For Quick Alerts
ALLOW NOTIFICATIONS  
For Daily Alerts

ಈಗ ಎಲ್ಲಿ ನೋಡಿದರೂ, ಸ್ಟೈಲಿಶ್ ಕುರ್ತಾ‌ಗಳದ್ದೇ ದರ್ಬಾರ್!

By Jayasubramanya
|

ನಾವು ಧರಿಸುವ ದಿರಿಸು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂಬ ಮಾತಿದೆ. ಆದ್ದರಿಂದಲೇ ನಿಮ್ಮ ಆಕಾರ ಮತ್ತು ಅಂದಕ್ಕೆ ಅನುಗುಣವಾಗಿ ದಿರಿಸಿನ ಆಯ್ಕೆ ಮತ್ತು ಧರಿಸುವಿಕೆಯನ್ನು ನಾವು ಮಾಡಬೇಕಾಗುತ್ತದೆ. ನೀವು ಹೆಚ್ಚು ದಪ್ಪನಾಗಿದ್ದು ದಿರಿಸನಲ್ಲಿ ಸಣ್ಣಗೆ ಬಳುಕುವ ಬಳ್ಳಿಯಂತೆ ಕಾಣಬೇಕು ಎಂದಿದ್ದಲ್ಲಿ ಅದಕ್ಕಾಗಿ ಕೆಲವೊಂದು ಸೂತ್ರಗಳನ್ನು ನೀವು ಅನುಸರಿಸಿಕೊಳ್ಳಬೇಕಾಗುತ್ತದೆ. ಇಂದಿನ ಲೇಖನದಲ್ಲಿ ದಿರಿಸುಗಳನ್ನು ಹೇಗೆ ಧರಿಸಬೇಕು ಮತ್ತು ಅವುಗಳ ಆಯ್ಕೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದೇವೆ.

ಉಡುಪಿನ ವಿನ್ಯಾಸಕಾರರು ಹೇಳುವಂತೆ ನೀವು ಧರಿಸುವ ಉಡುಪು ಎಷ್ಟು ಬೆಲೆಯದ್ದು ಮತ್ತು ಹೇಗಿದೆ ಎಂಬುದನ್ನು ಆಧರಿಸಿರುವುದಿಲ್ಲ, ಬದಲಿಗೆ ಅದನ್ನು ನೀವು ಹೇಗೆ ಧರಿಸಿದ್ದೀರಿ ಮತ್ತು ಅದರ ಪ್ರದರ್ಶನ ಹಾಗೂ ಅದರಲ್ಲಿ ನಿಮ್ಮ ಆರಾಮವನ್ನು ಇದು ಹೇಗೆ ಪ್ರತಿನಿಧಿಸುತ್ತದೆ ಎಂದಾಗಿದೆ...

ಬಟ್ಟೆಯ ಗುಣಮಟ್ಟ

ಬಟ್ಟೆಯ ಗುಣಮಟ್ಟ

ಬಟ್ಟೆಯ ಗುಣಮಟ್ಟ ಎಲ್ಲರ ಗಮನವನ್ನು ಸೆಳೆಯುತ್ತದೆ. ನೀವು ಪಾರ್ಟಿಗೆ ಧರಿಸುವ ಸಲ್ವಾರ್ ಅನ್ನು ಆರಿಸಿಕೊಂಡಿದ್ದಲ್ಲಿ ಅದನ್ನು ಉತ್ತಮ ಸ್ಟೋರ್‌ನಿಂದ ಖರೀದಿಸಿ. ಸಲ್ವಾರ್ ಕಮೀಜ್ ಆನ್‌ಲೈನ್ ತಾಣ ಇದಕ್ಕೆ ಸೂಕ್ತವಾದುದು. ಬಟ್ಟೆಯ ಗುಣಮಟ್ಟಕ್ಕೆ ಗಮನ ಹರಿಸಿ. ಶಿಫಾನ್, ನೈಲಾನ್ ಮತ್ತು ಪಾಲಿಸ್ಟರ್ ಧರಿಸಲು ಆರಾಮದಾಯಕವಾಗಿರುತ್ತದೆ.

ಫಿಟ್ ಆಗಿರಿ

ಫಿಟ್ ಆಗಿರಿ

ನಿಮಗೆ ಬೇಕಾದ ಔಟ್‌ಫಿಟ್‌ನಲ್ಲಿ ಆರಾಮವಾಗಿರಿ. ಸಣ್ಣ ಗಾತ್ರ ಅಥವಾ ದೊಡ್ಡ ಗಾತ್ರವನ್ನು ಬಳಸದಿರಿ. ಭಾರತೀಯ ದಿರಿಸಿನಲ್ಲಿ ದೇಹಕ್ಕೊಪ್ಪುವ ವಿನ್ಯಾಸವನ್ನು ಆರಿಸಿ ಧರಿಸಬೇಕು. ಟೈಟ್ ಫಿಟ್ ಅನ್ನೇ ಬಳಸಿ.

ಸಲ್ವಾರ್‌ನ ಹೊಸ ಸ್ಟೈಲ್‌ಗಳು

ಸಲ್ವಾರ್‌ನ ಹೊಸ ಸ್ಟೈಲ್‌ಗಳು

ಇಂದಿನ ದಿನಗಳಲ್ಲಿ ನಿಮಗೆ ಸಲ್ವಾರ್ ಬೇರೆ ಬೇರೆ ಸ್ಟೈಲ್‌ಗಳಲ್ಲಿ ಲಭ್ಯವಿದೆ. ಶರಾರಾ ಪ್ಯಾಂಟ್ಸ್, ಪಲಾಜೊ, ಕೌಲ್ ಸ್ಟೈಲ್ ಪ್ಯಾಂಟ್‌ಗಳನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ. ನಿಮಗೆ ಉತ್ತಮವಾಗಿ ಕಾಣುವಂತಹದ್ದನ್ನೇ ಆಯ್ಕೆ ಮಾಡಿ...

ಬೇರೆ ಬೇರೆ ವಿನ್ಯಾಸದ ದುಪ್ಪಟ್ಟಾಗಳು

ಬೇರೆ ಬೇರೆ ವಿನ್ಯಾಸದ ದುಪ್ಪಟ್ಟಾಗಳು

ನಿಮಗೆ ದುಪ್ಪಟ್ಟಾ ಇಷ್ಟವೆಂದಾದರೆ ಬೇರೆ ಬೇರೆಯದ್ದನ್ನು ಆರಿಸಿಕೊಳ್ಳಿ. ಡಿಸೈನರ್ ಕುರ್ತಾದಲ್ಲಿ ದುಪ್ಪಟ್ಟಾವನ್ನು ಹೇಗೆ ಧರಿಸುತ್ತೀರಿ ಎಂಬುದು ನಿಮ್ಮ ಆಯ್ಕೆಯಾಗಿರುತ್ತದೆ. ನೀವು ದುಪ್ಪಟ್ಟಾವನ್ನು ಧರಿಸಿಕೊಳ್ಳುವ ರೀತಿ ಮುಖ್ಯವಾಗಿರುತ್ತದೆ.

ನೆಕ್‌ಲೈನ್ ವಿನ್ಯಾಸ

ನೆಕ್‌ಲೈನ್ ವಿನ್ಯಾಸ

ಈಗಿನ ಟ್ರೆಂಡಿ ನೆಕ್‌ಲೈನ್ ಅನ್ನು ಆರಿಸಿಕೊಳ್ಳಿ. ನಿಮ್ಮ ದಿರಿಸಿಗೆ ಹೊಂದುವಂತಹ ನೆಕ್‌ಲೈನ್ ಆಯ್ಕೆಯನ್ನು ಮಾಡಿಕೊಳ್ಳಿ. ಉದ್ದನೆಯ ಕುತ್ತಿಗೆಯುಳ್ಳವರು ಬೇರೆ ಬೇರೆ ವಿನ್ಯಾಸದ ನೆಕ್‌ಲೈನ್ ಅನ್ನು ಪ್ರಯತ್ನಿಸಬಹುದಾಗಿದೆ.

ದಿರಿಸಿಗೆ ಕಾಂಟ್ರಾಸ್ಟ್ ಟಚ್ ನೀಡಿ

ದಿರಿಸಿಗೆ ಕಾಂಟ್ರಾಸ್ಟ್ ಟಚ್ ನೀಡಿ

ತುಂಬಾ ಬೋರಾಗಿರುವ ಔಟ್‌ಫಿಟ್ ಧರಿಸುವುದನ್ನು ಮರೆತುಬಿಡಿ. ಬೇರೆ ಬೇರೆ ಬಣ್ಣಗಳು ಮತ್ತು ವಿನ್ಯಾಸವನ್ನು ಆಯ್ದುಕೊಳ್ಳಿ. ಬೇರೆ ಬೇರೆ ಕುರ್ತಾವನ್ನು ಬೇರೆ ಬೇರೆ ಬಣ್ಣಗಳಲ್ಲಿ ಬಳಸುವುದನ್ನು ಆರಂಭಿಸಿ.

ವಿಭಿನ್ನ ಕುರ್ತಾ ಸ್ಟೈಲ್‌ಗಳು

ವಿಭಿನ್ನ ಕುರ್ತಾ ಸ್ಟೈಲ್‌ಗಳು

ಒಂದೇ ರೀತಿಯ ಕುರ್ತಾವನ್ನು ಟ್ರೈ ಮಾಡುವ ಬದಲಿಗೆ ವಿಭಿನ್ನತೆಯನ್ನು ಅಳವಡಿಸಿಕೊಳ್ಳಿ. ಮಾರುಕಟ್ಟೆಯಲ್ಲಿರುವ ವಿಭಿನ್ನ ಸ್ಟೈಲ್‌ಗಳನ್ನು ನಿಮ್ಮದಾಗಿಸಿಕೊಳ್ಳಿ. ಅನಾರ್ಕಲಿಗಳಲ್ಲಿ ಕೂಡ ಈಗ ಬೇರೆ ಬೇರೆ ಸ್ಟೈಲ್ ಬಂದಿದ್ದು ಅದನ್ನು ಪ್ರಯತ್ನಿಸಿ. ಇಂದಿನ ಲೇಖನದಲ್ಲಿ ನಾವು ನೀಡಿರುವ ಬೇರೆ ಬೇರೆ ಕುರ್ತಾ ಸ್ಟೈಲ್‌ಗಳನ್ನು ನೀವು ಕಂಡಿದ್ದೀರಿ ಮತ್ತು ಅವನ್ನು ಧರಿಸುವುದನ್ನು ಮರೆಯದಿರಿ.

English summary

Ways To Try Ethnic Wear With New Style & Difference

You may have ample options in your wardrobe: bright to subtle, small to large, patterns to no patterns and embellished to embroidered. But do you have the picks that add variation? Well, here is the catch? Today, no one looks forward to adorning the same kind of style both in western wear and ethnic wear as well.
Story first published: Tuesday, February 14, 2017, 19:54 [IST]
X
Desktop Bottom Promotion