For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಿಸಲು 30 ಸಲಹೆಗಳು

|

ಸಕ್ಕರೆ ಕಾಯಿಲೆ ಎಲ್ಲೆಲ್ಲೂ ಪ್ರವರ್ಧಮಾನಕ್ಕೆ ಬಂದಿರುವ ಶ್ರೀಮಂತ ಕಾಯಿಲೆ. ಹೌದು ಬರಿಯ ಶ್ರೀಮಂತರನ್ನು ಮಾತ್ರ ಕಾಡಿಸುತ್ತಿದ್ದ ಈ ಕಾಯಿಲೆ ಈಗೀಗ ಬಡವರತ್ತ ಕೂಡ ತನ್ನ ಚೂಪು ನೋಟ ಹರಿಸಿದೆ. ಆಹಾರದಲ್ಲಿ ಪಥ್ಯ ಮಾಡುತ್ತಾ ಸಿಹಿತಿಂಡಿ ಕಣ್ಣೆದುರೇ ಇದ್ದರೂ ತಿನ್ನಲಾಗದಂತಹ ಸ್ಥಿತಿ ಈ ಸಕ್ಕರೆ ಕಾಯಿಲೆ ಉಂಟು ಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಧುಮೇಹಿಗಳಿಗಾಗಿ ಪೋಷಕಾಂಶ ಭರಿತ ಸಸ್ಯಾಹಾರಿ

ಮಧುಮೇಹ ಕಾಯಿಲೆಯ ಪ್ರಮಾಣ ಆಧುನಿಕ ಜೀವನ ಶೈಲಿಯಿಂದಾಗಿ ಹೆಚ್ಚಾಗುತ್ತಿದೆ. ಹಾಗಾಗಿ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಉಪಕಾರಿಯಾಗಿದೆ.

ಸಸ್ಯಾಹಾರಿ ಮಧುಮೇಹಿಗಳಿಗೆ ಆಹಾರಗಳು ವೈವಿಧಯಮಯವಾಗಿ ಇರುವುದಿಲ್ಲ. ಬರಿಯ ತರಕಾರಿಗಳಲ್ಲೇ ವಿವಿಧತೆಯನ್ನು ಮಾಡಿಕೊಂಡು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲುಟ್ಟುಕೊಳ್ಳಬೇಕು.

ಅದಕ್ಕೆಂದೇ ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಕೆಲವೊಂದು ಆರೋಗ್ಯಕರ ಆಹಾರ ಕ್ರಮವನ್ನು ಹಂಚಿಕೊಳ್ಳುತ್ತಿದೆ. ವಿಶೇಷವಾಗಿ ಸಕ್ಕರೆ ಕಾಯಿಲೆಯುಳ್ಳ ಸಸ್ಯಾಹಾರಿಗಳನ್ನು ಮನದಲ್ಲಿಟ್ಟುಕೊಂಡೇ ಈ ಆಹಾರ ತಯಾರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಧುಮೇಹಿಗಳಿಗೆ ಪಾದಗಳ ಊತ ಕಡಿಮೆಗೊಳಿಸಿಕೊಳ್ಳಲು 7 ಟಿಪ್ಸ್

ಬದನೆ:

ಬದನೆ:

ಮಧುಮೇಹಿಗಳು ತಮ್ಮ ಆಹಾರದಲ್ಲಿ ಬದನೆಯನ್ನು ಬಳಸಿಕೊಳ್ಳಬೇಕು ಹಸಿಯಾಗಿ ತಿಂದರೂ ಇದು ತುಂಬಾ ಪರಿಣಾಮಕಾರಿ. ಹಸಿ ತಿನ್ನುವುದು ನಿಮಗೆ ಕಷ್ಟವಾಗಿದ್ದರೆ ಅದನ್ನು ಬೇಯಿಸಿಕೊಂಡು ತಿನ್ನಿ.

ಸ್ಪಿಂಚ್ / ಪಾಲಾಕ್:

ಸ್ಪಿಂಚ್ / ಪಾಲಾಕ್:

ಸಕ್ಕರೆ ಕಾಯಿಲೆ ವ್ಯಕ್ತಿಗಳು ಪಲಾಕ್ ಅನ್ನು ಸೇವಿಸಲೇಬೇಕು. ಪಾಲಾಕ್ ಸ್ವಲ್ಪ ಕಹಿಯಾಗಿರುತ್ತದೆ ಆದರೆ ಅದು ಒಳಗೊಂಡಿರುವ ಪ್ರೊಟೀನ್ ದೇಹಕ್ಕೆ ಉತ್ತಮ.

 ನುಗ್ಗೆಸೊಪ್ಪು:

ನುಗ್ಗೆಸೊಪ್ಪು:

ಮಧುಮೇಹವನ್ನು ನಿಯಂತ್ರಣದಲ್ಲಿಡುವ ಒಂದು ಸಾಂಪ್ರದಾಯಿಕ ಸಸ್ಯ ನುಗ್ಗೆಸೊಪ್ಪಾಗಿದೆ. ಇದನ್ನು ಬಳಸಿ ಸಲಾಡ್ ಮಾಡಿಕೊಂಡು ಅನ್ನದೊಂದಿಗೆ ಸವಿಯಿರಿ.

ಎಳ್ಳಿನ ಬೀಜಗಳು:

ಎಳ್ಳಿನ ಬೀಜಗಳು:

ಎಳ್ಳಿನ ಬೀಜಗಳು ಹೇರಳವಾಗಿ ಪ್ರೋಟೀನ್, ಕಹಿ ಅಂಶವನ್ನು ಅಡಗಿಸಿಕೊಂಡಿವೆ. ಸಕ್ಕರೆ ಕಾಯಿಲೆಗೆ ಇದೊಂದು ಒಳ್ಳೆಯ ಔಷಧ.

ಸಬ್ಬಸಿಗೆ:

ಸಬ್ಬಸಿಗೆ:

ಸಬ್ಬಸಿಗೆ ಸೊಪ್ಪಿನಲ್ಲಿರುವ ಎಣ್ಣೆ ಅಂಶವು ಕಾರ್ವೋನ್ ಸಂಯುಕ್ತವನ್ನೊಳಗೊಂಡಿದೆ. ಮಧುಮೇಹಿಗಳಿಗಾಗಿ ಇದೊಂದು ಉತ್ತಮ ಸಿದ್ಧೌಷಧ.

ದಾಂಡೆಲಿಯನ್ ಗ್ರೀನ್ಸ್:

ದಾಂಡೆಲಿಯನ್ ಗ್ರೀನ್ಸ್:

ಸಕ್ಕರೆ ಪ್ರಮಾಣವನ್ನು ವೇಗವಾಗಿ ತಗ್ಗಿಸುವ ದಾಂಡೆಲಿಯನ್ ಗ್ರೀನ್ಸ್ ಮಧುಮೇಹಕ್ಕೆ ರಾಮಬಾಣವಾಗಿದೆ. ತೂಕವನ್ನು ನಿಯಂತ್ರಣದಲ್ಲಿರಿಸಿ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.

ಅರ್ಗುಲಾ:

ಅರ್ಗುಲಾ:

ನಿಮ್ಮ ಪಿತ್ತವನ್ನು ನಿಯಂತ್ರಣದಲ್ಲಿಡಲು ಈ ತರಕಾರಿ ಸಹಕಾರಿ. ಇದಲ್ಲದೆ ದೇಹದಲ್ಲಿರುವ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸಿ ನಿಮ್ಮನ್ನು ಆರೋಗ್ಯಗೊಳಿಸುತ್ತದೆ.

ಮೆಂತೆ:

ಮೆಂತೆ:

ಸಕ್ಕರೆ ಮಟ್ಟವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಮೆಂತೆ ಸಹಕಾರಿಯಾಗಿದೆ. ನೀವು ಮಧುಮೇಹಿಯಾಗಿದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ಮೆಂತೆಯ ಪ್ರಮಾಣ ಹೆಚ್ಚಿರಲಿ.

ಕೋಸುಗಡ್ಡೆ:

ಕೋಸುಗಡ್ಡೆ:

ಎಲೆಗಳಿರುವ ಕಹಿ ಇರುವ ಕೋಸುಗಡ್ಡೆ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿದೆ. ಇದು ರೋಗನಿರೋಧ ಶಕ್ತಿಯನ್ನು ವರ್ಧಿಸಿ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಹಾಗಲಕಾಯಿ:

ಹಾಗಲಕಾಯಿ:

ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಸೇಬು:

ಸೇಬು:

ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರವಿಡುತ್ತದೆ ಇದು ತುಂಬಾ ಜನಪ್ರಿಯ ನುಡಿ ಮತ್ತು ನಿಜವೂ ಹೌದು. ಸೇಬು ಸೇವನೆಯಿಂದ ಡಯಾಬಿಟಿಸ್ ನ್ನು ತಡೆಯಬಹುದು. ಕಡಿಮೆ ಕ್ಯಾಲರಿ ಮತ್ತು ಗರಿಷ್ಠ ಮಟ್ಟದಲ್ಲಿ ನಾರಿನಾಂಶ ಹೊಂದಿರುವ ಸೇಬು ಡಯಾಬಿಟಿಸ್ ಆಹಾರ ಕ್ರಮದಲ್ಲಿ ಅದ್ಭುತ ಆಹಾರ. ಸೇಬಿನ ಸಿಪ್ಪೆ ತೆಗೆಯದೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಮೀನುಗಳು:

ಮೀನುಗಳು:

ಮೀನುಗಳು ಡಯಾಬಿಟಿಸ್ ಆಹಾರ ಕ್ರಮದಲ್ಲಿ ಒಮೆಗಾ 3 ಪ್ಯಾಟಿ ಆ್ಯಸಿಡ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದನ್ನು ಎಲ್ಲಿ ಪಡೆಯಬಹುದು? ಸಾಲ್ಮನ್, ಸಾರ್ಡೈನ್, ಮಾರ್ಕೆಲ್ ಇತ್ಯಾದಿ ಮೀನುಗಳಿಂದ ಇದನ್ನು ಪಡೆಯಬಹುದು. ಇವುಗಳು ತುಂಬಾ ರುಚಿಯಾಗಿರುತ್ತದೆ ಮತ್ತು ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ.

ಹಸಿರು ತರಕಾರಿ:

ಹಸಿರು ತರಕಾರಿ:

ಹಸಿರು ತರಕಾರಿ ತಿನ್ನಿ ಡಯಾಬಿಟಿಸ್ ತಡೆಯಲು ಒಳ್ಳೆಯ ದಾರಿಯೆಂದರೆ ಹಸಿರಾಗಿರುವ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರದಲ್ಲಿಡಲು ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಡಯಾಬಿಟಿಸ್ ನಿಂದ ಕಣ್ಣಿಗೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಅಧಿಕವಾಗಿರುವ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಓಟ್ ಮೀಲ್:

ಓಟ್ ಮೀಲ್:

ಓಟ್ ಮೀಲ್ ಪ್ರಯತ್ನಿಸಿ ಡಯಾಬಿಟಿಸ್ ನ್ನು ದೂರ ಮಾಡಲು ಪ್ರತೀದಿನ ಓಟ್ ಮೀಲ್ ಉಪಾಹಾರ ಸೇವನೆ ಮಾಡಿ. ಓಟ್ ಮೀಲ್ ನಲ್ಲಿ ಹೆಚ್ಚಿನ ನಾರಿನಾಂಶವಿದೆ ಮತ್ತು ಇದರಲ್ಲಿರುವ ಕಾರ್ಬ್ ಗಳು ರಕ್ತದ ಸಕ್ಕರೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ಪ್ರತೀ ದಿನ ಓಟ್ ಮೀಲ್ ಉಪಹಾರ ಸೇವಿಸಿ.

ಟೀ ಕುಡಿಯಿರಿ:

ಟೀ ಕುಡಿಯಿರಿ:

ನೀವು ಟೀ ಪ್ರಿಯರಾಗಿದ್ದರೆ ಇಲ್ಲೊಂದು ನಿಮಗೆ ಒಳ್ಳೆಯ ಸುದ್ದಿಯಿದೆ. ಚಹಾದಲ್ಲಿ ಟ್ಯಾನಿನ್ ಮತ್ತು ಕ್ಯಾಟ್ಚಿನ್ಸ್ ಗಳಿರುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರಿಂದ ಚಹಾ ಕುಡಿಯಿರಿ ಮತ್ತು ಡಯಾಬಿಟಿಸಿ ದೂರವಾಗಿಸಿ.

ಹಣ್ಣಿನ ಆಹಾರ ಕ್ರಮ:

ಹಣ್ಣಿನ ಆಹಾರ ಕ್ರಮ:

ಡಯಾಬಿಟಿಸ್‌ನ್ನು ದೂರ ಮಾಡಬೇಕಾದರೆ ನೀವು ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ವಿಟಾಮಿನ್ ಸಿ ಹೆಚ್ಚಾಗಿರುವಂತಹ ಸಿಟ್ರಸ್ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿ. ವಿಟಾಮಿನ್ ಸಿ ಇರುವ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿರುತ್ತದೆ ಮತ್ತು ಇದು ಮುಕ್ತ ಮೂಲಸ್ವರೂಪ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ನೆರವಾಗುತ್ತದೆ.

ಕ್ಯಾರೆಟ್ :

ಕ್ಯಾರೆಟ್ :

ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

ಆಲಿವ್ ಎಣ್ಣೆ:

ಆಲಿವ್ ಎಣ್ಣೆ:

ಆಲಿವ್ ಎಣ್ಣೆ ಪ್ರಯತ್ನಿಸಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಲಿವ್ ತೈಲ ಡಯಾಬಿಟಿಸ್‌ನ್ನು ತಡೆಯಲು ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಆಲಿವ್ ಎಣ್ಣೆಯಲ್ಲಿರುವ ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿ ನೀಡಲು ಆಲಿವ್ ತೈಲವನ್ನು ಬಳಸಿ.

ಬೀಜಗಳು ಒಳ್ಳೆಯದು:

ಬೀಜಗಳು ಒಳ್ಳೆಯದು:

ಬೀಜಗಳು ಡಯಾಬಿಟಿಸ್ ಆಹಾರ ಕ್ರಮದ ಒಂದು ಭಾಗ. ಬೀಜಗಳನ್ನು ಸೇವಿಸುವುದು ಕೇವಲ ಆರೋಗ್ಯಕರ ಮಾತ್ರವಲ್ಲದೆ, ಹೃದಯ ಸಂಬಂಧಿ ರೋಗಗಳಿಗೂ ಪ್ರತಿರೋಧವನ್ನು ಒಡ್ಡುತ್ತದೆ. ಇದು ಹೆಚ್ಚಿನ ಪ್ರೋಟೀನ್ ಮತ್ತು ನಾರಿನಾಂಶ ಹೊಂದಿದೆ.

ಫೈಟೋನ್ಯೂಟ್ರಿಯೆಂಟ್ಸ್ ಬಳಸಿ:

ಫೈಟೋನ್ಯೂಟ್ರಿಯೆಂಟ್ಸ್ ಬಳಸಿ:

ಬೀನ್ಸ್‌ನಲ್ಲಿ ಫೈಟೋ ಪೋಷಕಾಂಶಗಳಿರುತ್ತದೆ. ಪ್ರೋಟೀನ್ ಅಧಿಕವಾಗಿರುವ ಬೇಯಿಸಿದ ಬೀನ್ಸ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದು ತುಂಬಾ ರುಚಿಕರ ಮತ್ತು ಆರೋಗ್ಯಕರ. ಇದನ್ನೊಮ್ಮೆ ಪ್ರಯತ್ನಿಸಿ.

ಹಾಗಲಕಾಯಿ ಸುಕ್ಕಾ:

ಹಾಗಲಕಾಯಿ ಸುಕ್ಕಾ:

ಇದೊಂದು ಸರಳ ಮತ್ತು ತ್ವರಿತವಾಗಿ ಮಾಡಲ್ಪಡುವ ಡಿಶ್ ಆಗಿದೆ. ಹಾಗಲಕಾಯಿಯ ಕಹಿ ಅಂಶವನ್ನು ತೆಗೆದು ಈ ರೆಸಿಪಿಯನ್ನು ಮಾಡಲಾಗುತ್ತದೆ. ಹಾಗಲಕಾಯಿಯನ್ನು ಉಪ್ಪಿನಲ್ಲಿ ನೆನೆಸಿಟ್ಟಾಗ ಅದರ ಕಹಿ ಮಾಯವಾಗುತ್ತದೆ ನಂತರ ಈರುಳ್ಳಿ ಮತ್ತು ತರಕಾರಿಗಳನ್ನು ಮಿಶ್ರ ಮಾಡಿಕೊಂಡು ರುಚಿಯಾದ ಸುಕ್ಕಾ ತಯಾರಿಸಬಹುದು.

ದಾಲ್ ಕಬೀಲಾ:

ದಾಲ್ ಕಬೀಲಾ:

ದಾಲ್ ಕಬೀಲಾ ಎಂದೇ ಹೆಸರುಳ್ಳ ಮಧುಮೇಹಿ ಸಸ್ಯಾಹಾರಿ ಡಿಶ್ ಇದಾಗಿದೆ. ಇದೊಂದು ಮುಘಲಯ್ ಸಿಸ್ವನ್ ಆಗಿದ್ದು ಮಧುಮೇಹಿಗಳನ್ನು ಲಕ್ಷ್ಯವಾಗಿಟ್ಟುಕೊಂಡು ಸಿದ್ದಪಡಿಸಲಾದ ದಾಲ್ ಆಗಿದೆ.

ಕುಂಬಳಕಾಯಿ ಸೂಪ್:

ಕುಂಬಳಕಾಯಿ ಸೂಪ್:

ಕುಂಬಳಕಾಯಿ ಮಧುಮೇಹಿಗಳಿಗೆ ತುಂಬಾ ಉತ್ತಮವಾದುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮಧುಮೇಹಿಗಳ ಸಕ್ಕರೆ ಪ್ರಮಾಣವನ್ನು ಏರಿಸುವುದಿಲ್ಲ.

ಲಿಂಬೆ ಓಟ್ಸ್ ರೆಸಿಪಿ:

ಲಿಂಬೆ ಓಟ್ಸ್ ರೆಸಿಪಿ:

ಲಿಂಬೆ ಓಟ್ಸ್ ಅನ್ನು ಬೆಳಗ್ಗಿನ ಸಮಯದಲ್ಲಿ ನೀವು ಸೇವಿಸುವುದು ದೇಹಕ್ಕೆ ಉತ್ತಮವಾದುದು.

ಸ್ಟಫ್‌ಡ್ ಹಾಗಲಕಾಯಿ:

ಸ್ಟಫ್‌ಡ್ ಹಾಗಲಕಾಯಿ:

ಈ ಸ್ಟಫ್ಡ್ ಹಾಗಲಕಾಯಿಯನ್ನು 30 ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಮಧುಮೇಹಿಗಳಿಗೆ ಉತ್ತಮವಾಗಿರುವ ಹಾಗಲಕಾಯಿಯ ಈ ರೆಸಿಪಿ ಆರೋಗ್ಯಕ್ಕೆ ಒಳ್ಳೆಯದು.

ಬಟಾಣಿ ಪನ್ನೀರ್ ಕರಿ:

ಬಟಾಣಿ ಪನ್ನೀರ್ ಕರಿ:

ಮಧುಮೇಹಿಗಳಿಗೆ ಆರೋಗ್ಯಕರವಾಗಿರುವ ಬಟಾಣಿ ಪನ್ನೀರ್ ಕರಿ ನೈಸರ್ಗಿಕವಾಗಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಕುಂಬಳಕಾಯಿ ಶುಂಠಿ ಬ್ರೆಡ್:

ಕುಂಬಳಕಾಯಿ ಶುಂಠಿ ಬ್ರೆಡ್:

ನಿಮಗೆ ಬ್ರೆಡ್ ತಿನ್ನಬೇಕೆಂಬ ಬಯಕೆ ಆದಾಗಲೆಲ್ಲಾ ಈ ಆರೋಗ್ಯಕರ ಕುಂಬಳಕಾಯಿ ಬ್ರೆಡ್ ಸವಿಯಿರಿ. ಇದು ಸಕ್ಕರೆ ಕಾಯಿಲೆಗೆ ಉತ್ತಮ ಆಹಾರವಾಗಿದೆ.

ಚೀಸ್ ಕ್ಯಾಪ್ಸಿಕಂ ಪರಾಟ:

ಚೀಸ್ ಕ್ಯಾಪ್ಸಿಕಂ ಪರಾಟ:

ಕ್ಯಾಪ್ಸಿಕಂ ರಕ್ತದಲ್ಲಿನ ಸಕ್ಕರೆಯನ್ನು ಇದು ನಿಯಂತ್ರಣದಲ್ಲಿಡುವುದರಿಂದ ಮಧುಮೇಹಿಗಳಿಗೆ ಕ್ಯಾಪ್ಸಿಕಂ ಚೀಸ್ ಪರಾಟ ಉತ್ತಮವಾಗಿದೆ.

ಬದನೆ ಬರ್ತಾ:

ಬದನೆ ಬರ್ತಾ:

ಬದನೆ ಕೂಡ ಮಧುಮೇಹಿಗಳಿಗೆ ಉತ್ತಮ ನ್ಯೂಟ್ರಿಶಿಯನ್ ಆಹಾರವಾಗಿರುವುದರಿಂದ ಇದನ್ನು ನಿತ್ಯದ ಆಹಾರದಲ್ಲಿ ಬಳಸಬಹುದಾಗಿದೆ.

ಸೌತೆಕಾಯಿ ಚನ್ನಾ ದಾಲ್:

ಸೌತೆಕಾಯಿ ಚನ್ನಾ ದಾಲ್:

ಇದೊಂದು ಆರೋಗ್ಯಕರ ಆಹಾರವಾಗಿದ್ದು ಮಧುಮೇಹಿಗಳಿಗೆ ಉತ್ತಮವಾಗಿದೆ.

ಕುಂಬಳಕಾಯಿ ರೆಸಿಪಿ:

ಕುಂಬಳಕಾಯಿ ರೆಸಿಪಿ:

ಕುಂಬಳಕಾಯಿ ಡ್ರೈ ಕರಿ ಇದಾಗಿದ್ದು ಮಧುಮೇಹಿಗಳಿಗೆ ಆರೋಗ್ಯಪೂರ್ಣವಾಗಿದೆ.

ಓಟ್ಸ್ ಮಸಾಲಾ ಇಡ್ಲಿ:

ಓಟ್ಸ್ ಮಸಾಲಾ ಇಡ್ಲಿ:

ಓಟ್ಸ್ ಮಿಶ್ರಿತ ಇಡ್ಲಿ ಮತ್ತು ದೋಸಾಗಳೂ ರುಚಿಕರ ಹಾಗೂ ದೇಹಕ್ಕೆ ಆರೋಗ್ಯಪೂರ್ಣವಾಗಿವೆ.

English summary

Control diabetes with diet Food

If you want to control diabetes, then you will have to change your unhealthy lifestyle. You have to do regular exercise, should eat more fiber food. Here we mentioned such kind of diet Food which should be control diabetes
X
Desktop Bottom Promotion