For Quick Alerts
ALLOW NOTIFICATIONS  
For Daily Alerts

ಮಧುಮೇಹಕ್ಕಾಗಿ ಕಹಿ ಆಹಾರಗಳು : ಪ್ರಯೋಜನಗಳು

|

ಮಧುಮೇಹಿಗಳಿಗೆ ಸಕ್ಕರೆ ವರ್ಜ್ಯವಾಗಿರುವುದರಿಂದ ಕಹಿ ಪದಾರ್ಥವನ್ನೇ ಸಿಹಿಯಾಗಿಸಿಕೊಳ್ಳಬೇಕು. ಇವುಗಳು ಅವರ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇವಿಸುವುದರಿಂದ ನೀವು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಕೆಳಗೆ ನೀಡಿರುವ ಕಹಿ ಪದಾರ್ಥಗಳು ಸಾಮಾನ್ಯವಾಗಿ ನಮಗೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರ ನಿತ್ಯದ ಸೇವನೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ.

ಈ ಕಹಿ ಆಹಾರಗಳು ನಿಮ್ಮ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಹಿ ಪದಾರ್ಥಗಳು ನಿಮ್ಮ ಜೀವನದಲ್ಲಿ ಸಿಹಿಯ ಕ್ಷಣವನ್ನು ತರುವುದಂತೂ ಖಂಡಿತ.

ಇಂದು ನಿಮಗಾಗಿ ಕೆಲವೊಂದು ಕಹಿ ವಸ್ತುಗಳ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ, ಅದರ ಬಳಕೆಯನ್ನು ಮಾಡಿಕೊಂಡು ಸಕ್ಕರೆ ಕಾಯಿಲೆಯನ್ನು ನಿಮ್ಮಿಂದ ದೂರವಿರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಹಿ ಬಯಕೆ ನಿಯಂತ್ರಿಸಲು ಟಿಪ್ಸ್: ಡಯಾಬಿಟಿಸ್ ವಿಶೇಷ

ಹಾಗಲಕಾಯಿ:

ಹಾಗಲಕಾಯಿ:

ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಕೋಸುಗಡ್ಡೆ:

ಕೋಸುಗಡ್ಡೆ:

ಎಲೆಗಳಿರುವ ಕಹಿ ಇರುವ ಕೋಸುಗಡ್ಡೆ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿದೆ. ಇದು ರೋಗನಿರೋಧ ಶಕ್ತಿಯನ್ನು ವರ್ಧಿಸಿ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಮೆಂತೆ:

ಮೆಂತೆ:

ಸಕ್ಕರೆ ಮಟ್ಟವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಮೆಂತೆ ಸಹಕಾರಿಯಾಗಿದೆ. ನೀವು ಮಧುಮೇಹಿಯಾಗಿದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ಮೆಂತೆಯ ಪ್ರಮಾಣ ಹೆಚ್ಚಿರಲಿ.

ಅರ್ಗುಲಾ:

ಅರ್ಗುಲಾ:

ನಿಮ್ಮ ಪಿತ್ತವನ್ನು ನಿಯಂತ್ರಣದಲ್ಲಿಡಲು ಈ ತರಕಾರಿ ಸಹಕಾರಿ. ಇದಲ್ಲದೆ ದೇಹದಲ್ಲಿರುವ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸಿ ನಿಮ್ಮನ್ನು ಆರೋಗ್ಯಗೊಳಿಸುತ್ತದೆ.

ದಾಂಡೆಲಿಯನ್ ಗ್ರೀನ್ಸ್:

ದಾಂಡೆಲಿಯನ್ ಗ್ರೀನ್ಸ್:

ಸಕ್ಕರೆ ಪ್ರಮಾಣವನ್ನು ವೇಗವಾಗಿ ತಗ್ಗಿಸುವ ದಾಂಡೆಲಿಯನ್ ಗ್ರೀನ್ಸ್ ಮಧುಮೇಹಕ್ಕೆ ರಾಮಬಾಣವಾಗಿದೆ. ತೂಕವನ್ನು ನಿಯಂತ್ರಣದಲ್ಲಿರಿಸಿ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.

ಸಬ್ಬಸಿಗೆ:

ಸಬ್ಬಸಿಗೆ:

ಸಬ್ಬಸಿಗೆ ಸೊಪ್ಪಿನಲ್ಲಿರುವ ಎಣ್ಣೆ ಅಂಶವು ಕಾರ್ವೋನ್ ಸಂಯುಕ್ತವನ್ನೊಳಗೊಂಡಿದೆ. ಮಧುಮೇಹಿಗಳಿಗಾಗಿ ಇದೊಂದು ಉತ್ತಮ ಸಿದ್ಧೌಷಧ.

ಎಳ್ಳಿನ ಬೀಜಗಳು:

ಎಳ್ಳಿನ ಬೀಜಗಳು:

ಎಳ್ಳಿನ ಬೀಜಗಳು ಹೇರಳವಾಗಿ ಪ್ರೋಟೀನ್, ಕಹಿ ಅಂಶವನ್ನು ಅಡಗಿಸಿಕೊಂಡಿವೆ. ಸಕ್ಕರೆ ಕಾಯಿಲೆಗೆ ಇದೊಂದು ಒಳ್ಳೆಯ ಔಷಧ.

ನುಗ್ಗೆಸೊಪ್ಪು:

ನುಗ್ಗೆಸೊಪ್ಪು:

ಮಧುಮೇಹವನ್ನು ನಿಯಂತ್ರಣದಲ್ಲಿಡುವ ಒಂದು ಸಾಂಪ್ರದಾಯಿಕ ಸಸ್ಯ ನುಗ್ಗೆಸೊಪ್ಪಾಗಿದೆ. ಇದನ್ನು ಬಳಸಿ ಸಲಾಡ್ ಮಾಡಿಕೊಂಡು ಅನ್ನದೊಂದಿಗೆ ಸವಿಯಿರಿ.

ಸ್ಪಿಂಚ್ / ಪಾಲಾಕ್

ಸ್ಪಿಂಚ್ / ಪಾಲಾಕ್

ಸಕ್ಕರೆ ಕಾಯಿಲೆ ವ್ಯಕ್ತಿಗಳು ಪಲಾಕ್ ಅನ್ನು ಸೇವಿಸಲೇಬೇಕು. ಪಾಲಾಕ್ ಸ್ವಲ್ಪ ಕಹಿಯಾಗಿರುತ್ತದೆ ಆದರೆ ಅದು ಒಳಗೊಂಡಿರುವ ಪ್ರೊಟೀನ್ ದೇಹಕ್ಕೆ ಉತ್ತಮ.

ಆರೆಂಜ್ ಸಿಪ್ಪೆ:

ಆರೆಂಜ್ ಸಿಪ್ಪೆ:

ಮಧುಮೇಹಿಗಳಿಗಾಗಿ ಒಂದು ಉತ್ತಮ ಕಹಿ ಹುಳಿ ಅಂಶವುಳ್ಳ ವಸ್ತುವಾಗಿದೆ ಆರೆಂಜ್ ಸಿಪ್ಪೆ. ಇದು ಮಧುಮೇಹ ನಿಯಂತ್ರಣಕ್ಕೆ ರಾಮಬಾಣವಾಗಿದೆ.

English summary

Bitter Foods For Diabetes: Benefits

When it comes to a diabetic patient, there are more than a million things which they have to refrain from eating. However, with the introduction of some healthy bitter foods for diabetes, you can now keep your sugar in control the natural way.
Story first published: Thursday, January 16, 2014, 16:08 [IST]
X
Desktop Bottom Promotion