For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗಾಗಿ ಪೋಷಕಾಂಶ ಭರಿತ ಸಸ್ಯಾಹಾರಿ

|

ಯಶಸ್ವಿ ಜೀವನ ಮತ್ತು ಕಾರ್ಯವೈಖರಿಗಾಗಿ ಆರೋಗ್ಯಯುತ ಜೀವನಶೈಲಿ ಮತ್ತು ಆಹಾರವಿಧಾನವನ್ನು ಅನುಸರಿಸಬೇಕು. ಈ ಆಹಾರವಿಧಾನ ಹಿತಮಿತವಾಗಿ ಆರೋಗ್ಯಭರಿತವಾಗಿದ್ದರೆ ಜೀವನ ಮಧುರವಾಗಿದ್ದು ಕಾಯಿಲೆ ಖಸಾಲೆಗಳು ನಮ್ಮಿಂದ ದೂರಾಗುತ್ತವೆ. ತೂಕವನ್ನು ನಿಯಂತ್ರಿಸಲು ಈ ಆಹಾರ ಪದ್ಧತಿ ಅತ್ಯವಶ್ಯಕ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ತೂಕವನ್ನು ನಿಯಂತ್ರಿಸುವುದು ದೇಹದ ಹಾರ್ಮೋನ್‌ಗಳು ಮತ್ತು ಚಯಾಪಚಯವನ್ನು ನಿರ್ವಹಿಸುತ್ತವೆ. ಉದಾಹರಣೆಗೆ ಮಧುಮೇಹಿಗಳು ನಿಯಮಬದ್ಧವಾದ ಆಹಾರ ಕ್ರಮವನ್ನು ಅನುಸರಿಸಬೇಕು ಮತ್ತು ಆಹಾರ ತೆಗೆದುಕೊಳ್ಳುವಿಕೆ ಅವರ ಸಕ್ಕರೆ ಕಾಯಿಲೆಗೆ ಪೂರಕವಾಗಿರಬೇಕು. ಏನನ್ನು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂಬುದರ ಬಗೆಗೆ ಮಧುಮೇಹಿಗಳು ಕಾಳಜಿ ವಹಿಸಬೇಕು.

ಮಧುಮೇಹಿಗಳಿಗಾಗಿ ಹಲವಾರು ಸಸ್ಯಾಹಾರಿ ಆಹಾರ ಕ್ರಮಗಳು ಲಭ್ಯವಿದ್ದು, ಕೆಲವೊಂದನ್ನು ವೈಜ್ಞಾನಿಕವಾಗಿ ಸರಿಯಾದ ಆಹಾರ ಕ್ರಮವೆಂದು ಪರಿಗಣಿಸಲ್ಪಟ್ಟಿದೆ. ಸಸ್ಯಾಹಾರಿ ಆಹಾರ ಕ್ರಮವನ್ನು ಅನುಷ್ಠಾನಿಸುವಾಗ ಅದೊಂದು ತರಕಾರಿಗಳ, ಹಣ್ಣುಗಳ ಮತ್ತು ಪೋಷಕಾಂಶಗಳ ಮಿಶ್ರಣವಾಗಿರಬೇಕು. ಇಲ್ಲಿ ನಾವು ನೀಡುತ್ತಿರುವ ಆಹಾರ ಪಟ್ಟಿಗಳು ಖಂಡಿತ ನಿಮ್ಮ ಆಹಾರವಿಧಾನಕ್ಕೆ ಪೂರಕವಾಗಿರುವಂಥದ್ದು. ಇವುಗಳನ್ನು ಅನುಸರಿಸಿ ದೈಹಿಕ ಸ್ವಾಸ್ಥ್ಯ ಆರೋಗ್ಯ ಪಡೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರವನ್ನು ತಪ್ಪಿಸಬಾರದು ಏಕೆ?

ಸೇಬು, ಪೈನಾಪಲ್ ಮತ್ತು ಮಯೋ ಸಲಾಡ್:

ಸೇಬು, ಪೈನಾಪಲ್ ಮತ್ತು ಮಯೋ ಸಲಾಡ್:

ಸುಗಂಧಭರಿತ ಸಸ್ಯಾಹಾರಿ ಆಹಾರ ಕ್ರಮ ಭರಿತ ಈ ಸಲಾಡ್ ಮಧುಮೇಹಿಗಳಿಗೆ ಉತ್ತಮ ಪಥ್ಯವಾಗಿದೆ. ಇದನ್ನು ಮಾಡುವುದು ತುಂಬಾ ಸರಳ. ಒಂದು ಕಪ್‌‌ನಲ್ಲಿ ತುಂಡರಿಸಿದ ಸೇಬು, ಅರ್ಧ ಕಪ್ ಪೈನಾಫಲ್ ತುಂಡುಗಳು ಮತ್ತು ಸ್ವಲ್ಪ ಮಯೋನೈಸ್, ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ತೆಗೆದುಕೊಳ್ಳಿ. ಈ ನೈಸರ್ಗಿಕ ಸಸ್ಯಾಹಾರಗಳು ಸಕ್ಕರೆಯನ್ನು ಪ್ರಾಕೃತವಾಗಿ ಒಳಗೊಂಡಿರುವುದರಿಂದ ಮಧುಮೇಹಿಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ಸಲಾಡ್ ಅನ್ನು ಊಟದ ಜೊತೆ ನೀವು ಸವಿಯಬಹುದು.

ಹುರಿದ ತರಕಾರಿಗಳು ಮತ್ತು ಬ್ರೌನ್ ಪಾಸ್ತಾ:

ಹುರಿದ ತರಕಾರಿಗಳು ಮತ್ತು ಬ್ರೌನ್ ಪಾಸ್ತಾ:

ತರಕಾರಿ ಹಣ್ಣುಗಳು ಯಾವಾಗಲೂ ನ್ಯೂಟ್ರಿಷಿಯನ್ ಭರಿತ ಆಹಾರಗಳಾಗಿವೆ. ಬ್ರೌನ್ ಪಾಸ್ತಾವನ್ನು ಸಂಪೂರ್ಣ ಗೋಧಿಯಿಂದ ಮಾಡಲಾಗುತ್ತದೆ ಇದು ಹೆಚ್ಚಿನ ಕಿಲೋಗಳನ್ನು ಕಳೆದುಕೊಳ್ಳಲು ಮತ್ತು ಕೊಬ್ಬನ್ನು ಕರಗಿಸಲು ಸಹಕಾರಿ. ಹಾಗೂ ಇವುಗಳ ಮಿಶ್ರಣವು ಒಂದು ಆರೋಗ್ಯಭರಿತ ಮಧುಮೇಹ ಪಥ್ಯವಾಗಿದೆ. ನೀವು ಇವುಗಳೊಂದಿಗೆ ಸ್ವಲ್ಪ ಬಟಾಣಿ, ಈರುಳ್ಳಿ, ಬ್ರಕೋಲಿ, ಹೂಕೋಸು, ಎಲೆಕೋಸು ಮುಂತಾದುವನ್ನು ಸೇರಿಸಿಕೊಳ್ಳಬಹುದು. ನಿಮ್ಮ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಇವುಗಳನ್ನು ಹುರಿದುಕೊಳ್ಳಿ. ಈ ಎಲ್ಲಾ ತರಕಾರಿಗಳನ್ನು ಬೆಂದ ಬ್ರೌನ್ ಪಾಸ್ತಾದೊಂದಿಗೆ ಮಿಶ್ರ ಮಾಡಿಕೊಳ್ಳಿ. ಟೊಮೇಟೊ ಸಾಸ್, ಉಪ್ಪು ಮತ್ತು ಕರಿಮೆಣಸಿನ ಪೌಡರ್ ಅನ್ನು ರುಚಿಗಾಗಿ ಹಾಕಿಕೊಳ್ಳಿ. ನಿಮ್ಮ ರುಚಿಕರ ಸಸ್ಯಾಹಾರಿ ಡಿಶ್ ಸಿದ್ಧವಾಗಿದೆ.

ನ್ಯೂಟ್ರಿಶಿಯನಲ್ ದ್ರವಾಹಾರಗಳು:

ನ್ಯೂಟ್ರಿಶಿಯನಲ್ ದ್ರವಾಹಾರಗಳು:

ಮಧುಮೇಹಿಗಳು ತಮ್ಮ ಆರೋಗ್ಯಪೂರ್ಣ ಪಥ್ಯಕ್ಕಾಗಿ ಜ್ಯೂಸ್ ಮತ್ತು ಸೂಪ್‌ಗಳನ್ನು ತೆಗೆದುಕೊಳ್ಳಬಹುದು. ಹೆಚ್ಚು ಫೈಬರ್ ಮತ್ತು ಕಡಿಮೆ ಸಕ್ಕರೆಯನ್ನು ಒಳಗೊಂಡಿರುವ ಕ್ಯಾರೇಟ್ ಜ್ಯೂಸ್, ಬೆರ್ರಿಯಿಂದ ಮಾಡಲಾದ ಜ್ಯೂಸ್ ಅನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸಿ. ತರಕಾರಿ ಸೂಪ್, ಟೊಮೇಟೊ ಸೂಪ್, ಕೋರ್ನ್ ಸೂಪ್ ಅನ್ನು ಹೆಚ್ಚು ತೆಗೆದುಕೊಳ್ಳಿ. ಇವುಗಳು ನ್ಯೂಟ್ರಿಶಿಯನ್ ಭರಿತವಾಗಿದ್ದು ಫೈಬರ್‌ನಿಂದ ಶ್ರೀಮಂತವಾಗಿವೆ. ಆದ್ದರಿಂದ ಸೂಪ್ ಮತ್ತು ಜ್ಯೂಸ್‌ಗಳನ್ನು ನಿಮ್ಮ ಆಹಾರದಲ್ಲಿ ಸುಲಭವಾಗಿ ಸೇರಿಸಿ.

ಮೊಳಕೆ ಕಾಳುಗಳ ಚಾಟ್:

ಮೊಳಕೆ ಕಾಳುಗಳ ಚಾಟ್:

ಮಧುಮೇಹಿಗಳಿಗಾಗಿ ಮೊಳಕೆ ಕಾಳುಗಳ ಚಾಟ್ ಅನ್ನು ವಿಶೇಷವಾಗಿ ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ತುಂಡರಿಸಿದ ಈರುಳ್ಳಿ, ಟೊಮೇಟೊ, ಕೊತ್ತಂಬರಿ ಮತ್ತು ಕೆಲವು ಖಾರಯುಕ್ತ ಮಸಾಲಾ ಅಂಶಗಳನ್ನು ಬಳಸಿ ಮೊಳಕೆ ಕಾಳುಗಳ ಚಾಟ್ ತಯಾರಿಸಲಾಗುತ್ತದೆ. ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಈ ಚಾಟ್ ಅನ್ನು ಸವಿಯಬಹುದು. ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಮತ್ತು ಹೊರಗಡೆ ಕೂಡ ಲಭ್ಯವಿದೆ. ನಿಮ್ಮ ಮಧುಮೇಹದ ಸಸ್ಯಾಹಾರಿ ಪಥ್ಯದಲ್ಲಿ ಸೇರಿಸಿಕೊಳ್ಳಬಹುದಾದ ಆರೋಗ್ಯಯುತ ಚಾಟ್ ಮೊಳಕೆ ಕಾಳುಗಳ ಚಾಟ್ ಆಗಿದೆ. ಇವು ಸವಿಯಲು ರುಚಿಯಾಗಿರುತ್ತವೆ.

Read more about: health ಆರೋಗ್ಯ
English summary

Vegetarian Treat For Diabetic Patients

With the stressful life and work schedule, a proper diet intake has become very necessary for everyone. There are a lot of diet plans available for everybody. Diet is not only essential for maintaining weight but it is also important to control the body hormones and metabolism.
X
Desktop Bottom Promotion