For Quick Alerts
ALLOW NOTIFICATIONS  
For Daily Alerts

ಟೈಪ್ 2 ಮಧುಮೇಹ: ರೋಗ ಲಕ್ಷಣಗಳು

By Sanketh Chiploonkar
|

ಟೈಪ್ 2 ಮಧುಮೇಹ ಎಂದರೇನು?

ಟೈಪ್ 2 ಮಧುಮೇಹ ವಯಸ್ಸಿನ ಮಿತಿ ಮೀರಿ ಜನರನ್ನು ತೊಂದರೆಗೀಡುಮಾಡಬಹುದು. ಈ ವಿಧದಲ್ಲಿ ರೋಗದ ಮುನ್ಸೂಚನೆ ಅಥವಾ ಲಕ್ಷಣಗಳೂ ಕಾಣುವುದಿಲ್ಲ ಇದರ ಕಾರಣದಿಂದಾಗಿ ರೋಗಿಗೆ ತನ್ನಲ್ಲಿ ಮಧುಮೇಹ ಇದೆ ಎಂಬುದೂ ತಿಳಿದುರುವುದಿಲ್ಲ. ನಮ್ಮ ದೇಹದಲ್ಲಿರುವ ಕಾರ್ಬೋಹೈಡ್ರೇಟುಗಳನ್ನು ಜೀರ್ಣಮಾಡಿ ಅದನ್ನು ಶಕ್ತಿಯ ರೂಪಕ್ಕೆ ಪರಿವರ್ತಿಸುವ ಕೆಲಸ ಮೇಲೆ ಇದು ಪ್ರಭಾವ ಬೀರುತ್ತದೆ. ಇದರ ಕಾರಣದಿಂದಾಗಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಬಹಳವಾಗಿ ಹೆಚ್ಚಾಗುತ್ತದೆ ಹಾಗೂ ಇದು ಮಾನವ ದೇಹದ ಮೇಲೆ ಋಣಾತ್ಮಕವಾಗಿ ಪ್ರಭಾವ ಬೀರುತ್ತದೆ. ಇದು ಮನುಷ್ಯನ ನರ ಸಂಬಂಧೀ ರೋಗಗಳು, ದೃಷ್ಟಿ ದೋಷ, ಹೃದಯ ಸಂಬಂಧೀ ಕಾಯಿಲೆಗಳನ್ನು ಹೆಚ್ಚಿಸುತ್ತದೆ.

ಮಧುಮೇಹದ ಮುನ್ಸೂಚನೆ: ಬಾಯಾರಿಕೆ

ಮಧುಮೇಹದ ಮುನ್ಸೂಚನೆ: ಬಾಯಾರಿಕೆ

ಟೈಪ್ 2 ಮಧುಮೇಹಿಗಳಲ್ಲಿ ರೋಗ ಲಕ್ಷಣಗಳು ಬಹಳವೇ ಕಡಿಮೆಯಾದರೂ ಬಾಯಾರಿಕೆಯ ಪ್ರಮಾಣ ಹೆಚ್ಚಾಗುವುದನ್ನು ಸುಲಭವಾಗಿ ಗುರುತಿಸಬಹುದು. ಇದರ ಜೊತೆಗೆ ನಿಯಮಿತವಾದ ಮೂರ್ತ ವಿಸರ್ಜನೆ, ಅಸಾಮಾನ್ಯ ಹಸಿವು, ಒಣಗಿದ ಬಾಯಿ ಹಾಗೂ ತೂಕದಲ್ಲಿ ಹೆಚ್ಚು ಅಥವಾ ಕಡಿಮೆಯಾಗುವುದನ್ನು ಕಾಣಬಹುದು.

ಮಧುಮೇಹದ ಎಚ್ಚರಿಕೆ ಕರೆಗಂಟೆ: ತಲೆನೋವು

ಮಧುಮೇಹದ ಎಚ್ಚರಿಕೆ ಕರೆಗಂಟೆ: ತಲೆನೋವು

ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅತಿ ಹೆಚ್ಚಾದಾಗ ಸುಸ್ತು, ಮಂದ ದೃಷ್ಟಿ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.

ಮಧುಮೇಹ ಮುನ್ನೆಚ್ಚರಿಕೆ: ಸೋಂಕು

ಮಧುಮೇಹ ಮುನ್ನೆಚ್ಚರಿಕೆ: ಸೋಂಕು

ಟೈಪ್ 2 ಮಧುಮೇಹಿಗಳಲ್ಲಿ ಅನಾರೋಗ್ಯದ ಲಕ್ಷಣಗಳು ಬಹಳ ಸುಲಭವಾಗಿ ಕಾಣಿಸುತ್ತವೆ. ಕೆಲವು ವಿಧದ ಸೋಂಕುಗಳು ಮಧುಮೇಹಿಗಳಲ್ಲಿ ಸಾಮಾನ್ಯವಾಗಿದೆ. ಚರ್ಮದ ಮೇಲಿನ ಸೋಂಕು ಮೂತ್ರ ವಿಸರ್ಜನೆ ಮಾಡುವಾಗಿನ ತೊಂದರೆಗಳೂ ಸಾಮಾನ್ಯವಾಗಿದೆ.

ಮಧುಮೇಹದ ಸೂಚನೆ: ಲೈಂಗಿಕ ಅಸಾಮರ್ಥ್ಯ

ಮಧುಮೇಹದ ಸೂಚನೆ: ಲೈಂಗಿಕ ಅಸಾಮರ್ಥ್ಯ

ಟೈಪ್ 2 ಮಧುಮೇಹಿಗಳಲ್ಲಿ ಲೈಂಗಿಕ ಅಸಾಮರ್ಥ್ಯ ಕೂಡ ಬಹಳವೇ ಸಹಜವಾಗಿ ಕಂಡುಬರುವ ಒಂದು ರೋಗ ಲಕ್ಷಣವಾಗಿದೆ. ಇದು ನರಗಳನ್ನು ರಕ್ತ ಪರಿಚಲನೆಯನ್ನು ಹಾಗೂ ಜನನಾಂಗಗಳ ಮೇಲೆ ಪ್ರಭಾವ ಬೀರುವ ಕಾರಣದಿಂದ ಇದು ಸಾಮಾನ್ಯವಾಗಿದೆ. ಲೈಂಗಿಕ ಸಂವೇದನೆ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇದರಲ್ಲಿವೆ. ಮಹಿಳೆಯರ ಜನನಾಂಗಗಳು ಒಣಗಿರುವಂತೆ ಕಾಣುವುದು ಇನ್ನೊಂದು ಪ್ರಮುಖ ರೋಗ ಲಕ್ಷಣವಾಗಿದೆ. ಸಂಶೋಧನೆಗಳು ಹೇಳುವಂತೆ 35% ರಿಂದ 70% ತನಕ ಪುರುಷರು ಲೈಂಗಿಕ ಅಸಾಮರ್ಥ್ಯದಿಂದ ಬಳಲುತ್ತಾರೆ. ಮಹಿಳೆಯರಲ್ಲಿ ಮೂರನೆಯ ಒಂದು ಭಾಗ ಮಧುಮೇಹಿ ಮಹಿಳೆಯರು ಲೈಂಗಿಕ ಅಸಾಮರ್ಥ್ಯವನ್ನು ಹೊಂದಿರುತ್ತಾರೆ.

ತಪ್ಪಿಸಬಹುದಾದ ಕೆಲವು ಅಪಾಯಗಳು

ತಪ್ಪಿಸಬಹುದಾದ ಕೆಲವು ಅಪಾಯಗಳು

ನಿಮ್ಮ ಜೀವನ ಶೈಲಿ ಮತ್ತು ಔಷಧೀಯ ಅವಸ್ಥೆಗಳು ನಿಮ್ಮಲ್ಲಿ ಟೈಪ್ 2 ಮಧುಮೇಹವನ್ನು ತರುವುದನ್ನು ತಪ್ಪಿಸಬಹುದು. ಅವುಗಳೆಂದರೆ:

ಧೂಮಪಾನ

ಬಹಳ ಹೆಚ್ಚಾದ ತೂಕವನ್ನು ಹೊಂದಿರುವುದು

ವ್ಯಾಯಾಮದ ಕೊರತೆ

ಸಂಸ್ಕರಿಸಿದ ಮಾಂಸ, ಕೊಬ್ಬಿನ ಅಂಶ, ಸಿಹಿ ತಿನಿಸುಗಳ ಸೇವನೆ

250 mg/dL ಗಿಂತಲೂ ಹೆಚ್ಚಾದ ಟ್ರೈ ಗ್ಲಿಸರೈಡ್ ಪ್ರಮಾಣ

ಎಚ್.ಡಿ.ಎಲ್ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುವುದು (35 mg/dL ಗಿಂತ ಕಡಿಮೆ)

ಮಧುಮೇಹದ ಅಪಾಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ

ಮಧುಮೇಹದ ಅಪಾಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ

ಮಧುಮೇಹದ ಕೆಲವು ಅಪಾಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಿಸ್ಪಾನಿಕ್ಸ್, ನೇಟಿವ್ ಅಮೇರಿಕನ್ಸ್, ಏಷ್ಯನ್ನರು ಮತ್ತು ಆಫ್ರಿಕನ್ನರು ಸಾಮಾನ್ಯಕ್ಕಿಂತ ಹೆಚ್ಚಿನ ಮಧುಮೇಹ ಅಪಾಯವನ್ನು ಹೊಂದಿದ್ದಾರೆ. 45 ಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಮಧುಮೇಹದ ಅಪಾಯವೂ ಹೆಚ್ಚಾಗಿರುತ್ತದೆ. ಯುವಕರಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆ.

ಮಹಿಳೆಯರಲ್ಲಿನ ಅಪಾಯಗಳು

ಮಹಿಳೆಯರಲ್ಲಿನ ಅಪಾಯಗಳು

ಮಹಿಳೆಯರಲ್ಲಿ ಗರ್ಭಧಾರಣೆಯ ಸಂದರ್ಭದಲ್ಲಿ ಮಧುಮೇಹ ಬೆಳೆದು ಬಂದರೆ ಇದು ಮುಂದೆ ಟೈಪ್ 2 ಮಧುಮೇಹವಾಗಿ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ. ಇದೇ ಸಾಧ್ಯತೆ 9 ಪೌಂಡ್ ಗಿಂತ ಜಾಸ್ತಿ ತೂಕದ ಮಗುವನ್ನು ಹಡೆದ ಮಹಿಳಯರಲ್ಲೂ ಸಾಮಾನ್ಯವಾಗಿದೆ.

ಇನ್ಸುಲಿನ್ ಹೇಗೆ ಕೆಲಸ ಮಾಡುತ್ತದೆ?

ಇನ್ಸುಲಿನ್ ಹೇಗೆ ಕೆಲಸ ಮಾಡುತ್ತದೆ?

ಇನ್ಸುಲಿನ್ ಹಾರ್ಮೋನ್ ನಮ್ಮ ದೇಹದಲ್ಲಿರುವ ಗ್ಲೂಕೋಸ್ ಅನ್ನು ನಮ್ಮ ದೇಹದ ಕ್ರಿಯೆಗಳಿ ಬೇಕಾದ ಹಾಗೆ ಬಳಸಿಕೊಳ್ಳಲು ಇರುವ ಇಂಧನದಂತೆ ಕೆಲಸ ಮಾಡುತ್ತದೆ. ಕಾರ್ಬೋಹೈಡ್ರೇಟ್ ಗಳು ನಮ್ಮ ಹೊಟ್ಟೆಯಲ್ಲಿ ಶರ್ಕರವಾಗಿ ವಿಭಜನೆ ಹೊಂದಿದ ನಂತರ ಗ್ಲೂಕೋಸ್ ರಕ್ತಪರಿಚಲನೆಯಲ್ಲಿ ಸೇರಿಕೊಂಡು ಪ್ಯಾಂಕ್ರಿಯಾಸ್ ಅನ್ನು ಉತ್ತೇಜಿಸಿ ನಮ್ಮ ದೇಹಕ್ಕೆ ಬೇಕಾದ ಪ್ರಮಾಣದ ಇನ್ಸುಲಿನ್ ಅನ್ನು ಬಿಡುಗಡೆ ಮಾಡುವಂತೆ ಮಾಡುತ್ತದೆ. ಇದು ಮುಂದೆ ನಮ್ಮ ದೇಹಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಟೈಪ್ 2 ಮಧುಮೇಹ: ಇನ್ಸುಲಿನ್ ನಿರೋಧಕಶಕ್ತಿ

ಟೈಪ್ 2 ಮಧುಮೇಹ: ಇನ್ಸುಲಿನ್ ನಿರೋಧಕಶಕ್ತಿ

ಟೈಪ್ 2 ಮಧುಮೇಹದಲ್ಲಿ ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಅನ್ನು ದೇಹವು ಸರಿಯಾಗಿ ಬಳಸಿಕೊಳ್ಳಲು ನಿಶ್ಕ್ರಿಯವಾಗುತ್ತದೆ ಇದರ ಪರಿಣಾಮವಾಗಿ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಬಹಳವಾಗಿ ಹೆಚ್ಚಾಗುತ್ತದೆ. ಇನ್ಸುಲಿನ ನಿರೋಧಕಶಕ್ತಿ ಎಂದರೆ ದೇಹದಲ್ಲಿ ಇನ್ಸುಲಿನ್ ತಯಾರಾದರೂ ದೇಹದ ಕಣಗಳು ಈ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ಒಂದು ನಿರ್ದಿಷ್ಟ ಹಂತದ ಬಳಿಕ ಪ್ಯಾಂಕ್ರಿಯಾಸಿಸ್ ಇನ್ಸುಲಿನ್ ಉತ್ಪಾದನೆಯನ್ನು ತಡೆಯುತ್ತದೆ.

ಟೈಪ್ 2 ಮಧುಮೇಹದ ಪತ್ತೆ ಹೇಗೆ?

ಟೈಪ್ 2 ಮಧುಮೇಹದ ಪತ್ತೆ ಹೇಗೆ?

ಹಿಮೋಗ್ಲೋಬಿನ್ A1c ಪರೀಕ್ಷೆ ನಮ್ಮ ದೇಹದಲ್ಲಿರುವ ಗ್ಲೈಕೊಸೈಲೇಟೆಡ್ ಹಿಮೋಗ್ಲೋಬಿನ್ ನ ಕಳೆದ 2 ರಿಂದ 3 ತಿಂಗಳ ನಮ್ಮ ದೇಹದ ರಕ್ತದ ಗ್ಲೂಕೋಸ್ ಪ್ರಮಾಣವನ್ನು ಹೇಳುತ್ತದೆ. ಇದರ ಪ್ರಮಾಣ 6.5% ಗಿಂತ ಹೆಚ್ಚಿದ್ದರೆ ಇದು ಮಧುಮೇಹ ಸೂಚಕವಾಗಿದೆ. ಇನ್ನೊಂದು ವಿಧ ಎಂದರೆ ಆಹಾರ ಸೇವನಾ ಪೂರ್ವ ಪರೀಕ್ಷೆ. ಇದರಲ್ಲಿ ಗ್ಲುಕೋಸ್ ಪ್ರಮಾಣ 126 ಕ್ಕಿಂತ ಹೆಚ್ಚಾಗಿದ್ದಲ್ಲಿ ಮಧುಮೇಹ ಇದೆ ಎಂದರ್ಥ. ಸಾಮಾನ್ಯ ಸಂದರ್ಭಗಳಲ್ಲಿನ ಪರೀಕ್ಷೆಯಲ್ಲಿ ಗ್ಲುಕೋಸ್ ಪ್ರಮಾಣ 200 ಕ್ಕಿಂತ ಹೆಚ್ಚಾಗಿದ್ದಲ್ಲಿ ಇದು ಮಧುಮೇಹ ಸೂಚಕ.

ಮಧುಮೇಹ ನಿರ್ವಹಣೆ: ಆಹಾರ ವಿಧಾನ

ಮಧುಮೇಹ ನಿರ್ವಹಣೆ: ಆಹಾರ ವಿಧಾನ

ಸಕ್ಕರೆಯ ಅಂಶ ಇರುವ ಆಹಾರದ ಕಡಿಮೆ ಸೇವನೆ ನಮ್ಮಲ್ಲಿ ಮಧುಮೇಹ್ ನಿರ್ವಹಣೆಯ ಮೊದಲ ಹೆಜ್ಜೆ. ನಿಮ್ಮ ವೈದ್ಯರು ನಿಮಗೆ ಈ ವಿಷಯದಲ್ಲಿ ಸಹಾಯ ಮಾಡುತ್ತಾರೆ. ಹೆಚ್ಚಿನ ಟೈಪ್ 2 ಮಧುಮೇಹಿಗಳು ಕಾರ್ಬೋಹೈಡ್ರೇಟ್ ನ ಸೇವನೆಯ ಮೇಲೂ ನಿಯಂತ್ರಣ ಸಾಧಿಸಬೇಕಾಗುತ್ತದೆ. ಒಟ್ಟು ಕೊಬ್ಬಿನ ಅಂಶದ ಆಹಾರ ಮತ್ತು ಪ್ರೊಟೀನ್ ಯುಕ್ತ ಆಹಾರ ಸೇವನೆಯಲ್ಲೂ ನಿಯಂತ್ರಣ ಸಾಧಿಸಬೇಕಾಗುತ್ತದೆ.

ಮಧುಮೇಹ ನಿರ್ವಹಣೆ: ವ್ಯಾಯಾಮ

ಮಧುಮೇಹ ನಿರ್ವಹಣೆ: ವ್ಯಾಯಾಮ

ವಾಕಿಂಗ್ ಜೊತೆಗೆ ನಿಯಮಿತವಾದ ವ್ಯಾಯಾಮ, ನಮ್ಮ ದೇಹದ ಗ್ಲುಕೋಸ್ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ದೈಹಿಕ ಚಟುವಟಿಕೆಗಳು ನಮ್ಮ ದೇಹದ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ಇದು ಹೃದಯ ಸಂಬಂಧೀ ಅನಾರೋಗ್ಯವನ್ನು ಕಡಿಮೆ ಮಾಡುತ್ತದೆ. ಟೈಪ್ 2 ಮಧುಮೇಹವನ್ನು ಕಡಿಮೆ ಮಾಡಲು ಪ್ರತಿದಿನ 30 ನಿಮಿಷಗಳ ವ್ಯಾಯಾಮವನ್ನು ಮಾಡಬೇಕು.

ಮಧುಮೇಹ ನಿರ್ವಹಣೆ: ಒತ್ತಡ ಕಡಿಮೆ ಮಾಡಿ

ಮಧುಮೇಹ ನಿರ್ವಹಣೆ: ಒತ್ತಡ ಕಡಿಮೆ ಮಾಡಿ

ಒತ್ತಡ ಯಾವಗಲೂ ನಮ್ಮ ದೇಹದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುವ ಜೊತೆಗೆ ರಕ್ತದ ಗ್ಲುಕೋಸ್ ನ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಮಧುಮೇಹ ಹೊಂದಿರುವ ಅದೆಷ್ಟೋ ಜನರಿಗೆ ವಿಶ್ರಾಂತಿ ಮತ್ತು ಧ್ಯಾನದಂತಹ ವಿಧಾನಗಳು ಸಹಾಯ ಮಾಡುತ್ತವೆ.

ಮಧುಮೇಹ್ ನಿರ್ವಹಣೆ: ಔಷಧಿಗಳು

ಮಧುಮೇಹ್ ನಿರ್ವಹಣೆ: ಔಷಧಿಗಳು

ಮಧುಮೇಹವನ್ನು ನಿಯಂತ್ರಣವನ್ನು ಮಾಡಲು ಅಸಾಧ್ಯ ಆದ ಪಕ್ಷದಲ್ಲಿ ಔಷಧಿಗಳು ನೆರವಾಗುತ್ತದೆ. ಬಹಳ ವಿಧದ ಇಂತಹ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವು ಇನ್ಸುಲಿನ್ ಕಡಿಮೆ ಮಾಡಿದಲ್ಲಿ ಇನ್ನೂ ಕೆಲವು ದೇಹ ಇನ್ಸುಲಿನ್ ಅನ್ನು ಸಮರ್ಪಕವಾಗಿ ಬಳಸುವಂತೆ ಮಾಡುತ್ತದೆ.

ಮಧುಮೇಹ ನಿರ್ವಹಣೆ: ಇನ್ಸುಲಿನ್

ಮಧುಮೇಹ ನಿರ್ವಹಣೆ: ಇನ್ಸುಲಿನ್

ಟೈಪ್ 2 ವಿಧದ ಮಧುಮೇಹಿಗಳು ಇನ್ಸುಲಿನ್ ಅನ್ನು ತೆಗೆದುಕೊಳ್ಳಬಹುದು ಮತ್ತು ಇದರ ಜೊತೆಗೆ ಔಷಧಿಗಳನ್ನೂ ಸೇವಿಸಬೇಕು. ಇನ್ಸುಲಿನ್ ಅನ್ನು ಬೇಟಾ ಸೆಲ್ ಫೈಲ್ಯೂರ್ ನಲ್ಲೂ ಬಳಸಲಾಗುತ್ತದೆ. ಈ ಸ್ಥಿತಿಯಲ್ಲಿ ಪ್ಯಾಂಕ್ರಿಯಾಸಿಸ್ ಕೆಲಸ ಮಾಡುವುದಿಲ್ಲ. ಇದು ಟೈಪ್ 2 ಡಯಾಬಿಟಿಸ್ ಮಧುಮೇಹಿಗಳಲ್ಲಿ ಸಾಮಾನ್ಯವಾಗಿದೆ. ಇನ್ಸುಲಿನ್ ಉತ್ಪಾದನೆ ನಿಂತು ಹೋದಲ್ಲಿ ಇನ್ಸುಲಿನ್ ಚಿಕಿತ್ಸೆ ಅಗತ್ಯವಾಗಿರುತ್ತದೆ.

ರಕ್ತದ ಗುಕೋಸ್ ಪ್ರಮಾಣ ಪರಿಕ್ಷೆ

ರಕ್ತದ ಗುಕೋಸ್ ಪ್ರಮಾಣ ಪರಿಕ್ಷೆ

ನಿಮ್ಮ ವೈದ್ಯರು ರಕ್ತದಲ್ಲಿನ ಗುಕೋಸ್ ಪ್ರಮಾಣವನ್ನು ಎಷ್ಟು ದಿನಗಳಿಗೊಮ್ಮೆ ಪರೀಕ್ಷೆ ಮಾಡಬೇಕು ಎನ್ನುವ ಬಗ್ಗೆ ನಿಮಗೆ ಸೂಚನೆ ನೀಡುತ್ತಾರೆ. ಹೀಗೆ ನಿಗದಿತ ಸಮಯದಲ್ಲಿ ಪರೀಕ್ಷೆ ಮಾಡುತ್ತಿದ್ದರೆ ನಿಮ್ಮ ದೇಹದಲ್ಲಿ ಆಗುತ್ತಿರುವ ಏರು ಪೇರಿನ ಬಗ್ಗೆ ನಿಮಗೆ ಮಾಹಿತಿ ಇರುತ್ತದೆ ಹಾಗು ಇದರ ಕಾರಣದಿಂದ ನೀವು ಮಧುಮೇಹವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಕೆಲವು ಸಾಮಾನ್ಯ ಇದರಿಂದಾಗಿ ನೀವು ಮಾಡುವ ವ್ಯಾಯಾಮ, ದೈಹಿಕ ಚಟುವಟಿಕೆಗಳು ನಿಮ್ಮ ನೆರವಿಗೆ ಬರುತ್ತಿವೆಯೇ ಎಂಬುದರ ಬಗ್ಗೆ ತಿಳಿಯಬಹುದು.

ಅಪಧಮನಿಗಳ ಮೇಲೆ ದೀರ್ಘಕಾಲಿಕ ಪರಿಣಾಮ

ಅಪಧಮನಿಗಳ ಮೇಲೆ ದೀರ್ಘಕಾಲಿಕ ಪರಿಣಾಮ

ಪ್ರತಿ ಮೂರು ಮಧುಮೇಹಿಗಳಲ್ಲಿ ಎರಡು ಜನರಿಗೆ ಹೃದಯ ಸಮಸ್ಯೆ ಇರುವುದು ಸಾಮಾನ್ಯವಾಗಿದೆ. ಗ್ಲುಕೋಸ್ ರಕ್ತ ನಾಳಗಳ ಮೇಲೆ ಬೀರುವ ಪರಿಣಾಮದ ಕಾರಣದಿಂದಾಗಿ ಹೀಗಾಗುತ್ತದೆ. ಇದರಿಂದಾಗಿ ಹೃದಯಾಘಾತದ ಅಪಾಯವೂ ತಪ್ಪಿದ್ದಲ್ಲ. ಪಾರ್ಶ್ವವಾಯುವಿನ ಅಪಾಯವೂ ಇದರ ಜೊತೆಗೆ ಇದೆ.

ಮೂತ್ರಪಿಂಡಗಳ ಮೇಲೆ ದೀರ್ಘಕಾಲಿಕ ಪರಿಣಾಮ

ಮೂತ್ರಪಿಂಡಗಳ ಮೇಲೆ ದೀರ್ಘಕಾಲಿಕ ಪರಿಣಾಮ

ಮಧುಮೇಹಿಗಳಲ್ಲಿ ಮೂತ್ರಪಿಂಡ ಸಂಬಂಧೀ ಪರಿಣಾಮಗಳನ್ನೂ ಕಾಣಬಹುದು. ಮೂತ್ರಪಿಂಡ ವೈಫಲ್ಯಕ್ಕೆ ಮಧುಮೇಹವೂ ಒಂದು ಪ್ರಮುಖ ಕಾರಣ. ಇದು ಸುಮಾರು 44% ಮೂತ್ರಪಿಂಡ ವೈಫಲ್ಯಕ್ಕೆ ಕಾರಣ ಎಂದು ಸಂಶೋಧನೆಗಳು ಹೇಳುತ್ತವೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣವನು ನಿಯಂತ್ರಣದಲ್ಲಿಡುವುದು ಈ ಅಪಾಯವನ್ನು ತಪ್ಪಿಸುತ್ತದೆ. ಇದಕ್ಕೆ ಬೇಕಾದ ಔಷಧೋಪಚಾರಗಳೂ ಲಭ್ಯವಿವೆ.

ಕಣ್ಣುಗಳ ಮೇಲೆ ಪ್ರಭಾವ

ಕಣ್ಣುಗಳ ಮೇಲೆ ಪ್ರಭಾವ

ಕಣ್ಣಿನಲ್ಲಿರುವ ಸೂಕ್ಷ್ಮ ರಕ್ತನಾಳಗಳು ಮಧುಮೇಹದ ಕಾರಣದಿಂದಾಗಿ ದುರ್ಬಲವಾಗುತ್ತವೆ. ಇದರ ಕಾರಣದಿಂದಾಗಿ ದೃಷ್ಟಿ ದೋಷ ಮತ್ತು ಮಂದ ದೃಷ್ಟಿಯ ಸಾಧ್ಯತೆಗಳು ಹೆಚ್ಚಾಗಿವೆ. ಡಯಾಬೆಟಿಕ ರೆಟಿನೊಪಥಿ ಈಗಿನ ಹೊಸದಾಗಿ ಕಂಡುಬಂದಿರುವ ಅನಾರೋಗ್ಯವಾಗಿದೆ.

ನರಗಳ ನೋವು: ದೀರ್ಘಕಾಲಿಕ ಅನಾರೋಗ್ಯ

ನರಗಳ ನೋವು: ದೀರ್ಘಕಾಲಿಕ ಅನಾರೋಗ್ಯ

ಜುಮ್ಮೆನ್ನುವುದು, ನಿಶ್ಚೇತನ ಹಾಗೂ ಚುಚ್ಚಿದ ಅನುಭವ ಆಗುವುದು ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಾಗಿವೆ. ಇದರಿಂದಾಗಿ ನರಗಳು ಹಾನಿಗೊಳಗಾಗುವ ಸಾಧ್ಯತೆಯೂ ಇದೆ. ಇದು ಕೈ, ಕಾಲುಗಳು, ಬೆರಳುಗಳಲ್ಲಿ ಸಾಮಾನ್ಯವಾಗಿದೆ. ಮಧುಮೇಹ ನಿಯಂತ್ರಣದಿಂದ ಇದರ ನಿರ್ವಹಣೆ ಸಾಧ್ಯ.

ಕಾಲುಗಳ ಮೇಲೆ ಪ್ರಭಾವ

ಕಾಲುಗಳ ಮೇಲೆ ಪ್ರಭಾವ

ನರಗಳ ಮೇಲಿನ ಪ್ರಭಾವದ ಜೊತೆಗೆ ಕಾಲುಗಳಲ್ಲೂ ಮಧುಮೇಹದ ಪ್ರಭಾವವನ್ನು ಕಾಣಬಹುದಾಗಿದೆ. ಕಾಲುಗಳಲ್ಲಿನ ರಕ್ತ ನಾಳಗಳ ಹಾನಿ ಕಾಲುಗಳಲ್ಲಿ ರಕ್ತ ಸಂಚಾರವನ್ನು ನಿಲ್ಲಿಸುತ್ತದೆ. ಇದರಿಂದಾಗಿ ಹೆಚ್ಚಿನ ನೋವು ಕಂಡುಬರುತ್ತದೆ. ಕಾಲಿನ ಗಾಯಗಳು ಬೇಗನೆ ಗುಣವಾಗದೆ ಗ್ಯಾಂಗ್ರಿನ್ ಆಗುವ ಸಾಧ್ಯತೆಗಳೂ ಇವೆ. ಕೆಲವು ಸಂದರ್ಭಗಳಲ್ಲಿ ಕಾಲನ್ನು ತೆಗೆಯಬೇಕಾದ ಸಾಧ್ಯತೆಗಳೂ ಇವೆ.

ಟೈಪ್ 2 ಮಧುಮೇಹ ತಡೆಗಟ್ಟುವಿಕೆ

ಟೈಪ್ 2 ಮಧುಮೇಹ ತಡೆಗಟ್ಟುವಿಕೆ

ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ತಡೆಯಬಹುದಾಗಿದೆ. ಆರೋಗ್ಯಕರ ಆಹಾರ ಸೇವನೆ ಹಾಗೂ ಇನ್ನಿತರ ಆರೋಗ್ಯಕರ ಚಟುವಟಿಕೆಗಳಿಂದ ಇದರ ನಿರ್ವಹಣೆ ಅಂತೂ ಸಾಧ್ಯವಾಗಿದೆ. ಸಾಮಾನ್ಯವಾದ ಮತ್ತು ಸುಲಭಸಾಧ್ಯವಾದ ವ್ಯಾಯಾಮ ಕೂಡ ಅಗತ್ಯ. ಆದಷ್ಟು ಬೇಗನೆ ಮಧುಮೇಹ ಪತ್ತೆಯಾದರೆ ಇದರ ನಿರ್ವಹಣೇಯೂ ಅಷ್ಟೇ ಸುಲಭವಾಗುತ್ತದೆ. ಇದರಿಂದಾಗಿ ದೀರ್ಘಕಾಲಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.

English summary

Type 2 Diabetes: Learn the Warning Signs

Type 2 diabetes can affect all people, regardless of age. Early symptoms of type 2 diabetes may be missed, so those affected may not even know they have the condition.
Story first published: Thursday, January 2, 2014, 15:05 [IST]
X
Desktop Bottom Promotion