ಏನ್ ಚಂದಾನೇ ಶ್ರದ್ಧಾ, ನಿನ್ನ ಉಡುಗೆ-ತೊಡುಗೆ!

By: Jaya subramanya
Subscribe to Boldsky

ಶ್ರದ್ಧಾ ಕಪೂರ್ ತಮ್ಮ ಚಿತ್ರ ರಾಕ್ ಆನ್ 2 ನ ಪ್ರಮೋಷನ್ ಅನ್ನು ಭರ್ಜರಿಯಾಗಿಯೇ ನಡೆಸುತ್ತಿದ್ದು ತಮ್ಮ ಚಿತ್ರದ ಪ್ರಮೋಷನ್ ಕಾರ್ಯಕ್ಕಾಗಿ ಶ್ರದ್ಧಾ ಒಂದಿನಿತೂ ಆಯಾಸವನ್ನು ತೋರ್ಪಡಿಸದೇ ತಮ್ಮ ವಿಧವಿಧದ ದಿರಿಸುಗಳಿಂದ ಚಿತ್ರ ಪ್ರಚಾರವನ್ನು ಕೈಗೊಂಡಿದ್ದಾರೆ.

ಇಂದಿನ ಲೇಖನದಲ್ಲಿ ಶ್ರದ್ಧಾರವರ ಭಿನ್ನ ಭಿನ್ನ ದಿರಿಸುಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದು, ನಿಜಕ್ಕೂ ಶ್ರದ್ಧಾರವರ ನೋಟ ಅವರ ಒನಪು ವಯ್ಯಾರ, ಸೌಂದರ್ಯ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

ಶ್ರದ್ಧಾ ಕಪೂರ್
 

ಬೆಂಗಳೂರಿನ ಪ್ರಚಾರ ಕಾರ್ಯಕ್ರಮದಲ್ಲಿ
ಪ್ಲಕಿಂಗರ್ ವಿನ್ಯಾಸಪಡಿಸಿದ ಗ್ರೀನ್ ಟ್ಯೂಬ್ ದಿರಿಸನ್ನು ಶ್ರದ್ಧಾ ಆಯ್ದುಕೊಂಡಿದ್ದಾರೆ. ದಿರಿಸುಗಳಲ್ಲಿ ಬಂದಿರುವ ನೆರಿಗೆಯನ್ನು ನಾವು ಬಹುವಾಗಿಯೇ ಮೆಚ್ಚಿಕೊಂಡಿದ್ದೇವೆ. ತಮ್ಮ ಕೂದಲನ್ನು ಎತ್ತಿಕಟ್ಟಿಕೊಂಡಿದ್ದಾರೆ ಅಂತೆಯೇ ಲೊಬ್ಟಿನ್ ಚಪ್ಪಲಿಗಳನ್ನು ಧರಿಸಿದ್ದಾರೆ.

ಶ್ರದ್ಧಾ ಕಪೂರ್
 

ರಾಕ್ ಆನ್ ಟ್ರೈಲರ್ ಲಾಂಚ್
ರಾಕ್ ಸ್ಟಾರ್ ದಿರಿಸನ್ನೇ ಶ್ರದ್ಧಾ ಈ ಕಾರ್ಯಕ್ರಮಕ್ಕಾಗಿ ಆಯ್ದುಕೊಂಡಿದ್ದಾರೆ. ಕಪ್ಪು ಮೆಶ್ ದಿರಿಸನ್ನು ಶ್ರದ್ಧಾ ತೊಟ್ಟಿದ್ದಾರೆ. ವಲಿಯನ್ ಕಿವಿಯಾಭರಣಗಳನ್ನು ಶ್ರದ್ಧಾ ತೊಟ್ಟುಕೊಂಡಿದ್ದಾರೆ. ನಿಜಕ್ಕೂ ಇದು ಅತ್ಯಂತ ಸುಂದರವಾಗಿದೆ ಅಲ್ಲವೇ?

ಶ್ರದ್ಧಾ ಕಪೂರ್
 

ರಾಕ್ ಆನ್ ಪ್ರಮೋಷನ್ ಪ್ರಥಮ ಬಾರಿಗೆ
ಸ್ಟೈಲಿಶ್ ಆಗಿರುವ ದಿರಿಸಿನಲ್ಲಿ ಪ್ರಥಮ ಬಾರಿಗೆ ರಾಕ್ ಆನ್ ಚಿತ್ರದ ಪ್ರಮೋಷನ್ ಅನ್ನು ಶ್ರದ್ಧಾ ಮಾಡಿದ್ದಾರೆ. ಸಣ್ಣ ಸ್ಕರ್ಟ್ ಅನ್ನು ಶ್ರದ್ಧಾ ತೊಟ್ಟುಕೊಂಡಿದ್ದು ಟೈಅಪ್ ಸ್ಯಾಂಡಲ್‎ಗಳನ್ನು ಧರಿಸಿದ್ದಾರೆ. ಡಾರ್ಕ್ ಆಗಿ ಕಣ್ಣಿನ ಮೇಕಪ್ ಅನ್ನು ಶ್ರದ್ಧಾ ಮಾಡಿಕೊಂಡಿದ್ದಾರೆ.

ಶ್ರದ್ಧಾ ಕಪೂರ್
 

ಪ್ರಮೋಷನ್ ವೇಳೆಯಲ್ಲಿ
ಪ್ರಮೋಷನ್ ಸಮಯದಲ್ಲಿ, ಪ್ರಿಂಟೆಡ್ ಸಪರೇಟ್ಸ್ ಧರಿಸಿ ಸೋಜಿಗವನ್ನುಂಟು ಮಾಡಿದ್ದಾರೆ. ಕಪಿಲ್ ಶರ್ಮಾ ಶೋ ಪ್ರಮೋಷನ್ ವೇಳೆಯಲ್ಲಿ ಶ್ರದ್ಧಾ ಕಪಿಲ್ ಶರ್ಮಾ ವೇಳೆಯಲ್ಲಿ ಸುಮನ್ ಬಿ ನೀಲಿ ಗೌನ್ ಅನ್ನು ಆಯ್ಕೆಮಾಡಿಕೊಂಡಿದ್ದಾರೆ. ಒಂದೇ ಬದಿಯಲ್ಲಿ ಪೋನಿಟೇಲ್ ಅನ್ನು ಹಾಕಿ ಆಕೆ ಇನ್ನಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಶ್ರದ್ಧಾ ಕಪೂರ್
 

ಔರಂಗಾಬಾದ್ ಪ್ರಮೋಶನ್ ವೇಳೆಯಲ್ಲಿ
ಚರ್ಮದ ಶೂಗಳನ್ನು ಧರಿಸಿ ರೋಹಿತ್ ಗಾಂಧಿ ರಾಹುಲ್ ಕನ್ನಾ ಪ್ರಿಂಟೆಡ್ ಟಿಶರ್ಟ್ ಅನ್ನು ತೊಟ್ಟುಕೊಂಡಿದ್ದಾರೆ. ತಮ್ಮ ಜೀನ್ಸ್ ಆಯ್ಕೆಯನ್ನು ಆಕೆ ಟಾಪ್ ಶಾಪ್‎ನಿಂದ ಮಾಡಿದ್ದಾರೆ. ಸಂದರ್ಶನದಲ್ಲಿ ಭುಜದಲ್ಲಿ ಕಟ್ ಔಟ್ ಅನ್ನು ಹೊಂದಿರುವ ಪಿಂಕ್ ಟಾಪ್ ಅನ್ನು ಶ್ರದ್ಧಾ ಧರಿಸಿದ್ದು ನೀಲಿ ಜೀನ್ಸ್ ಅನ್ನು ತೊಟ್ಟಿದ್ದಾರೆ.

ಶ್ರದ್ಧಾ ಕಪೂರ್
 

ಬಿಗ್ ಬಾಸ್ ಪ್ರಮೋಶನ್ ವೇಳೆಯಲ್ಲಿ
ಕ್ಲಾಸಿ ಕಾರ್ಪೋರೇಟ್ ಲುಕ್‎ನಲ್ಲಿ ಈ ಬಾರಿ ಶ್ರದ್ಧಾ ಗಮನ ಸೆಳೆದಿದ್ದಾರೆ. ಆಶಿಶ್ ಎನ್ ಸೋನಿ ವಿನ್ಯಾಸದ ಪ್ಯಾಂಟ್ ಸೂಟ್ ಅನ್ನು ಶ್ರದ್ಧಾ ಆಯ್ದುಕೊಂಡಿದ್ದಾರೆ.

ಶ್ರದ್ಧಾ ಕಪೂರ್
 

ಪೂನಾದಲ್ಲಿ ಪ್ರಮೋಷನ್ ಸಮಯದಲ್ಲಿ
ಪೆಡ್ಡಾರ್ ಸ್ಲೀವ್ ಲೆಸ್ ಜಾಕೆಟ್‎ನೊಂದಿಗೆ ಶ್ರದ್ಧಾ ಡಲ್ ಸಪರೇಟ್ಸ್ ಅನ್ನು ಆರಿಸಿದ್ದಾರೆ.

ಶ್ರದ್ಧಾ ಕಪೂರ್
 

ಹೈದ್ರಾಬಾದ್ ಪ್ರೆಸ್ ಕಾನ್ಫರೆನ್ಸ್
ಡೆನಿಮ್ ಶರ್ಟ್ ಜೊತೆಗೆ ಲೈನ್ ಬ್ರೌನ್ ಲೆದರ್ ಸ್ಕರ್ಟ್ ಅನ್ನು ಶ್ರದ್ಧಾ ಈ ಬಾರಿ ತೊಟ್ಟುಕೊಂಡಿದ್ದಾರೆ. ಸೂಡ್ ಬೂಟ್ಸ್ ಅನ್ನು ಮ್ಯಾಚಿಂಗ್ ಆಗಿ ಶ್ರದ್ಧಾ ತೊಟ್ಟಿದ್ದಾರೆ.

English summary

shraddha-kapoor-rock-on-2-promotional-lookbook

Shraddha Kapoor is extensively promoting Rock On 2. Since the launch of the said movie, Shraddha has not seen a lazy day. And neither did our fashion radar which was silently speculating Shraddha's Rock On 2 promotional outfits. Her wardrobe showcases a variety of lookbooks. She has not restricted herself to emo rockstar lookbook. She has swayed a bit towards chic casuals and feminine maxis too. Now, let's scroll through and take a look at these heart throbbing closet
Please Wait while comments are loading...
Subscribe Newsletter