For Quick Alerts
ALLOW NOTIFICATIONS  
For Daily Alerts

ಸಿಹಿ ಬಯಕೆ ನಿಯಂತ್ರಿಸಲು ಟಿಪ್ಸ್: ಡಯಾಬಿಟಿಸ್ ವಿಶೇಷ

By Hemanth p
|

ನಿಮಗೆ ತುಂಬಾ ಬೇಜಾರು ಅಥವಾ ಬೋರ್ ಎಂದು ಅನಿಸುತ್ತಿದ್ದರೆ ಆಗ ನೀವು ಸಕ್ಕರೆ ಚಿಕಿತ್ಸೆ ಮಾಡಿಕೊಳ್ಳಬೇಕು. ಸಕ್ಕರೆ ಅದರಲ್ಲೂ ಸಿಹಿ ಶಕ್ತಿವರ್ಧಕ. ನೀವು ನಿರೀಕ್ಷಿಸದೆ ಇರುವ ಕಡುಬಯಕೆ ಯಾವುದೇ ವೇಳೆ ಮತ್ತು ಯಾವುದೇ ಜಾಗದಲ್ಲೂ ನಡೆಯಬಹುದು. ಕೆಲವು ಸಲ ಪ್ರಲೋಭನೆ ತಡೆಯುವುದು ತುಂಬಾ ಕಷ್ಟವಾದಾಗ ನಾವು ಫ್ರಿಡ್ಜ್ ನಲ್ಲಿ ಚಾಕಲೇಟ್ ಮತ್ತು ಐಸ್ ಕ್ರೀಂಗಾಗಿ ಹುಡುಕುತ್ತೇವೆ.

ನಾವು ಸಿಹಿ ತಿಂಡಿಗಳಿಗಾಗಿ ಹಂಬಲಿಸುವಾಗ ವಿಪರೀತ ಸಿಹಿ ತಿಂದು ಕೊಬ್ಬನ್ನು ಹೆಚ್ಚಿಸಿಕೊಂಡು ನಮ್ಮ ಆರೋಗ್ಯವನ್ನು ಸಮಸ್ಯೆಗೆ ಸಿಲುಕಿಸುತ್ತೇವೆ. ಸಿಹಿಯಲ್ಲಿರುವ ಕಾಬ್ರೋಹೈಡ್ರೇಟ್ ನಮ್ಮ ದೇಹದೊಳಗೆ ಹೋಗಿ ಒಡೆದು ನಮಗೆ ಬೇಕಾಗಿರುವ ಸಂತಸದ ಹಾರ್ಮೋನುಗಳನ್ನು ಬಿಡುಗಡೆ ಮಾಡಿ ಶಕ್ತಿಯನ್ನು ಒದಗಿಸುತ್ತದೆ ಮತ್ತು ನಾವು ಉತ್ತಮವಾಗಿ ಹಾಗೂ ಒತ್ತಡರಹಿತವಾಗಿ ಇರುವಂತೆ ಮಾಡುತ್ತದೆ.

ನಿಮಗೆ ಸಿಹಿ ತಿನ್ನಬೇಕೆಂಬ ಬಯಕೆಯಾದರೆ ಆಗ ನಿಮ್ಮ ದೇಹದಲ್ಲಿರುವ ಸಕ್ಕರೆ ಮಟ್ಟವು ಕುಸಿಯುತ್ತಿದೆ ಎನ್ನುವ ಸೂಚನೆ ಮತ್ತು ಅದನ್ನು ಮತ್ತೆ ತುಂಬಬೇಕಾಗಿದೆ. ಆದರೆ ನೀವು ಸಿಹಿ ತಿಂದಷ್ಟು ಮತ್ತಷ್ಟು ಸಿಹಿ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ ಎನ್ನುವುದನ್ನು ಯಾವತ್ತಾದರೂ ಮನಗಂಡಿದ್ದೀರಾ? ನಿಮ್ಮ ಹಸಿವನ್ನು ನೀಗಿಸಿ ಬೇಕಾಗಿರುವ ಹೆಚ್ಚಿನ ಶಕ್ತಿಯನ್ನು ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ನೀವು ಪುನರುಜ್ಜೀವನಗೊಂಡು ಮತ್ತಷ್ಟು ಸಿಹಿ ತಿಂಡಿ ಬಯಸುತ್ತೀರಿ. ಈ ತಿಂಡಿಗಳ ಅಂಶ ರಕ್ತನಾಳದೊಳಗೆ ಹೋದಾಗ ಅದು ರಕ್ತದ ಸಕ್ಕರೆ ಮಟ್ಟವನ್ನು ವೃದ್ಧಿಸುತ್ತದೆ. ಇದರಿಂದ ಹಾರ್ಮೋನ್ ಇನ್ಸುಲಿನ್ ಉತ್ಪತ್ತಿಯಾಗುತ್ತದೆ ಮತ್ತು ಇದು ರಕ್ತನಾಳಗಳಿಂದ ಸಕ್ಕರೆಯನ್ನು ಜೀವಕೋಶಗಳಿಗೆ ತಲುಪಿಸುತ್ತದೆ. ದುರಾದೃಷ್ಟವೆಂದರೆ ಬಿಡುಗಡೆಯಾದ ಇನ್ಸುಲಿನ್ ಗೆ ನಿಮ್ಮ ಜೀವಕೋಶವು ತುಂಬಾ ಸೂಕ್ಷ್ಮವಾಗಿರುವ ಕಾರಣ ಡಯಾಬಿಟಿಸ್ ಮತ್ತು ಹೃದಯ ಕಾಯಿಲೆಗೆ ಕಾರಣವಾಗುತ್ತದೆ.

ಆದರೆ ಈ ಅಭ್ಯಾಸವನ್ನು ಬಿಡುವುದು ಹೇಗೆ? ನಿಮ್ಮ ಸಕ್ಕರೆ ತಿನ್ನುವ ಕಡುಬಯಕೆಯನ್ನು ನಿಯಂತ್ರಿಸುವುದು ಹೇಗೆಂದರೆ ಸ್ವಲ್ಪವೇ ತಿನ್ನಿ ಎಂದು ಕೆಲವು ಪೋಷಕಾಂಶತಜ್ಞರು ಸಲಹೆ ಮಾಡುತ್ತಾರೆ. ಪ್ರತೀದಿನ ಎಷ್ಟು ಸಿಹಿ ತಿಂಡಿ ತಿನ್ನಬೇಕು ಮತ್ತು ನಿಮ್ಮ ಸಿಹಿಯ ಕಡುಬಯಕೆ ಯಾವ ರೀತಿ ನಿಯಂತ್ರಿಸಬೇಕೆಂಬ ಬಗ್ಗೆ ಕೆಲವೊಂದು ಟಿಪ್ಸ್ ನೀಡಲಾಗಿದೆ.

ಸ್ವಲ್ಪ ಮಾತ್ರವೇ ತಿನ್ನಿ

ಸ್ವಲ್ಪ ಮಾತ್ರವೇ ತಿನ್ನಿ

ನಿಮಗೆ ಯಾವುದನ್ನು ತಿನ್ನಬೇಕೆಂದು ಬಯಕೆಯಾಗುತ್ತಿದೆಯಾ ಅದನ್ನು ಸ್ವಲ್ಪ ಮಾತ್ರವೇ ತಿನ್ನಿ. ಇದು ಕುಕ್ಕೀಸ್ ಅಥವಾ ಚಾಕಲೇಟ್ ಬಾರ್ ಆಗಿರಬಹುದು. ಸಾಮಾನ್ಯ ಮಟ್ಟದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕೆಂದರೆ ಸ್ವಲ್ಪವೇ ತಿನ್ನಿ. ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಅದನ್ನು ತಿನ್ನಿ. ತುಂಬಾ ಸಿಹಿ ತಿನ್ನುವ ಬದಲು ನಿಮ್ಮ ಸಿಹಿ ತಿನ್ನುವ ಬಯಕೆಯನ್ನು ಒಂದು ಕ್ಯಾಂಡಿ ತಿನ್ನುವ ಮೂಲಕ ನಿಯಂತ್ರಿಸಿ. ನಿಮಗೆ ಸಿಹಿ ತಿನ್ನುವ ಬಯಕೆಯಾದಾಗ ನೀವು ಏನು ತಿನ್ನುತ್ತೀದ್ದೀರೋ ಅದನ್ನು ತುಂಬಾ ಖುಷಿಯಿಂದ ತಿನ್ನಿ ಆಗ ಬಯಕೆ ಕಡಿಮೆ ಮಾಡಿದಂತಾಗುತ್ತದೆ. ಆದರೆ ಇದನ್ನು ಸಂಪೂರ್ಣವಾಗಿ ಕಡೆಗಣಿಸಬೇಡಿ.

ಜಿಐ ಕಡಿಮೆ ಇರುವ ಆಹಾರ ಆಯ್ಕೆ ಮಾಡಿ

ಜಿಐ ಕಡಿಮೆ ಇರುವ ಆಹಾರ ಆಯ್ಕೆ ಮಾಡಿ

ನಿಮ್ಮ ಸಿಹಿ ತಿನ್ನುವ ಕಡುಬಯಕೆಯನ್ನು ನಿಯಂತ್ರಿಸುವ ಮತ್ತೊಂದು ವಿಧಾನವೆಂದರೆ ಕಡಿಮೆ ಜಿಐ(ಗ್ಲೈಸೆಮಿಕ್ ಇಂಡೆಕ್ಸ್) ಇರುವ ಆಹಾರ ಆಯ್ಕೆ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ದಿನವಿಡೀ ಶಕ್ತಿ ಬಿಡುಗಡೆಯಾಗಲು ನೆರವಾಗುತ್ತದೆ ಮತ್ತು ನಿಮಗೆ ಬೋರ್ ಅನಿಸದು. ಸಿಹಿ ಬಯಕೆ ನಿಯಂತ್ರಿಸಲು ಜಿಐ ಕಡಿಮೆ ಇರುವಂತಹ ಬೀಜಗಳು, ಕಂದು ಅಕ್ಕಿ, ಪಿಷ್ಟವಿಲ್ಲದ ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಓಟ್ಸ್ ತಿನ್ನಿ

ವೆನಿಲ್ಲಾ ಸುವಾಸಿತ ಉತ್ಪನ್ನಗಳನ್ನು ಮೂಸಿ

ವೆನಿಲ್ಲಾ ಸುವಾಸಿತ ಉತ್ಪನ್ನಗಳನ್ನು ಮೂಸಿ

ನಿಮಗೆ ಸಿಹಿ ತಿನ್ನಬೇಕೆನ್ನುವ ಬಯಕೆ ಇನ್ನೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೆಂದಾದರೆ ಆಗ ವೆನಿಲ್ಲಾ ಸುವಾಸಿತ ಪರ್ಫ್ಯೂಮ್ ಸ್ಪೇ ಮಾಡಿ. ನಿಮ್ಮ ಸಿಹಿ ತಿನ್ನುವ ಬಯಕೆ ನಿಯಂತ್ರಿಸಲು ಒಳ್ಳೆಯ ವಿಧಾನ ಏರ್ ಫ್ರೆಶನರ್ ಅಥವಾ ವೆನಿಲ್ಲಾ ಸುವಾಸಿತ ಕ್ಯಾಂಡಲ್ ಹಚ್ಚಿ. ವೆನಿಲ್ಲಾ ಸುವಾಸನೆಯು ಸಿಹಿ ತಿನ್ನುವ ಕಡುಬಯಕೆ ನಿಯಂತ್ರಿಸುವ ಗುಣ ಹೊಂದಿದೆ ಎಂದು ಗುರುತಿಸಲಾಗಿದೆ.

ನಿಮ್ಮ ಸಂತಸದ ಮಟ್ಟವನ್ನು ಹೆಚ್ಚಿಸುವ ದಾರಿ ಹುಡುಕಿ

ನಿಮ್ಮ ಸಂತಸದ ಮಟ್ಟವನ್ನು ಹೆಚ್ಚಿಸುವ ದಾರಿ ಹುಡುಕಿ

ನಮಗೆ ಒತ್ತಡ ಅಥವಾ ಖಿನ್ನತೆ ಕಾಡಿದಾಗ ಸಿಹಿ ತಿನ್ನಬೇಕೆಂಬ ಬಯಕೆ ಹೆಚ್ಚುತ್ತದೆ. ಆಗ ಕಾರ್ಬ್ರೋಹೈಡ್ರೇಟ್ಸ್ ನಿಮ್ಮ ಮೆದುಳಿನಲ್ಲಿ ಸಂತಸ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಸಿಹಿ ಕಡುಬಯಕೆ ನಿಯಂತ್ರಿಸಲು ನೀರೋಲಿ ಅಥವಾ ನಿಂಬೆಯ ತೈಲವನ್ನು ಬಳಸಿ ನಿಮ್ಮ ಮೂಡನ್ನು ಬದಲಾಯಿಸಬಹುದು. ನಿಮ್ಮ ಬಾಯ್ ಫ್ರೆಂಡ್ ಗೆ ಕರೆ ಸ್ವಲ್ಪ ತಮಾಷೆ ಮಾಡಲು ಹೇಳಿ ಅಥವಾ ನೀವು ಸಂತಗೊಳ್ಳುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ನಿಮ್ಮ ಕಡುಬಯಕೆಯ ಮೂಲ ಪತ್ತೆ ಮಾಡಿ

ನಿಮ್ಮ ಕಡುಬಯಕೆಯ ಮೂಲ ಪತ್ತೆ ಮಾಡಿ

ಸಿಹಿ ತಿನ್ನುವ ಬಯಕೆ ನಿಯಂತ್ರಿಸಲು ಅಥವಾ ಕಡೆಗಣಿಸಲು ನೀವು ಯಾವುದೇ ಪ್ರಲೋಭನೆಗೆ ಒಳಗಾಗುವುದನ್ನು ತಪ್ಪಿಸಿ. ನಿಮ್ಮ ಕಡುಬಯಕೆ ನೀಡುವ ನಮೂನೆಗಳನ್ನು ಕಂಡುಹಿಡಿಯಿರಿ ಮತ್ತು ಇದನ್ನು ಕಡೆಗಣಿಸಲು ಪ್ರಯತ್ನಿಸಿ. ಉದಾಹರಣಿಗೆ ನೀವು ಸಕ್ಕರೆ ಪ್ರಲೋಭನೆ ಧಿಕ್ಕರಿಸಬೇಕೆಂದರೆ ನಿಮಗೆ ಕಚೇರಿಗೆ ಹೋಗುವ ವೇಳೆ ಯಾವುದೋ ಒಂದು ರೆಸ್ಟೋರೆಂಟ್ ಗೆ ಹೋಗಿ ಕಾಫಿ ಕುಡಿಯುವುದು ಅಭ್ಯಾಸವಾಗಿಬಿಟ್ಟಿದ್ದರೆ, ಆಗ ನೀವು ಬೇರೆ ಮಾರ್ಗದಲ್ಲಿ ಕಚೇರಿಗೆ ಹೋಗಿ ಇದನ್ನು ಕಡೆಗಣಿಸಬಹುದು.

ಚ್ವಿಯಿಂಗ್ ಗಮ್ ತಿನ್ನಿ

ಚ್ವಿಯಿಂಗ್ ಗಮ್ ತಿನ್ನಿ

ನಿಮ್ಮ ಸಕ್ಕರೆ ಕಡುಬಯಕೆಯನ್ನು ಈಡೇರಿಸಿಬೇಕು. ಆದರೆ ಸಂಪೂರ್ಣವಾಗಿ ಅದಕ್ಕೆ ಶರಣಾಗಬಾರದೆಂದು ಇದ್ದರೆ ಆಗ ಒಂದು ಚ್ವಿಯಿಂಗ್ ಗಮ್ ತಿನ್ನಿ. ಚ್ವಿಯಿಂಗ್ ಗಮ್ ನಿಂದ ನಿಮ್ಮ ಸಿಹಿ ತಿನ್ನುವ ಕಡುಬಯಕೆ ನಿಯಂತ್ರಣದಲ್ಲಿ ಇರುತ್ತದೆ.

ಸಿಹಿ ಕಡುಬಯಕೆ ನಿಯಂತ್ರಿಸಲು ಮತ್ತು ಡಯಾಬಿಟಿಸ್ ನಿಂದ ನಿಮ್ಮ ಆರೋಗ್ಯವನ್ನು ರಕ್ಷಿಸಲು ಇದು ಕೆಲವೊಂದು ವಿಧಾನಗಳು .

English summary

Tips to control sugar cravings

When you feel down or bored it can sometimes leave you to crave for a sugary treat. Sugar and especially sweet is an energy booster. Cravings can happen anytime and anywhere when you are least expecting it. It sometimes becomes so difficult to battle the temptation that we hunt for chocolates and ice-cream in the fridge.
Story first published: Wednesday, December 18, 2013, 12:38 [IST]
X
Desktop Bottom Promotion