For Quick Alerts
ALLOW NOTIFICATIONS  
For Daily Alerts

ಮೆಹೆಂದಿ ಸಮಾರಂಭ: ನಿಮ್ಮ ದಿರಿಸಿನ ಆಯ್ಕೆ ಹೇಗಿದ್ದರೆ ಚೆಂದ?

By Super
|

ಮದುವೆಯೆಂಬುದು ಜೀವಮಾನದಲ್ಲಿ ನಡೆಯುವ ಸುಂದರ ಸಮಾರಂಭಗಳಲ್ಲಿ ಅಗ್ರಗಣ್ಯವಾಗಿ ನಿಲ್ಲುವ ಕಾರ್ಯಕ್ರಮವಾಗಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ನೀವು ಹೇಗೆ ಕಾಣಬೇಕೆಂದು ಮೊದಲೆ ಆಲೋಚಿಸಿಕೊಂಡಿರುತ್ತೀರಿ. ಮುಹೂರ್ತ ಮತ್ತು ಆರತಕ್ಷತೆ ಅಷ್ಟೇ ಅಲ್ಲ, ಈ ಸಮಾರಂಭದ ಸಣ್ಣ ಸಣ್ಣ ವಿಚಾರಗಳು ಕೂಡ ಅತ್ಯಂತ ಸುಂದರವಾಗಿರಬೇಕು ಎಂದು ನಾವು ಸಹ ಬಯಸುತ್ತೇವೆ.

ನೀವು ಅದನ್ನು ತಪ್ಪಿಸಿಕೊಳ್ಳಬಾರದು ಎಂದು ನಾವು ಈ ಅಂಕಣದಲ್ಲಿ ಗಮನಹರಿಸಿದ್ದೇವೆ. ಮೆಹೆಂದಿ ಕಾರ್ಯಕ್ರಮವು ಸಹ ಮದುವೆಗಳಲ್ಲಿ ಒಂದು ಪ್ರಮುಖ ಭಾಗವಾಗಿರುತ್ತದೆ. ಇದಕ್ಕೆ ವಧುವು ಧರಿಸುವ ಉಡುಗೆಯು ಮದುವೆಯ ಉಡುಗೆಗಳಲ್ಲಿಯೆ ಕಡೆ ಸ್ಥಾನವನ್ನು ಪಡೆದಿರುತ್ತದೆ. ಕಾರಣ ಈ ಕಾರ್ಯಕ್ರಮ ಮನೆಯಲ್ಲಿ ನಡೆಯುತ್ತದೆ ಮತ್ತು ಅಷ್ಟೇನು ಇದು ದೊಡ್ಡ ಕಾರ್ಯಕ್ರಮವಲ್ಲವಾದ್ದರಿಂದ ಹೀಗೆ ಆಗುವುದು ಸಹಜ. ಊಹೆಗೂ ನಿಲುಕದ ಹರಳೆಣ್ಣೆಯ ಸೌಂದರ್ಯವರ್ಧಕ ಗುಣಗಳು

ಈ ಸಮಾರಂಭವು ಮನೆಯಲ್ಲಿಯೇ ನಡೆದರೂ, ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆಗೆ ನಡೆದರೂ, ಇದು ನಿಮ್ಮ ಬಾಳಿನಲ್ಲಿ ವಿಶೇಷ ಅರ್ಥವನ್ನು ಹೊಂದಿರುವ ಮೆಹೆಂದಿಯಾಗಿರುತ್ತದೆ. ಇದು ಕೇವಲ ಸೌಂದರ್ಯಕ್ಕಾಗಿ ಹಾಕಿಕೊಳ್ಳುವ ಮೆಹೆಂದಿಗಿಂತ ಮಿಗಿಲಾಗಿ ಗುರುತಿಸಲ್ಪಡುತ್ತದೆ. ಇಲ್ಲಿ ನೀವು ಫೋಟೋಗ್ರಾಫರ್‌ಗಳ ಮತ್ತು ಬಂದು ಹೋಗುವವರ ಕಣ್ಣುಗಳ ಕೇಂದ್ರ ಬಿಂದುವಾಗಿರುತ್ತೀರಿ.

ಇಲ್ಲಿನ ಕ್ಷಣ ಕ್ಷಣಗಳು ನಿಮ್ಮ ಬಾಳಿನ ಅಮೂಲ್ಯ ಕ್ಷಣಗಳಾಗಿರುತ್ತವೆ!. ಹಾಗಾಗಿ ಮೆಹೆಂದಿ ಸಮಾರಂಭದಲ್ಲಿ ನೀವು ಆಕರ್ಷಕವಾಗಿ ಕಾಣಲು ನಾವು ನಿಮಗಾಗಿ ಕೆಲವೊಂದು ಸೂಪರ್ ಸ್ಟೈಲಿಷ್ ಆದ ಸಲಹೆಗಳನ್ನು ನೀಡುತ್ತಿದ್ದೇವೆ.

ಬಣ್ಣಗಳ ಜೊತೆಗೆ ಆಕರ್ಷಕವಾಗಿ ಕಾಣಿರಿ

ಬಣ್ಣಗಳ ಜೊತೆಗೆ ಆಕರ್ಷಕವಾಗಿ ಕಾಣಿರಿ

ಒಂದು ವೇಳೆ ನೀವು ನಿಜವಾಗಿ ಬಾಲಿವುಡ್‍ನ ಅಭಿಮಾನಿಯಾಗಿದ್ದಲ್ಲಿ, ನಿಮಗೆ ನಿಮ್ಮ ಮೆಚ್ಚಿನ ನಟಿಯ ಸ್ಫೂರ್ತಿ ಇರುತ್ತದೆ. ಅಲ್ಲಿ ನಿಮ್ಮ ನೆಚ್ಚಿನ ನಟಿಯ ರೀಲ್ ಅಥವಾ ರಿಯಲ್ ಲೈಫಿನ ಚಿತ್ರಣ ನಿಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ಉದಾಹರಣೆಗೆ ಕಾಜೋಲ್ ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದಲ್ಲಿ ಧರಿಸಿದ ಎಲೆ ಹಸಿರು ಬಣ್ಣದ ಉಡುಗೆ ಅಥವಾ ಜುಬೇದಾದಲ್ಲಿ ಕರಿಷ್ಮಾ ಕಪೂರ್ ಧರಿಸಿದ ಬಿಳಿಯ ಉಡುಗೆ ಅಥವಾ ತಾವೇ ಖುದ್ದಾಗಿ ವಧುಗಳಾದಾಗ ಐಶ್ವರ್ಯ ರೈ, ವಿದ್ಯಾಬಾಲನ್, ಇಶಾ ಅಥವಾ ಅಹನಾ ಡಿಯೋಲ್ ಧರಿಸಿದ ಟ್ರೆಂಡಿಯಾಗಿರುವ ಉಡುಗೆಗಳು ಹೀಗೆ ನಿಮಗೆ ಹಲವಾರು ಸ್ಫೂರ್ತಿದಾಯಕವಾದ ಉಡುಗೆಗಳು ನಿಮಗೆ ಲಭಿಸಬಹುದು. ಈ ಸಮಾರಂಭಕ್ಕೆ ಕಿತ್ತಳೆ, ಹಳದಿ, ಹಸಿರು ಅಥವಾ ವಿವಿಧ ಬಣ್ಣಗಳ ಸಂಯೋಜನೆಯನ್ನು ಹೊಂದಿರುವ ಶೇಡ್‍ಗಳು ನಿಮಗೆ ಒಪ್ಪಬಹುದು. ಈ ಎದ್ದುಕಾಣುವಂತಹ ಹೊಳೆಯುವ ಬಣ್ಣಗಳು ನಿಮ್ಮನ್ನು ಭಾವಚಿತ್ರಗಳಲ್ಲಿ, ಎದ್ದು ಕಾಣುವಂತೆ ಮಾಡುತ್ತವೆ. ಒಂದು ವೇಳೆ ನಿಮಗೆ ಹೊಳೆಯುವ ಬಣ್ಣಗಳು ಇಷ್ಟವಾಗದಿದ್ದಲ್ಲಿ, ತಿಳಿ ಗುಲಾಬಿ, ತಿಳಿ ಹಳದಿ ಅಥವಾ ವೈಡೂರ್ಯದಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನೀವು ಆಯ್ಕೆ ಮಾಡಿಕೊಂಡ ಬಣ್ಣಗಳು ನಿಮಗೆ ಒಪ್ಪುವಂತೆ ಇರಬೇಕು. ದುಪಟ್ಟಾಗೆ ಒಳ್ಳೆಯ ಬಾರ್ಡರ್ ಸಹ ನಿಮ್ಮ ಲುಕ್ ಅನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ.

Image Courtesy: Akansha Srivastava

ನಿಮ್ಮ ಔಟ್‍ಫಿಟ್ ಕುರಿತು ಜಾಗರೂಕರಾಗಿರಿ

ನಿಮ್ಮ ಔಟ್‍ಫಿಟ್ ಕುರಿತು ಜಾಗರೂಕರಾಗಿರಿ

ನಿಮ್ಮ ಔಟ್‍ಫಿಟ್ ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕರಾಗಿರಿ. ಅದು ನಿಮಗೆ ಸುಖಕರವಾಗಿರಬೇಕು, ಜೊತೆಗೆ ಸ್ಟೈಲಿಷ್ ಆಗಿರಬೇಕು. ಒಂದು ವೇಳೆ ನೀವು ಸಾಂಪ್ರದಾಯಿಕವಾಗಿ ಕಾಣಬೇಕೆಂದಲ್ಲಿ ಅನಾರ್ಕಲಿಗಳು ಅಥವಾ ಸಲ್ವಾರ್ ಕಮೀಜ್ ಅಥವಾ ಕುರ್ತಾಗಳು ನಿಮ್ಮ ಆಧ್ಯತೆಯಾಗಿರಲಿ. ಏಕೆಂದರೆ ಇವು ನಿಮಗೆ ಸೀರೆ, ಲೆಹೆಂಗಾ ಅಥವಾ ಘಾಗ್ರಗಳ ಬದಲಿಗೆ ಒಳ್ಳೆಯ ಆಯ್ಕೆಯಾಗಿರುತ್ತವೆ. ಇವುಗಳಲ್ಲಿ ನಿಮಗೆ ಇಷ್ಟವಾಗುವಂತಹ ಎಂಬ್ರಾಯಿಡರಿಯನ್ನು ಹೊಲೆಸಿಕೊಂಡರೆ ಒಳ್ಳೆಯದು. ಆದರೆ ನೆಕ್‍ಲೈನ್ ಖಡಾಖಂಡಿತವಾಗಿ ಇರಿಸಿಕೊಳ್ಳಲ್ಲು ಮರೆಯಬೇಡಿ. ಮೆಹೆಂದಿಯಿಂದ ಬಟ್ಟೆಗಳ ಮೇಲೆ ಕಲೆಗಳಾಗುತ್ತವೆ ಎಂದು ಚಿಂತಿಸಬೇಡಿ. ಒಂದು ವೇಳೆ ನಿಮಗೆ ಆಧುನಿಕತೆ ಇಷ್ಟವಾದಲ್ಲಿ, ಒಂದು ಜೊತೆ ಶಾರ್ಟ್‌ಗಳು, ನೀ-ಲೆಂಥ್ ಪ್ಯಾಂಟ್‍ಗಳು ಅಥವಾ ನೀ-ಲೆಂಥ್ ಸ್ಕರ್ಟ್ ಆಯ್ಕೆ ಮಾಡಿಕೊಳ್ಳಬಹುದು. ಇವುಗಳ ಮೇಲೆ ಎಂಬ್ರಾಯಿಡ್ ಮಾಡಲಾದ ಜಾಕೆಟ್ ಅಥವಾ ಟಾಪ್ ಧರಿಸಬಹುದು. ಈ ಉಡುಗೆಗಳು ನಿಮ್ಮನ್ನು ಮತ್ತಷ್ಟು ಆಕರ್ಷಕವಾಗಿ ಒಳ್ಳೆಯ ಸ್ಟೈಲ್ ಸ್ಟೇಟ್‍ಮೆಂಟ್ ಒದಗಿಸುತ್ತವೆ! ಈ ಮೇಲೆ ಒದಗಿಸಲಾಗಿರುವ ವಧುವಿನ ಚಿತ್ರವನ್ನು ಗಮನಿಸಿ.

Image Courtesy:Nagarathna

ಆಭರಣಗಳ ವಿಚಾರದಲ್ಲಿ ರಾಜಿಯಾಗಬೇಡಿ

ಆಭರಣಗಳ ವಿಚಾರದಲ್ಲಿ ರಾಜಿಯಾಗಬೇಡಿ

ಸಮಾರಂಭವು ಮನೆಯಲ್ಲಿ ನಡೆಯಲಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಯಲಿ ಯಾವುದೇ ಕಾರಣಗಳಿಗು ನಿಮಗೆ ಇಷ್ಟವಾಗುವ ಆಭರಣಗಳ ವಿಚಾರದಲ್ಲಿ ರಾಜಿಯಾಗಬೇಡಿ. ಆದರೆ ಮುಖ್ಯವಾಗಿ ನಿಮ್ಮ ಔಟ್‍ಫಿಟ್ ಜೊತೆಗೆ ಸರಿಯಾಗಿ ಹೊಂದಿಕೊಳ್ಳಬೇಕು ಎಂಬುದನ್ನು ಮರೆಯಬಾರದು. ಒಂದು ವೇಳೆ ನೀವು ಬೋಲ್ಡ್ ಆಗಿ ಕಾಣಿಸಿಕೊಳ್ಳಬೇಕೆಂದು ಬಯಸಿದಲ್ಲಿ, ಕುಂದನ್ ಸೆಟ್ ಅಥವಾ ಬಣ್ಣ ಬಣ್ಣದ ಜೆಮ್‍ಸ್ಟೋನ್‍ಗಳಿಂದ ಅಲಂಕರಿಸಿದ ಆಭರಣಗಳನ್ನು ಧರಿಸಿ. ನಿಮಗೆ ಹಿಡಿಸಿದಲ್ಲಿ ನಿಮ್ಮ ಅಮ್ಮನ ಭಾರವಾದ ಆಭರಣಗಳನ್ನು ಸಹ ಧರಿಸಬಹುದು! ಇದು ಅಲ್ಲದೆ, ನೀವು ಸರಳವಾಗಿ ಆದರೆ ಸುಂದರವಾಗಿ ಕಾಣಬೇಕೆಂದಲ್ಲಿ, ಬೆರಗುಗೊಳಿಸುವಂತಹ ಒಂದೇ ಒಂದು ಪೀಸ್ ಆಭರಣವನ್ನು ಧರಿಸಿ ಸಾಕು.

ಆಂಟಿಕ್ ಜ್ಯೂವೆಲ್ಲರಿಗಳು ಸಹ ಈ ಸಮಾರಂಭಕ್ಕೆ ವಧುವಿಗೆ ರಾಜಕಳೆಯನ್ನು ನೀಡುತ್ತವೆ. ಇದು ಸಹ ನಿಮ್ಮ ಆಯ್ಕೆಯಾದರೆ ನೀವು ಸರಳವಾಗಿ ಮತ್ತು ಸುಂದರವಾಗಿ ಕಾಣಿಸುತ್ತೀರಿ. ಇದರ ಜೊತೆಗೆ ಫ್ಲೋರಲ್ ಜ್ಯೂವೆಲ್ಲರಿಗಳು ಸಹ ಈಗ ಟ್ರೆಂಡ್ ಆಗಿವೆ. ಸೆಲೆಬ್ರಿಟಿಗಳಾದ ಆಮ್ನಾ ಶರೀಫ್, ಐಶ್ವರ್ಯಾ ರೈ, ಇಶಾ ಮತ್ತು ಅಹನಾ ಡಿಯೋಲ್‍ರವರು ತಮ್ಮ ಮೆಹೆಂದಿ ಸಮಾರಂಭಗಳಲ್ಲಿ ಇಂತಹ ಜ್ಯೂವೆಲ್ಲರಿಗಳಲ್ಲಿ ಕಾಣಿಸಿಕೊಂಡಿದ್ದರು.

Image Courtesy:Varisha Hawelia

ಮೇಕ್-ಅಪ್ ವಿಚಾರ

ಮೇಕ್-ಅಪ್ ವಿಚಾರ

ಮೇಕ್-ಅಪ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ನೀವು ಮೆಹೆಂದಿ ಹಾಕುವವರ ಮುಂದೆ ಕೈ ಮತ್ತು ಕಾಲುಗಳನ್ನು ನೀಟಿಕೊಂಡು ಸುಮಾರು ಹೊತ್ತು ಕೂರಬೇಕು. ಅದನ್ನು ಹಾಕಿದ ಮೇಲೆ ಒಣಗುವವರೆಗೆ ನೀವು ಸುಮ್ಮನೆ ಇರಬೇಕು ಎಂಬುದನ್ನು ಮರೆಯಬೇಡಿ. ಆದ್ದರಿಂದ ನಿಮ್ಮ ಮೇಕಪ್ ಟಚ್‍ಅಪ್ ನೀಡಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನೀವು ಇನ್ನೊಬ್ಬರನ್ನು ಅವಲಂಬಿಸಬೇಕು ಎಂಬುದನ್ನು ಮರೆಯಬೇಡಿ.

ವಾಟರ್-ಪ್ರೂಫ್ ಆದಂತಹ ದೀರ್ಘಕಾಲ ಬರುವಂತಹ ಮೆಕಪ್ ಈ ಸಮಾರಂಭಕ್ಕೆ ಒಳ್ಳೆಯದು. ಇದರ ಜೊತೆಗೆ ನಿಮ್ಮ ಮೇಕಪ್ ಬಣ್ಣಗಳು ಸಹ ನಿಮ್ಮ ಔಟ್‍ಫಿಟ್ ಜೊತೆಗೆ ಹೊಂದಿಕೊಳ್ಳಬೇಕು ಎಂಬುದನ್ನು ಮರೆಯಬಾರದು. ಇದಕ್ಕಾಗಿ ನೀವು ನಿಮಗೆ ಒಪ್ಪುವ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ, ಆದರೆ ಯಾವುದೇ ಕಾರಣಕ್ಕು ಅತಿಯಾಗಿ ಬಳಸಬೇಡಿ.

Image Courtesy: Varisha Hawelia

ಕೇಶಾಲಂಕಾರ

ಕೇಶಾಲಂಕಾರ

ಇನ್ನು ಕೇಶಾಲಂಕಾರದ ವಿಚಾರಕ್ಕೆ ಬಂದರೆ, ಅಂದವಾಗಿ ಗಂಟು ಹಾಕಿದ ಕೇಶಾಲಂಕಾರವು ಗಂಟೆಗಟ್ಟಲೆ ಕೂರುವ ವಧುವಿಗೆ ಶೋಭೆ ತರುತ್ತದೆ. ಒಂದು ವೇಳೆ ನೀವು ಕೂದಲನ್ನು ಹಾಗೆಯೇ ಮುಕ್ತವಾಗಿ ಬಿಡಬೇಕೆಂದಲ್ಲಿ, ಮೇಲೆ ಅದಕ್ಕೆ ಒಂದು ಪಿನ್ ಸಿಕ್ಕಿಸಿ. ಏಕೆಂದರೆ, ಇದರಿಂದ ನಿಮ್ಮ ಕೂದಲು ಮುಖದ ಮೇಲೆ ಬರುವುದಿಲ್ಲ. ನಿಮ್ಮ ಮೆಹೆಂದಿ ಚಿತ್ರಗಳು ನಿಮ್ಮ ಖುಷಿಯ ಬಗ್ಗೆ ಸಂಪುಟಗಳ ಲೆಕ್ಕದಲ್ಲಿ ಮಾತನಾಡುತ್ತದೆ. ಇದರಲ್ಲಿ ಮದುವೆಯ ಕುರಿತಾಗಿ ನಿಮ್ಮ ಖುಷಿ ಮತ್ತು ಸಂಭ್ರಮ ಕಾಣುತ್ತದೆ, ಹಾಗಾಗಿ ಆನಂದ ಪರವಶವಾಗಿರುವ ವಧುವಾಗಿ ಕಾಣಲು ಈ ಮೇಲಿನ ಸಲಹೆಗಳನ್ನು ಪಾಲಿಸಿ!

Image Courtesy: Trisha Kakkar

English summary

How to Look Stylish on Your Mehendi Ceremony

As you are all set to embrace the beautiful new phase of your life, we are sure you are carefully going through every little detail when it comes to planning for even the ceremonies that precede the wedding day.So, we have some super stylish tips that will make you look stunning on your mehendi ceremony. have a look
X
Desktop Bottom Promotion