ಕರಾವಳಿಯ ಬ್ಯೂಟಿ ಕ್ವೀನ್ ಶಿಲ್ಪಾ ಶೆಟ್ಟಿಯ ಫ್ಯಾಷನ್ ಝಲಕ್!

By: Jaya subramanya
Subscribe to Boldsky

ಬಾಲಿವುಡ್‌ನ ಯುವ ತಾಯಿ ಎಂದೇ ಕರೆಯಿಸಿಕೊಂಡಿರುವ ಶಿಲ್ಪಾ ಶೆಟ್ಟಿ, ದಿನದಿಂದ ದಿನಕ್ಕೆ ತಮ್ಮ ಸೌಂದರ್ಯವನ್ನು ನಳನಳಿಸಿಕೊಳ್ಳುತ್ತಿದ್ದಾರೆ. ಈಗಲೂ ತಮ್ಮ ಅದೇ ದೇಹ ಸೌಂದರ್ಯವನ್ನು ಉಳಿಸಿಕೊಂಡು ಬಂದಿರುವ ನಟಿ ಯಾವುದೇ ದಿರಿಸಿನಲ್ಲು ಕೂಡ ಸೈ ಎಂದೆನ್ನಿಸಿಕೊಂಡಿದ್ದಾರೆ.

Shilpa Shetty
 

ಇತ್ತೀಚೆಗೆ ಕಾರ್ಯಕ್ರಮವೊಂದಕ್ಕಾಗಿ ಶಿಲ್ಪಾ ರಿಧಿ ಮೆಹ್ರಾ ಲೆಹೆಂಗಾವನ್ನು ಧರಿಸಿದ್ದರು. ಪೀಚ್ ಬಣ್ಣದ ಈ ಲೆಹೆಂಗಾದಲ್ಲಿ ಹೊಳೆಯುವ ಅಂಚುಗಳೂ ಇದ್ದು, ವಿ - ಆಕಾರದ ರವಿಕೆಯನ್ನು ಇದು ಹೊಂದಿದೆ. ಕೆಂಪು ಸಣ್ಣ ಗುಲಾಬಿ ವಿನ್ಯಾಸವನ್ನು ಇದು ಪಡೆದುಕೊಂಡಿದೆ.

ತಮ್ಮ ದಿರಿಸಿಗೆ ತಕ್ಕಂತೆ ಶಿಲ್ಪಾ ತಮ್ಮ ಮೇಕಪ್‌ಗೂ ಗಮನ ಕೊಟ್ಟಿದ್ದು ಲೈಟ್ ಮೇಕಪ್‌ನಿಂದ ಶಿಲ್ಪಾ ಸುಂದರಿಯಾಗಿ ಕಾಣುತ್ತಿದ್ದರು. ಕಣ್ಣು ಮತ್ತು ಕೆನ್ನೆಗೆ ತಿಳಿಯಾಗಿ ಮೇಕಪ್ ಮಾಡಿಕೊಂಡು, ಹೆಚ್ಚು ಆತ್ಮವಿಶ್ವಾಸದಿಂದ ಶಿಲ್ಪಾ ಹೊಳೆಯುತ್ತಿದ್ದರು.

Shilpa Shetty
 

ದುಬಾರಿ ಉಂಗುರ ಮತ್ತು ಬ್ರೇಸ್‌ಲೇಟ್ ಅನ್ನು ಲೆಹೆಂಗಾಗೆ ಸರಿಹೊಂದುವಂತೆ ಶಿಲ್ಪಾ ಆಯ್ಕೆಮಾಡಿಕೊಂಡಿದ್ದು ಪೀಚ್ ಬಣ್ಣದ ಕಿವಿಯಾಭರಣವನ್ನು ತೊಟ್ಟುಕೊಂಡಿದ್ದರು. ಅವರ ಡೈಮಂಡ್ ಆಕಾರದ ಮುಖಕ್ಕೆ ಇದು ಸೂಕ್ತ ಹೊಂದಿಕೆ ಎಂದೆನಿಸಿತ್ತು.

Shilpa Shetty
 

ತಮ್ಮ ಗುಂಗುರು ಮಾದರಿಯ ಕೇಶ ವಿನ್ಯಾಸವನ್ನು ಶಿಲ್ಪಾ ಮುಂದಕ್ಕೆ ಇಳಿಬಿಟ್ಟಿದ್ದು ತಿಳಿಯಾದ ಮೇಕಪ್‌ನಿಂದ ಶಿಲ್ಪಾ ಮುದ್ದಾಗಿ ಕಾಣಿಸಿಕೊಂಡಿದ್ದರು. ತಮ್ಮ ಲೆಹೆಂಗಾದಿಂದ ಇನ್ನಷ್ಟು ಸುಂದರವಾಗಿ ತಮ್ಮ ಸೆಕ್ಸಿ ದೇಹವಿನ್ಯಾಸವನ್ನು ಶಿಲ್ಪಾ ಪ್ರದರ್ಶಿಸಿದ್ದು ಆಕೆಯ ಸೌಂದರ್ಯ ಪ್ರಜ್ಞೆಗೆ ಮೆಚ್ಚಲೇಬೇಕು.

English summary

Shilpa Shetty Dons A Lehenga Like A Queen!!

We're sure you will fall in love with Shilpa Shetty's pastel peach super-sleek Lehenga as much as we have. Shilpa definitely caught the right amount of attention in this Ridhi Mehra lehenga! Abundant with glitter, beauty, and glamour, Shilpa Shetty looked like a princess in the pastel peach lehenga.
Please Wait while comments are loading...
Subscribe Newsletter