ನೀಲಿ ಗೌನ್‌ನಲ್ಲಿ ಮಿರಿ-ಮಿರಿ ಮಿಂಚಿದ ಐಶ್ವರ್ಯಾ ರೈ

By: Jaya subramanya
Subscribe to Boldsky

ಐಶ್ವರ್ಯಾ ರೈ ಬಚ್ಚನ್ ಪ್ರಸ್ತುತ ಬಾಲಿವುಡ್‎ನಲ್ಲಿ ತಮ್ಮ ಝಲಕ್ ಅನ್ನು ಹರಿಸುತ್ತಿರುವ ಬೆಡಗಿಯಾಗಿದ್ದಾರೆ. ಹೆಣ್ಣು ಮಗುವಿನ ತಾಯಿಯಾಗಿದ್ದರೂ ಐಶ್ ತಮ್ಮ ಸೌಂದರ್ಯವನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಹೆಸರಾಂತ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಎಂದೆನಿಸಿದ್ದಾರೆ. ಪ್ರಸ್ತುತ ಚಿತ್ರ ಯೇ ದಿಲ್ ಹೇ ಮುಷ್ಕಿಲ್‎ನಲ್ಲೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಇಂದಿಗೂ ತಾವು ಬಾಲಿವುಡ್ ರಾಣಿ ಎಂಬುದನ್ನು ಖಾತ್ರಿಪಡಿಸಿದ್ದಾರೆ.

Aishwarya Rai
 

ಪ್ರಸ್ತುತ ಐಶ್ ನೋಯ್ಡಾದಲ್ಲಿ ನಡೆದ ಲಾಂಗಿನಸ್ ಸ್ಟೋರ್ ಲಾಂಚ್‎ನಲ್ಲಿ ಐಶ್ ಇನ್ನೂ ಮುದ್ದಾಗಿ ಕಾಣುತ್ತಿದ್ದರು. ಇದಕ್ಕಾಗಿ ಐಶ್ ಆರಿಸಿಕೊಂಡಿದ್ದ ದಿರಿಸು ನೀಲಿ ಬಣ್ಣದ ಸೊಫೆಸ್ಟಿಕೇಟೆಡ್ ಗೌನ್ ಆಗಿದ್ದು ಇದನ್ನು ವಿನ್ಯಾಸಪಡಿಸಿದವರು ಮನೀಶ್ ಮಲ್ಹೋತ್ರಾ ಆಗಿದ್ದಾರೆ. ಗೌನ್ ನಿಜಕ್ಕೂ ಐಶ್‎ರನ್ನು ಇನ್ನಷ್ಟು ಸುಂದರಿಯಾಗಿಸಿದ್ದು ಅವರು ಹದಿಹರೆಯದವರಂತೆ ನಳನಳಿಸುತ್ತಿದ್ದರು.

Aishwarya Rai

ನೆಲಕ್ಕೆ ತಾಗುತ್ತಿದ್ದ ಗೌನ್ ನಡುವಿನಲ್ಲಿ ಫ್ಲೋರಲ್ ಸೊಂಟದ ಬೆಲ್ಟ್ ಅನ್ನು ಒಳಗೊಂಡಿತ್ತು. ಗೌನ್ ಕ್ಯಾಪ್ ಸ್ಲೀಬ್ ಅನ್ನು ಹೊಂದಿದ್ದು ಐಶ್‎ರನ್ನು ಬೊಂಬೆಯಂತೆ ಕಂಗೊಳಿಸುವಂತೆ ಮಾಡಿದೆ. ಸರಳವಾದ ಅಲಂಕಾರದಲ್ಲಿ ಐಶ್ ನಮ್ಮ ಮನಗೆದ್ದಿದ್ದು ಆಕೆಯ ಸೌಂದರ್ಯ ಪ್ರಜ್ಞೆ ಅಚ್ಚರಿ ಮೂಡಿಸುವಂತಿದೆ.

Aishwarya Rai
 

English summary

Aishwarya Rai at launch of longines store noida

Aishwarya Rai Bachchan is the most beautiful woman in the world. And when this beautiful woman channels her fashion correctly, she sets everything around her on fire. Recently, the actress was spotted attending Longines store launch in Noida. For this event, Aish picked a chic and sophisticated blue satin gown by Manish Malhotra.
Please Wait while comments are loading...
Subscribe Newsletter