ಸೋಡಾ ಕುಡಿದರೆ ಸಣ್ಣಗಾಗಬಹುದಾ?

Drinking Soda
ಹೊಟ್ಟೆ ತುಂಬಿದಾಗ ಬೇಗನೆ ಜೀರ್ಣವಾಗಲು ಸೋಡಾ ಕುಡಿಯುತ್ತೇವೆ. ಪಾರ್ಟಿಗಳಿಗೆ ಹೋದಾಗ ಹೊಟ್ಟೆ ತುಂಬಾ ತಿಂದು ಸೋಡಾ ಕುಡಿದಾಗ ಹೊಟ್ಟೆ ಭಾರ ಅನಿಸುವುದಿಲ್ಲ. ಸೋಡಾ ಅಧಿಕ ಕ್ಯಾಲೋರಿಯನ್ನು ಕರಗಿಸುವ ಸಾಮಾರ್ಥ್ಯ ಹೊಂದಿದೆಯೇ, ಇದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವೇ ಎಂದು ತಿಳಿಯಲು ಮುಂದೆ ಓದಿ.

1. ಅಮೆರಿಕ ಡಯಾಬಿಟಿಸ್ ಸಂಘದವರು ನಡೆಸಿದ ಮೀಟಿಂಗ್ ನಲ್ಲಿ ಸೋಡಾ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬನಂಶವನ್ನು ಕರಗಿಸುವುದಾದರೂ ದಪ್ಪಗಾಗಿಸುತ್ತೆ ಎಂಬ ಅಂಶವನ್ನು ಹೇಳಲಾಗಿದೆ.

2. ಡಯಟ್ ಸೋಡಾ ದೇಹದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

3. ಸೋಡಾದಲ್ಲಿರುವ ಕೃತಕ ಸಿಹಿಯಿಂದಾಗಿ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ವಯಸ್ಸಾದಾಗ ಮಧುಮೇಹ ಕಾಣಿಸಿಕೊಳ್ಳಬಹುದು.

4. ಸೋಡಾದಲ್ಲಿ ಸಕ್ಕರೆ ಅಂಶವಿರುವುದರಿಂದ ದಪ್ಪ ಕಡಿಮೆಯಾಗುವ ಬದಲು ಮತ್ತಷ್ಟು ದಪ್ಪಗಾಗಿಸುತ್ತೆ.

5. ಸೋಡಾ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.