ನಟಿ ಶ್ರೀದೇವಿ-ಇಳಿ ವಯಸ್ಸಿನಲ್ಲೂ ಪಾದರಸದ ಹುರುಪು!

By: Jaya subramanya
Subscribe to Boldsky

ತಮ್ಮ ಇಳಿ ವಯಸ್ಸಿನಲ್ಲೂ ಸುಂದರಿಯಾಗಿ ಕಾಣಿಸುವುದು ತುಸು ಕಷ್ಟದ ಕೆಲಸವೇ ಆಗಿದೆ. ವಯಸ್ಸನ್ನು ಮರೆಸಿ ಯವ್ವನವನ್ನು ಹೊಮ್ಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ. ಈ ಸಾಲಿನಲ್ಲಿ ಪ್ರಸ್ತುತ ಕನಸಿನ ಕನ್ಯೆ ಹೇಮಮಾಲಿನಿ, ರೇಖಾ, ಜಯಪ್ರದ ಮೊದಲಾದ ಸಿನಿ ತಾರೆಯನ್ನು ಹೆಸರಿಸಬಹುದಾಗಿದೆ.

Sridevi

ಈಗ ಇನ್ನೊಬ್ಬ ಸುಂದರಿ ಶ್ರೀದೇವಿ ಕೂಡ ತಮ್ಮ ಇಳಿಹರೆಯವನ್ನು ಮರೆಮಾಚಿ ಬಾಲಿವುಡ್‌ನ ತರುಣಿಯರನ್ನು ನಾಚಿಸುಂತಹ ಸೌಂದರ್ಯದ ಬೆಡಗಿನಿಂದ ಕಂಗೊಳಿಸುತ್ತಿದ್ದಾರೆ. ತಮ್ಮ ಸೌಂದರ್ಯವನ್ನು ಒಂದಿನಿತೂ ಕುಂದದಂತೆ ಕಾಪಾಡಿಕೊಂಡು ಬರುತ್ತಿರುವ ಶ್ರೀದೇವಿ ಯಾವುದೇ ದಿರಿಸಿನಲ್ಲೂ ಯಾವುದೇ ಮೇಕಪ್‌ನಲ್ಲಿ ಕೂಡ ಮೀರಿಸುವ ಚೆಲುವನ್ನು ಬಹಿರಂಗಪಡಿಸುತ್ತಿದ್ದಾರೆ.

Sridevi

ಇತ್ತೀಚೆಗೆ ತಮಿಳು ಚಿತ್ರ 'ಪುಲಿ'ಯಲ್ಲೂ ಕೂಡ ನಟಿಸಿ ತಮ್ಮ ಅಂದವನ್ನು ಇನ್ನೊಮ್ಮೆ ಜಗಜ್ಜಾಹೀರುಗೊಳಿಸಿದ್ದಾರೆ. ಅಂತೂ ಶ್ರೀದೇವಿ ತಮ್ಮ ಅಂದವನ್ನು ಕಾಪಾಡಿಕೊಳ್ಳಲು ಸಖತ್ತಾಗಿ ವರ್ಕೌಟ್ ಅನ್ನು ಮಾಡುತ್ತಿದ್ದಾರೆ ಎಂದು ಹೇಳಲು ಅಡ್ಡಿಯೇನಿಲ್ಲ.

Sridevi

ಇತ್ತೀಚೆಗೆ ಶ್ರೀದೇವಿ ತಮ್ಮ ಅಂದವನ್ನು ಪ್ರಸ್ತುತಪಡಿಸಿರುವುದು ನೆಲಮುಟ್ಟುವ ಉದ್ದವನ್ನು ಹೊಂದಿರುವ ಗಾಢ ಹಳದಿ ದಿರಿಸಿನಲ್ಲಾಗಿದೆ. ಇದು ವೃತ್ತಾಕಾರದ ಕುತ್ತಿಗೆ ವಿನ್ಯಾಸವನ್ನು ಪಡೆದುಕೊಂಡಿದ್ದು ಗೌನ್ ಕೆಳಭಾಗದಲ್ಲಿ ನೆರಿಗೆಗಳನ್ನು ಹೊಂದಿದೆ. ಸರಳವಾಗಿ ಸುಂದರವಾಗಿ ಕಾಣುತ್ತಿರುವ ಗೌನ್ ಶ್ರೀದೇವಿಗೆ ಅಂದವಾಗಿ ಕಾಣುತ್ತಿದೆ. ಈ ದಿರಿಸಿಗಾಗಿ ಶ್ರೀದೇವಿ ಪೋನಿಟೇಲ್ ಕೇಶವಿನ್ಯಾಸವನ್ನು ಆಯ್ದುಕೊಂಡಿದ್ದು ಶ್ರೀದೇವಿಯ ಅಂದವನ್ನು ಇದು ಎದ್ದುಗಾಣಿಸಿದೆ.

Sridevi

ಇನ್ನೊಂದು ನೋಟದಲ್ಲಿ ಶ್ರೀದೇವಿ ಬಿಳಿ ಬಣ್ಣದ ಉದ್ದನೆಯ ಗೌನ್ ಅನ್ನು ಧರಿಸಿದ್ದು ಇದು ಬಿಳಿ ಸ್ಕರ್ಟ್ ಮತ್ತು ಬಿಳಿ ಶರ್ಟ್‌ನಿಂದ ಮೋಡಿ ಮಾಡುವಂತಿದೆ. ಎತ್ತರದ ಪೋನಿಟೇಲ್‌ನಲ್ಲಿ ಕೇಶಾಲಂಕಾರವನ್ನು ಮಾಡಿಕೊಂಡಿರುವ ಶ್ರೀದೇವಿ ಅದ್ಭುತ ಸುಂದರಿಯಾಗಿ ಕಾಣುತ್ತಿದ್ದಾರೆ.

Story first published: Wednesday, January 25, 2017, 16:53 [IST]
English summary

Sridevi Refuses To Look Old & We Are With Her!

Sridevi's back to back lookbooks! We are crushing over her boho looks and you'll too.There is something about Kapoor clan that makes them look young forever. Let's talk about Anil Kapoor or rather Sridevi who refuse to look older.
Please Wait while comments are loading...
Subscribe Newsletter