For Quick Alerts
ALLOW NOTIFICATIONS  
For Daily Alerts

ಧೂಮಪಾನವನ್ನು ಬಿಡಲು ಇಲ್ಲಿದೆ 5 ಸೂಕ್ತ ಮನೆ ಮದ್ದುಗಳು

|

ಒಬ್ಬ ವ್ಯಕ್ತಿಯು ಮಾಡಬಹುದಾದ ದುಶ್ಚಟಗಳಲ್ಲಿ ಧೂಮಪಾನ ಸಹ ಒಂದು ಅತ್ಯಂತ ಅಪಾಯಕಾರಿಯಾದ ದುಶ್ಚಟವಾಗಿದೆ. ಏಕೆಂದರೆ ಒಮ್ಮೆ ಈ ಧೂಮಪಾನದ ದುಶ್ಚಟಕ್ಕೆ ದಾಸರಾದರೆ ಮತ್ತೆ ಅದನ್ನು ಬಿಡುವುದು ಅಸಾಧ್ಯ. ಅದರಲ್ಲೂ ಈ ಅಭ್ಯಾಸದಿಂದ ಮುಕ್ತರಾಗುವುದು ಮತ್ತೂ ಕಷ್ಟ. ಚಳಿಯ ಹವಾಮಾನ ಹೊಂದಿರುವ ದೇಶಗಳಲ್ಲಿ ಧೂಮಪಾನವು ಅತ್ಯಂತ ಸಾಮಾನ್ಯವಾದ ವಿಷಯ. ಏಕೆಂದರೆ ಅಲ್ಲಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಇದು ಅಗತ್ಯವೆಂದು ತೋರುತ್ತದೆ.

ಇನ್ನೂ ಕೆಲವರು ಧೂಮಪಾನ ಮಾಡುವುದು ತಮ್ಮ ಕೋಪ ಅಥವಾ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಸುಮ್ಮನೆ ಸ್ನೇಹಿತರ ಒತ್ತಾಸೆಯ ಮೇರೆಗೆ ಸೇದುವವರು ಸಹ ಇದ್ದಾರೆ. ಯಾವುದೇ ಕಾರಣವಿರಲಿ ಈ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದನ್ನು ಬಿಡಲು ಮಾರ್ಗ ಹುಡುಕಿ. ಧೂಮಪಾನವನ್ನು ತ್ಯಜಿಸಲು ಹಲವಾರು ಮಾರ್ಗೋಪಾಯಗಳು ಇವೆ. ಧೂಮಪಾನವನ್ನು ಬಿಡಲು ದೃಢ ನಿರ್ಧಾರ ಮತ್ತು ಬಿಡಲೇ ಬೇಕೆಂಬ ಛಲ ಎರಡು ಬೇಕು. ಏಕೆಂದರೆ ಬಿಡಬೇಕೆಂಬ ದೃಢ ನಿರ್ಧಾರವಿಲ್ಲದಿದ್ದರೆ, ಈ ಅಭ್ಯಾಸದಿಂದ ಮುಕ್ತರಾಗುವುದು ಸಾಧ್ಯವಿಲ್ಲ.

ಇನ್ನೂ ಒಂದು ವಿಚಾರವನ್ನು ತಿಳಿದುಕೊಂಡಿರಬೇಕು. ಈ ಅಭ್ಯಾಸವನ್ನು ರಾತ್ರೋ ರಾತ್ರಿ ಬಿಡಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ನೀವು ಸುಮಾರು ವರ್ಷದಿಂದ ಧೂಮಪಾನವನ್ನು ಮಾಡುತ್ತಿದ್ದಲ್ಲಿ, ಇದು ಕಷ್ಟವಾಗಬಹುದು. ಇಲ್ಲಿ ಧೂಮಪಾನವನ್ನು ಬಿಡಲು ಕೆಲವೊಂದು ಮನೆಮದ್ದುಗಳನ್ನು ನಾವು ನಿಮಗಾಗಿ ಸಲಹೆ ಮಾಡುತ್ತಿದ್ದೇವೆ. ಧೂಮಪಾನವನ್ನು ಬಿಡಬೇಕೆಂಬ ನಿಮ್ಮ ಆಲೋಚನೆಯು ಮನೆಯಿಂದಲೆ ಶುರುವಾಗಲಿ.

ಸಿಗರೇಟ್ ಸೇದುವವರಿಗೆ ಸೀಕ್ರೆಟ್ ಡಯಟ್ ಇದು

ಓಟ್ಸ್

ಓಟ್ಸ್

ಕುದಿಸಿದ ನೀರಿನಲ್ಲಿ ಓಟ್ಸ್ ಬೆರೆಸಿ ಮತ್ತು ರಾತ್ರಿಯೆಲ್ಲ ಹಾಗೆಯೇ ಬಿಡಿ. ಮರುದಿನ ಇದನ್ನು 10 ನಿಮಿಷ ಕುದಿಸಿ ಮತ್ತು ಊಟದ ನಂತರ ಸೇವಿಸಿ. ಇದು ಧೂಮಪಾನವನ್ನು ಬಿಡಲು ಹೇಳಿ ಮಾಡಿಸಿದಂತಹ ಮನೆ ಮದ್ದಾಗಿದೆ. ಏಕೆಂದರೆ ಓಟ್ಸ್ ನಿಮ್ಮ ದೇಹದಲ್ಲಿರುವ ಅಪಾಯಕಾರಿ ಟಾಕ್ಸಿನ್‍ಗಳನ್ನು ಹೊರದಬ್ಬುತ್ತದೆ ಮತ್ತು ಧೂಮಪಾನ ಮಾಡಬೇಕೆಂಬ ತುಡಿತವನ್ನು ಕಡಿಮೆ ಮಾಡುತ್ತದೆ.

ನೀರು

ನೀರು

ಧೂಮಪಾನವನ್ನು ಬಿಡಲು ಅತ್ಯಂತ ಸುಲಭವಾದ ಮಾರ್ಗ ನೀರು ಕುಡಿಯುವುದು. ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ಇದು ನಿಮ್ಮ ದೇಹವನ್ನು ಟಾಕ್ಸಿನ್‍ಗಳಿಂದ ಮುಕ್ತಗೊಳಿಸುತ್ತದೆ. ಜೊತೆಗೆ ನೀರು ನಿಮ್ಮ ದೇಹಕ್ಕೆ ರೋಗ ರುಜಿನಗಳು ಭಾದಿಸದಂತೆ ಸಹ ತಡೆಯುತ್ತದೆ. ಧೂಮಪಾನ ಬಿಡಲು ಇರುವ ಅತ್ಯುತ್ತಮವಾದ ಮಾರ್ಗವೆಂದರೆ ಧೂಮಪಾನ ಮಾಡಬೇಕೆನಿಸಿದಾಗ ಒಂದು ಲೋಟ ನೀರನ್ನು ಕುಡಿಯಿರಿ. ಸಾಧ್ಯವಾದಷ್ಟು ನಿಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ನೀರನ್ನು ಸೇವಿಸಿರಿ. ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ತೆಗೆದುಹಾಕುತ್ತದೆ.

ಮಲ್ಟಿ ವಿಟಮಿನ್‍ಗಳು

ಮಲ್ಟಿ ವಿಟಮಿನ್‍ಗಳು

ಧೂಮಪಾನವು ದೇಹದಲ್ಲಿರುವ ಹಲವಾರು ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಆಗ ನೀವು ದೇಹಕ್ಕೆ ಅಗತ್ಯವಾದ ವಿಟಮಿನ್ ಎ, ಸಿ ಮತ್ತು ಇ ಗಳನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಿದರೆ, ಅವುಗಳೆ ನಿಮ್ಮ ಧೂಮಪಾನದ ಅಭ್ಯಾಸವನ್ನು ಬಿಡಿಸುವ ಮನೆ ಮದ್ದುಗಳಾಗಿ ನೆರವಾಗುತ್ತವೆ. ವಿಟಮಿನ್ ಎ ಹಾಗೂ ಇ ಯು ಧೂಮಪಾನದಿಂದ ಹಾನಿಗೊಳಗಾದ ಕೋಶಗಳನ್ನು ಸರಿಪಡಿಸುತ್ತದೆ. ಇನ್ನು ವಿಟಮಿನ್ ಸಿಯನ್ನು ಮರಳಿ ಸಂಪಾದಿಸಲು ಕಿತ್ತಳೆ ಹಣ್ಣಿನ ರಸವನ್ನು ಸೇವಿಸಬಹುದು.

ಕೆಂಪು ಮೆಣಸಿನಕಾಯಿ

ಕೆಂಪು ಮೆಣಸಿನಕಾಯಿ

ಇದು ಸಹ ಧೂಮಪಾನವನ್ನು ಬಿಡಲು ನೆರವಾಗುವ ಒಂದು ಪದಾರ್ಥವಾಗಿದೆ. ಇದು ತಂಬಾಕು ಮತ್ತು ನಿಕೋಟಿನ್‍ಗಳ ವ್ಯಸನಕ್ಕೆ ತುತ್ತಾಗಿರುವ ನಿಮ್ಮ ಶ್ವಾಸಕೋಶದ ಸೂಕ್ಷ್ಮತೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಆದ್ದರಿಂದ ಇದನ್ನು ತಪ್ಪದೆ ನಿಮ್ಮ ಡಯಟ್‍ನಲ್ಲಿ ಇರುವಂತೆ ನೋಡಿಕೊಳ್ಳಿ. ಇದನ್ನು ಮಸಾಲೆಯಾಗಿ ಸಹ ಬಳಸಬಹುದು ಅಥವಾ ಒಂದು ಲೋಟ ನೀರಿನಲ್ಲಿ ಬೆರೆಸಿಕೊಂಡು ಸಹ ಕುಡಿಯಬಹುದು. ಇದರಿಂದ ಧೂಮಪಾನ ಮಾಡಬೇಕೆನ್ನುವ ನಿಮ್ಮ ತುಡಿತವು ಕಡಿಮೆಯಾಗುತ್ತದೆ.

ಪ್ರಾಕೃತಿಕವಾದ ತಾಜ ಹಣ್ಣಿನ ರಸಗಳು

ಪ್ರಾಕೃತಿಕವಾದ ತಾಜ ಹಣ್ಣಿನ ರಸಗಳು

ನಿಮ್ಮ ದೇಹವನ್ನು ಟಾಕ್ಸಿನ್‍ಗಳಿಂದ ಮುಕ್ತಗೊಳಿಸಲು ಬೇಕಾದ ಮೂಲಭೂತ ಅಂಶ ಇದಾಗಿದೆ. ಸಾಧ್ಯವಾದಷ್ಟು ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಯಾವಾಗ ನೀವು ಸಿಗರೇಟ್ ಸೇವಿಸಬೇಕೆಂದು ಬಯಸುತ್ತೀರೋ, ಆಗ ಮನಸ್ಸನ್ನು ಅದರಿಂದ ವಿಮುಖಗೊಳಿಸಿ. ಕಾರ್ಬೋನೇಟ್ ಮಾಡಲಾದ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಇವುಗಳು ನಿಮ್ಮ ದೇಹಕ್ಕೆ ಮತ್ತಷ್ಟು ಟಾಕ್ಸಿನ್‍ಗಳನ್ನು ಸೇರ್ಪಡೆಗೊಳಿಸಬಹುದು. ಇದರ ಜೊತೆಗೆ ನಿರಂತರ ವ್ಯಾಯಾಮವು ಸಹ ನಿಮ್ಮ ಧೂಮಪಾನ ಬಿಡುವ ನಿರ್ಧಾರಕ್ಕೆ ಸಹಾಯ ಮಾಡಬಲ್ಲವು.

English summary

5 Home Remedies To Quit Smoking

Smoking is one of the most hazardous habits that a person can posses. It is almost close to impossible to quit this habit. This becomes very difficult to quit, especially when you are a chain smoker. Following are a few home remedies to quit smoking. The best way to quit smoking is to start from home.
X
Desktop Bottom Promotion