For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಸೇವಿಸಬೇಕಾಗಿರುವ 10 ಹಣ್ಣುಹಂಪಲುಗಳು

|

ಭಾರತದಲ್ಲಿ ಮಳೆಗಾಲವೆಂದರೆ ಹಬ್ಬ ಬಂದಂತೆ. ಸುಡುವ ಬೇಸಿಗೆಯ ನಂತರ ಪ್ರತಿಯೊಬ್ಬರು ವರುಣ ದೇವನ ಆಗಮನಕ್ಕಾಗಿ ಕಾದು ಕುಳಿತಿರುತ್ತಾರೆ. ಮಳೆ ಬಂತೆಂದರೆ ಆ ಮಳೆಯಲ್ಲಿ ಮುಳುಗೇಳುವ ಸಂಭ್ರಮ ಇಲ್ಲಿನ ಜನರಿಗೆ. ಆದರೆ ಅದೇ ಮಳೆ ಬರುತ್ತ, ಬರುತ್ತ ಹಲವಾರು ರೋಗ ರುಜಿನಗಳನ್ನು ಮತ್ತು ಇನ್‍ಫೆಕ್ಷನ್‍ಗಳನ್ನು ಹೊತ್ತು ತರುತ್ತದೆ. ವಾತಾವರಣದ ಉಷ್ಣಾಂಶದಲ್ಲಿನ ಏರುಪೇರು, ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿಬಿಡುತ್ತದೆ. ಹಾಗಾಗಿ ನಮ್ಮ ದೇಹವು ರೋಗರುಜಿನಗಳಿಗೆ ಗುರಿಯಾಗುತ್ತದೆ.

ಅಲ್ಲದೆ ಈ ಅವಧಿಯಲ್ಲಿ ಜೀರ್ಣ ಶಕ್ತಿಯು ಕುಂಠಿತಗೊಳ್ಳುತ್ತದೆ. ಪಿತ್ತದಿಂದ ನಮ್ಮ ದೇಹದಲ್ಲಿ ಅಜೀರ್ಣ, ಹೈಪರ್ ಆಸಿಡಿಟಿ, ಚರ್ಮ ವ್ಯಾಧಿಗಳು (ಕಜ್ಜಿ, ಉಕ್ಕು ಮತ್ತು ಬೊಯಿಲ್‍ಗಳು ), ಕೂದಲು ಉದುರುವಿಕೆ ಮತ್ತು ಇನ್‍ಫೆಕ್ಷನ್‍ನಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಸಮಯದಲ್ಲಿ ವಾತಾವರಣದಲ್ಲಿ ಆರ್ದ್ರತೆಯು ಸಹ ಕಡಿಮೆಯಾಗುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿನ ಜೀವಾಧಾರಕ ದ್ರವವಾದ ಓಜಸ್ಸು ಕಡಿಮೆಯಾಗುತ್ತದೆ. ಬನ್ನಿ ಇವುಗಳ ಸಮಸ್ಯೆಯಿಂದ ಪಾರಾಗಲು ನಾವು ಅದ್ಭುತ ಹಣ್ಣುಗಳನ್ನು ಪರಿಚಯಿಸುತ್ತಿದ್ದೇವೆ ಮುಂದೆ ಓದಿ..

ಪ್ಲಮ್ ಹಣ್ಣು

ಪ್ಲಮ್ ಹಣ್ಣು

ನಯವಾದ ಸಿಪ್ಪೆಯ ಗಟ್ಟಿಬೀಜದ ಸಿಹಿಯಾದ ಹಳದಿ ಯಾ ಕೆಂಪು ಬಣ್ಣ ಹೊಂದಿರುವ ಹುಳಿಮಿಶ್ರಿತ ಸಿಹಿ ಇರುವ ಪ್ಲಮ್ ಹಣ್ಣಿನಲ್ಲಿ ವಿಟಮಿನ್ ಗಳ ಭಂಡಾರವೇ ಇದೆ. ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಹಾಗೂ ಅಲ್ಪಪ್ರಮಾಣದಲ್ಲಿ ಮೆಗ್ನೀಶಿಯಂ, ಮ್ಯಾಂಗನೀಸ್, ಫಾಸ್ಪರಸ್, ಪೊಟ್ಯಾಸಿಯಿಂ ಹಾಗೂ ಸೋಡಿಯಂ ಲಭ್ಯವಿರುವ ಕಾರಣ ದೇಹದೊಳಗೆ ಪ್ರವೇಶಿಸುವ ವೈರಸ್ಸುಗಳಿಗೆ ಛಡಿಯೇಟು ನೀಡುತ್ತದೆ. ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಪ್ಲಮ್ ಹಣ್ಣು ಮಳೆಗಾಲದಲ್ಲಿ ಸೇವಿಸಲು ಉತ್ತಮ ಆಯ್ಕೆಯಾಗಿದೆ.

ಚೆರ್ರಿ ಹಣ್ಣು

ಚೆರ್ರಿ ಹಣ್ಣು

ಸಾಧಾರಣವಾಗಿ ಮಳೆಗಾದಲ್ಲಿ ಹೆಚ್ಚಾಗಿ ಮಾರುಕಟ್ಟೆಗೆ ಆಗಮಿಸುವ ಚೆರ್ರಿ ಹಣ್ಣು ಸೋಂಕು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ಈ ಪುಟ್ಟ ಹಣ್ಣಿನಲ್ಲಿ ಹಲವು ಆರೋಗ್ಯಕರ ಗುಣಗಳಿವೆ. ಒತ್ತಡದಿಂದ ಪಾರಾಗಲು ಮೆದುಳಿಗೆ ಅಗತ್ಯವಾಗಿರುವ Anthocyanin ಎಂಬ ಆಂಟಿ ಆಕ್ಸಿಡೆಂಟು ಈ ಹಣ್ಣಿನಲ್ಲಿ ಹೇರಳವಾಗಿರುವುದರಿಂದ ಮೆದುಳಿಗೆ ಅಗತ್ಯವಾದ ಆರಾಮವನ್ನು ನೀಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳೂ ಹೇರಳವಾಗಿದ್ದು ಕ್ಯಾನ್ಸರ್ ಹಾಗೂ ಇತರ ರೋಗಗಳಿಂದ ದೂರವಿಡುತ್ತದೆ. ವಿಟಮಿನ್ ಸಿ,ಎ, ಬಿ6 ಮತ್ತು ಕೆ ಹೇರಳವಾಗಿವೆ. ಮುಖ್ಯವಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಅಥವಾ (LDL-ಲೋ ಡೆನ್ಸಿಟಿ ಲಿಪಿಡ್ಸ್) ಗಳನ್ನು ಬುಡಸಹಿತ ಕಿತ್ತು ಹಾಕುವ Phytosterols ಈ ಹಣ್ಣಿನಲ್ಲಿರುವುದರಿಂದ ರಕ್ತ ಶುದ್ಧಿಯಾಗಿ ಉತ್ತಮ ಆರೋಗ್ಯ ಲಭಿಸುತ್ತದೆ. ಉತ್ತಮ ನಿದ್ರೆಗೆ ಅಗತ್ಯವಾದ ಮೆಲಾಟೊನಿನ್ (Melatonin) ಎಂಬ ಹಾರ್ಮೋನು ಈ ಹಣ್ಣಿಸಲ್ಲಿ ಉತ್ತಮ ಪ್ರಮಾಣದಲ್ಲಿದೆ.

ಪೀಚ್ ಹಣ್ಣು

ಪೀಚ್ ಹಣ್ಣು

ಸಾಧಾರಣವಾಗಿ ಮಳೆಗಾಲದಲ್ಲಿ ಹವೆಯ ತೇವಾಂಶ ಕಡಿಮೆಯಾಗುವುದರಿಂದ ಚರ್ಮ ಒಣಗಿ ಹುರುಪೆಗಳು ಏಳಲು ತೊಡಗುತ್ತವೆ. ಪೀಚ್ ಹಣ್ಣಿನಲ್ಲಿ ಹೇರಳವಾಗಿರುವ ವಿಟಮಿನ್ ಎ ಮತ್ತು ಬಿ-carotene ಚರ್ಮದ ಕಾಂತಿಯನ್ನು ಕಾಪಾಡಲು ನೆರವಾಗುತ್ತದೆ. ಈ ಹಣ್ಣಿನಲ್ಲಿ ಕ್ಯಾಲೋರಿಗಳೂ ಕಡಿಮೆ ಇರುವುದರಿಂದ ದೇಹದ ತೂಕ ಹೆಚ್ಚುವ ಭಯವಿಲ್ಲ. ಹೆಚ್ಚಾದ ನಾರಿನಂಶ, ವಿಟಮಿನ್ ಸಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತವೆ. ಮುಖ್ಯವಾಗಿ ಪೀಚ್ ಹಣ್ಣಿನಲ್ಲಿ ಹೇರಳವಾಗಿರುವ ಪೊಟ್ಯಾಸಿಯಂ ನಿಂದ ಮೂತ್ರಪಿಂಡ (ಕಿಡ್ನಿ) ಗಳಿಗೆ ಸಂಬಂಧಿಸಿದ ಕಾಯಿಲೆ ಹಾಗೂ ಅಲ್ಸರುಗಳಿಂದ ದೂರವಿಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಮಳೆಗಾಲದಲ್ಲಿ ಬಾಳೆಹಣ್ಣು ಅನುಕೂಲಕರವಾದರೂ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದಲ್ಲ. ಹಣ್ಣಿನಲ್ಲಿ ಉತ್ತಮವಾದ ನಾರಿನಂಶವಿದ್ದು ಜೀರ್ಣಕ್ರಿಯೆ ಸರಾಗವಾಗುವುದು. ಇದರಲ್ಲಿ ವಿಟಮಿನ್B6 (pyridoxine) ಅತಿ ಹೆಚ್ಚಾಗಿ ಲಭ್ಯವಿದ್ದು ರಕ್ತಹೀನತೆ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಅಗತ್ಯವಾದ ಬಿ.ಕಾಂಪ್ಲೆಕ್ಸ್ ಆಗಿದೆ. ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತಮ ಪ್ರಮಾಣದಲ್ಲಿರುವ ತಾಮ್ರ, ಮೆಗ್ನೀಶಿಯಂ, ಮ್ಯಾಂಗನೀಸ್, ಪೊಟ್ಯಾಸಿಯಂ ಹಾಗೂ ಇನ್ನಿತರ ಖನಿಜಗಳು ಲಭ್ಯವಿದ್ದು ಮೂಳೆ, ಜೀವಕೋಶಗಳು, ಕೆಂಪುರಕ್ತಕಣಗಳ ಬೆಳವಣಿಗೆಗೆ ಸಹಕಾರಿಯಾಗಿವೆ.

ಪೇರ್ಸ್ ಹಣ್ಣು (ಮರಸೇಬು)

ಪೇರ್ಸ್ ಹಣ್ಣು (ಮರಸೇಬು)

ಈ ಹಣ್ಣಿನಲ್ಲಿ ಕರಗುವ ನಾರು ಹೇರಳವಾಗಿದೆ. ವಿಟಮಿನ್ ಎ, ಬಿ1, ಬಿ2, ಸಿ, folate ಮತ್ತು niacin ಅಂಶಗಳು, ತಾಮ್ರ, ಫಾಸ್ಪರಸ್ ಮತ್ತು ಪೊಟ್ಯಾಸಿಯಂ ಹೇರಳವಾಗಿರುವುದರಿಂದ ಮಳೆಗಾಲದಲ್ಲಿ ದೇಹಕ್ಕೆ ಅಗತ್ಯವಾದ ಪ್ರತಿರೋಧ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ಹಲವು ಆಂಟಿ ಆಕ್ಸಿಡೆಂಟು ಹಾಗೂ glutathione ಎಂಬ ಆಂಟಿ ಕಾರ್ಸಿನೋಜೆನ್ ರಕ್ತದೊತ್ತಡ ತಡೆಯುತ್ತದೆ ಹಾಗೂ ಹೃದಯಾಘಾತದಿಂದ ರಕ್ಷಿಸುತ್ತದೆ. ಪೆಕ್ಟಿನ್ ಎಂಬ ಕಿಣ್ವವೂ ಹೇರಳವಾಗಿರುವುದರಿಂದ ರಕ್ತದ ಕೆಟ್ಟ ಕೊಲೆಸ್ಟರಾಲ್ ಕಡಿಮೆಗೊಳಿಸಲು ಸಹಾಯವಾಗುತ್ತದೆ. ದೇಹವನ್ನು ತಂಪಾಗಿಡಲು ಅಗತ್ಯವಾದ ಹಲವು ಅಂಶಗಳಿರುವ ಕಾರಣ ಜ್ವರವಿದ್ದರೆ ಒಂದು ದೊಡ್ಡ ಲೋಟ ಮರಸೇಬಿನ ರಸವನ್ನು ಸೇವಿಸುವುದರಿಂದ ಶೀಘ್ರವೇ ಪರಿಹಾರ ದೊರಕುತ್ತದೆ. ದೇಹದಲ್ಲಿ ಹಲವು ಕಾರಣಗಳಿಂದ ಎದುರಾಗುವ ಉರಿಯೂತಕ್ಕೆ ಮರಸೇಬಿನ ರಸ ಉತ್ತಮ ಪರಿಹಾರ ನೀಡುತ್ತದೆ.

ಲಿಚ್ಚಿ ಹಣ್ಣು

ಲಿಚ್ಚಿ ಹಣ್ಣು

ಪ್ರಮುಖವಾಗಿ ಬಿಹಾರದ ಬೆಳೆಯಾಗಿರುವ ಲಿಚ್ಚಿ ಈಗ ಕರ್ನಾಟಕದಲ್ಲಿಯೂ ಲಭ್ಯವಾಗುತ್ತಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ಕಬ್ಬಿಣದ ಅಂಶವೂ ಇದೆ. ತೂಕ ಕಳೆದುಕೊಳ್ಳಲು ಅಗತ್ಯವಾಗಿರುವ ಹಲವು ಆಂಟಿ ಆಕ್ಸಿಡೆಂಟುಗಳಿರುವ ಕಾರಣ ಮಳೆಗಾಲದಲ್ಲಿ ಕಡಿಮೆಯಾಗುವ ವ್ಯಾಯಾಮದಿಂದ ಏರುವ ದೇಹದ ತೂಕವನ್ನು ಸರಿದೂಗಿಸಿಕೊಳ್ಳಬಹುದು.

English summary

Best Fruits To Eat During Monsoon

Monsoon season is the best time to sit back and eat something hot and crunchy. This is a season where you will feel lazy. Having a fruit basket ready will help you stay relaxed. During this season, our body gets constantly affected with allergies
X
Desktop Bottom Promotion