ಕಣ್ಮನ ಸೆಳೆದ ದೀಪಿಕಾರ ನವನವೀನ ವಿನ್ಯಾಸದ ಲೆಹೆಂಗಾ ಮೋಡಿ!

By: jaya subramanya
Subscribe to Boldsky

ಸೆಲೆಬ್ರಿಟಿಗಳು ತಮ್ಮ ಒಂದೊಂದು ಸಿನಿಮಾದಲ್ಲಿ ತೊಡುವ ದಿರಿಸುಗಳಿಂದ ಹೆಚ್ಚು ಪ್ರಸಿದ್ಧರಾಗುತ್ತಾರೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಅದರಲ್ಲೂ ಚಿತ್ರದ ನಾಯಕಿ ತೊಡುವ ದಿರಿಸು ಅಭಿಮಾನಿಗಳ ಮನವನ್ನು ಕದಿಯುವುದಂತೂ ನಿಜ.

ಇಂದಿನ ಲೇಖನದಲ್ಲಿ ದೀಪಿಕಾ ಧರಿಸಿರುವ ಲೆಹೆಂಗಾ ಪರಿಚಯವನ್ನು ನಾವು ಮಾಡಿಕೊಡಲಿದ್ದೇವೆ. ಡಿಪ್ಪಿ ತಮ್ಮ ಪ್ರತಿಯೊಂದು ಚಿತ್ರದಲ್ಲಿ ಧರಿಸಿರುವ ಲೆಹೆಂಗಾ ಕೂಡ ನವೀನತೆಯನ್ನು ಪಡೆದುಕೊಂಡಿದೆ. ಕೆಲವು ಸರಳತೆಯಿಂದ ಇದ್ದರೆ ಇನ್ನು ಕೆಲವು ಗ್ರ್ಯಾಂಡ್ ಆಗಿ ಕಣ್ಮನವನ್ನು ಆಕರ್ಷಿಸುವಂತಿದೆ. ಯಾವೆಲ್ಲಾ ಬಣ್ಣದ ವಿನ್ಯಾಸದ ಲೆಹೆಂಗಾದಲ್ಲಿ ದೀಪಿಕಾ ಚೆಲುವೆಯಾಗಿ ಕಾಣುತ್ತಿದ್ದಾರೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ....

ನೀಲಿ ಸೀರೆ ಲೆಹೆಂಗಾ

ಚೆನ್ನೈ ಎಕ್ಸ್‎ಪ್ರೆಸ್ ಚಿತ್ರದಲ್ಲಿ ದೀಪಿಕಾ ಈ ಸುಂದರವಾದ ಶಿಫಾನ್ ಲೆಹೆಂಗಾವನ್ನು ಧರಿಸಿದ್ದರು. ಇದು ಸರಳವಾಗಿದ್ದು ನೀಲಿ ದುಪ್ಪಟ್ಟಾವನ್ನು ಹೊಂದಿದೆ.

ಕೆಂಪು ಲೆಹೆಂಗಾ

ರಾಮ್‎ಲೀಲಾ ಚಿತ್ರದಲ್ಲಿ ಗುಜರಾತಿ ಕ್ರಿಯಾತ್ಮಕತೆಯನ್ನು ಪಡೆದುಕೊಂಡಿರುವ ಲೆಹೆಂಗಾ ದೀಪಿಕಾ ತೊಟ್ಟು ಕೊಂಡಿರುವಂತಹದ್ದಾಗಿದೆ.

ಹಳದಿ ಮತ್ತು ಹಸಿರು ಲೆಹೆಂಗಾ

ಹಳದಿ ಲೆಹೆಂಗಾಗೆ ಹಸಿರು ಮತ್ತು ಕಿತ್ತಳೆ ಬಣ್ಣದ ದುಪ್ಪಟ್ಟಾವನ್ನು ದೀಪಿಕಾ ತೊಟ್ಟುಕೊಂಡಿದ್ದಾರೆ.

ನೀಲಿ ಲೆಹೆಂಗಾ

ನೀಲಿ ಕಾಟನ್ ಲೆಹೆಂಗಾ ನಮ್ಮ ಕಣ್ಣನ್ನು ಆಕರ್ಷಿಸುತ್ತಿದೆ. ಸರಳವಾದ ಕಾಟನ್ ಲೆಹೆಂಗಾಗೆ ಜೊತೆಯಾಗಿ ಪಿಂಕ್ ಬ್ಲೌಸ್ ಅನ್ನು ದೀಪಿಕಾ ತೊಟ್ಟುಕೊಂಡಿದ್ದಾರೆ.

ಬೀಜ್ ಲೆಹೆಂಗಾ

ಬಾಜೀರಾವ್ ಮಸ್ತಾನಿಯಲ್ಲಿ ದೀಪಿಕಾ ತೊಟ್ಟುಕೊಂಡಿರುವ ಈ ಲೆಹೆಂಗಾದಲ್ಲಿ ಸುಂದರಿಯಾಗಿ ಕಾಣುತ್ತಿರುವ ದೀಪಿಕಾ

ಹೊಳೆಯುವ ಬಿಳಿ ಲೆಹೆಂಗಾ

ಬಾಜೀರಾವ್ ಚಿತ್ರದಲ್ಲಿ ತಮ್ಮ ಬಿಳಿ ಲೆಹೆಂಗಾದಿಂದ ಮನಸೆಳೆದ ಡಿಪ್ಪಿ

ಗೋಲ್ಡನ್ ಬ್ಲೌಸ್ ಲೆಹೆಂಗಾ

ಬ್ರೇಕ್ ಕೆ ಬಾದ್ ಚಿತ್ರದಲ್ಲಿ ದೀಪಿಕಾ ಈ ಲೆಹೆಂಗಾವನ್ನು ತೊಟ್ಟುಕೊಂಡಿದ್ದರು

ಕಪ್ಪು ಮತ್ತು ಗುಲಾಬಿ ಲೆಹೆಂಗಾ

ರಾಮ್‎ಲೀಲಾ ಚಿತ್ರದಲ್ಲಿ ದೀಪಿಕಾ ಧರಿಸಿದ ಕಪ್ಪು ಮತ್ತು ಗುಲಾಬಿ ಬಣ್ಣದ ಲೆಹೆಂಗಾ

ಕಿತ್ತಳೆ ಮತ್ತು ಪಿಂಕ್ ಲೆಹೆಂಗಾ

ಚೆನ್ನೈ ಎಕ್ಸ್‎ಪ್ರೆಸ್ ಚಿತ್ರದಲ್ಲಿ ದೀಪಿಕಾರ ಈ ಲೆಹೆಂಗಾವನ್ನು ಯಾರಿಗಾದರೂ ಮರೆಯಲು ಸಾಧ್ಯವೇ?

ಹೊಳೆಯುವ ನೀಲಿ ಲೆಹೆಂಗಾ

ಅಂಜು ಮೋದಿ ವಿನ್ಯಾಸಗೊಳಿಸಿರುವ ಬಾಜೀ ರಾವ್ ಮಸ್ತಾನಿಯಲ್ಲಿ, ಮಸ್ತಾನಿಯ ಪಾತ್ರ ನಿರ್ವಹಿಸಿದ ದೀಪಿಕಾರ ಲೆಹೆಂಗಾ ನಿಜಕ್ಕೂ ಕಣ್ಣುಕೋರೈಸುವಂತಿದೆ.

ಗುಲಾಬಿ ಬಣ್ಣದ ಲೆಹೆಂಗಾ

ಸಾಂಪ್ರದಾಯಿಕ ಗುಲಾಬಿ ಬಣ್ಣದ ಪ್ರಿಂಟ್ ಲೆಹೆಂಗಾವನ್ನು ಬಾಜೀರಾವ್ ಮಸ್ತಾನಿಯ ಒಂದು ಚಿತ್ರದಲ್ಲಿ ತೊಟ್ಟು ಕಂಗೊಳಿಸಿದ್ದಾರೆ.

ಬಿಳಿ ಲೆಹೆಂಗಾ

ಸಿಲ್ವರ್ ಪೈಪಿಂಗ್ ಅನ್ನು ಹೊಂದಿರುವ ಬಿಳಿ ಲೆಹೆಂಗಾವನ್ನು ದೀಪಿಕಾ ರಾಮ್ ಲೀಲಾ ಚಿತ್ರದಲ್ಲಿ ಧರಿಸಿದ್ದಾರೆ.

ಹಾಟ್ ಪಿಂಕ್ ಲೆಹೆಂಗಾ

ಪಿಂಕ್ ಬ್ರಾ ಬ್ಲೌಸ್ ಅನ್ನು ಹಳದಿ ಬಣ್ಣದ ಲೆಹೆಂಗಾಗೆ ಕಾಂಬಿನೇಶನ್‎ನಂತೆ ದೀಪಿಕಾ ತೊಟ್ಟುಕೊಂಡಿದ್ದಾರೆ. ಯೆ ಜವಾನಿ ಹೇ ದಿವಾನಿ ಚಿತ್ರದ ದೃಶ್ಯ ಇದಾಗಿದೆ.

ಬಿಳಿ ಲೆಹೆಂಗಾ

ಯೆ ಜವಾನಿ ಹೇ ದಿವಾನಿ ಚಿತ್ರದಲ್ಲಿ ದೀಪಿಕಾ ಧರಿಸಿರುವ ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣವಾಗಿರುವ ಲೆಹೆಂಗಾ ಸುಂದರವಾಗಿದೆ.

 

English summary

deepika padukone lehenga in movies take a look

There is something about Deepika Padukone's lehengas. She wears them so well. No matter if it's in the movies or for promotions. Talking about the movies, Deepika Padukone is that one actress in Bollywood who has sported the most beautiful lehengas in her movies.
Please Wait while comments are loading...
Subscribe Newsletter