For Quick Alerts
ALLOW NOTIFICATIONS  
For Daily Alerts

ತೇಗಿನ ಸಮಸ್ಯೆಗೆ ಮನೆ ಮದ್ದುಗಳು

|

ಭರ್ಜರಿ ಭೋಜನದ ನಂತರ ತೇಗು ಬರುವುದು ಸಾಮಾನ್ಯ. ಆದರೆ ನಿಮಗೆ ಈ ರೀತಿ ನಿರಂತರವಾಗಿ ತೇಗು ಬರುವ ಸಮಸ್ಯೆಯಿದ್ದರೆ ನಿಮಗೆ ಅದರಿಂದ ತೊಂದರೆಯಾಗುತ್ತದೆ. ಈ ರೀತಿಯ ಹುಳಿತೇಗಿನ ಸಮಸ್ಯೆಯಿರುವವರಿಗಾಗಿ ಕೆಲವು ಮನೆ ಮದ್ದುಗಳನ್ನು ಕೊಟ್ಟಿದ್ದೇವೆ ನೋಡಿ.

ಹೆಚ್ಚು ಊಟ ಮಾಡಿದಾಗ ಅದು ಸರಿಯಾಗಿ ಜೀರ್ಣವಾಗದಿದ್ದರೆ ಈ ರೀತಿ ತೇಗು ಬರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಸೂಚಿಸಿರುವ ಮದ್ದುಗಳು ನಿಮ್ಮನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸುತ್ತವೆ. ಈ ಸಮಸ್ಯೆಯಿಂದ ನರಳುತ್ತಿರುವವರು ಮೊದಲು ತಿಳಿದುಕೊಳ್ಳಬೇಕಾದದ್ದು ಇದು ಗಂಭೀರವಾದ ತೊಂದರೆಯಲ್ಲ. ಇದು ಹೊಟ್ಟೆಯಲ್ಲಿ ಗಾಳಿ ಸೇರಿಕೊಂಡ ಪರಿಣಾಮವಾಗಿ ಬರುತ್ತದೆ. ನೀವು ಬಾಯಿಯ ಮೂಲಕ ಒಳತೆಗೆದುಕೊಂಡ ಗಾಳಿ ಹೊರಗೆ ಬರಬೇಕಲ್ಲ ಅದು ಈ ರೀತಿಯಲ್ಲಿ ಹೊರಬರುತ್ತದೆ. ವೈದ್ಯಕೀಯವಾಗಿ ಇದನ್ನು ಹೊರಕಾರುವುದು ಎಂದೇ ಕರೆಯುವರು.

ನೀರು

ನೀರು

ಇದಕ್ಕೆ ಉತ್ತಮ ಔಷಧವೆಂದರೆ ನೀರು. ನಿರಂತರವಾಗಿ ತೇಗು ಬರುತ್ತಿದ್ದರೆ ತಣ್ಣಗಿನ ನೀರಿಗೆ ಐಸ್ ಹಾಕಿ ಕುಡಿಯಿರಿ.

ಸೋಡಾ

ಸೋಡಾ

ಸೋಡಾ ಕುಡಿಯುವುದರಿಂದ ಕೂಡ ಹುಳಿತೇಗಿನ ಸಮಸ್ಯೆಯಿಂದ ಹೊರಬರಬಹುದು.

ಪುದೀನ

ಪುದೀನ

ಪುದೀನ ಟೀ ಕೂಡ ಈ ಸಮಸ್ಯೆಗೆ ಉತ್ತಮ ಮದ್ದು.

ಬ್ಲಾಕ್ ಟೀ

ಬ್ಲಾಕ್ ಟೀ

ಒಂದು ಕಪ್ ಕಪ್ಪು ಟೀ ಕುಡಿಯುವುದರಿಂದ ಹುಳಿತೇಗಿನಿಂದ ಹೊರಬಹುದು.

ಸೊಂಪು ಕಾಳು

ಸೊಂಪು ಕಾಳು

ಸೊಂಪು ಕಾಳುಗಳನ್ನು ಜಗಿಯುವುದರಿಂದ ತೇಗು ನಿಲ್ಲುತ್ತದೆ. ಇದು ನಿಧಾನಗತಿಯ ಪ್ರಕ್ರಿಯೆಯಾಗುವುದರಿಂದ ತಾಳ್ಮೆ ಬೇಕು.

ಕೆಮೊಮೆಲ್ ಟೀ

ಕೆಮೊಮೆಲ್ ಟೀ

ಈ ಟೀಯನ್ನು ತೇಗಿನ ಸಮಸ್ಯೆಯಿಂದ ಬಳಲುತ್ತಿರುವಾಗ ಕುಡಿದರೆ ಆರಾಮವೆನಿಸುತ್ತದೆ.

ಸೆಲರಿ

ಸೆಲರಿ

ಸೆಲರಿಯನ್ನು ಹಸಿಯಾಗಿ ತಿನ್ನುವುದು ಒಳ್ಳೆಯದು. ಇದರಿಂದ ಸಮಸ್ಯೆ ಶೀಘ್ರವಾಗಿ ಪರಿಹಾರವಾಗುತ್ತದೆ.

ಏಲಕ್ಕಿ ಟೀ

ಏಲಕ್ಕಿ ಟೀ

ಬಿಸಿ ಬಿಸಿಯಾದ ಏಲಕ್ಕಿ ಟೀಯನ್ನು ಊಟದ ನಂತರ ಕುಡಿಯುವುದರಿಂದ ಹುಳಿತೇಗಿನ ಸಮಸ್ಯೆ ನಿವಾರಣೆಯಾಗುತ್ತದೆ.

ಶುಂಠಿ

ಶುಂಠಿ

ಶುಂಠಿ ತುರಿ ಅಥವ ಶುಂಠಿ ಟೀ ನಿಮ್ಮ ಸಮಸ್ಯೆಗೆ ಹೆಚ್ಚು ಸುರಕ್ಷಿತ ಮತ್ತು ಸಹಜ ಪರಿಹಾರವನ್ನು ಒದಗಿಸಬಲ್ಲುದು.

ತಣ್ಣಗಿನ ಹಾಲು

ತಣ್ಣಗಿನ ಹಾಲು

ನಿಧಾನವಾಗಿ ತಣ್ಣಗೆ ಮಾಡಿದ ಹಾಲನ್ನು ಕುಡಿಯುವುದರಿಂದ ಈ ಸಮಸ್ಯೆಯಿಂದ ಶೀಘ್ರವಾಗಿ ಪಾರಾಗಬಹುದು.

ಲವಂಗ

ಲವಂಗ

ಲವಂಗ ಮತ್ತೊಂದು ಮನೆಮದ್ದು. ತೇಗನ್ನು ನಿಲ್ಲಿಸಲು ಒಂದು ಲವಂಗವನ್ನು ತಿನ್ನಿ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣಿನ ಬಳಕೆಯಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು. ಇವು ಹೊಟ್ಟೆಯಿಂದ ಗಾಳಿ ಸರಾಗವಾಗಿ ಹೊರಹೋಗಲು ನೆರವು ನೀಡುತ್ತವೆ.

ವೀಟ್ ಬ್ರೆಡ್

ವೀಟ್ ಬ್ರೆಡ್

ತೇಗು ಬಂದಾಗ ಬ್ರೆಡ್ ನ ಒಂದು ಪೀಸನ್ನು ತಿನ್ನಿ. ಇದರಿಂದ ಸಮಸ್ಯೆಯನ್ನು ಇದು ತಡೆಯುತ್ತದೆ.

ನಿಂಬೆ ಹಣ್ಣಿನ ಪಾನಕ

ನಿಂಬೆ ಹಣ್ಣಿನ ಪಾನಕ

ಒಂದು ಲೋಟ ನಿಂಬೆ ಹಣ್ಣಿನ ಪಾನಕವನ್ನು ಸಕ್ಕರೆ ಹಾಕದೆ ಕುಡಿಯುವುದು ಈ ಸಮಸ್ಯೆಗೆ ಉತ್ತಮ ಪರಿಹಾರವಾಗಬಲ್ಲುದು.

ಮೊಸರು

ಮೊಸರು

ಒಂದು ಕಪ್ ಮೊಸರನ್ನು ತಿನ್ನುವುದು ಕೂಡ ಔಷಧವಾಗಿ ಕೆಲಸ ಮಾಡುತ್ತದೆ. ಇದರಿಂದ ಸಮಸ್ಯೆ ನಿಧಾನವಾಗಿ ಕಡಿಮೆಯಾಗುವುದನ್ನು ನೀವೇ ನೋಡುವಿರಿ.

Read more about: health ಆರೋಗ್ಯ
English summary

Stop Constant Burping With Home Remedies

After a heavy meal, one of the most common things which you would normally experience is constant burping. When you have this problem, you feel very uncomfortable and restless too.
Story first published: Wednesday, December 4, 2013, 13:13 [IST]
X
Desktop Bottom Promotion