For Quick Alerts
ALLOW NOTIFICATIONS  
For Daily Alerts

ಎಐಸಿಡಬ್ಲ್ಯೂ 2015: ಅದ್ಧೂರಿ ಸಮಾರ೦ಭಕ್ಕೆ ವಿದ್ಯುಕ್ತ ಚಾಲನೆ

By Deepak
|

ನಾವೆಲ್ಲರೂ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015 ಆರಂಭವಾಗಿಯೇ ಬಿಟ್ಟಿತು. ಇದನ್ನು ಉದ್ಘಾಟನೆ ಮಾಡಿದವರು ಬೇರೆ ಯಾರೂ ಅಲ್ಲ, ಖ್ಯಾತ ವಿನ್ಯಾಸಕಾರರಾದ ಸಬ್ಯಸಾಚಿ ಮುಖರ್ಜಿ.

ಈ ಪ್ರತಿಭಾವಂತ ವಿನ್ಯಾಸಕಾರ ವಿಶ್ವದ ಫ್ಯಾಷನ್ ಪ್ರಿಯರ ಆಸಕ್ತಿಯನ್ನು ತಾನು ಎಂದಿಗೂ ಸುಳ್ಳು ಮಾಡುವುದಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇರುತ್ತಾರೆ.ತನ್ನ ವಿಭಿನ್ನ ಶೈಲಿಯ ಸೂಕ್ಷ್ಮ ವಿನ್ಯಾಸಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ಈತನ ಕೈಚಳಕವನ್ನು ಹೊಗಳಲು ಪದಗಳೇ ಸಾಲುವುದಿಲ್ಲ.. ಐಸಿಡಬ್ಲ್ಯೂ 2014 ಅಂಜು ಮೋದಿಯ ಕಣ್ಸೆಳೆಯುವ ವಿನ್ಯಾಸ

ಸುಂದರವಾದ ಫ್ಯಾಬ್ರಿಕ್ ಮೇಲೆ ಚಿನ್ನದ ಬಣ್ಣ, ಪಾರದರ್ಶಕ ಬಟ್ಟೆ, ಸೂಕ್ಷ್ಮವಾಗಿ ಮಾಡಲಾದ ಜರ್ದಾರಿ ಎಂಬ್ರಾಯಿಡರಿ ಮತ್ತು ಕ್ರೀಮ್ ಬಣ್ಣದ ಎಂಬ್ರಾಯಿಡ್ ಮಾಡಲಾದ ಸಿಲ್‌ಹಟ್‌ಗಳು ಬಟೆರ್ ಎಂದು ಕರೆಯಲಾಗುತ್ತಿದ್ದ ಇವರ ವಸ್ತ್ರ ಸಂಗ್ರಹಗಳಲ್ಲಿ ಎದ್ದು ಕಾಣುತ್ತಿದ್ದವು. ಇವರು ಪ್ರಸ್ತುತಪಡಿಸಿದ ಎಂಬ್ರಾಯಿಡಿಂಗ್ ಮಾಡಲಾದ ಲೆಹೆಂಗಾಗಳು ಮತ್ತು ಸೀರೆಗಳು ನೋಡುವವರ ಮನಸೂರೆಗೊಳ್ಳುತ್ತಿದ್ದವು. ನಾವು ಸಹ ಇವರ ಸಂಗ್ರಹದಲ್ಲಿದ್ದ ಅದ್ಧೂರಿಯಾದ ಕೇಪ್ ಜಾಕೆಟ್‌ಗಳು ಮತ್ತು ಲೌಬ್‌ಗಳಿಗೆ ಮನಸೋತಿದ್ದು, ಸುಳ್ಳಲ್ಲ! ನ್ಯೂ ಟ್ರೆಂಡ್ ನಲ್ಲಿರುವ ಅನಾರ್ಕಲಿ ಮತ್ತು ಸ್ಯಾರಿ

ಸಬ್ಯಸಾಚಿ ಸಾಚಿಯ ಸಂಗ್ರಹ - ಬಟೆರ್ ಕೌಚರ್ 2015 ಹೊಚ್ಚ ಹೊಸದಾದ ವಿನ್ಯಾಸಗಳನ್ನು ಹೊಂದಿದ್ದವು. ಇವುಗಳು ಯಾವುವು ಈ ಹಿಂದೆ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ ಎಂಬುದು ಸತ್ಯ. ನಾವೀನ್ಯತೆಯಿಂದ ಕೂಡಿದ್ದ ಈ ವಿನ್ಯಾಸಗಳು ಸಬ್ಯಾಸಾಚಿಯವರ ಸೃಜನಶೀಲತೆಯನ್ನು ಸಾರಿ ಸಾರಿ ಹೇಳುತ್ತಿದ್ದವು. ಪ್ರತಿ ಮಾಡೆಲ್ ಮೇಲೆ ಇದ್ದ ಈ ವಿನ್ಯಾಸಗಳು, ನೋಡಲು ಆಕರ್ಷಕವಾಗಿ, ಲಕ ಲಕ ಎಂದು ಹೊಳೆಯುತ್ತಿದ್ದವು. ಬೋಲ್ಡ್ ಆಗಿ ಎದ್ದು ಕಾಣುತ್ತಿದ್ದ ಬಣ್ಣಗಳು ಮತ್ತು ಅತ್ಯಂತ ನಾಜೂಕಿನಿಂದ ಪ್ರತಿಯೊಂದನ್ನು ಸೂಕ್ಷ್ಮವಾಗಿ ನಿರ್ಮಿಸಿದ ಉಡುಗೆಗಳು ನೋಡುವವರಿಗೆ ಫ್ಯಾಷನ್‌ನ ರಸದೌತಣವನ್ನು ನೀಡುತ್ತಿದ್ದವು...

ಕೆಂಪು ಬಣ್ಣದ ಬಳಕೆ

ಕೆಂಪು ಬಣ್ಣದ ಬಳಕೆ

ಸಬ್ಯಸಾಚಿ ಪ್ರಕಾಶಮಾನವಾದ ಮತ್ತು ಗಾಢವಾಗಿದ್ದ ದೇಶೀಯ ಕೆಂಪು ಬಣ್ಣವನ್ನು ಈ ಉಡುಗೆಗಳಿಗಾಗಿ ನೀಡಿದ್ದರು. ಅಧಿಕವಾದ ಎಂಬ್ರಾಯಿಡರಿ ಮತ್ತು ಜರಿ ಕೆಲಸಗಳಿಂದ ಕೂಡಿದ್ದ ಈ ಕೆಂಪು ಲೆಹೆಂಗಾಗಳು ಮತ್ತು ಕಟ್-ಔಟ್ ಫ್ಲೋವಿ ಗೌನ್‌ಗಳನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಎಂದೆನಿಸುತ್ತಿದ್ದವು.

ಗಂಡಸರೂ ಫುಲ್ ಮಿಂಚಿಂಗ್..!

ಗಂಡಸರೂ ಫುಲ್ ಮಿಂಚಿಂಗ್..!

ನಿರೀಕ್ಷೆಯಂತೆಯೇ ಸಬ್ಯಾಸಾಚಿಯವರು ಫ್ಯಾಷನ್ ಪ್ರಿಯ ಗಂಡಸರಿಗೆ ಈ ಬಾರಿ ಸಹ ನಿರಾಸೆ ಮಾಡಲಿಲ್ಲ. ಗಂಡಸರಿಗು ಸಹ ಬೋಲ್ಡ್ ಆಗಿದ್ದ ಬಣ್ಣಗಳನ್ನು ಬಳಸಿ ಸುಂದರವಾದ ವೆಲ್ವೆಟ್ ಬಂದ್‌ಗಲಾ ಜಾಕೆಟ್‌ಗಳನ್ನು ಇವರು ವಿನ್ಯಾಸ ಮಾಡಿದ್ದಾರೆ. ಇದರೆ ಜೊತೆಗೆ ಇದಕ್ಕೆ ಒಪ್ಪುವಂತಹ ಸ್ಟೋಲ್‌ಗಳನ್ನು ಸಹ ನೋಡಲು ಸೊಗಸಾಗಿದ್ದವು.

ಫ್ರಿಂಗಡ್ ಕೇಪ್‌ಗಳು

ಫ್ರಿಂಗಡ್ ಕೇಪ್‌ಗಳು

ಸುಂದರವಾದ ಸಂಜೆಗಳಿಗೆ ಮತ್ತಷ್ಟು ಗ್ಲಾಮರ್ ನೀಡುವಂತಹ ಒಂದು ವಿನ್ಯಾಸವನ್ನು ಇದರಲ್ಲಿ ನಾವು ನೋಡಿದೆವು, ಅದೇ ಫ್ರಿಂಗಡ್ ಕೇಪ್. ಇದರಲ್ಲಿನ ಅಲಂಕಾರ ತುಂಬಾ ಹೆಚ್ಚಾಗಿತ್ತು ಜೊತೆಗೆ ಇದು ಲೇಸ್ ಸಹ ಹೊಂದಿತ್ತು.ಎದೆಯ ಭಾಗದಲ್ಲಿ ಕಟ್-ಔಟ್ ಹೊಂದಿದ್ದ ಈ ಕೇಪ್ ಜಾಕೆಟ್‌ಗಳು ನೋಡುಗರ ಬಾಯಲ್ಲಿ ವಾವ್ ಎಂಬ ಉದ್ಗಾರವನ್ನು ಹುಟ್ಟಿಸಿದವು!

ಎಂಬ್ರಾಯಿಡಿಂಗ್ ಮಾಡಲಾದ ಜಾಕೆಟ್‌ಗಳು

ಎಂಬ್ರಾಯಿಡಿಂಗ್ ಮಾಡಲಾದ ಜಾಕೆಟ್‌ಗಳು

ಸುಂದರವಾಗಿ ಎಂಬ್ರಾಯಿಡಿಂಗ್ ಮಾಡಲಾದ ಜಾಕೆಟ್‌ಗಳು ಗೋಥಿಕ್ ಶೈಲಿಯಲ್ಲಿ ಇದ್ದವು. ಇದರ ಜೊತೆಗೆ ಭಾರವಾದ ಸೀರೆಗಳು ಸಹ ನೋಡಲು ಸೊಗಸಾಗಿದ್ದವು. ಹೊಂಬಣ್ಣದಂತಹ ಬಿಳುಪಿನ ಜಾಕೆಟ್‌ನಿಂದ ಹಿಡಿದು ದಾರಗಳಿಂದ ಕೂಡಿದ ಎಂಬ್ರಾಯಿಡಿಂಗ್ ಮಾಡಲಾದ ಎಲ್ಲಾ ಬಟ್ಟೆಗಳ ಕಾಂಬೋವನ್ನು ನಾವು ತುಂಬಾ ಇಷ್ಟಪಟ್ಟೆವು.

ಕಪ್ಪು ಬಣ್ಣದ ಉಪಯೋಗ

ಕಪ್ಪು ಬಣ್ಣದ ಉಪಯೋಗ

ಬಹುಶಃ ನಾವೆಲ್ಲರೂ ಬಣ್ಣ ಬಣ್ಣದ ಉಡುಗೆಗಳನ್ನು ಇಷ್ಟಪಡುವುದು ಸಾಮಾನ್ಯ, ಆದರೆ ಯಾವುದೇ ಕಾರಣಕ್ಕೂ ನಾವು ಕಪ್ಪನ್ನು ಮರೆಯಲಾದೀತೇ! ಈ ಪ್ರದರ್ಶನದಲ್ಲಿ ಕಪ್ಪು ಕುರ್ತಾಗಳು ಮತ್ತು ಹೆಮ್‌ಲೈನ್ ಜಾಕೆಟ್‌ಗಳು ನೋಡುಗರನ್ನು ಮನಸೂರೆಗೊಂಡವು.

English summary

AICW 2015: Sabyasachi's 7 Best Picks

Gold and nudes, intricate Zardari embroidery in wispy fluid fabric and creamy embroidered silhouettes dominated his Couture collection, Bater. While embroidered lehengas and sarees were breathtakingly gorgeous, we also loved the heavily embellished cape jackets and the Loubs!. We decided to take a look at the best creations we love from Sabyasachi's show.
Story first published: Thursday, July 30, 2015, 15:33 [IST]
X
Desktop Bottom Promotion