For Quick Alerts
ALLOW NOTIFICATIONS  
For Daily Alerts

ಮಧುಮೇಹದ ನಿಯಂತ್ರಣಕ್ಕೆ ತ್ಯಜಿಸಲೇಬೇಕಾದ ಆಹಾರಗಳಿವು!

|

ನಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ತರುವಂಥದ್ದು ನಮ್ಮ ಕಾಯಿಲೆಗಳಾಗಿವೆ. ಪ್ರತಿಯೊಂದು ಕಾಯಿಲೆಯನ್ನು ಅದರದ್ದೇ ಆದ ರೀತಿಯಲ್ಲಿ ಆರೈಕೆ ಮಾಡುವ ರೀತಿ ನಮಗೆ ತಿಳಿದಿದ್ದರೆ ಕಾಯಿಲೆಯು ನಮ್ಮ ದೇಹಕ್ಕೆ ಹಾನಿ ಮಾಡದ ರೀತಿಯಲ್ಲಿ ಅದನ್ನು ನಾವು ನಿರ್ವಹಿಸಬಹುದು.

ಶ್ರೀಮಂತ ಕಾಯಿಲೆ ಎಂದೇ ಹೆಸರುವಾಸಿಯಾಗಿರುವ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಈಗ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಉಪದ್ರವಕಾರಿ ಎಂದೆನಿಸಿದೆ. ನಿಮ್ಮ ಎದುರಲ್ಲಿ ಸಿಹಿ ಇದ್ದರೂ ತಿನ್ನಲಾಗದ ಪರಿಸ್ಥಿತಿ, ಹೀಗೆ ಜೀವನದಲ್ಲಿ ಕಹಿಯನ್ನೇ ಉಣ್ಣಬೇಕಾದ ಅವಸ್ಥೆಯನ್ನು ಈ ರೋಗ ಉಂಟುಮಾಡುತ್ತದೆ. ಆದರೆ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನಮ್ಮ ದೇಹಕ್ಕೆ ಇದು ಹೆಚ್ಚಿನ ಉಪದ್ರವಕಾರಿ ಎಂದೆನಿಸುವುದಿಲ್ಲ.

ಮಧುಮೇಹ ಇರುವವರು ಹಣ್ಣುಗಳನ್ನು ಹಾಗೂ ಜ್ಯೂಸ್ ಅನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದಿರಬೇಕಾಗುತ್ತದೆ. ಹಣ್ಣುಗಳು ಆರೋಗ್ಯವನ್ನು ಸರಿಯಾಗಿರಿಸುತ್ತದೆಯಾದರೂ ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣುಗಳು ಅರೋಗ್ಯ ಸುಧಾರಿಸುವುದಿಲ್ಲ. ಆದ್ದರಿಂದ ಮಧುಮೇಹಿಗಳು ಆಯ್ದ ಕೆಲವೇ ಹಣ್ಣುಗಳನ್ನು ಹಾಗೂ ಆಹಾರವನ್ನು ಹೆಚ್ಚು ಬಳಸಬಹುದು.

ಇಂದಿನ ಲೇಖನದಲ್ಲಿ ಮಧುಮೇಹಿಗಳು ಸೇವಿಸಲೇಬಾರದ ಕೆಲವೊಂದು ಪದಾರ್ಥಗಳ ತಿಂಡಿ ತಿನಿಸುಗಳ ಹಾಗೂ ಹಣ್ಣುಗಳ ಪಟ್ಟಿಯನ್ನು ನೀಡಿದ್ದು ಪಥ್ಯಾಹಾರಿಗಳಿಗೆ ಇದೊಂದು ಉಪಯುಕ್ತ ಸಲಹೆಯಾಗಿದೆ. ಬರಿಯ ಸಿಹಿಯನ್ನು ದೂರವಿಟ್ಟು ಕಹಿಯನ್ನು ಸೇವಿಸಿದರೆ ಮಾತ್ರ ಸಕ್ಕರೆ ಕಾಯಿಲೆಗೆ ಔಷಧವಾಗುತ್ತದೆ ಎಂದು ನೀವು ನಂಬಿದ್ದರೆ ಇದು ಸುಳ್ಳಾಗುತ್ತದೆ. ರಕ್ತದಲ್ಲಿ ಕೊಬ್ಬಿನ ಪ್ರಮಾಣ ಏರಿದಾಗ ಕೂಡ ಮಧುಮೇಹ ಖಂಡಿತ ನಿಮ್ಮನ್ನು ತಲುಪುತ್ತದೆ.

ಹಿತಮಿತವಾದ ಆಹಾರ, ನಿಯಮಬದ್ಧವಾದ ವ್ಯಾಯಾಮಪೂರಿತ ಜೀವನಕ್ರಮ, ಮಿತವಾಗಿ ಸೇವಿಸುವುದು ಇವೇ ಮೊದಲಾದ ಕೆಲವೊಂದು ಅಂಶಗಳನ್ನು ನಾವು ಪಾಲಿಸಿಕೊಂಡು ಬಂದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಮತ್ತು ನಮ್ಮ ದೇಹ ತೂಕವನ್ನು ಕೂಡ. ಆದ್ದರಿಂದ ಕೆಳಗಿನ ಸ್ಲೈಡ್‌ಗಳಲ್ಲಿ ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮತ್ತು ಸೇವಿಸಲೇಬಾರದ ಕೆಲವೊಂದು ಆಹಾರಗಳ ಪಟ್ಟಿಯನ್ನು ನೀಡಿದ್ದು ಇದರತ್ತ ಗಮನ ಹರಿಸಿ.

ಮಧುಮೇಹಿಗಳಿಗೆ 16 ಟೇಸ್ಟಿ ಸ್ನ್ಯಾಕ್ಸ್ ಐಡಿಯಾ

ಬಾಳೆಹಣ್ಣು

ಬಾಳೆಹಣ್ಣು

ಅರ್ಧ ಕಪ್ ಬಾಳೆಹಣ್ಣಿನಲ್ಲಿ 15 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ.ಬಾಳೆಹಣ್ಣು 40 ರಿಂದ 70 ರಷ್ಟು ಜಿ ಐ (ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯ ಒಳಗೊಂಡಿರುತ್ತದೆ. ಆದ್ದರಿಂದ ಕಳಿತ ಬಾಳೆಹಣ್ಣು ಮಧುಮೇಹ ಕಾಯಿಲೆ ಇರುವವರಿಗೆ ಸೂಕ್ತವಲ್ಲ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶ, ನಾರಿನಂಶ, ವಿಟಮಿನ್ ಗಳಿರುತ್ತವೆ, ಜೊತೆಗೆ ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶವಿರುತ್ತದೆ.3 ಔನ್ಸ್ ದ್ರಾಕ್ಷಿಯಲ್ಲಿ 15 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಗಳಿರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ಬಳಸುವುದರಿಂದ ಅರೋಗ್ಯ ಹದಗೆಡಬಹುದು.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಸರಾಸರಿ 59 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ ಹೊಂದಿರುವ ಪಪ್ಪಾಯಿ ಹಣ್ಣು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಯನ್ನು ಅಧಿಕವಾಗಿ ಹೊಂದಿದೆ. ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನುವುದಾದರೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿಕೊಳ್ಳಲು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ನಾರಿನಂಶ ಮತ್ತು ಕ್ಯಾಲೋರಿ ಕಡಿಮೆ ಇರುವ ಕಲ್ಲಂಗಡಿ ಹಣ್ಣು 72 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯವನ್ನು ಹೊಂದಿರುತ್ತದೆ. ಜೊತೆಗೆ ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ. ಆದಾಗ್ಯೂ ಅರ್ಧ ಕಪ್ ನಷ್ಟು ಕಲ್ಲಂಗಡಿ ಹಣ್ಣು 5 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಹೊಂದಿರುತ್ತದೆ.

ಅನಾನಸ್ ಹಣ್ಣು

ಅನಾನಸ್ ಹಣ್ಣು

ಈ ಹಣ್ಣನ್ನು ಮಧುಮೇಹ ಇರುವವರು ಖಂಡಿತವಾಗಿ ತಿನ್ನಬಾರದು. ಇದರಲ್ಲಿ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಒಂದು ಸಣ್ಣ ಕಪ್ ಅನಾನಸ್ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ 20 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.

ಮಾವಿನಹಣ್ಣು

ಮಾವಿನಹಣ್ಣು

ಹಣ್ಣುಗಳ ರಾಜ ಎನ್ನಲಾದ ಮಾವಿನ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನಬಾರದು. ಅದರಲ್ಲೂ ಪ್ರತಿದಿನ ಇದನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿ ದೀರ್ಘ ಕಾಲದ ಸಮಸ್ಯೆಯಾಗಬಹುದು.

ಹಣ್ಣಿನ ರಸ

ಹಣ್ಣಿನ ರಸ

ಮಧುಮೇಹ ಇದ್ದವರು ಪೂರ್ಣ ಹಣ್ಣನ್ನು ತಿನ್ನಬೇಕು ಇದರಿಂದ ಅವರು ತಮಗೆ ಬೇಕಾದ್ದ ಫೈಬರ್ ಅನ್ನು ಪಡೆದುಕೊಳ್ಳುತ್ತಾರೆ. ಹಣ್ಣಿನ ರಸದಲ್ಲಿ ಈ ಅಂಶಗಳು ಮರೆಯಾಗಿ ಅದರ ಜಾಗವನ್ನು ನೈಸರ್ಗಿಕವಾಗಿರುವ ಸಕ್ಕರೆ ಫ್ರುಕ್ಟೋಸ್ ಪಡೆದುಕೊಳ್ಳುತ್ತದೆ.

 ಫ್ರೆಂಚ್ ಫ್ರೈ

ಫ್ರೆಂಚ್ ಫ್ರೈ

ಫ್ರೆಂಚ್ ಫ್ರೈ ಎಣ್ಣೆಯಲ್ಲಿ ಮುಳುಗಿರುವ ಕುರುಕಲಾಗಿದ್ದು ಇದನ್ನು ಆಲೂಗಡ್ಡೆಯೊಂದಿಗೆ ತಯಾರಿಸಲಾಗುತ್ತದೆ. ಇದು ನಿಮ್ಮ ತೂಕವನ್ನು ಹೆಚ್ಚಿಸುವುದಲ್ಲದೆ ನಿಮ್ಮ ರಕ್ತದಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

ಮೈದಾ

ಮೈದಾ

ಮೈದಾ ಕೂಡ ದೇಹದಲ್ಲಿ ತೂಕವನ್ನು ಹೆಚ್ಚಿಸುತ್ತದೆ. ಇಂತಹ ಆಹಾರವನ್ನು ಮಧುಮೇಹಿಗಳು ತಿನ್ನದೇ ಇರುವುದು ಒಳಿತಾಗಿದೆ. ಮೈದಾದಲ್ಲಿ ಕಡಿಮೆ ಪ್ರಮಾಣದ ಫೈಬರ್ ಕಾರ್ಬ್ಸ್ ಇರುವುದರಿಂದ ಇದು ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಹೇಳಿ ಮಾಡಿಸಿದ್ದಲ್ಲ.

 ಬಿಳಿ ಬ್ರೆಡ್

ಬಿಳಿ ಬ್ರೆಡ್

ಬಿಳಿ ಅಥವಾ ಹಾಲಿನ ಬ್ರೆಡ್ ಸಿಹಿಯಿಂದ ಕೂಡಿರುತ್ತದೆ. ಮಧುಮೇಹಿಗಳು ತಮ್ಮ ಆಹಾರ ಪದಾರ್ಥಗಳಲ್ಲಿರುವ ಸಕ್ಕರೆ ಬಗೆಗೆ ಹೆಚ್ಚು ಗಮನ ವಹಿಸಬೇಕು. ಇಂತಹ ಬ್ರೆಡ್‌ಗಳನ್ನು ಸಕ್ಕರೆ ಕಾಯಿಲೆಯವರು ತಿನ್ನಬಾರದು.

ಸಿಹಿ ಗೆಣಸು

ಸಿಹಿ ಗೆಣಸು

ಭೂಮಿಯ ಒಳಗೆ ಬೆಳೆಸಲಾಗುವ ಆಹಾರ ಪದಾರ್ಥಗಳನ್ನು ಮಧುಮೇಹಿಗಳು ತಿನ್ನಬಾರದೆಂಬುದು ನಿಯಮ. ಬೇರಿನಿಂದ ಕೂಡಿರುವ ಸಿಹಿಗೆಣಸನ್ನು ಭೂಮಿಯ ಒಳಗೆ ಬೆಳೆಸುವುದರಿಂದ ಇದು ಹೆಚ್ಚುವರಿ ಸಕ್ಕರೆಯನ್ನು ಬಿಡುಗಡೆ ಮಾಡುತ್ತದೆ.

ಕೇಕ್ ಮತ್ತು ಪೇಸ್ಟ್ರಿ

ಕೇಕ್ ಮತ್ತು ಪೇಸ್ಟ್ರಿ

ಬೇಕರಿ ತಿಂಡಿಗಳಾದ ಕೇಕ್ ಮತ್ತು ಪೇಸ್ಟ್ರಿಗಳು ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿರುತ್ತವೆ. ಇದರ ಪ್ರತಿಯೊಂದು ತುಣುಕೂ ಕೂಡ ಹೆಚ್ಚುವರಿ ಸಕ್ಕರೆ ಮತ್ತು ಕ್ಯಾಲೋರಿಗಳಿಂದ ಕೂಡಿರುತ್ತದೆ. ಇದರಲ್ಲಿ ಬಳಸಲಾಗುವ ಯೀಸ್ಟ್ ಕೂಡ ದೇಹಕ್ಕೆ ಹಾನಿಕಾರಕವಾಗಿದೆ.

ಪೂರ್ಣ ಕೊಬ್ಬಿನ ಹಾಲು

ಪೂರ್ಣ ಕೊಬ್ಬಿನ ಹಾಲು

ಮಧುಮೇಹಿಗಳು ಪೂರ್ಣ ಹೈನು ಉತ್ಪನ್ನಗಳನ್ನು ತ್ಯಜಿಸಲೇಬೇಕು. ಇದು ನಿಮ್ಮನ್ನು ಕೊಬ್ಬಿಸುವುದರೊಂದಿಗೆ ಮಧುಮೇಹ ಕಾಯಿಲೆಗೂ ಅಪಾಯವನ್ನು ತಂದೊಡ್ಡುತ್ತದೆ.

ಹುರಿದ ಮೀನು ಅಥವಾ ಮಾಂಸ

ಹುರಿದ ಮೀನು ಅಥವಾ ಮಾಂಸ

ಹುರಿದ ಪದಾರ್ಥಗಳಲ್ಲಿ ಹೆಚ್ಚವರಿ ಎಣ್ಣೆ ಅಂಶವನ್ನು ನೀವು ಕಾಣಬಹುದು. ಇದನ್ನು ಮೈದಾ ಅಥವಾ ಕಾರ್ನ್ ಫ್ಲೋರ್‌ನಲ್ಲಿ ಅದ್ದಿ ತಯಾರಿಸಲಾಗುತ್ತದೆ. ಇದನ್ನು ಚೆನ್ನಾಗಿ ಹುರಿಯುವುದರಿಂದ ನಿಮ್ಮ ರಕ್ತದಲ್ಲಿನ ಕೊಬ್ಬನ್ನು ಅಧಿಕಗೊಳಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುವುದು ಖಂಡಿತ.

ಬಿಸ್ಕತ್ತುಗಳು

ಬಿಸ್ಕತ್ತುಗಳು

ಹೆಚ್ಚಿನ ಎಲ್ಲಾ ಬಿಸ್ಕತ್ತುಗಳು ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿರುತ್ತದೆ. ನೀವು ಪೂರ್ಣ ಪ್ರಮಾಣದ ಗೋಧಿ ಬಿಸ್ಕತ್ತುಗಳನ್ನು ಸೇವಿಸುವುದಾದರೆ ಏನೂ ಸಮಸ್ಯೆಯಿಲ್ಲ. ಆದರೆ ಇತರ ಬಿಸ್ಕಟ್‌ಗಳನ್ನು ಸೇವಿಸಬಾರದು.

ಸೋಡಾ ಪಾನೀಯಗಳು

ಸೋಡಾ ಪಾನೀಯಗಳು

ಸೋಡಾ ಮತ್ತು ಕಾಫಿ ಅಂಶಗಳನ್ನು ಕ್ರೀಮ್, ಸಕ್ಕರೆ ಮತ್ತು ಇತರ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚವರಿ ಪ್ರಮಾಣದ ನ್ಯೂಟ್ರಿಶನಲ್ ಮೌಲ್ಯವನ್ನು ಒಳಗೊಂಡಿರುತ್ತದೆ.

ಬೀನ್ಸ್

ಬೀನ್ಸ್

ಬೀನ್ಸ್‌ಗಳಲ್ಲಿ ಹೆಚ್ಚವರಿ ಪಿಷ್ಟದ ಅಂಶ ಇರುತ್ತದೆ. ಇವುಗಳು ಸಿಹಿ ಅಥವಾ ಸಕ್ಕರೆ ಪ್ರಮಾಣ ಕಡಿಮೆ ಇರಬಹುದು. ಆದರೆ ಪಿಷ್ಟದ ಹೆಚ್ಚುವರಿ ಸೇವನೆಯು ನಿಮಗೆ ಒಳ್ಳೆಯದಲ್ಲ.

ಬರ್ಗರ್

ಬರ್ಗರ್

ಹ್ಯಾಮ್‌ಬರ್ಗರ್, ವ್ರೇಪ್ಸ್ ಮತ್ತು ಹಾಟ್ ಡಾಗ್ಸ್ ಅನ್ನು ಬನ್‌ನಿಂದ ತಯಾರಿಸಲಾಗುತ್ತದೆ ಇವುಗಳು ಹೆಚ್ಚುವರಿ ಕೊಬ್ಬನ್ನು ಒಳಗೊಂಡಿರುತ್ತದೆ. ಬರ್ಗರ್ ಪ್ಯಾಟಿಯನ್ನು ಕೂಡ ಚೆನ್ನಾಗಿ ಹುರಿದಿರುವುದರಿಂದ ನಿಮ್ಮ ತೂಕ ಹೆಚ್ಚಾಗುವಂತೆ ಇದು ಮಾಡುತ್ತದೆ. ಆದ್ದರಿಂದ ಈ ಆಹಾರ ಮಧುಮೇಹಿಗಳಿಗೆ ಅಷ್ಟೊಂದು ಒಳ್ಳೆಯದಲ್ಲ.

ಸಿಹಿ ಸಾಸ್

ಸಿಹಿ ಸಾಸ್

ಕೆಲವೊಂದು ಸಾಸ್‌ಗಳು ಹೆಚ್ಚುವರಿ ಕ್ಯಾಲೋರಿ ಅಂಶವನ್ನು ಒಳಗೊಂಡಿರುತ್ತದೆ. ಇದು ಸಿಹಿಯಿಂದ ಕೂಡ ಕೂಡಿರುತ್ತದೆ. ಮಧುಮೇಹಿಗಳು ಟೊಮೇಟೋ ಕೆಚಪ್ ಅನ್ನು ಕೂಡ ತ್ಯಜಿಸುವುದು ಅನಿವಾರ್ಯವಾಗಿದೆ ಏಕೆಂದರೆ ಇದು ಹೆಚ್ಚುವರಿ ಸಿಹಿಯನ್ನು ಒಳಗೊಂಡಿದೆ.

ಸಪೋಟ ಹಣ್ಣು

ಸಪೋಟ ಹಣ್ಣು

ಸಪೋಟ ಹಣ್ಣಿನಲ್ಲಿ ಜಿ ಐ (ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯ 55 ಕ್ಕಿಂತ ಅಧಿಕವಿರುವುದರಿಂದ ಇದು ಮಧುಮೇಹ ಕಾಯಿಲೆ ಇರುವವರ ಆರೋಗ್ಯಕ್ಕೆ ಉತ್ತಮವಲ್ಲ. ಚಿಕ್ಕು ಹಣ್ಣಿನಲ್ಲಿ ಸಕ್ಕರೆ ಮತ್ತು ಕರ್ಬೋಹೈಡ್ರೇಟ್ ಅಂಶ ಅಧಿಕವಿರುತ್ತದೆ.

English summary

Foods That Diabetics Should Avoid

Diabetes is one of the most deadly diseases. It is a chronic disease that cannot be cured; it can only be contained. Here are some of the foods that diabetics should steer clear from in order to stay healthy. 
X
Desktop Bottom Promotion