ಬಳುಕುವ ಬಳ್ಳಿ 'ಕಂಗನಾ ರಣಾವತ್‌' ರವರ ಸ್ಟೈಲಿಶ್ ಲುಕ್

By: Jaya subramanya
Subscribe to Boldsky

ಬಾಲಿವುಡ್‌ನಲ್ಲಿ ಪ್ರಸ್ತುತ ತಮ್ಮ ಪ್ರಸ್ತುತತೆಯನ್ನು ಸಾರುತ್ತಿರುವ ಕಂಗನಾ ರಣಾವತ್ ಪ್ರತಿಭಾವಂತ ನಾಯಕಿ ಎಂದೆನಿಸಿದ್ದಾರೆ. ಪ್ರತಿಭೆಯನ್ನು ಹೊರಹಾಕುವಂತಹ ಪಾತ್ರಗಳನ್ನೇ ಕಂಗನಾ ಆರಿಸಿಕೊಂಡು ಸೈ ಅನ್ನಿಸಿಕೊಂಡು ಸದ್ಯಕ್ಕೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ ಎಂದೆನಿಸಿದ್ದಾರೆ.

Kangana Ranaut

ದಿರಿಸುಗಳ ಆಯ್ಕೆಯಲ್ಲೂ ಹೆಚ್ಚು ಜಾಣೆಯಾಗಿರುವ ಕಂಗಾನ ತಾವು ಧರಿಸಿರುವ ದಿರಿಸಿಗೆ ಹೇಗೆ ತಮ್ಮನ್ನು ಪ್ರಸ್ತುತ ಪಡಿಸಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಅರಿತವರಾಗಿದ್ದಾರೆ. ಸೂಟ್, ಸೀರೆ, ಪ್ರಿನ್ಸಸ್ ಗೌನ್ ಹೀಗೆ ಕಂಗನಾ ಟ್ರೈ ಮಾಡದ ಉಡುಪುಗಳೇ ಇಲ್ಲ ಎಂದೆನ್ನಬಹುದು.

Kangana Ranaut

ಇತ್ತೀಚೆಗೆ ತಾನೇ ಕಂಗನಾ ಈವೆಂಟ್ ಒಂದರಲ್ಲಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದರು. ಸಿಂಡ್ರಲ್ಲಾ ಪಾತ್ರದಲ್ಲೂ ಕಂಗನಾ ಬೆಸ್ಟ್ ಎಂಬುದನ್ನು ಈ ದಿರಿಸು ಎದ್ದು ಕಾಣಿಸುತ್ತಿತ್ತು.

Kangana Ranaut

60 ರ ಬಾಲ್ ಗೌನ್ ಮಾದರಿಯಲ್ಲಿ ಈ ದಿರಿಸನ್ನು ವಿನ್ಯಾಸಗೊಳಿಸಲಾಗಿತ್ತು. ದಿರಿಸಿಗೆ ಹೊಂದಿಕೆಯಾಗುವಂತೆ ಕಂಗನಾ ವಜ್ರದ ನೆಕ್ಲೇಸ್ ಮತ್ತು ಕಿವಿಯಾಭರಣಗಳನ್ನು ತೊಟ್ಟುಕೊಂಡಿದ್ದರು.

Kangana Ranaut

ಅಂತೆಯೇ ತಮ್ಮ ಕೇಶವಿನ್ಯಾಸವನ್ನು ಕೂಡ ದಿರಿಸಿಗೆ ಒಪ್ಪುವಂತೆ ಅವರು ಮಾಡಿಕೊಂಡಿದ್ದರು. ಅಂತೂ ಸಿಂಡ್ರೆಲ್ಲಾ ದಿರಿಸು ಮತ್ತು ಅದರಂತೆಯೇ ಮಾಡಿಕೊಂಡ ಮೇಕಪ್‌ಗಳಿಂದ ಕಂಗನಾ ರಾಜ ಕುಮಾರಿಯಂತೆ ಕಂಗೊಳಿಸಿದ್ದಂತೂ ಸುಳ್ಳಲ್ಲ.

Story first published: Saturday, February 25, 2017, 23:43 [IST]
English summary

Kangana Looks like A Doll In This Beautiful Blush Pink Gown

Kangana is fearless and flawless when it comes to baring fashion like a true fashionista. There are no fashion inhibitions in Kangana Ranaut's walkin closet.
Please Wait while comments are loading...
Subscribe Newsletter