For Quick Alerts
ALLOW NOTIFICATIONS  
For Daily Alerts

ಸ್ಲಿಮ್ ಆಗಿ ಕಾಣಿಸಲು ಆರು ಪರಿಣಾಮಕಾರಿ ಸಲಹೆಗಳು

By Arpitha Rao
|

ಕೇವಲ ಆಕರ್ಷಕ ಮೈಮಾಟ ಹೊಂದಿದವರು ಮಾತ್ರ ಟ್ರೆಂಡಿಯಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು ಅನಿಸಿಕೆ.ನೀವು ಹಾಕಿಕೊಳ್ಳುವ ಡ್ರೆಸ್ ಮತ್ತು ಅಕ್ಸೆಸರಿಸ್ ಗಳಿಂದ ನೀವೂ ಕೂಡ ಸುಂದರವಾಗಿ ಕಾಣಿಸಿಕೊಳ್ಳಬಹುದು.ಕೆಲವು ಕೌಶಲ್ಯದಿಂದ ಮತ್ತು ತೆಳು ಬಟ್ಟೆ ಹಾಕಿಕೊಳ್ಳುವುದರಿಂದ ನೋಡುಗರನ್ನು ಸ್ಲಿಮ್ ಎನಿಸುವಂತೆ ಮರುಳು ಮಾಡಬಹುದು.

ನೀವು ಸ್ವಲ್ಪ ಊದಿಕೊಂಡಿದ್ದು ಸ್ಲಿಮ್ ಆಗಿ ಸುಂದರವಾಗಿ ಕಾಣಿಸಿಕೊಳ್ಳುವ ಆಸೆ ನಿಮಗಿದ್ದರೆ ಈ ಕೆಳಗಿನ ಟಿಪ್ಸ್ ಅನುಕರಿಸಿ ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಯಟ್ ಮಾಡದೆಯೆ ಸಣ್ಣಗಾಗಬೇಕೆ?

ಸರಿಯಾದ ಅಳತೆಯ ಬಟ್ಟೆಯನ್ನೇ ಕೊಂಡುಕೊಳ್ಳಿ:
ತುಂಬಾ ಟೈಟ್ ಇರುವ ಬಟ್ಟೆ ನಿಮ್ಮ ದೇಹದ ಜೋತುಬಿದ್ದ ಅಧಿಕ ಕೊಬ್ಬು ಹೊಂದಿದ ಭಾಗಗಳನ್ನು ಎದ್ದು ಕಾಣುವಂತೆ ಮಾಡುತ್ತದೆ,ಇದು ನೋಡಲು ಕೆಟ್ಟದಾಗಿ ಕಾಣಬಹುದು.ಆ ರೀತಿಯ ಬಟ್ಟೆ ಧರಿಸುವುದರಿಂದ ನಿಮಗೂ ಕೂಡ ಅಸಮಾಧಾನ ಉಂಟು ಮಾಡಬಹುದು.ಆದ್ದರಿಂದ ನಿಮಗೆ ಸರಿಯಾದ ಅಳತೆಯ ಬಟ್ಟೆಯನ್ನು ಧರಿಸುವುದು ಸೂಕ್ತ.ಉದ್ದನೆಯ ಮತ್ತು ಉದ್ದ ಪಟ್ಟಿಯನ್ನು ಹೊಂದಿದ ಬಟ್ಟೆಗಳನ್ನು ಬಳಸಿ.

6 Effective Tips to Make you Look Slimmer

ನಿಮ್ಮ ದೇಹದ ಕೆಳಗಿನ ಭಾಗ ಸ್ಲಿಮ್ ಆಗಿ ಕಾಣಲು ಹೀಗೆ ಮಾಡಿ:
ನೆರಿಗೆ ಇರುವ ಸ್ಕರ್ಟ್ ಬದಲಿಗೆ ನೇರ ಗೆರೆಗಳಿರುವ ಸ್ಕರ್ಟ್ ಧರಿಸಿ. ಉಬ್ಬಿದಂತೆ ಕಾಣದಿರಲು ಸ್ವಲ್ಪ ಲೂಸ್ ಅಳತೆಯ ಜೀನ್ಸ್ ಧರಿಸಿ,ಅದರ ಮೇಲೆ ಉದ್ದ ಟಾಪ್ ಧರಿಸಿ. ದೊಡ್ಡ ಗಾತ್ರದ ಹಿಂಭಾಗವನ್ನು ಕಾಣದಂತೆ ಮಾಡಲು ಬಾಬ್ ಕಟ್ ಇರುವ ಜೀನ್ಸ್ ಬಳಸಿ, ಜೊತೆಗೆ ತುಂಬಾ ಜೇಬು ಇರುವ ಜೀನ್ಸ್ ಕೂಡ ಬೇಡ.
ನಿಮ್ಮ ಕೈ ತೋಳುಗಳನ್ನು ಸ್ಲಿಮ್ ಆಗಿ ಕಾಣಿಸಲು ಸ್ಲೀವ್ ಲೆಸ್ ಉಡುಗೆಗಳನ್ನು ತೊಡಬೇಡಿ ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಆದಷ್ಟು ನಿರ್ಲಕ್ಷಿಸಿ. ನಿಮ್ಮ ಭುಜ ಸುಂದರವಾಗಿದ್ದರೆ ಬೋಟ್ ನೆಕ್ ಇರುವ ಡ್ರೆಸ್ ಗಳನ್ನು ಬಳಸಿ.

ಏಕ ಶೇಡ್ ಇರುವ ಬಟ್ಟೆ ಧರಿಸಿ:
ನಿಮ್ಮ ದೇಹದ ದಪ್ಪವನ್ನು ತೋರಿಸಿಕೊಳ್ಳದಿರಲು ಘಾಡ ಬಣ್ಣದ ಏಕ ಶೇಡ್ ಇರುವ ಬಟ್ಟೆಯನ್ನು ಧರಿಸಿ.ನೀಲಿ ಅಥವಾ ಕಪ್ಪು ಬಣ್ಣದ ಡ್ರೆಸ್ ಗಳನ್ನು ಬಳಸಿ.ಅದರ ಜೊತೆಗೆ ಘಾಡ ಬಣ್ಣದ ಶೂ,ನೆಕ್ಲೆಸ್,ಬ್ರೇಸ್ ಲೆಟ್ ಬಳಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸ್ಲಿಮ್ ಅಂಡ್ ಫಿಟ್ ದೇಹ ಸೌಂದರ್ಯ ನಿಮ್ಮದಾಗಬೇಕೆ?

ನಿಮ್ಮ ಭಾವಭಂಗಿ ಕಡೆಗೆ ಗಮನವಿರಲಿ:
ಒಳ್ಳೆಯ ಭಾವಭಂಗಿ ಕೂಡ ನಿಮ್ಮನ್ನು ಇನ್ನಷ್ಟು ಸ್ಲಿಮ್ ಆಗಿ ಕಾಣಿಸುವಂತೆ ಮಾಡುತ್ತದೆ.ನೇರವಾಗಿ ನಿಂತುಕೊಳ್ಳಿ.ನಿಮ್ಮ ಭುಜ ಹಿಂದೆ ಸರಿದಂತಿರಬೇಕು ಮತ್ತು ತಲೆ ಎತ್ತಿರಬೇಕು.ಆತ್ಮವಿಶ್ವಾಸ ಹೊರಹೊಮ್ಮುವಂತಿರಲಿ.ಹೀಲ್ಸ್ ಗಳನ್ನು ಧರಿಸುವುದರಿಂದ ಸಾಕಷ್ಟು ಸ್ಲಿಮ್ ಆಗಿ ಕಾಣಿಸಿಕೊಳ್ಳಬಹುದು ಆದ್ದರಿಂದ ಜೀನ್ಸ್ ಜೊತೆಗೆ ಹೀಲ್ಸ್ ಬಳಸಿ.

ಚೆನ್ನಾಗಿರುವ ಭಾಗವನ್ನು ಹೆಚ್ಚು ಎದ್ದು ಕಾಣುವಂತೆ ಮಾಡಿ:
ಚೆನ್ನಾಗಿರುವ ದೇಹದ ಭಾಗವನ್ನು ಹೆಚ್ಚು ಆಕರ್ಷಕವಾಗಿ ಮಾಡಿ ಇದರಿಂದ ಉಳಿದ ಭಾಗಗಳ ಮೇಲೆ ನೋಡುಗರ ಕಣ್ಣು ಹೋಗಲಾರದು.ನಿಮ್ಮ ಮುದ್ದಾದ ಮುಖ,ತೆಳುವಾದ ಕುತ್ತಿಗೆ ಇವುಗಳ ಮೂಲಕ ನೋಡುಗರ ಗಮನ ಅತ್ತ ಸೆಳೆಯಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಥಳಕು ಬಳುಕಿನ ಮೈಮಾಟಕ್ಕೆ ಕಸರತ್ತು

ಸರಿಯಾದ ಮಾದರಿಯನ್ನು ಆಯ್ದುಕೊಳ್ಳಿ:
ದೊಡ್ಡ ಮಾದರಿಯ ಟಾಪ್ಸ್,ಪ್ಯಾಂಟ್,ಸ್ಕರ್ಟ್ ಮತ್ತು ಇತರ ಡ್ರೆಸ್ ಗಳನ್ನು ಕೊಂಡುಕೊಳ್ಳಬೇಡಿ ಇವು ಹೆಚ್ಚು ದಪ್ಪ ಕಾಣುವಂತೆ ಮಾಡುತ್ತವೆ.ಸರಳ ಮಾದರಿಯ ಸಣ್ಣ ಅಳತೆಯ ಡ್ರೆಸ್ ಗಳು ನೋಡಲು ಸೊಗಸಾಗಿ ಕಾಣುವಂತೆ ಮಾಡುತ್ತವೆ.

ಉತ್ತಮ ಫ್ಯಾಬ್ರಿಕ್ ಬಳಸಿ:
ನೀವು ದಪ್ಪ ಕಾಣಿಸಬಾರದು ಎಂದಿದ್ದರೆ ದೇಹಕ್ಕೆ ಅಂಟಿಕೊಳ್ಳುವ ಫ್ಯಾಬ್ರಿಕ್ ಬಳಸಬೇಡಿ. ಹತ್ತಿ ಬಟ್ಟೆ ಅಥವಾ ಇತರ ಫ್ಯಾಬ್ರಿಕ್ ಬಳಸಿ. ನಿಮ್ಮ ಕಪಾಟಿನಿಂದ ಹೊಳೆಯುವ ಕಣ್ಣು ಕುಕ್ಕುವ ಬಟ್ಟೆಗಳನ್ನು ತೆಗೆದುಬಿಡಿ.

English summary

6 Effective Tips to Make you Look Slimmer

If you think that only those women who have impressive figure can look trendy and stylish, you are completely wrong! The way you wear the dress and accessorize, it makes a big difference.
Story first published: Saturday, April 5, 2014, 16:25 [IST]
X
Desktop Bottom Promotion