For Quick Alerts
ALLOW NOTIFICATIONS  
For Daily Alerts

ಈ ಟಿಪ್ಸ್ ಪಾಲಿಸಿದರೆ, ಮಧುಮೇಹದ ಭಯವಿಲ್ಲ

By Super
|

ಡಯಾಬಿಟಿಸ್ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚಾಗಿಯೇ ನಮ್ಮನ್ನು ಭಾದಿಸುತ್ತಿದೆ. ಅತ್ಯಂತ ಚಿಕ್ಕ ವಯಸ್ಸಿನ ಮಕ್ಕಳಲ್ಲಿಯೂ ಈ ಮಧುಮೇಹ ಅಥವಾ ಡಯಾವಿಟಿಸ್ ಉಂಟಾದರೆ ಆಶ್ವರ್ಯವಿಲ್ಲ.ಒಮ್ಮೆ ಬಂದರೆ ಜೀವನ ಪರ್ಯಂತ ಸಂಗಾತಿಯಂತೆಯೇ ಮುಂದುವರೆಯುವ ಈ ಖಾಯಿಲೆಗೆ ಪರಿಹಾರವೆ ಇಲ್ಲವೇ?

ಮಧುಮೇಹ ಬಂತೆಂದರೆ ತಡೆಯುವುದು ಕಷ್ಟ. ಆದರೆ ಆ ಖಾಯಿಲೆ ಉಂಟಾಗದಂತೆ, ಅಥವಾ ಅದರ ಪ್ರಾರಂಭಿಕ ಹಂತ ಅರಿವಿಗೆ ಬಂದರೆ ಈ ಕೆಳಗಿನ ಕೆಲವು ಮಾರ್ಗಗಳ ಮೂಲಕ ಮಧುಮೇಹದ ಪರಿಧಿಯಿಂದ ಹೊರಗುಳಿಯಬಹುದು.

1. ತೂಕ ನಿಯಂತ್ರಣ

1. ತೂಕ ನಿಯಂತ್ರಣ

ತೂಕವನ್ನು ನಿಯಂತ್ರಿಸುವುದು ರಕ್ತದ ಒತ್ತಡದಂಥ ಖಾಯಿಲೆಗಳನ್ನು ಮಾತ್ರವಲ್ಲದೇ ಇದು ಮಧುಮೇಹವನ್ನು ತಡೆಯುವಲ್ಲಿಯೂ ಸಹಕಾರಿ.

2. ವ್ಯಾಯಾಮ

2. ವ್ಯಾಯಾಮ

ದಿನವೂ ವ್ಯಾಯಾಮ ಮಾಡುವುದು ಆರೋಗ್ಯ ದೃಷ್ಠಿಯಿಂದ ಬಹಳ ಒಳ್ಳೆಯದು. ಇದು ಮಧುಮೇಹದ ಸಮಸ್ಯೆ ಬಹುಮಟ್ಟಿಗೆ ಬರದಂತೆ ತಡೆಗಟ್ಟುತ್ತದೆ.

3. ಟ್ರಾನ್ಸ್ ಫ್ಯಾಟ್/ಕೊಬ್ಬು ಬರುವುದನ್ನು ತಪ್ಪಿಸಿ

3. ಟ್ರಾನ್ಸ್ ಫ್ಯಾಟ್/ಕೊಬ್ಬು ಬರುವುದನ್ನು ತಪ್ಪಿಸಿ

ಇದು ದೇಹವು ಪ್ರೋಟೀನ್ ಹಾಗೂ ಇನ್ಸುಲಿನ್ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಇದು ರಕ್ತದೊತ್ತಡಕ್ಕೂ ಕಾರಣವಾಗುತ್ತದೆ. ಆದ್ದರಿಂದ ಸಂಸ್ಕರಿಸಿದ ಆಹಾರವನ್ನು ತಿನ್ನುವುದರ ಮೂಲಕ ಕೊಬ್ಬನ್ನು ತಪ್ಪಿಸಬಹುದು.

4. ಸಿಹಿ ತಿನ್ನಬೇಡಿ

4. ಸಿಹಿ ತಿನ್ನಬೇಡಿ

ನೈಸರ್ಗಿಕವಲ್ಲದ ಸಿಹಿ ಪದಾರ್ಥಗಳನ್ನು ತಿನ್ನಬೇಡಿ. ಇದೂ ಕೂಡ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

5. ಸಂಸ್ಕರಿಸಿದ ಕಾರ್ಬೋಹೈಡ್ರೇಟ್

5. ಸಂಸ್ಕರಿಸಿದ ಕಾರ್ಬೋಹೈಡ್ರೇಟ್

ನಿಮ್ಮ ದೇಹದಲ್ಲಿ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಯಸಿದರೆ, ಬಿಳಿ ಅಕ್ಕಿ, ಪಾಸ್ಟಾ, ಜೋಳದ ಅರಳು, ಅಕ್ಕಿ-ಹಲ್ಲೆಗಳು ಮತ್ತು ಬಿಳಿ ಹಿಟ್ಟು ತಿನ್ನುವುದನ್ನು ಬಿಡಿ. ಏಕೆಂದರೆ ಇವು ದೇಹದಲ್ಲಿ ಅತಿರೇಕದ ಸಕ್ಕರೆ ಶೇಖರಣೆಗೆ ಕಾರಣವಾಗಿ. ದೇಹ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಸಮೀಕರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

6. ಫೈಬರ್

6. ಫೈಬರ್

ಫೈಬರ್ ಯುಕ್ತ ಆಹಾರಗಳನ್ನು ಸೇವಿಸುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬಹುದು. ಜೊತೆಗೆ ಇಂಥ ಆಹಾರಗಳು ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಿ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆಮಾಡುತ್ತವೆ.

7. ಧೂಮಪಾನ

7. ಧೂಮಪಾನ

ಧೂಮಪಾನ, ಮಧುಮೇಹದ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೃದಯನಾಳದ ಆರೋಗ್ಯ ಹಾಗೂ ಹಾರ್ಮೋನ್ ನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ ಧೂಮಪಾನವನ್ನು ಬಿಟ್ಟು ಮಧುಮೇಹವನ್ನು ನಿಮ್ಮಿಂದ ದೂರವಿಡಿ!

8. ತಾಜಾ ಹಣ್ಣುಗಳು

8. ತಾಜಾ ಹಣ್ಣುಗಳು

ತಾಜಾ ಹಣ್ಣುಗಳಲ್ಲಿನ ಸಕ್ಕರೆ ಅಂಶ ಮಧುಮೇಹಕ್ಕೆ ಒಳ್ಳೆಯದು. ಹಣ್ಣುಗಳು ಅಗತ್ಯವಿರುವ ವಿಟಮಿನ್ ಹಾಗೂ ಖನಿಜಾಂಶಗಳನ್ನು ಒದಗಿಸುತ್ತವೆ.

9. ತಾಜಾ ತರಕಾರಿಗಳು

9. ತಾಜಾ ತರಕಾರಿಗಳು

ತಾಜಾ ತರಕಾರಿಗಳು ಕಬ್ಬಿಣ,ಸತು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಅವಶ್ಯಕ ಜೀವಸತ್ವಗಳ ಮೂಲಗಳಾಗಿವೆ. ಈ ಪೋಷಕಾಂಶಗಳು ಒಟ್ಟಾರೆ ಹೃದಯ ಮತ್ತು ನರಗಳ ಆರೋಗ್ಯ ಸಮತೋಲನವನ್ನು ಕಾಪಾಡುತ್ತವೆ.

10. ಗ್ರೀನ್ ಟೀ

10. ಗ್ರೀನ್ ಟೀ

ಸಿಹಿಯನ್ನು ಬೆರೆಸದ, ಒಂದು ಲೋಟ ಗ್ರೀನ್ ಟೀಯನ್ನು ದಿನವೂ ಸೇವಿಸುವುದು ಹಲವಾರು ಆರೋಗ್ಯ ಸಮಸ್ಯೆಯನ್ನು ನೀಗಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಧುಮೇಹದಿಂದ ನಿಮ್ಮನ್ನು ದೂರವಿರಿಸುತ್ತದೆ.

11. ಕಾಫಿ

11. ಕಾಫಿ

ಕಾಫಿಯಲ್ಲಿರುವ ಕೆಫಿನ್ ಅಂಶ ಹೃದಯನಾಳ ಸಂಬಂಧಿ ರೋಗಗಳನ್ನು ಹೆಚ್ಚಿಸುತ್ತವೆ ಎಂಬುದು ನಿಜವಾದರೂ ಅಲ್ಪ ಪ್ರಮಾಣದಲ್ಲಿ ಸೇವಿಸುವ ಕಾಫಿ ದೇಹದಲ್ಲಿ ಸಕ್ಕರೆ ಏರಿಕೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.

12. ಸರಿಯಾದ ಊಟ

12. ಸರಿಯಾದ ಊಟ

ಹೊತ್ತೊತ್ತಿಗೆ ಸರಿಯಾದ ಊಟ ಮಾಡುವುದು ದೇಹದಲ್ಲಿ ಪೋಷಕಾಂಶಗಳನ್ನು ಒದಗಿಸಿ ಕೊಬ್ಬಿನ ಅಂಶಗಳನ್ನು ನಿಯಂತ್ರಿಸುತ್ತವೆ. ಅಲ್ಲದೇ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಿ ಮಧುಮೇಹವನ್ನು ಕಡಿಮೆ ಮಾಡಲು ನೆರವಾಗುತ್ತದೆ.

13. ಹೃದಯರಕ್ತನಾಳದ ಆರೋಗ್ಯ

13. ಹೃದಯರಕ್ತನಾಳದ ಆರೋಗ್ಯ

ಮಧುಮೇಹ ಆರಂಭವಾಯಿತೆಂದರೆ ಅದು ಮೊದಲು ಪರಿಣಾಮ ಬೀರುವುದು ಹೃದಯರಕ್ತನಾಳಗಳ ಮೇಲೆ. ಡಯಾಬಿಟಿಸ್ ನ್ನು ನಿರಂತರವಾಗಿ ತಪಾಸಣೆ ಮಾಡುವುದರಿಂದ ಕೊಲೆಸ್ಟಾಲ್ ಮಟ್ಟವನ್ನು ತಿಳಿಯಲು ಸಹಾಯಕಾರಿಯಾಗುತ್ತವೆ.

14. ಕೆಂಪು ಮಾಂಸದ ಅಡುಗೆಯನ್ನು ತುಂಬಾ ತಿನ್ನಬೇಡಿ

14. ಕೆಂಪು ಮಾಂಸದ ಅಡುಗೆಯನ್ನು ತುಂಬಾ ತಿನ್ನಬೇಡಿ

ಕೆಂಪು ಮಾಂಸವನ್ನು ಹೆಚ್ಚು ಸೇವಿಸುವುದರಿಂದ ಅದರಲ್ಲಿರುವ ಪಾಲಿಫೆನೊಲ್ ಗಳಂತಹ ಅಂಶಗಳು ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಜೀರ್ಣಕ್ರಿಯೆ ನಿಧಾನವಾಗುವುದರಿಂದ ಸಮಸ್ಯೆಗಳು ಉದ್ಭವಿಸುತ್ತವೆ.

15. ದಾಲ್ಚಿನ್ನಿ ಪುಡಿ

15. ದಾಲ್ಚಿನ್ನಿ ಪುಡಿ

ನಿಮ್ಮ ಆಹಾರದಲ್ಲಿ ದಾಲ್ಚಿನ್ನಿ ಪುಡಿಯನ್ನು ಸೇರಿಸುವುದರಿಂದ ರಕ್ತದೊತ್ತಡ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

16. ಒತ್ತಡ ನಿರ್ವಹಣೆ

16. ಒತ್ತಡ ನಿರ್ವಹಣೆ

ಆಕ್ಸಿಟೋಸಿನ್ ಮತ್ತು ಸಿರೊಟೋನಿನ್ ನರಗಳು ಕೆಲಸ ಮಟ್ಟವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿವೆ. ಆದರೆ ಒತ್ತಡದಿಂದಾಗಿ ಅಡ್ರಿನಾಲಿನ್ ಬಿಡುಗಡೆ, ಹಾಗೂ ಇನ್ಸುಲಿನ್ ಸ್ರಾವಕ್ಕೆ ಅಡ್ಡಿಪಡಿಸುತ್ತವೆ. ಒತ್ತಡದಿಂದ ದೂರವುಳಿದರೆ ರಕ್ತದಲ್ಲಿ ಹೆಚ್ಚಿನ ಸಕ್ಕರೆಯ ಪ್ರಮಾಣ ಉತ್ಪತ್ತಿಯಾಗದೇ ಹಾನಿಕಾರಕ ಪರಿಣಾಮಗಳನ್ನು ತಗ್ಗಿಸಬಹುದು.

17. ಪ್ರೋಟೀನ್ ಆಹಾರ

17. ಪ್ರೋಟೀನ್ ಆಹಾರ

ಹೆಚ್ಚು ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸುವುದು ದೇಹದಲ್ಲಿ ಎನರ್ಜಿ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೇ ಕೊಬ್ಬಿನಂಶವನ್ನು ಕಡಿಮೆ ಮಾಡಿ ದೇಹವನ್ನು ಸುರಕ್ಷಿತವಾಗಿರಿಸುತ್ತದೆ.

18. ಫಾಸ್ಟ್ ಫುಡ್ ಸೇವಿಸದಿರಿ

18. ಫಾಸ್ಟ್ ಫುಡ್ ಸೇವಿಸದಿರಿ

ಕೇವಲ ಅತಿಯಾದ ಉಪ್ಪು, ಸಂಸ್ಕರಿಸಿದ ಸಕ್ಕರೆಗಳ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳೇ ತುಂಬಿರುತ್ತದೆ ಎಂಬುದನ್ನು ಹೊರತುಪಡಿಸಿ ಫಾಸ್ಟ್ ಫುಡ್ ಗಳಲ್ಲಿ ಟ್ರಾನ್ಸ್-ಕೊಬ್ಬುಗಳನ್ನು ಹೊಂದಿರುವ ಅನಾರೋಗ್ಯಕರ ಎಣ್ಣೆಗಳು ಬಳಸಲ್ಪಡುತ್ತವೆ. ಆದ್ದರಿಂದ ಆರೋಗ್ಯಕರ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಫಾಸ್ಟ್ ಫುಡ್ ಸೇವನೆಯನ್ನು ಮೊಟಕುಗೊಳಿಸುವುದು ಅಗತ್ಯವಾಗಿದೆ!

19. ಬ್ಲಡ್- ಶುಗರ್ ತಪಾಸಣೆ

19. ಬ್ಲಡ್- ಶುಗರ್ ತಪಾಸಣೆ

ಬ್ಲಡ್- ಶುಗರ್ ತಪಾಸಣೆ ಮಾಡಲು ಬ್ಲಡ್-ಗ್ಲೂಕೋಸ್ ಮಾನಿಟರ್ ಖರೀದಿಸಿ.ಈ ಉಪಕರಣದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿದೆಯೋ ಇಲ್ಲವೂ ಎಂಬುದನ್ನು ಪರೀಕ್ಷಿಸಲು ಸ್ವಲ್ಪ ರಕ್ತವನ್ನು ಬಳಸಿ ತಪಾಸಣೆ ಮಾಡಬೇಕಾಗುತ್ತದೆ. ಅಲ್ಲದೇ ನಿಮ್ಮ ವೈದ್ಯರ ಬಳಿಯಲ್ಲಿಯೂ ತಪಾಸಣೆ ನಡೆಸುವುದು ಉತ್ತಮ.

20. ಉತ್ತಮ ನಿದ್ದೆ

20. ಉತ್ತಮ ನಿದ್ದೆ

ದಿನದಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಅಗತ್ಯ. ಇದರಿಂದ ಮೆದುಳಿನ ಒತ್ತಡಗಳು ಕಡಿಮೆಯಾಗಿ ಹಾರ್ಮೋನ್ ಗಳು ನಿಯಂತ್ರಣದಲ್ಲಿರುತ್ತವೆ.

21. ಅಧಿಕ ಉಪ್ಪನ್ನು ತಿನ್ನದಿರಿ

21. ಅಧಿಕ ಉಪ್ಪನ್ನು ತಿನ್ನದಿರಿ

ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯವಾಗಿದೆ. ಅಧಿಕವಾಗಿ ಉಪ್ಪನ್ನು ಸೇವಿಸುವುದರಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗಿ ಡಯಾಬಿಟಿಸ್ ಉಲ್ಭಣಿಸಬಹುದು.

22. ಗಾಯಗಳಾಗದಂತೆ ಎಚ್ಚರವಹಿಸಿ

22. ಗಾಯಗಳಾಗದಂತೆ ಎಚ್ಚರವಹಿಸಿ

ಮಧುಮೇಹ ಬಂದರೆ ಶರೀರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗಿ ಹೊಂದಿಲ್ಲದೇ ಇರುವುದರಿಂದ ಕಿರು ಗಾಯಗಳನ್ನು ಸುಲಭವಾಗಿ ಗುಣಪಡಿಸಲು ಸಾಧ್ಯವಿಲ್ಲ. ಅಥವಾ ಗಾಯ ಗುಣವಾಗಲು ಅಧಿಕ ಸಮಯ ಬೇಕಾಗುತ್ತದೆ. ಆದ್ದರಿಂದ ಈ ವಿಷಯದಲ್ಲಿ ಹೆಚ್ಚು ಜಾಗೃತೆವಹಿಸಿ.

23. ನೀರು ಕುಡಿಯಿರಿ

23. ನೀರು ಕುಡಿಯಿರಿ

ನೀರು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ. ದಿನವೂ 2.5 ಲೀಟರ್ ಕುಡಿಯುವುದರಿಂದ ಕೇವಲ ದೈಹಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಹೃದಯ ಮತ್ತು ಮಧುಮೇಹ ಕಾಯಿಲೆಗಳ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಗುಣ ನೀರಿಗಿದೆ.

24. ಕ್ಯಾಲ್ಸಿಯಂ

24. ಕ್ಯಾಲ್ಸಿಯಂ

ಅಧಿಕವಾಗಿ ಕ್ಯಾಲ್ಸಿಯಂ ಆಹಾರವನ್ನು ಸೇವಿಸುವುದು ಉತ್ತಮ. ಇದು ಮಧುಮೇಹವನ್ನು ನಿಯಂತ್ರಿಸುತ್ತದೆ.

25. ವಿನಿಗರ್

25. ವಿನಿಗರ್

ಆಹಾರದಲ್ಲಿ ವಿನಿಗರ್ ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ.

26. ಸೋಯಾ

26. ಸೋಯಾ

ಸೋಯಾ ಪ್ರೋಟೀನ್ ಮಧುಮೇಹವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಇದು ಒಳಗೊಂಡಿರುವ ಐಸೊಫ್ಲವೊನ್ ಗಳು, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ದೇಹವನ್ನು ಪುಷ್ಟೀಕರಿಸಲು ನೆರವಾಗುತ್ತದೆ.

28. ಸೂರ್ಯನ ಕಿರಣ

28. ಸೂರ್ಯನ ಕಿರಣ

ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿದರೆ ದೇಹದಲ್ಲಿ ಅಧಿಕ ಜೀವಸತ್ವಗಳು ಉತ್ಪಾದನೆಯಾಗುತ್ತವೆ. ವಿಟಮಿನ್ ಡಿ, ಜೀವಸತ್ವ ಭೌತಿಕ ಸಂಶ್ಲೇಷಣೆಗೆ ಅಗತ್ಯವಾಗಿದೆ. ಅಲ್ಲದೆ ಇದು ಇನ್ಸಿಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಹೀಗೆ ಮೇಲಿನ ಕೆಲವು ವಿಧಾನಗಳು ನಿಮ್ಮಲ್ಲಿ ಮಧುಮೇಹದ ಪ್ರಮಾಣವನ್ನು ಕಡಿಮೆಗೊಳಿಸಿ ನಿಮ್ಮನ್ನು ಚಿಂತೆಯಿಂದ ದೂರವಿರಿಸುತ್ತವೆ.

27. ಏರೇಟೆಡ್ ಪಾನೀಯಗಳಿಂದ ದೂರವಿರಿ

27. ಏರೇಟೆಡ್ ಪಾನೀಯಗಳಿಂದ ದೂರವಿರಿ

ಕೋಲಾ ಅಥವಾ ಬೇರೆ ಯಾವುದೇ ಗಾಳಿಯೊಡ್ಡಿದ ಪಾನೀಯಗಳನ್ನು ಕುಡಿಯದಿರಿ. ಇದರಲ್ಲಿರುವ ತೀವ್ರ ಸಕ್ಕರೆಯ ಅಂಶ ಮಧುಮೇಹಕ್ಕೆ ನೇರವಾಗಿ ಕಾರಣವಾಗುತ್ತವೆ.

29. ನಿದ್ದೆ

29. ನಿದ್ದೆ

ಆರೋಗ್ಯವಾಗಿ ಇರಬೇಕೆಂದರೆ ನಿದ್ದೆ ಮಾಡಿ. ಮನುಷ್ಯನ ಆರೋಗ್ಯಕ್ಕೆ 8 ಗಂಟೆಗಳ ನಿದ್ದೆ ಅವಶ್ಯಕ.

English summary

28 Ways to Prevent Diabetes | Tips For Health | ಮಧುಮೇಹವನ್ನು ಹೂರವಿಡುವ ಸರಳ 28 ಮಾರ್ಗಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Diabetes can be a difficult ailment to deal with. However, with proper control, its symptoms can be prevented from surfacing. Here are some steps, to keep you from contracting diabetes.
X
Desktop Bottom Promotion