾಗುತ್ತದೆ ಎಂಬ ಚಿಂತೆಯಿಲ್ಲದೆ ಇದನ್ನು ತಿನ್ನಬಹುದು.

ಬ್ಲೂಬೆರ್ರಿ

ಬ್ಲೂಬೆರ್ರಿ

ಬ್ಲೂಬೆರಿ ನೋಡಲು ಸಣ್ಣ ಹಣ್ಣಿರಬಹುದು ಆದರೆ ಅದರಲ್ಲಿ ಪ್ರೋಟೀನ್, ನಾರಿನಂಶ, ಖನಿಜಾಂಶ,ಮತ್ತು ಉತ್ಕರ್ಷಣ ಅಂಶಗಳಿರುತ್ತವೆ.ಮಧುಮೇಹದ ಪ್ರಥಮ ಹಂತದಲ್ಲಿರುವವರು ಬ್ಲೂ ಬೆರ್ರಿ ಹಣ್ಣನ್ನು ನಿತ್ಯದ ಆಹಾರದಲ್ಲಿ ಬಳಸುವುದು ಅನುಕೂಲಕರ ಎಂದು 2010 ರಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ.

ಹೀರೇಕಾಯಿ

ಹೀರೇಕಾಯಿ

ಎಳೆಯ ಹೀರೇಕಾಯಿ ಸಹಾ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿರುವ ಪೆಪ್ಟೈಡ್ ಮತ್ತು ಆಲ್ಕಲಾಯ್ಡ್ ಎಂಬ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವ ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮೊದಲ ವಿಧದ ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

English summary

Best Foods to Manage Blood Glucose Levels

If you’re suffering from Type 2 Diabetes or are struggling with your weight, chances are your blood sugar levels are a bit out of whack. You may be having a hard time managing your blood glucose, which could be causing a wide range of health problems. Check out the foods below, all filled with nutrients for managing blood sugar levels:
X
Desktop Bottom Promotion