For Quick Alerts
ALLOW NOTIFICATIONS  
For Daily Alerts

ಮಧುಮೇಹಕ್ಕೂ, ಹೃದಯಾಘಾತ ಸಂಬಂಧವಿದೆಯೇ?

|

ಮಧುಮೇಹಕ್ಕೂ- ಗಾಯಕ್ಕೂ ಸಂಬಂಧವಿದೆ. ಮಧುಮೇಹಿಗಳಿಗೆ ಗಾಯವಾದರೆ ಒಣಗುವುದು ಕಷ್ಟ. ಆದರೆ ಈಗ ಮಧುಮೇಹಕ್ಕೂ ಹೃದಯಾಘಾತಕ್ಕೂ ಒಂದಕ್ಕೊಂದು ಸಂಬಂಧವಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೆ ರಕ್ತದೊತ್ತಡ ಅಧಿಕವಾಗಿ ಹೃದಯಾಘಾತ ಉಂಟಾಗುವುದು ಎಂದು ಅಮೇರಿಕ ಹಾರ್ಟ್ ಅಸೋಸಿಯೇಷನ್ ಹೇಳಿದೆ.

ಮಧುಮೇಹಿಗಳಿಗೆ ಹೃದಯಾಘಾತ ಉಂಟು ಮಾಡುವಲ್ಲಿ ಈ ಕೆಳಗಿನ ಅಂಶಗಳು ಪ್ರಮುಖ ಕಾರಣಗಳಾಗಿವೆ.

Does Diabetes Cause Heart Diseases?

ಒಬೆಸಿಟಿ

ಒಬೆಸಿಟಿ ಇರುವವರು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಪ್ರಯತ್ನಸಬೇಕು. ದೇಹದ ತೂಕ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಬರುವುದು. ಆಹಾರಕ್ರಮ, ವ್ಯಾಯಾಮ ಇವುಗಳಿಂದ ದೇಹದ ತೂಕವನ್ನು ಕಮ್ಮಿ ಮಾಡಬಹುದು.

ಅಧಿಕ ಕೊಲೆಸ್ಟ್ರಾಲ್
ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ರಕ್ತ ನಾಳಗಳಲ್ಲಿ ಕೊಬ್ಬಿನಂಶ ಶೇಖರವಾಗಿ ರಕ್ತ ಹೆಪ್ಪು ಗಟ್ಟಿ ಹೃದಯಾಘಾತ ಉಂಟಾಗುವುದು.

ತಲೆಸುತ್ತು

ಮಧುಮೇಹ ಬಂದರೆ ಕೆಲವರಿಗೆ ನಡೆದಾಡುವುದು ಕಷ್ಟವಾಗುವುದು, ಸುಸ್ತು, ತಲೆ ಸುತ್ತು ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹದ ಚಟುವಟಿಕೆಗಳು ಸರಿಯಾಗಿ ನಡೆಯದೆ ಅಧಿಕ ರಕ್ತದೊತ್ತಡ ಉಂಟಾಗಿ ಹೃದಯಾಘಾತ ಕಾಣಿಸಿಕೊಳ್ಳುವುದು. ಆದ್ದರಿಂದ ಮಧುಮೇಹ ಇರುವವರು ಅಧಿಕ ರಕ್ತದೊತ್ತಡ ಹೆಚ್ಚಾಗದಂತೆ ಎಚ್ಚರವಹಿಸಬೇಕು.

ವಂಶಪಾರಂಪರ್ಯ
ಮಧುಮೇಹ ಮತ್ತು ಹೃದಯಾಘಾತ ವಂಶ ಪಾರಂಪರ್ಯವಾಗಿ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಮನೆಯಲ್ಲಿ ಹಿರಿಯರಿಗೆ ಈ ಕಾಯಿಲೆಗಳು ಇದ್ದರೆ ನೀವು ಚಿಕ್ಕ ಪ್ರಾಯದಲ್ಲಿಯೇ ಈ ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆವಹಿಸಿದರೆ ಮಧುಮೇಹ ಬರದಂತೆ ತಡೆಯಬಹದು.

English summary

Does Diabetes Cause Heart Diseases? | Tips For Diabetes | ಮಧುಮೇಹ ಬಂದರೆ ಹೃದಯಾಘಾತ ಉಂಟಾಗಬಹುದೇ? | ಮಧುಮೇಹಿಗಳಿಗೆ ಆರೋಗ್ಯ ಟಿಪ್ಸ್

There is a conclusive evidence that high levels of blood sugar has serious impact on your cardiovascular health as well. The American Heart Association has concluded that diabetics are 2 to 4 times more likely to develop heart related health problems.
X
Desktop Bottom Promotion