For Quick Alerts
ALLOW NOTIFICATIONS  
For Daily Alerts

ಟೊಮೇಟೊ ಆರೋಗ್ಯಕಾರಿ ತರಕಾರಿ ಹೇಗೆ?

|

ತಾಜಾ ಹಣ್ಣುಗಳು ತರಕಾರಿಗಳು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳನ್ನು ಹಸಿಯಾಗಿ ಅಥವಾ ಸಲಾಡ್, ಜ್ಯೂಸ್ ರೂಪದಲ್ಲಿ ಸೇವಿಸುವುದು ನಮ್ಮ ಆಹಾರ ಕ್ರಮದಲ್ಲಿ ಸೇರಿರಲೇಬೇಕು. ಇಂದು ನಾವು ಇಲ್ಲಿ ಒಂದು ಆರೋಗ್ಯಕಾರಿ ತರಕಾರಿ ಹಣ್ಣಾದ ಟೊಮೇಟೊದ ವಿಶೇಷತೆಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅರಶಿನದ ಆರೋಗ್ಯಕಾರಿ ಪ್ರಯೋಜನಗಳು

ನಿಮ್ಮ ಸುಂದರ ತ್ವಚೆಗಾಗಿ, ಮೂಳೆಗಳ ಅಭಿವೃದ್ಧಿಗಾಗಿ ಟೊಮೇಟೊ ಸಹಕಾರಿಯಾಗಿದೆ. ತೂಕ ಇಳಿಕೆಯಲ್ಲೂ ಇದು ಪರಿಣಾಮಕಾರಿ ಪ್ರಭಾವವನ್ನು ಬಿರುತ್ತದೆ ಎಂಬುದು ಸಾಬೀತಾಗಿದ್ದು ವಿಟಮಿನ್ ಮಿನರಲ್ಸ್ ಯುಕ್ತವಾಗಿದೆ.

ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಇದನ್ನು ಹಸಿಯಾಗಿ ತಿಂದಷ್ಟು ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.ಬಹುರೂಪಿ ಪ್ರಯೋಜನದ ಟೋಮೇಟೋದ ಬಗೆಗೆ ಮತ್ತಷ್ಟು ಮಾಹಿತಿ ನಿಮಗಾಗಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಯಾರೆಟ್‌ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ?

ಸುಂದರ ತ್ವಚೆಗಾಗಿ ಟೊಮೇಟೊ:

ಸುಂದರ ತ್ವಚೆಗಾಗಿ ಟೊಮೇಟೊ:

ಫೇಶಿಯಲ್ ಕ್ಲೀನರ್‌ನಂತೆ ಕೆಲವೆಡೆಗಳಲ್ಲಿ ಬಳಸಲಾಗುವ ಲೈಕೋಪನ್ ಟೊಮೇಟೊದಲ್ಲಿ ಹೇರಳವಾಗಿದೆ. ಮುಖದ ಅಂದಕ್ಕಾಗಿ ಟೊಮೇಟೊವನ್ನು ನೀವು ಬಳಸುತ್ತಿರುವಿರಿ ಎಂದರೆ 8 ರಿಂದ 12 ಟೊಮೇಟೊಗಳ ಅವಶ್ಯಕತೆ ನಿಮಗಿದೆ. ಟೊಮೇಟೊದ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ನಿಮ್ಮ ಮುಖದ ಮೇಲಿಡಿ. 10 ನಿಮಿಷಗಳಷ್ಟು ಕಾಲ ಟೊಮೇಟೊ ತಿರುಳು ನಿಮ್ಮ ಮುಖದಲ್ಲಿರಲಿ ನಂತರ ತೊಳೆಯಿರಿ. ಇದು ಮುಖವನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಮೂಳೆಗಳ ಅಭಿವೃದ್ಧಿಗಾಗಿ:

ಮೂಳೆಗಳ ಅಭಿವೃದ್ಧಿಗಾಗಿ:

ಇದರಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಕೆ ಅಂಶ ಮೂಳೆಗಳನ್ನು ಅಭಿವೃದ್ಧಿಗೊಳಿಸಿ ಅವನ್ನು ದೃಢಗೊಳಿಸುತ್ತದೆ. ಮೂಳೆ ಮುರಿತ ಮೊದಲಾದ ಸಮಸ್ಯೆಯನ್ನು ಟೊಮೇಟೊದಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಕೆ ಹೋಗಲಾಡಿಸುತ್ತದೆ.

ಉತ್ಕರ್ಷಣ ಶಕ್ತಿಯನ್ನು ಒದಗಿಸುತ್ತದೆ:

ಉತ್ಕರ್ಷಣ ಶಕ್ತಿಯನ್ನು ಒದಗಿಸುತ್ತದೆ:

ಟೊಮೇಟೊದಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಬೇಟಾ ಕ್ಯಾರೊಟೀನ್‌ನೊಂದಿಗೆ ಸಮ್ಮಿಶ್ರಗೊಂಡು ರಕ್ತದಲ್ಲಿನ ವಿನಾಶಕಾರಿ ಮುಕ್ತ ರೇಡಿಕಲ್ಸ್‌ನೊಂದಿಗೆ ಉತ್ಕರ್ಷಣದಂತೆ ಕಾರ್ಯನಿರ್ವಹಿಸುತ್ತದೆ. ಹಸಿ ಟೊಮೇಟೊವನ್ನು ತಿಂದಷ್ಟು ನಿಮ್ಮಲ್ಲಿ ಬೇಟಾ ವಿಟಮಿನ್ ಅಂಶ ಜಾಸ್ತಿಯಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಟೊಮೇಟೊವನ್ನು ಬೇಯಿಸಿದಂತೆ ಈ ಅಂಶ ಕಡಿಮೆಯಾಗುತ್ತದೆ.

ನಿಮ್ಮ ಹೃದಯಕ್ಕೆ ಉತ್ತಮವಾದುದು:

ನಿಮ್ಮ ಹೃದಯಕ್ಕೆ ಉತ್ತಮವಾದುದು:

ಟೊಮೇಟೊದಲ್ಲಿರುವ ವಿಟಮಿನ್ ಬಿ ಮತ್ತು ಪೊಟ್ಯಾಶಿಯಂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಇಳಿಸುತ್ತದೆ. ಆದ್ದರಿಂದ ನಿಮ್ಮ ನಿಯಮಿತ ನಿಯಂತ್ರಿತ ಆಹಾರದಲ್ಲಿ ಟೊಮೇಟೊವನ್ನು ಬಳಸುವುದು ಪರಿಣಾಮಕಾರಿಯಾಗಿ ಹೃದಯಾಘಾತಗಳನ್ನು ಕಡಿಮೆ ಮಾಡುತ್ತದೆ.

ನಿಮ್ಮ ಕೂದಲಿಗೆ ಅತ್ಯುತ್ತಮ:

ನಿಮ್ಮ ಕೂದಲಿಗೆ ಅತ್ಯುತ್ತಮ:

ಟೊಮೇಟೊದಲ್ಲಿರುವ ವಿಟಮಿನ್ ಎ ಅಂಶ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಸುದೃಢವಾಗಿ ಆರೋಗ್ಯವಾಗಿರಿಸುತ್ತದೆ. ವಿಟಮಿನ್ ಎ ನಿಮ್ಮ ಕಣ್ಣುಗಳು, ತ್ವಚೆ ಮತ್ತು ಹಲ್ಲಿಗೆ ಕೂಡ ಉತ್ತಮವಾದುದು.

ನಿಮ್ಮ ಕಿಡ್ನಿಗಾಗಿ ಟೊಮೇಟೊ:

ನಿಮ್ಮ ಕಿಡ್ನಿಗಾಗಿ ಟೊಮೇಟೊ:

ಬೀಜವನ್ನು ಹೊರತುಪಡಿಸಿ ಟೊಮೇಟೊವನ್ನು ನಿಮ್ಮ ಆಹಾರದಲ್ಲಿ ಬಳಸುವುದು ಕಿಡ್ನಿ ಕಲ್ಲಿನ ಅಪಾಯವನ್ನು ಕಡಿಮೆ ಮಾಡಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ.

ನಿಮ್ಮ ಕಣ್ಣುಗಳಿಗಾಗಿ:

ನಿಮ್ಮ ಕಣ್ಣುಗಳಿಗಾಗಿ:

ಇದರಲ್ಲಿರುವ ವಿಟಮಿನ್ ಎ ಅಂಶ ದೃಷ್ಟಿಯನ್ನು ಚುರುಕಾಗಿಸುತ್ತದೆ. ಟೊಮೇಟೊವನ್ನು ನಿಯಮಿತವಾಗಿ ಬಳಸುವುದು ಇರುಳುಗುರುಡುತನವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.

ಮಧುಮೇಹಿಗಳಿಗೆ ದಿವ್ಯೌಷಧ:

ಮಧುಮೇಹಿಗಳಿಗೆ ದಿವ್ಯೌಷಧ:

ಟೊಮೇಟೊದಲ್ಲಿರುವ ಮೌಲ್ಯಯುತ ಮಿನರಲ್ ಕ್ರೋಮಿಯಂ ಆಗಿದ್ದು ಮಧುಮೇಹಿಗಳಿಗೆ ತಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಉಪಯೋಗಕಾರಿಯಾಗಿದೆ.


Read more about: health ಆರೋಗ್ಯ
English summary

Health benefits of Tomato

Tomatoes contain a high level of lycopene, which is a substance that is used in some of the more pricy facial cleansers that are available for purchase over-the-counter. If you want to try tomatoes for skin care, you need to start with about eight to twelve tomatoes.
X
Desktop Bottom Promotion