For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಫ್ಯಾಷನ್ ವೀಕ್ 2016- ಮೊದಲ ದಿನದ ಝಲಕ್

By Jaya
|

ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ 2016 ಸರ್ವಾಲಂಕಾರಗೊಂಡು ಫ್ಯಾಷನ್ ಸಪ್ತಾಹಕ್ಕೆ ಅಣಿಯಾಗಿದೆ. ಫ್ಯಾಷನ್ ಆಸಕ್ತರು ಮನಮೋಹಕ ಉಡುಗೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಲಿದ್ದು ಫ್ಯಾಷನ್ ನಿಪುಣರು ತಮ್ಮ ಕ್ರಿಯಾತ್ಮಕ ಫ್ಯಾಷನ್ ರಸದೌತಣವನ್ನು ಇಲ್ಲಿ ಉಣಬಡಿಸಲಿದ್ದಾರೆ.

ಗೌರವ್ ಗುಪ್ತಾ, ರೀನಾ ಬರ್ಸ್ಟ್, ಪಲ್ಲವಿ ಮೋಹನ್‌ರ ಕೈಚಳಕ ಖಂಡಿತವಾಗಿಯೂ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವುದು ಖಂಡಿತ.ಅಮೆಜಾನ್ ಇಂಡಿಯಾದ ಪ್ರಥಮ ದಿನದಂದು ನಾವು ಈ ಪ್ರಖ್ಯಾತ ವಿನ್ಯಾಸಕಾರರ ಸೂಪರ್ ಸಂಗ್ರಹವನ್ನು ನಿಮ್ಮ ಮುಂದೆ ಇರಿಸಲಿದ್ದೇವೆ. ಶರತ್ಕಾಲ/ಚಳಿಗಾಲದ ಸಂಗ್ರಹಣೆಯನ್ನು ಇದು ಒಳಗೊಂಡಿದ್ದು ನೋಡುಗರ ಕಣ್ಣಿಗಂತೂ ಇದು ಹಬ್ಬವನ್ನುಂಟು ಮಾಡುವುದು ಸಹಜವಾಗಿದೆ. ಹಾಗಿದ್ದರೆ ಇನ್ನೇಕೆ ತಡ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಪ್ರಸಿದ್ಧ ವಿನ್ಯಾಸಕಾರರ ವಸ್ತ್ರ ವಿನ್ಯಾಸಗಳತ್ತ ಗಮನ ಹರಿಸಿ....

ಗೌರವ್ ಗುಪ್ತಾ

ಗೌರವ್ ಗುಪ್ತಾ

ಬದಲಾಗುತ್ತಿರುವ ಹವಾಮಾನಕ್ಕೆ ಸೂಕ್ತ ದಿರಿಸುಗಳ ಸಂಗ್ರಹಣೆಗಳೊಂದಿಗೆ ಗೌರವ್ ಗುಪ್ತಾ ಫ್ಯಾಷನ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಗೌರವ್ ಗುಪ್ತಾರ ಫ್ಯಾಷನ್ ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಿರುವ ಈ ಚೆಲುವೆಯ ಅಂದದ ದಿರಿಸು ನಿಜಕ್ಕೂ ಮನಕ್ಕೆ ಮುದವನ್ನು ನೀಡುವಂತಿದೆ.

ಪಲ್ಲವಿ ಮೋಹನ್ ಕಲೆಕ್ಷನ್

ಪಲ್ಲವಿ ಮೋಹನ್ ಕಲೆಕ್ಷನ್

ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ 2016 ನಲ್ಲಿ ಪಲ್ಲವಿ ಸಂಗ್ರಹಣೆಯು ಮನಕ್ಕೆ ಮುದ ನೀಡುವಂತಿದೆ. ಆಕೆಯ ಉಡುಗೆಗಳನ್ನು ಪ್ರದರ್ಶಿಸುತ್ತಿದ್ದ ಪ್ರತಿಯೊಬ್ಬ ರೂಪದರ್ಶಿಯೂ ವಿಭಿನ್ನವಾಗಿರುವ ಸ್ಟೈಲಿಶ್ ಉಡುಗೆಗಳನ್ನು ಪ್ರದರ್ಶಿಸಿದ್ದಾರೆ. ಅಂತೆಯೇ ಹೆಚ್ಚು ಸರಳವಾಗಿತ್ತು.

ಹೇಮಂತ್ ಮತ್ತು ನಂದಿತಾರ ಕಲೆಕ್ಷನ್ಸ್

ಹೇಮಂತ್ ಮತ್ತು ನಂದಿತಾರ ಕಲೆಕ್ಷನ್ಸ್

ಪಾರ್ಟಿಗಳಲ್ಲಿ ಚಿತ್ತ ಕಲಕುವ ದಿರಿಸುಗಳಾಗಿದೆ ಹೇಮಂತ್ ಮತ್ತು ನಂದಿತಾರ ಕಲೆಕ್ಷನ್ಸ್. ಭೂಮಿಯ ಬಣ್ಣ, ಗಾಢ ಕೆಂಪು ಮತ್ತು ಕ್ಯಾರೊಕಲ್ ಗ್ರೇ ಬಣ್ಣಗಳೇ ರಾಂಪ್‌ನಲ್ಲಿ ಹೆಚ್ಚು ಮೆರೆದಾಡಿದೆ.

ವರುಣ್ ಬಾಲಾರ ಮಾಡರ್ನ್ ವುಮನ್

ವರುಣ್ ಬಾಲಾರ ಮಾಡರ್ನ್ ವುಮನ್

ವೈಭವೋಪೇತ ದಿರಿಸುಗಳ ಸಂಗ್ರಹದೊಂದಿಗೆ ಮನಸೆಳೆಯುವ ಕೌಶಲ್ಯ ವರುಣ್ ಬಾಲಾ ದಿರಿಸುಗಳಿಗಿದೆ. ಸರಳ ಉಡುಗೆಗಳನ್ನು ಕಣ್ಣಿಗೆ ಆಕರ್ಷಕವಾಗಿ ತೋರಿಸುವ ಕಲೆ ವರುಣ್‌ಗೆ ಕರತಲಾಮಲಕವಾಗಿದೆ.

ಶಂತನು ಮತ್ತು ನಿಕಿಲ್

ಶಂತನು ಮತ್ತು ನಿಕಿಲ್

ಮೂಲತಃ ನವದೆಹಲಿಯ ನಿವಾಸಿಗಳಾದ ಶಂತನು ಮತ್ತು ನಿಕಿಲ್‌ರ ಚಳಿಗಾಲದ 2016 ರ ಸಂಗ್ರಹಣೆಯು ಕಣ್ಣಿಗೆ ಅದ್ಭುತವಾದ ನೋಟವನ್ನು ನೀಡಿದೆ. ಪಾಶ್ಚಿಮಾತ್ಯ ಉಡುಗೆಗಳನ್ನು ದೇಸೀಯವಾಗಿ ಬಣ್ಣಿಸುವ ಕಲೆಯನ್ನು ನಾವಿಲ್ಲಿ ಕಾಣಬಹುದಾಗಿದೆ.

ರೀನಾ ಬರ್ಸ್ಟ್

ರೀನಾ ಬರ್ಸ್ಟ್

80 ದಶಕದಿಂದಲೂ ರೀನಾ ಫ್ಯಾಷನ್ ಕ್ಷೇತ್ರಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆಯನ್ನು ಗಳಸಿಕೊಂಡಿದ್ದಾರೆ. ರಫಲ್ಸ್ ಮತ್ತು ಸಿಲ್‌ಹೌಟ್ಸ್ ಇವರ ಫ್ಯಾಷನ್ ವಿನ್ಯಾಸಗಳಲ್ಲಿ ಪ್ರಸಿದ್ಧವು. ನಿಟ್ ವೇರ್ ಸ್ಟಿಚ್ ಫ್ಯಾಬ್ರಿಕ್ ಅನ್ನು ಸಂಗ್ರಹಣೆಯು ಆಧರಿಸಿದೆ. ಸ್ವೆಟರ್ ಅನ್ನು ದಿರಿಸಿಗೆ ಮಾರ್ಪಡಿಸುವ ಕಲಾತ್ಮಕತೆಯನ್ನು ನಮಗಿಲ್ಲಿ ಕಾಣಬಹುದಾಗಿದೆ. ಗಾಢ ಶರತ್‌ಕಾಲದ ಬಣ್ಣಗಳನ್ನು ಆಕೆ ಆಯ್ಕೆ ಮಾಡಿದ್ದು ನಿಜಕ್ಕೂ ಆಕೆಯ ಕಲಾತ್ಮಕತೆಯನ್ನು ಇದು ತೋರಿಸಿದೆ.

English summary

Amazon india fashion week 2016: First day designer collection

Amazon India Fashion Week 2016 A/W has made our hearts skip a million beats. The ensembles on the ramp are worth a second look and each of them are designed in such a way that it captivates our mind in an instant.
Story first published: Thursday, March 17, 2016, 18:06 [IST]
X
Desktop Bottom Promotion