For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಉಪ್ಪಿನ ಖಾದ್ಯಗಳನ್ನು ತ್ಯಜಿಸಿ

|

ಇಂದಿನ ಯುವ ಜನಾಂಗವೂ ಹೊರಗಡೆ ತಿನ್ನುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತ ಹೊರಗೆ ಸಿಗುವ ರೆಡಿ ಫುಡ್‌ಗೆ ಅವರ ಮನಸ್ಸು ಹೆಚ್ಚು ವಾಲುತ್ತಿದೆ. ಹೋಟೆಲ್ ಡಾಬಾದ ರುಚಿ ಅವರನ್ನು ಮನೆಯ ಊಟದಿಂದ ದೂರ ಮಾಡಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಿಮ್ಮ ಗಮನದಲ್ಲಿರಬೇಕು.

ಹೊರಗಿನ ತಿಂಡಿ ಪದಾರ್ಥಗಳು ಕೃತಕ ಬಣ್ಣಗಳನ್ನು ಹೊಂದಿರುತ್ತವೆ, ಇವುಗಳು ನಿಮ್ಮ ಆರೋಗ್ಯವನ್ನು ಸುಲಭವಾಗಿ ಹಾಳುಗೆಡವುತ್ತದೆ. ಆದರೆ ಉಪ್ಪು ಹಾಕಿ ಸಂರಕ್ಷಿಸಿದ ಆಹಾರ ಪದಾರ್ಥಗಳು ನಿಮ್ಮ ಆಂತರಿಕ ರಚನೆಗಳಿಗೆ ಹಾನಿಯನ್ನುಂಟು ಮಾಡುವುದು ಖಂಡಿತ.

ಊಟದಲ್ಲಿರುವ ಹೆಚ್ಚುವರಿ ಉಪ್ಪು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ನಿಮಗೆ ಹೆಚ್ಚುವರಿ ಕ್ಯಾಲೋರಿಗಳನ್ನು ನೀಡುವುದಷ್ಟೇ ಅಲ್ಲದೆ, ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಅಧಿಕಗೊಳಿಸುತ್ತದೆ. ನೀವು ತ್ಯಜಿಸಲೇ ಬೇಕಾದ ಆರೋಗ್ಯವನ್ನು ಹಾಳು ಮಾಡುವಂತಹ ಅಧಿಕ ಉಪ್ಪಿನಂಶವುಳ್ಳ ಖಾದ್ಯಗಳನ್ನು ಬೋಲ್ಡ್ ಸ್ಕೈ ಇಂದಿಲ್ಲಿ ಹಂಚಿಕೊಳ್ಳುತ್ತಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಡ್ರೈ ಫ್ರೂಟ್ಸ್ ನಿಂದ ತೂಕ ಇಳಿಸಿಕೊಳ್ಳುವುದು ಹೇಗೆ?

ಆದರೆ ಅದಕ್ಕಿಂತ ಮುಂಚೆ, ನೀವು ತಿಳಿಯಲೇ ಬೇಕಾದ ತ್ವರಿತ ಆರೋಗ್ಯ ಸಲಹೆ ಇಲ್ಲಿದೆ: ಮಾನವನ ದೇಹವು ದಿನವೊಂದಕ್ಕೆ ಸರಾಸರಿ 2,300 ಎಮ್‌ಜಿ ಯಷ್ಟು ಉಪ್ಪನ್ನು ಬಯಸುತ್ತದೆ, ನೀವು ಸಕ್ಕರೆ ರೋಗಿಗಳಾಗಿದ್ದರೆ ಉಪ್ಪಿನ ಪ್ರಮಾಣ 1,500 ಎಮ್‌ಜಿ ಯಾಗಿದೆ.

ಆದ್ದರಿಂದ, ಆರೋಗ್ಯವಂತರಾಗಿರಲು ಮತ್ತು ತೂಕ ಇಳಿಸಲು, ಕೆಲವೊಂದು ಉಪ್ಪು ಭರಿತ ಆಹಾರಗಳನ್ನು ನೀವು ತ್ಯಜಿಸಲೇಬೇಕು.

ಬ್ರೆಡ್

ಬ್ರೆಡ್

ಅನ್ನಕ್ಕೆ ಹೋಲಿಸಿದಾಗ ಬ್ರೆಡ್ ಒಂದು ಆರೋಗ್ಯಕಾರಿ ಆಹಾರವಾಗಿದೆ. ಆದರೂ ಬ್ರೆಡ್‌ನ ಎರಡು ಸ್ಲೈಸ್‌ಗಳು 230 ಎಮ್‌ಜಿ ಉಪ್ಪನ್ನು ಒಳಗೊಂಡಿದೆ. ಆದ್ದರಿಂದ ಬ್ರೆಡ್‌ನ ಅತಿಯಾದ ಸೇವನೆಯಿಂದ ನಿಮ್ಮನ್ನು ದೂರವಿರಿಸಿ.

ಸ್ಯಾಂಡ್‌ವಿಚ್‌ಗಳು

ಸ್ಯಾಂಡ್‌ವಿಚ್‌ಗಳು

ತೂಕ ಇಳಿಸಲು ನೀವು ತ್ಯಜಿಸಲೇಬೇಕಾದ ಉಪ್ಪಿನಂಶದ ಆಹಾರ ಪದಾರ್ಥ ಸ್ಯಾಂಡ್‌ವಿಚ್ ಆಗಿದೆ. ಸ್ಯಾಂಡ್‌ವಿಚ್‌ನಲ್ಲಿ ಫಿಲ್ಲಿಂಗ್‌ಗಾಗಿ ಬಳಸುವ ಸಾಸ್ ಅಥವಾ ಚಟ್ನಿ ತನ್ನಲ್ಲಿ ಅಧಿಕ ಉಪ್ಪನ್ನು ಇರಿಸಿಕೊಂಡಿರುತ್ತದೆ.

ಸೂಪ್‌ಗಳು

ಸೂಪ್‌ಗಳು

ಒಂದು ಬೌಲ್ ಸೂಪ್ 980 ಸೋಡಿಯಂ ಅನ್ನು ಹೊಂದಿದೆ. ನೀವು ಸೂಪ್ ಪ್ರಿಯರಾಗಿದ್ದರೆ, ನೀವು ಅದರ ಸ್ವಲ್ಪ ಭಾಗವನ್ನು ಮಾತ್ರ ಸೇವಿಸುತ್ತಿರುವಿರಿ ಮತ್ತು ಅದಕ್ಕೆ ಉಪ್ಪು ಸೇರಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉಪ್ಪಿಲ್ಲದ ಇತರ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಒಂದು ಬೌಲ್ ಸೂಪ್‌ನ ಜಾಗವನ್ನು ತುಂಬಿ.

ಚಿಪ್ಸ್

ಚಿಪ್ಸ್

ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಕೂಡ ಉಪ್ಪಿನ ಚಿಪ್ಸ್ ಅನ್ನು ಅತಿಯಾಗಿ ಇಷ್ಟಪಡುತ್ತಾರೆ. ಇದು ಒಳ್ಳೆಯದಕ್ಕಿಂತ ಕೆಟ್ಟದನ್ನೇ ತನ್ನಲ್ಲಿ ತುಂಬಿಕೊಂಡಿದೆ. ಅದರಲ್ಲಿರುವ ಉಪ್ಪಿನಂಶವು ನಮ್ಮನ್ನು ಇನ್ನಷ್ಟು ತಿನ್ನುವಂತೆ ಪ್ರೇರೇಪಿಸುತ್ತದೆ ಹಾಗೂ ಪೂರ್ತಿಯಾಗಿ ನಾವು ತಿಂದುಬಿಡುತ್ತೇವೆ. ನಿಮ್ಮ ತೂಕ ಇಳಿಸುವ ಯೋಜನೆಯನ್ನು ಇದು ದೂರಮಾಡಿಬಿಡುತ್ತದೆ ಆದ್ದರಿಂದ ಚಿಪ್ಸ್ ತ್ಯಜಿಸುವುದು ಉತ್ತಮ.

ಚಿಕನ್

ಚಿಕನ್

ಇತರ ಮಾಂಸಗಳಿಗೆ ಹೋಲಿಸಿದಾಗ ಕೋಳಿ ಮಾಂಸವು ಅತ್ಯಧಿಕ ಉಪ್ಪಿನಂಶವನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆಯೇ. ಚಿಕನ್‌ನ ಪ್ರತಿಯೊಂದು ತುಂಡೂ 600 ಎಮ್‌ಜಿ ಸೋಡಿಯಂ ಅನ್ನು ಹೊಂದಿದೆ. ತೂಕ ನಿಯಂತ್ರಿಸಲು ತ್ಯಜಿಸಲೇಬೇಕಾದ ತಿನಿಸು ಇದಾಗಿದೆ. ನೀವು ಸಸ್ಯಹಾರಿಯಾಗಿರುವುದು ನಿಮ್ಮ ಆರೊಗ್ಯಕ್ಕೂ ಒಳ್ಳೆಯದು.

ಪಿಜ್ಜಾ

ಪಿಜ್ಜಾ

ಇದೊಂದು ಜಂಕ್ ಪುಡ್ ಆಗಿದ್ದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ನೀವು ಹೇಗಾದರೂ ಮಾಡಿ ಇದನ್ನು ಕೈಬಿಡಲೇಬೇಕು ಏಕೆಂದರೆ ಇದು ಅತ್ಯಧಿಕ ಸೋಡಿಯಂ ಅನ್ನು ಹೊಂದಿದೆ.

ಚೀಸ್

ಚೀಸ್

ಚೀಸ್ ಕೂಡ ಒಂದು ಉತ್ತಮ ಆಹಾರವೆಂದು ಎಲ್ಲರೂ ಭಾವಿಸುತ್ತಾರೆ. ಇದರಲ್ಲಿ ಯಾವುದೇ ಹುಸಿಯಿಲ್ಲ. ಆದರೆ ಚೀಸ್‌ನ ಅತ್ಯಧಿಕ ಸೇವನೆಯು ಹೊಟ್ಟೆಯ ಗಾತ್ರವನ್ನು ಹಿಗ್ಗಿಸುತ್ತದೆ.

ಉಪ್ಪಿನಕಾಯಿ

ಉಪ್ಪಿನಕಾಯಿ

ದಕ್ಷಿಣ ಭಾರತೀಯರ ತಟ್ಟೆಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ಐಟಂ ಉಪ್ಪಿನಕಾಯಿ ಆಗಿದೆ. ಉಪ್ಪಿನಕಾಯಿಯ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಇದು ಹೆಚ್ಚಿನ ಉಪ್ಪನ್ನು ಒಳಗೊಂಡಿದ್ದು ರಕ್ತದೊತ್ತಡವನ್ನು ಅಧಿಕಗೊಳಿಸುತ್ತದೆ.

ಸಾಸ್‌ನ ವಿಧಗಳು

ಸಾಸ್‌ನ ವಿಧಗಳು

ಸೋಯಾ ಸಾಸ್ ಅನ್ನು ಪ್ರತಿಯೊಂದು ಪದಾರ್ಥಗಳಲ್ಲೂ ಹೆಚ್ಚಾಗಿ ಬಳಸುತ್ತಾರೆ. ಈ ಸಾಸ್ ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ತನ್ನಲ್ಲಿ ತುಂಬಿಕೊಂಡಿದ್ದು ತೂಕವನ್ನು ಹೆಚ್ಚು ಮಾಡುತ್ತದೆ.

ಪಾನೀಯಗಳು

ಪಾನೀಯಗಳು

ಪಾನೀಯಗಳಲ್ಲಿ ತುಂಬಿರುವ ಕೃತಕ ಸಾಮಾಗ್ರಿಗಳು ಉಪ್ಪಿನಂಶವನ್ನು ಹೊಂದಿರುತ್ತವೆ ಇವು ತೂಕವನ್ನು ಇನ್ನಷ್ಟು ಹೆಚ್ಚಾಗಿಸುತ್ತವೆ.

English summary

Salt Foods To Avoid To Lose Weight

Today, most of the younger generation love to eat out all the time. Them find going to a restaurant or a roadside eatery far more convenient than toiling away over a stove in the kitchen.
X
Desktop Bottom Promotion