For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಸೇವನೆಯ 5 ಆರೋಗ್ಯಕರ ಕಾರಣಗಳು

|

ದಕ್ಷಿಣ ಆಫ್ರಿಕಾ ಮೂಲವಾದ ಕಲ್ಲಂಗಡಿ ವಿಟಮಿನ್ ಭರಿತವಾದ ಹಣ್ಣಾಗಿದೆ. ವಿಟಮಿನ್ ಎ, ಬಿ6 ಮತ್ತು ಸಿ ಯನ್ನು ಒಳಗೊಂಡಿರುವ ಕಲ್ಲಂಗಡಿ ಬಹುವಿಟಮಿನ್ ಅಂಶದಿಂದ ಕೂಡಿದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ದೇಹಕ್ಕೆ ಚೈತನ್ಯವನ್ನುಂಟು ಮಾಡುತ್ತದೆ. ಇತರ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ ಕೊಬ್ಬು ಮುಕ್ತ ನೈಸರ್ಗಿಕ ಕೊಡುಗೆಯಾಗಿದೆ.

ಕೊಲೆಸ್ಟ್ರಾಲ್ ಅಂಶವಿಲ್ಲದ ದೇಹಕ್ಕೆ ಶಕ್ತಿಯನ್ನು ಒದಗಿಸುವ ವಿಟಮಿನ್ ಭರಿತ ಹಣ್ಣಾದ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿ. ಇದನ್ನು ಜ್ಯೂಸ್ ಅಥವಾ ಹಾಗೆ ಕೂಡ ಸೇವಿಸಬಹುದು. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಹೇರಳವಾಗಿಸಿಕೊಂಡ ಸಮೃದ್ಧ ಹಣ್ಣು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಲಸು ಆರೋಗ್ಯಕ್ಕೆ ಹೇಗೆ ಫಲಪ್ರದ

ಹೈಡ್ರೇಟ್ ಮತ್ತು ದೇಹ ಸ್ವಚ್ಛಕ:

ಹೈಡ್ರೇಟ್ ಮತ್ತು ದೇಹ ಸ್ವಚ್ಛಕ:

ಕಲ್ಲಂಗಡಿ 6% ಸಕ್ಕರೆ ಮತ್ತು 92% ನೀರನ್ನು ಒಳಗೊಂಡಿರುವ ನ್ಯೂಟ್ರೀಷಿಯನ್ ಭರಿತ ಹಣ್ಣಾಗಿದೆ. ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್‌ಗಿಂತ ಮುಂಚೆ ಹೋಮಿಯೋಪತಿ ಚಿಕಿತ್ಸೆಯಂತೆ ಕಲ್ಲಂಗಡಿಯನ್ನು ನೀಡಲಾಗುತ್ತದೆ.

ಕ್ಯಾನ್ಸರ್ ನಿರೋಧಕ:

ಕ್ಯಾನ್ಸರ್ ನಿರೋಧಕ:

ಲೈಕೋಪಿನ್ ಅಂಶ ಕಲ್ಲಂಗಡಿಯಲ್ಲಿದ್ದು, ಜನನಾಂಗ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ಗೆ ಉತ್ತಮ ಔಷಧಿಯಾಗಿದೆ.

ಪೊಟ್ಯಾಶಿಯಂ ಅತ್ಯಧಿಕವಾಗಿದೆ:

ಪೊಟ್ಯಾಶಿಯಂ ಅತ್ಯಧಿಕವಾಗಿದೆ:

ಪೊಟ್ಯಾಶಿಯಂನ ಹೇರಳ ಅಂಶ ಕಲ್ಲಂಗಡಿಯಲ್ಲಿದ್ದು, ಸ್ನಾಯು ಮತ್ತು ನರ ವ್ಯವಸ್ಥೆಯ ಸುಧಾರಣೆಯಲ್ಲಿ ಸಹಾಯ ಮಾಡುತ್ತದೆ. ಅಸ್ತಮಾ, ಅಪಧಮನಿ ಕಾಠಿಣ್ಯ, ಮಧುಮೇಹ, ಕರುಳಿನ ಕ್ಯಾನ್ಸರ್ ಮತ್ತು ಸಂಧಿವಾತವನ್ನು ದೂರವಾಗಿಸುತ್ತದೆ.

ತ್ವಚೆಯ ರಕ್ಷಣೆ:

ತ್ವಚೆಯ ರಕ್ಷಣೆ:

ನೀವು ಒಣ ತ್ವಚೆಯನ್ನು ಹೊಂದಿದ್ದರೆ ನಿಮ್ಮ ಈ ಬಗೆಯ ಸಮಸ್ಯೆಯನ್ನು ದೂರಮಾಡುವಲ್ಲಿ ಕಲ್ಲಂಗಡಿ ಉತ್ತಮ ಹಣ್ಣಾಗಿದೆ. ಇದರಲ್ಲಿರುವ ಅತ್ಯಧಿಕ ನೀರಿನ ಅಂಶ ಬಾಯಾರಿಕೆಯನ್ನು ದೂರಮಾಡಿ ನಮ್ಮನ್ನು ಹೈಡ್ರೇಟ್‌‌ನ್ನಾಗಿ ಮಾಡುತ್ತದೆ.

 ಒಣ ತ್ವಚೆಗಾಗಿ ಕಲ್ಲಂಗಡಿ ಫೇಸ್‌ಪ್ಯಾಕ್:

ಒಣ ತ್ವಚೆಗಾಗಿ ಕಲ್ಲಂಗಡಿ ಫೇಸ್‌ಪ್ಯಾಕ್:

2 ಸ್ಫೂನ್ ಕಲ್ಲಂಗಡಿ ರಸ, 2 ಟೇಸ್ಪೂನ್ ಲಿಂಬೆ ರಸ, 1 ಟೇಬಲ್‌ಸ್ಪೂನ್ ಜೇನು. ಇವುಗಳನ್ನು ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15-20 ನಿಮಿಷದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ

ನಿಮಿರುವಿಕೆಯ ನಿಷ್ಕ್ರಿಯತೆಯನ್ನು ಉಪಚರಿಸುತ್ತದೆ:

ನಿಮಿರುವಿಕೆಯ ನಿಷ್ಕ್ರಿಯತೆಯನ್ನು ಉಪಚರಿಸುತ್ತದೆ:

ಕಲ್ಲಂಗಡಿಯಲ್ಲಿರುವ ಸಿಟ್ರುಲ್ಲಿನ್, ಅಮೀನೊ ಏಸಿಡ್ ಅನ್ನು ಇನ್ನೊಂದು ಅಮೀನೊ ಏಸಿಡ್‌ ಅರ್ಜಿನೈನ್‌ನ ರಚನೆಗೆ ದೇಹದ ಮೂಲಕ ಬಳಸಲಾಗುತ್ತದೆ. ಇದರಿಂದ ದೇಹದಲ್ಲಿನ ಅಮೋನಿಯಾವನ್ನು ಹೊರಹಾಕಿ ನಿಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳನ್ನು ಮಾತ್ರ ಸಡಿಲಗೊಳಿಸದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ವಯಾಗ್ರಾದ ಒಂದು ಭಾಗವಾಗಿರುವ ನಿಟ್ರಿಕ್ ಆಕ್ಸೈಡ್ ನಿಮಿರುವಿಕೆಯ ನಿಷ್ಕ್ರಿಯತೆಯನ್ನು ನಿರ್ಬಂಧಿಸುತ್ತದೆ.

Read more about: health ಆರೋಗ್ಯ
English summary

6 Health benefits of watermelon

A watermelon contains about 6% sugar and 92% water by weight. It is a diuretic and was a homeopathic treatment for kidney patients before dialysis became widespread.
Story first published: Tuesday, February 4, 2014, 12:27 [IST]
X
Desktop Bottom Promotion