For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ಸುಂದರವಾಗಿ ಕಾಣಲು ಸರಳ ಸಲಹೆಗಳು

By Staff
|

ನಾವು ಸಂತೋಷದಿಂದ ಆಡಂಬರದಿಂದ ಬಟ್ಟೆಗಳು, ಶೂಗಳು, ಮೇಕಪ್ ಸಾಮಗ್ರಿಗಳ ಶಾಪಿಂಗ್ ಮಾಡಿ ಹಾಗೆಯೇ ಬಾಯಲ್ಲಿ ನೀರೂರುವ ಭಾರತೀಯ ತಿನಿಸುಗಳನ್ನು ರುಚಿ ನೋಡಲು ಮತ್ತೆ ವರ್ಷದಲ್ಲಿ ಸಮಯ ಈಗ ಬಂದಿದೆ. ನಮ್ಮ ಬಿಡುವಿಲ್ಲದ ಆಫೀಸ್ ಕೆಲಸಗಳ ಮತ್ತು ಮನೆ ಕೆಲಸಗಳ ನಡುವೆಯೂ ನಾವೆಲ್ಲರೂ ಬಯಸುವುದೇನೆಂದರೆ ಪ್ರತಿ ಸಂತೋಷಕೂಟದಲ್ಲಿ ಒಂದು ಒಳ್ಳೆಯ ಆಕರ್ಷಕ ಬಟ್ಟೆಗಳನ್ನು ಧರಿಸಿ ಪ್ರದರ್ಶಿಸಬೇಕೆಂಬ ಆಸೆಯಿರುತ್ತದೆ. ಇದಕ್ಕೆ ಕೆಲವು ಸಲಹೆಗಳು ಇಲ್ಲಿವೆ:

ಮೇಕಪ್

ಮೊದಲಿಗೆ ಕನ್‌ಸೀಲರ್ ಬಳಸಿ ಸೂಕ್ಷ್ಮರೇಖೆಯನ್ನು ಎಳೆಯಿರಿ. ಬಳಿಕ ನಿಮ್ಮ ಕೋಲ್ ಪೆನ್ಸಿಲ್ ಬಳಸಿ ಕಣ್ಣಿನ ಒಳಗಿನ ಮತ್ತು ಮೇಲಿನ ರೆಪ್ಪೆಗಳ ಮೇಲೆ ಒಂದು ಸೂಕ್ಷ್ಮ ರೇಖೆಯನ್ನು ಎಳೆಯಿರಿ. ನಿಮ್ಮ ಮುಖದ ಮೇಲೆ ಸೊರಗಿದ ಅಥವ ಬಳಲಿದ ಗುರುತನ್ನು ಮುಚ್ಚಲು ವಾಲ್ಯೂಮೈಸಿಂಗ್ ಮಸ್ಕರಾ ಲೇಪಿಸಿಕೊಳ್ಳಿ. ಹೊಳೆಯುವ ತುಟಿಗಳು ಎಂದೂ ಮುದ್ದಾಗೇ ಕಾಣುತ್ತವೆ. ಅಲಂಕಾರ ಮುಗಿಸಲು ಒಂದು ತಟಾಸ್ಥ (ನ್ಯೂಟ್ರಲ್) ಅಥವ ಗುಲಾಬಿ (ಪಿಂಕ್) ಬಣ್ಣದ ಲಿಪ್‌ಸ್ಟಿಕ್ ತುಟಿಗಳ ಮೇಲೆ ಲೇಪಿಸಿ.

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು

ಮುಖದಲ್ಲಿ ನಿಮ್ಮ ಕಣ್ಣುಗಳಿಗೆ ಪ್ರಾಧಾನ್ಯತೆ ಕೊಡುವುದಿದ್ದರೆ ಅವುಗಳಿಗೆ ಎದ್ದು ಕಾಣುವಂತೆ ಅಲಂಕರಿಸಿ. ಇನ್ನೂ ಹೆಚ್ಚು ಕಣ್ಣು ಬಡಿಯುವ ನೋಟ ಬೇಕೆಂದಿದ್ದರೆ ಕಣ್ಣುಗಳ ಪಕ್ಕದಲ್ಲಿ ರೆಕ್ಕೆಗಳ ಚಿತ್ರ ಬಿಡಿಸಿ. ನಿಮ್ಮ ಬಳಿ ಅರೆಪಾರದರ್ಶಕ ಪುಡಿ ಇದ್ದರೆ ಅದನ್ನು ದಷ್ಟಪುಷ್ಟವಾಗಿ ಕಾಣಲು ಮಸ್ಕರಾ ಲೇಪನದ ನಡುವೆ ಬಳಸಿ. ನಿಮ್ಮ ತುಟಿಗಳು ಮತ್ತಷ್ಟು ಗಮನ ಸೆಳೆಯಬೇಕೆಂದಿದ್ದರೆ ಒಂದು ದಟ್ಟ ಕಪ್ಪು ಛಾಯೆಯಿರುವ ಲಿಪ್‌ಸ್ಟಿಕ್ ಬಳಸಿ. ನಿಮ್ಮ ಮುಖದ ಪರಿಪೂರ್ಣ ನೋಟ ಪಡೆಯಲು ಸ್ವಲ್ಪ ಗುಲಾಬಿ ಅಥವ ಪೀಚ್ ಬ್ಲಶ್ ಬಣ್ಣ ಲೇಪಿಸಿದರೆ ಸಮಗ್ರ ಬಾಹ್ಯ ರೇಖೆಗಳು ಮತ್ತು ಕೆನ್ನೆಯ ಅಂದವಾಗಿ ಕಾಣುತ್ತವೆ. ದೀಪಾವಳಿ ವೈಭವವನ್ನು ಸೊಗಸಾಗಿಸುವ ಸುಂದರ ಸೀರೆಗಳು

ಮನಮೋಹಕ ಕಣ್ಣಿನ ಮೇಕಪ್

ನಿಮ್ಮ ಸಂಜೆಯ ನೋಟಕ್ಕಾಗಿ ಮಸುಕಾದ ಕಣ್ಣುಗಳಿಗಿಂತಾ ಬೇರೆ ಇಲ್ಲ. ಪರಿಪೂರ್ಣ ಮಸುಕಾದ ಕಣ್ಣುಗಳ ನೋಟಕ್ಕಾಗಿ ಕಣ್ಣುಗಳಿಗೆ ಸರಿಹೋಗುವ ಐ ಶಾಡೊ ಆಯ್ಕೆಮಾಡಿ. ಭಾರತೀಯ ಮಹಿಳೆಯರಿಗೆ ಹೆಚ್ಚಾಗಿ ಕಪ್ಪು ಅಥವ ಕಂದು ಬಣ್ಣದ ಕಣ್ಣುಗಳಿರುವುದರಿಂದ ಎದ್ದು ಕಾಣುವ ಐ ಶಾಡೊಗಳಲ್ಲಿ ಚಿನ್ನ, ಕಂದು, ಇದ್ದಲಿನಂತ ಕಪ್ಪು ಮತ್ತು ಬೂದು ಬಣ್ಣಗಳು ಅತ್ಯುತ್ತಮವಾಗಿರುತ್ತವೆ. ಸರಳ ಮತ್ತು ಅಸ್ಪಷ್ಟ ಕಣ್ಣುಗಳು ಬೇಕಿದ್ದಾಗ ಕಣ್ಣುಗಳಿಗೆ ಬಳಸುವ ಬಣ್ಣದ ಪೆನ್ಸಿಲ್ಲಿನಿಂದ ಒಳ ಮೂಲೆಯಿಂದ ಮೇಲ್ಭಾಗದ ರೆಪ್ಪೆಗಳಿಗೆ ಒಂದು ದಪ್ಪ ರೇಖೆ ಎಳೆದು ಚಿತ್ತು ಮಾಡಿ ಮತ್ತು ಹಾಗೆಯೇ ಕೆಳಭಾಗ ರೆಪ್ಪೆಗಳಿಗೆ ಅನುಸರಿಸಿದರೆ ಸಂಪೂರ್ಣ ನೋಟದಿಂದ ಕಾಣುವಿರಿ.

ಸಾಂಪ್ರದಾಯಿಕ ಉಡುಗೆ

ಹಬ್ಬದ ಸಮಯದಲ್ಲಿ ನಾವೆಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಡಲು ಆಸೆಪಡುತ್ತೀವಿ ಮತ್ತು ಹಾಗೆಯೇ ನಮ್ಮ ಮೇಕಪ್ ಕೂಡ ಅದರಂತೆಯೇ ಇರಬೇಕೆಂದು ಇಷ್ಟಪಡುತ್ತೀವಿ. ಇಲ್ಲಿ ಕೂಡ ನಿಮ್ಮ ಮೇಕಪ್ ನಿಮ್ಮ ಉಡುಗೆಗಳಿಗೆ ಮೆಚ್ಚುವಂತಿರಬೇಕು. ನಿಮ್ಮ ಸೀರೆ ಅಥವ ಸಲ್ವಾರ್ ಭಾರಿಯಾಗಿದ್ದರೆ ನಿಮ್ಮ ಮೇಕಪ್ ಸರಳ ಮತ್ತು ಕನಿಷ್ಠವಾಗಿರಬೇಕು ಅಥವಾ ತದ್ವಿರುದ್ಧವಾಗಿ ಸರಳ ಉಡುಗೆಗೆ ಮೇಕಪ್ ಭಾರಿಯಾಗಿರಬೇಕು. ಒಂದು ರೆಕ್ಕೆಯ ತರಹ ರೇಖೆಯನ್ನು ರೆಪ್ಪೆಯ ಮೇಲಿನ ಭಾಗದಲ್ಲಿ ಎಳೆಯಿರಿ ಮತ್ತು ಕಣ್ಣುಗಳ ಕೆಳ ರೆಪ್ಪೆಯಲ್ಲಿ ಕಪ್ಪು ಹಚ್ಚಿ ನಿಮ್ಮ ಶೃಂಗಾರವನ್ನು ಮುಗಿಸಿ. ಸಾಂಪ್ರದಾಯಿಕವಾಗಿ ಒಂದು ಕುಂಕುಮ ಹಚ್ಚಿಕೊಳ್ಳಿ.

ನೈಜ ನೋಟ

ಅನೇಕ ಮಹಿಳೆಯರು ಕಣ್ಣುಗಳ ನೈಜ ನೋಟವನ್ನು ಪ್ರದರ್ಶಿಸಲು ಇಚ್ಚಿಸುತ್ತಾರೆ. ಕಣ್ಣುಗಳ ಮೇಲೆ ಗುಲಾಬಿ ಮತ್ತು ನೀಲಿ ಬಣ್ಣದ ಛಾಯೆ ಬಳಸಿದಾಗ ತಾಜಾತನದಿಂದ ನಿಮ್ಮ ಚರ್ಮ ಕಾಣಿಸುತ್ತದೆ. ತೆಳುವಾದ ಕಿತ್ತಲೆ ಬಣ್ಣದ ಲಿಪ್‌ಸ್ಟಿಕ್ಕಿನಿಂದ ನಿಮ್ಮ ತುಟಿಗಳು ಮತ್ತು ಗಲ್ಲದ ಮೇಲೆ ಲೇಪಿಸಿಕೊಂಡರೆ ಒಂದು ಮುಕ್ಕೂಟದ ಸಂಯೋಜನೆಯ ನೋಟವಿರುತ್ತದೆ.

English summary

Look gorgeous this Diwali

Once again it's that time of the year when we love to splurge on shopping, clothes, shoes make-up and indulge in some lip smacking authentic Indian delicacies. And in the midst of our busy working hours and household chores, we all want to sport that diva-look at every get-together. Here are some tips:
X
Desktop Bottom Promotion