For Quick Alerts
ALLOW NOTIFICATIONS  
For Daily Alerts

ಸಕ್ಕರೆ ಖಾಯಿಲೆ ಬರುವುದಕ್ಕೆ ಮುನ್ನ ಕಾಣಿಸಿಕೊಳ್ಳಬಹುದಾದ ಐದು ಲಕ್ಷಣಗಳು

By Vani Naik
|

ನೀವು, ನಿಮಗೆ ಸಕ್ಕರೆ ಖಾಯಿಲೆ ಇದೆಯಾ ಎಂದು ತಿಳಿಯಲು ಪರೀಕ್ಷೆ ಮಾಡಿಸಿಕೊಂಡು, ಇಲ್ಲ ಎಂತಾದರೆ ನಿರಾತಂಕದ ಉಸಿರು ಬಿಟ್ಟು ಸಂತೋಷ ಪಡುತ್ತೀರಿ. ಆದರೆ ನಿಮಗೆ ಪ್ರೀ ಡೈಯಾಬಿಟೀಸ್ ಇದ್ದರೆ? ಹೌದು ದೇಹದಲ್ಲಿನ ಬ್ಲಡ್ ಗ್ಲುಕೋಸ್ ಪ್ರಮಾಣ ಡೈಯಾಬಿಟೀಸ್ ಎಂದು ಖಚಿತ ಪಡಿಸುವಷ್ಟು ಹೆಚ್ಚಾಗಿರದೆ, ಸಾಮಾನ್ಯ ಪ್ರಮಾಣಕ್ಕಿಂತ ಅಧಿಕವಾಗಿದ್ದರೆ, ಇಂತಹ ದೇಹದ ಸ್ಥಿತಿಯನ್ನು ಪ್ರೀ ಡೈಯಾಬಿಟೀಸ್ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗಿದ್ದಾರೆ. ಆದರೆ ಇಲ್ಲಿ ಬಹು ಮುಖ್ಯವಾದ ಸಮಸ್ಯೆಯೆಂದರೆ, ಸಾಕಷ್ಟು ಮಂದಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ. ಸಾಮಾನ್ಯವಾಗಿ ಪ್ರೀ ಡೈಯಾಬಿಟೀಸ್ ರೋಗಕ್ಕೆ ಲಕ್ಷಣಗಳು ಇರುವುದಿಲ್ಲ. ಆದರೆ, ಕೆಲವು ಸೂಚನೆಗಳು, ನೀವು ಈ ರೋಗಕ್ಕೆ ತುತ್ತಾಗಿದ್ದೀರೋ ಇಲ್ಲವೋ ಎಂದು ತಿಳಿಯಲು ಸಹಾಯ ಮಾಡುತ್ತದೆ. ಮುಂದೆ ಓದಿ!

5 Signs You Might Have Prediabetes

ಟೈಪ್ 2 ಡೈಯಾಬಿಟೀಸ್ ನ ಅಪಾಯದ ಸ್ಥಿತಿಯಲ್ಲಿರುವ ವರ್ಗ
ನಿಮ್ಮ ಮನೆತನದಲ್ಲಿ ಯಾರಿಗಾದರೂ ಈ ರೋಗವಿದ್ದರೆ, ಅಥವಾ ನಿಮ್ಮದು ಕೂತು ಕೆಲಸ ಮಾಡುವ ಉದ್ಯೋಗವಾಗಿದ್ದರೆ ಪ್ರೀ ಡೈಯಾಬಿಟೀಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇನ್ನು ಇದನ್ನು ಹೊರತು ಪಡಿಸಿ ಇತರ ಕಾರಣಗಳೆಂದರೆ, 45ಕ್ಕೂ ಹೆಚ್ಚು ವಯಸ್ಸಾಗಿರುವುದು ಮತ್ತು ಏಷ್ಯಾ, ಆಫ್ರಿಕಾ, ಹಿಸ್ಪಾನ್ ಹಿನ್ನಲೆ ಹೊಂದಿರುವುದು.

ಅತಿ ಹೆಚ್ಚು ತೂಕ ಹೊಂದಿರುವುದು ಅಥವಾ ಒಬೇಸ್
ದೇಹದ ಅತಿಯಾದ ತೂಕವೇ ಪ್ರೀ ಡೈಯಾಬಿಟೀಸ್ ಗೆ ಮುಖ್ಯ ಕಾರಣ. ನಿಮ್ಮ ದೇಹದ ಬಿಎಮ್ಐ (ಬಾಡಿ ಮಾಸ್ ಇಂಡೆಕ್ಸ್) 25ಕ್ಕೂ ಹೆಚ್ಚಿದ್ದರೆ ಖಚಿತವಾಗಿ ನಿಮಗೆ ಹೈ ಬ್ಲಡ್ ಷುಗರ್ ಇರುತ್ತದೆ. ದೇಹದ ಅತಿಯಾದ ತೂಕ, ಹೆಚ್ಚಿದ ರಕ್ತದೊತ್ತಡ(ಹೈ ಬಿಪಿ), ಹೈ ಕೊಲೆಸ್ಟ್ರಾಲ್, ಹೃದ್ರೋಗ ಅಥವಾ ಪಾಲಿಸಿಸ್ಟಿಕ್ ಒವರಿಯನ್ ಸಿಂಡ್ರೋಮ್ ನಂತಹ ರೋಗಗಳಿಗೆ ಕಾರಣವಾಗುತ್ತದೆ.

ಮಧುಮೇಹಿಗಳಿಗಾಗಿ ಪೋಷಕಾಂಶ ಭರಿತ ಸಸ್ಯಾಹಾರಿ

ಸಕ್ಕರೆ ಖಾಯಿಲೆಯ ಸಾಮಾನ್ಯ ಲಕ್ಷಣಗಳು
ಇದು ಪ್ರೀ ಡೈಯಾಬಿಟೀಸ್ ರೋಗದ ಅತ್ಯಂತ ಭಯಾನಕ ಭಾಗ - ಪ್ರೀ ಡೈಯಾಬಿಟೀಸ್ ರೋಗವಿರುವ ಅನೇಕ ಜನರಿಗೆ ಲಕ್ಷಣಗಳೇ ಇರುವುದಿಲ್ಲ. ಆದರೆ ಬ್ಲಡ್ ಷುಗರ್ ಪ್ರಮಾಣ ಹೆಚ್ಚು ಇರುವವರಿಗೆ ಅತಿಯಾದ ಸುಸ್ತು, ಹೆಚ್ಚು ಬಾಯಾರಿಕೆ ಆಗುತ್ತದೆ.

ನಿಮ್ಮ ತ್ವಚೆಯ ಮೇಲೆ ಕಪ್ಪು ಕಲೆಗಳು
ಪ್ರೀ ಡೈಯಾಬಿಟೀಸ್ ರೋಗದ ಸಾಮಾನ್ಯವಾದ ಲಕ್ಷಣವೆಂದರೆ ಅಕಂತೊಸಿಸ್ ನೈಗ್ರಿಕನ್ಸ್ ಎಂಬ ಚರ್ಮ ಸಮಸ್ಯೆ. ಇಂಥಹ ಸಂದರ್ಭದಲ್ಲಿ ಚರ್ಮದಲ್ಲಿ ಸುಕ್ಕು, ವಿಚಿತ್ರವಾದ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಅಕಂತೊಸಿಸ್ ನೈಗ್ರಿಕನ್ಸ್ ಸಾಮಾನ್ಯವಾಗಿ ಕುತ್ತಿಗೆಯ ಮೇಲೆ, ಮೊಣಕೈ ಒಳಗೆ, ಮಂಡಿಯ ಹಿಂಭಾಗ ಮತ್ತು ಬೆರಳಿನ ಗೆಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತದೆ.

ಮಧುಮೇಹಕ್ಕಾಗಿ ಕಹಿ ಆಹಾರಗಳು : ಪ್ರಯೋಜನಗಳು

ನಿದ್ರಾಹೀನತೆ
ನೀವು ನಿಮ್ಮನ್ನು ಅನಿದ್ರಾ ರೋಗಿ (ಇಂಸೋಮ್ನಿಯಾಕ್)ಎಂದು ಕರದುಕೊಳ್ಳುತ್ತೀರಾ? ಹಾಗಿದ್ದರೆ, ನೀವು ಪ್ರೀ ಡೈಯಾಬಿಟೀಕ್ ಕೂಡ ಆಗಿರುತ್ತೀರ. ಅಧ್ಯಯನದ ಪ್ರಕಾರ ಯಾರು ರಾತ್ರಿ ವೇಳೆ ಆರು ಗಂಟೆಗಳ ಕಾಲಕ್ಕಿಂತ ಕಡಿಮೆ ನಿದ್ರಿಸುತ್ತಾರೋ ಅವರಿಗೆ, ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಹಾರ್ಮೋನ್ ಗೆ ಅಥವಾ ನರಗಳಿಗೆ ಸಂಬಂಭ ಪಟ್ಟ ವಿಷಯವಾಗಿರುತ್ತದೆ.

English summary

5 Signs You Might Have Prediabetes

You checked for diabetes and you are came out clean. Celebrate. But what if you have prediabetes? Yes, prediabetes is a diagnosis made when your blood glucose is higher than it should be, but not high enough to be called diabetes.
X
Desktop Bottom Promotion