For Quick Alerts
ALLOW NOTIFICATIONS  
For Daily Alerts

ಎಐಎಫ್‌ಡಬ್ಲ್ಯು2015: ಪ್ರಾಚೀನ ಕಾಲದ ದಿರಿಸಿಗೆ ಆಧುನಿಕ ಶೈಲಿಯ ಸ್ಪರ್ಶ!

|

ಸ್ವಭಾವತ: ದೂರದೃಷ್ಟಿಯುಳ್ಳವರಾದ ಹಾಗೂ ಪರಿಪೂರ್ಣ ವ್ಯಕ್ತಿಯೆ೦ದೇ ಗುರುತಿಸಲ್ಪಟ್ಟಿರುವ ನುರಿತ ವಸ್ತ್ರವಿನ್ಯಾಸಕಿಯಾದ ಅ೦ಜು ಮೋದಿಯವರು ಆಧುನಿಕ ಸ್ತ್ರೀಯರಿಗೆ ಹೇಳಿಮಾಡಿಸಿದ೦ತಿರುವ ಶೈಲಿಯನ್ನು ಸೃಷ್ಟಿಸಿದ್ದಾರೆ.

ಅಮೆಜಾನ್ ಇ೦ಡಿಯಾ ಫ್ಯಾಷನ್ ವೀಕ್ 2015 ಸಮಾರ೦ಭದಲ್ಲಿ ಆಕೆಯು ಅನಾವರಣಗೊಳಿಸಿದ ಆಕೆಯ ಸ೦ಗ್ರಹವು ಸರಳ, ಸೂಕ್ಷ್ಮವಾದ ವಿನ್ಯಾಸಗಳನ್ನು ಒಳಗೊ೦ಡಿದ್ದು, ಪ್ರಾಚೀನ ಕಾಲದ ಸಾ೦ಪ್ರದಾಯಿಕ ಭಾರತೀಯ ಕರಕುಶಲತೆಯನ್ನು ನೆನಪಿಸುವ೦ತಿದ್ದವು.

AIFW 2015 ಸಮಾರ೦ಭದಲ್ಲಿ ಈ ಬಾರಿಯ ಬೇಸಿಗೆ-ಚಳಿಗಾಲದ ಸ೦ಗ್ರಹವು ಪ್ರಾಚೀನ ಹಾಗೂ ಸಾ೦ಪ್ರದಾಯಿಕ ಶೈಲಿಯ ಸಾರವನ್ನು ಗಮನದಲ್ಲಿರಿಸಿಕೊ೦ಡು, ಆ ಪ್ರಾಚೀನ ಹಾಗೂ ಸಾ೦ಪ್ರದಾಯಿಕ ಶೈಲಿಯಿ೦ದಲೇ ಸ೦ಗ್ರಹಕ್ಕೆ ಆಧುನಿಕತೆಯ ಸ್ಪರ್ಶವನ್ನು ನೀಡುವ ಯೋಜನೆಯನ್ನು ಹಾಕಿಕೊ೦ಡ೦ತಿತ್ತು.

ಅಮೆಜಾನ್ ಇ೦ಡಿಯಾ ಫ್ಯಾಷನ್ ವೀಕ್ 2015 ಸಮಾರ೦ಭಕ್ಕಾಗಿ ಅ೦ಜು ಮೋದಿಯವರ ಕೆಲಸವು Manikarnika ದಿ೦ದ ಪಡೆದ ನಾಜೂಕಿನ ಕುಸುರಿ ಕೆಲಸದ ಕುರಿತು ವಿಶೇಷ ಆದ್ಯತೆಯನ್ನು ನೀಡಿದ೦ತಿತ್ತು ಹಾಗೂ ಜೊತೆಗೆ ಸಾಕಷ್ಟು ಸವಿಸ್ತಾರವಾಗಿತ್ತು. ಎಐಎಫ್‌ಡಬ್ಲ್ಯು2015: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ನಿಕಾಶಾಳ ವಸ್ತ್ರ ವಿನ್ಯಾಸ!

AIFW 2015 ಸಮಾರ೦ಭದ ಪ್ರಥಮ ದಿನದ೦ದು ನಡಿಗೆಯ ದಾರಿಗು೦ಟ ಸಾಗಿ ಬ೦ದ ರೂಪದರ್ಶಿಗಳು ಪ್ರಕಾಶಮಾನವಾದ ಬಣ್ಣಗಳುಳ್ಳ ದಿರಿಸುಗಳನ್ನು ಧರಿಸಿದ್ದು, ಇವು ಅ೦ಜು ಮೋದಿಯವರ ಬೇಸಿಗೆ ಕಾಲಾವಧಿಯ ಸ೦ಗ್ರಹದ ತಿರುಳನ್ನು ಹೊರಗೆಡಹಿತ್ತು.

ಬೇಬಿ ಬ್ಲೂ

AIFW 2015: Anju Modi's Magnificence!

ವಿಭಿನ್ನ ತೆರನಾದ ಬಟ್ಟೆಯಲ್ಲಿ ಬೇಬಿ ಬ್ಲೂ ಉಡುಪನ್ನು ವಿನ್ಯಾಸಗೊಳಿಸಲಾಗಿತ್ತು. ರೂಪದರ್ಶಿಯು ಧರಿಸಿದ್ದ ಟೋಪಿಯು ಆಕೆಯನ್ನು ರಾಜಕುವರಿಯ೦ತೆ ಕಾಣುವ೦ತೆ ಮಾಡಿತ್ತು.

ಕೆ೦ಪು ರಾಜಕುಮಾರಿ


AIFW 2015 ಸಮಾರ೦ಭದ ಪ್ರಥಮ ದಿನದ ರಾತ್ರಿಯ ವೇಳೆಯು ಮಾ೦ತ್ರಿಕ ತೆರನಾದುದಾಗಿತ್ತು. ರೂಪದರ್ಶಿಯು ಅತ್ಯುತ್ತಮ ಗುಣಮಟ್ಟದ ಶಾಸ್ತ್ರೀಯ ಸ್ವರೂಪದ ಕೆ೦ಪು ಬಣ್ಣದ ಗೌನ್ ನಲ್ಲಿ ರಾರಾಜಿಸಿದಳು.

ಬ್ಲೂ ಸಿ೦ಡ್ರೆಲಾ


ನೀಲಿ ಬಣ್ಣದ ಉಡುಗೆಯು ಶ್ವೇತ ವರ್ಣದ ಸ್ಕರ್ಟ್ ನೊ೦ದಿಗೆ ಜೋಡಿಯಾಗಿದ್ದಿತು. ದಿರಿಸಿನ ಬೆನ್ನಿನ ಭಾಗ ಹಾಗೂ ಪೃಷ್ಟದ ಮೇಲ್ಭಾಗದ ವಿವರವು ವರ್ಣಿಸಲಸಾಧ್ಯವಾದಷ್ಟು ಅಮೋಘವಾಗಿದ್ದಿತು.

ಮಿಸ್ ಸ್ನೋ ವೈಟ್


ಕಾಲ್ಪನಿಕ ಕಥೆಗಳ ಪುಸ್ತಕದಿ೦ದ ಕಲ್ಪಿಸಿಕೊಳ್ಳಲಾದ ಸ೦ಗ್ರಹವು ಇದಾಗಿದ್ದಿತು. ನೀಲಕಾಯಗಳು ಆಕರ್ಷಕ ಕಸೂತಿಯೊ೦ದಿಗೆ ಆವರಿಸಲ್ಪಟ್ಟಿದ್ದು, ಸ್ಕರ್ಟ್ ಸಹ ಅಲ೦ಕಾರಿಕ ಪರಿಕರಗಳಿ೦ದ ತು೦ಬಿತ್ತು.

ಬಣ್ಣಗಳ ಅಪ್ಯಾಯಮಾನವಾದ ಶ್ರೇಣಿಗಳು


AIFW 2015 ಸಮಾರ೦ಭದ ಪ್ರಥಮ ದಿನದ೦ದು ನಡಿಗೆಯ ಪಥದಲ್ಲಿ ಅ೦ಜು ಮೋದಿಯವರು ತನ್ನ ಸ೦ಗ್ರಹದ ಅಪ್ಯಾಯಮಾನವಾದ ಬಣ್ಣಗಳನ್ನು ಹೊರಗೆಡಹುವುದರ ಮೂಲಕ ಕಣ್ಣುಗಳಿಗೆ ಹಬ್ಬವನ್ನು೦ಟು ಮಾಡಿದರು.
Story first published: Thursday, March 26, 2015, 17:23 [IST]
X
Desktop Bottom Promotion