For Quick Alerts
ALLOW NOTIFICATIONS  
For Daily Alerts

ಐಬಿಎಫ್ ಡಬ್ಲ್ಯೂ2013:ಫಲ್ಗುಣಿ ಮತ್ತು ಶಾನೆ ಪಿಕಾಕ್

|

ಫಲ್ಗುಣಿ ಮತ್ತು ಶಾನೆ ಪಿಕಾಕ್ ಆ್ಯಂಬಿ ವ್ಯಾಲಿಯಲ್ಲಿನ ಬ್ರೈಡಲ್ ಫ್ಯಾಷನ್ ವೀಕ್ 2013ರಲ್ಲಿ ತಮ್ಮ ಸಮ್ಮೊಹಕ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದರು. ಈ ಡಿಸೈನರ್ ಗಳು ಕೆಲವು ಅನನ್ಯ ಮತ್ತು ಸಾಂಪ್ರದಾಯಿಕ ಶೈಲಿಯ ಉಡುಪುಗಳನ್ನು ಪ್ರದರ್ಶಿಸಿದರು. ಲೆಹಂಗಾಗಳಿಂದ ಹಿಡಿದು ಮೆರ್ಮೈಡ್ ಗೌನುಗಳವರೆಗೆ ಇಲ್ಲಿ ವೈವಿಧ್ಯವಿತ್ತು.
ಫಲ್ಗುಣಿ ಮತ್ತು ಶಾನೆ ಪಿಕಾಕ್ ಲೇಸ್, ಶೀರ್ ಮತ್ತು ಕಸೂತಿಯನ್ನು ಬಳಸಿದ್ದರು. ಹೊಳೆಯುತ್ತದ್ದ ಗೋಲ್ಡ್ ಮತ್ತು ಶಿಮ್ಮರ್ ವಧುವಿನ ಮನಸ್ಥಿತಿಯನ್ನು ಸೂಚಿಸುವಂತಿತ್ತು. ರೂಪದರ್ಶಿಗಳು ಇವುಗಳಿಗೆ ಜೀವ ತುಂಬಿದರು. ವೇದಿಕೆಯ ಮೇಲೆ ಗೋಲ್ಡನ್, ಕೋರಲ್, ಪೀಚ್, ಕಪ್ಪು ಮತ್ತು ಕೆಂಪು ಬಣ್ಣಗಳು ಎದ್ದುಕಾಣುವಂತಿತ್ತು.
ಲೆಹಂಗಾಗಳು ಈ ಪ್ರದರ್ಶನದ ಮೂರು ದಿನಗಳಲ್ಲೂ ಕಾಣಿಸಿತು. ಇದು ವಧುವಿನ ವಸ್ತ್ರ ಸಂಗ್ರಹ ಪ್ರದರ್ಶನವಾದ್ದರಿಂದ ಫಲ್ಗುಣಿ ಮತ್ತು ಶಾನೆ ಪಿಕಾಕ್ ಕೆಲವು ಸಾಂಪ್ರದಾಯಿಕ ಲೆಹಂಗಾಗಳನ್ನು ಕೂಡ ಪ್ರದರ್ಶಿಸಿದರು. ಇದರೊಂದಿಗೆ ಭರ್ಜರಿ ಕಸೂತಿ ಹೊಂದಿದ್ದ ಗೌನುಗಳು ಕೂಡ ವೇದಿಕೆಯ ಮೇಲೆ ಕಾಣಿಸಿಕೊಂಡವು. ಇದರೊಂದಿಗೆ ಲೇಸ್ ಮತ್ತು ದಾರದ ಕುಸುರಿಯೊಂದಿಗೆ ಬಣ್ಣದ ಕಲ್ಲುಗಳು ಮತ್ತು ಮಣಿಗಳ ಕಸೂತಿಯನ್ನು ಹೊಂದಿದ್ದ ವಸ್ತ್ರಗಳು ಕೂಡ ಇದ್ದವು. ಕೆಲವು ಗೌನುಗಳು ದುಪ್ಪಟ್ಟ ಕೂಡ ಹೊಂದಿದ್ದವು. ಇದು ಲೆಹಂಗಾ ಗೌನ್ ಫಿಶ್ ಕಟ್ ಹೊಂದಿದೆಯೆನೋ ಎನಿಸುವಂತಿದ್ದವು.
ಅದೇನೆ ಇರಲಿ ಫಲ್ಗುಣಿ ಮತ್ತು ಶಾನೆ ಪಿಕಾಕ್ ದೆಹಲಿಯ ಶೋನಲ್ಲಿ ಪ್ರದರ್ಶಿಸಿದ ಕೆಲವು ವಸ್ತ್ರಗಳನ್ನು ಇಲ್ಲೂ ಕೂಡ ಪ್ರದರ್ಶಿಸಿದ್ದು ಕಂಡುಬಂದಿತು. ಮೆಟಾಲಿಕ್ ಒಬಿ ಬೆಲ್ಟ್ ಹೊಂದಿದ್ದ ಲೆಹಂಗಾಕ್ಕೆ ಕ್ರಿಮಿ ಗೌನುಗಳನ್ನು ಧರಿಸಲಾಗಿತ್ತು. ರೆಡ್ ಲೆಹಂಗಾಗಳು ಪುನರಾವರ್ತಿತಗೊಂಡವು.
ಈವ್ಲಿಯಾನ್ ಶರ್ಮಾ ಈ ಉಡುಪುಗಳನ್ನು ಪ್ರದರ್ಶಿಸಿದಳು. ದೆಹಲಿಯಲ್ಲಿ ನೆಹ ದೂಪಿಯಾ ಇವುಗಳನ್ನು ಪ್ರದರ್ಶಿಸಿದ್ದಳು. ಇವರಿಬ್ಬರ ಪ್ರದರ್ಶನದ ಸಂಕ್ಷಿಪ್ತ ನೋಟ ಇಲ್ಲಿದೆ.
ಐಬಿಎಫ್ ಡಬ್ಲ್ಯೂ2013: ಫಲ್ಗುಣಿ ಮತ್ತು ಶಾನೆ ಪಿಕಾಕ್ ಕಲೆಕ್ಷನ್.

ರೆಡ್ ಲೆಹಂಗ

ರೆಡ್ ಲೆಹಂಗ

ಭರ್ಜರಿ ಕಸೂತಿ ಹೊಂದಿದ್ದ ಸಾಂಪ್ರದಾಯಿಕ ಕೆಂಪು ಬಣ್ಣದ ಲೆಹಂಗಾಕ್ಕೆ ಕನ್ನಡಿಯ ಕಸೂತಿಯನ್ನು ಮಾಡಲಾಗಿತ್ತು. ಸ್ಟ್ರಾಪ್ ಲೆಸ್ ಬೊಡೈಸ್ ಲೇಸ್ ಹೊಂದಿತ್ತು. ಲೆಹಂಗಾದಲ್ಲಿ ಚಿನ್ನದ ಮತ್ತು ಕನ್ನಡಿಯ ಕಸೂತಿಯನ್ನು ಕಾಣಬಹುದಿತ್ತು. ಇದನ್ನು ದೆಹಲಿಯ ಶೋನಲ್ಲಿ ಕೂಡ ಪ್ರದರ್ಶಿಸಲಾಗಿತ್ತು.

ಗೋಲ್ಡನ್ ಲೆಹಂಗ

ಗೋಲ್ಡನ್ ಲೆಹಂಗ

ಈ ಕ್ರೀಂ ಬಣ್ಣದ ಲೆಹಂಗಾದ ಮೇಲೆ ಗೋಲ್ಡನ್ ಕಸೂತಿ ಮತ್ತು ಹೂವಿನ ಚಿತ್ರಗಳಿದ್ದವು. ಇದಕ್ಕೆ ಪೀಚ್ ಕಲರ್ ದುಪಟ್ಟಾ ಹಾಕಿಕೊಳ್ಳಲಾಗಿತ್ತು.

ರೆಡ್ ಮತ್ತು ಗೋಲ್ಡನ್ ಲೆಹಂಗ

ರೆಡ್ ಮತ್ತು ಗೋಲ್ಡನ್ ಲೆಹಂಗ

ರೆಡ್ ಬಣ್ಣದ ಲೆಹಂಗಾಕ್ಕೆ ಚಿನ್ನದ ಕಸೂತಿಯಿತ್ತು. ಇದನ್ನು ಬಂಧಗಲ ರವಿಕೆ ಮತ್ತು ಚಿನ್ನದ ಆಭರಣಗಳೊಂದಿಗೆ ತೊಡಲಾಗಿತ್ತು.

ರೆಡ್ ಲೇಸ್ ಲೆಹಂಗ

ರೆಡ್ ಲೇಸ್ ಲೆಹಂಗ

ಇದು ಸಾಂಪ್ರದಾಯಿಕ ಬಣ್ಣವಾದ ಕೆಂಪನ್ನು ಬಳಸಿ ವಿನ್ಯಾಸಗೊಳಿಸಲಾಗಿದ್ದ ಲೆಹಂಗ. ಇದಕ್ಕೆ ಲೇಸ್ ಕಸೂತಿಯಿದ್ದ ಸ್ಕರ್ಟ್ ಮತ್ತು ಚಿನ್ನದ ಕಸೂತಿಯನ್ನು ಮಾಡಲಾಗಿತ್ತು.

ಸೀಕ್ವಿನ್ಡ್ ಗೌನುಗಳು

ಸೀಕ್ವಿನ್ಡ್ ಗೌನುಗಳು

ಸ್ಟ್ರಾಪ್ ಲೆಸ್ ಚುಮ್ಕಿಯಿದ್ದ ಗೌನುಗಳನ್ನು ರೂಪದರ್ಶಿಗಳು ತೊಟ್ಟು ಪ್ರದರ್ಶಿಸಿದರು. ಇದು ಫ್ಯಾಷನೆಬಲ್ ಆಗಿತ್ತು. ಇದರ ಮೆಟಾಲಿಕ್ ಒಬಿ ಬೆಲ್ಟ್ ಇಲ್ಲಿ ಪುನರಾವರ್ತನೆಯಾಗಿತ್ತು.

ಪಿಂಕ್ ಮತ್ತು ಸಿಲ್ವರ್ ಚುಮ್ಕಿ ಗೌನು

ಪಿಂಕ್ ಮತ್ತು ಸಿಲ್ವರ್ ಚುಮ್ಕಿ ಗೌನು

ಈ ಗುಲಾಬಿ ಬಣ್ಣದ ಗೌನಿನ ಮೇಲೆ ಬೆಳ್ಳಿ ಬಣ್ಣದ ಚುಮ್ಕಿ ಕಸೂತಿಯಿತ್ತು. ಇದರ ವಿಶೇಷತೆಯೆಂದರೆ ಇದು ಲೇಸ್ ಗೌನಾಗಿದ್ದು ಇದರ ಪಲ್ಲು ಭುಜಗಳಿಗೆ ಅಂಟಿಕೊಂಡಿತ್ತು. ಇದನ್ನು ಕೂಡ ದೆಹಲಿಯಲ್ಲಿಯೇ ಪ್ರದರ್ಶಿಸಲಾಗಿತ್ತು.

ಲೇಸ್ ಗೌನ್

ಲೇಸ್ ಗೌನ್

ಕ್ರಿಮಿ ಮಡ್ ಕಲರ್ ಗೌನ್ ಲೇಸ್ ಮತ್ತು ಕಸೂತಿಯನ್ನು ಹೊಂದಿತ್ತು. ಇದರ ಮೇಲೆ ಹೂವಿನ ಚಿತ್ತಾರಗಳನ್ನು ಅಳವಡಿಸಲಾಗಿತ್ತು. ಇದರಿಂದ ಗೌನು ಆಕರ್ಷಕವಾಗಿ ಕಾಣುತ್ತಿತ್ತು.

ಚುಮ್ಕಿ ಚುಮ್ಕಿ ಗೌನು

ಚುಮ್ಕಿ ಚುಮ್ಕಿ ಗೌನು

ಮೆಟಲ್ ಮಣಿಗಳು ಮತ್ತು ಚುಮ್ಕಿಗಳನ್ನು ಇದರಲ್ಲಿ ಬಳಸಲಾಗಿತ್ತು. ಇದು ಭುಜಕ್ಕೆ ಶೀರ್ ಒಳಗೊಂಡಿತ್ತು. ಇದನ್ನು ಮೆಟಾಲಿಕ್ ಒಬಿ ಬೆಲ್ಟನೊಂದಿಗೆ ಧರಿಸಲಾಗಿತ್ತು.

ಕಪ್ಪು ಅನಾರ್ಕಲಿ

ಕಪ್ಪು ಅನಾರ್ಕಲಿ

ಇದಕ್ಕೆ ನಿರಿಗೆಗಳಿದ್ದವು ಅಲ್ಲದೆ ಲೊ ಹೆಮ್ ಲೈನ್ ಹೊಂದಿತ್ತು. ಇದನ್ನು ಬಂಧಗಲಾದೊಂದಿಗೆ ಕಸೂತಿ ಮಾಡಿದ ಜಾಕೆಟ್ ಜೊತೆ ಹಾಕಿಕೊಳ್ಳಲಾಗಿತ್ತು.

ಲೇಸ್ ಅನಾರ್ಕಲಿ

ಲೇಸ್ ಅನಾರ್ಕಲಿ

ಕ್ರೀಮಿ ಬಿಳಿ ಬಣ್ಣದ ಅನಾರ್ಕಲಿ ಲೇಸ್ ವರ್ಕ ಹೊಂದಿತ್ತು. ಇದರ ಆಕರ್ಷಣೆಯೆಂದರೆ ಇದು ಹೈ ಲೋ ಹೆಮ್ ಲೈನ್ ಮತ್ತು ನಿರಿಗೆಗಳುಳ್ಳ ಬಾಟಂ ಹೊಂದಿತ್ತು. ಇದಕ್ಕೆ ಗೋಲ್ಡನ್ ಪೈಪಿಂಗ್ ನೀಡಲಾಗಿತ್ತು.

ಕೋರಲ್ ಅನಾರ್ಕಲಿ

ಕೋರಲ್ ಅನಾರ್ಕಲಿ

ಕೋರಲ್ ಅನಾರ್ಕಲಿ ಗೌನಿನ ಹಾಗೆ ಕಾಣುತ್ತಿತ್ತು. ಇದು ನೆಟ್, ನಿರಿಗೆ ಮತ್ತು ಗೋಲ್ಡನ್ ಬಣ್ಣದ ಚುಮ್ಕಿ ಕಸೂತಿ ಹೊಂದಿತ್ತು.

ಕ್ರೀಂ ಸೀರೆ

ಕ್ರೀಂ ಸೀರೆ

ಈ ಸೀರೆ ಚಿನ್ನದ ಬಣ್ಣದ ಕಸೂತಿಯನ್ನು ಅಂಚುಗಳಲ್ಲಿ ಮತ್ತು ಕೆಳಗೆ ಹೊಂದಿತ್ತು. ಈ ನೆಟ್ ಸೀರೆ ಕನ್ನಡಿಯ ಕಸೂತಿ ಸಹ ಹೊಂದಿತ್ತು. ಇದರೊಂದಿಗೆ ಪಿಂಕ್ ಬಣ್ಣವನ್ನು ಬೆರೆಸಿದ್ದರಿಂದ ಸೀರೆ ಅತ್ಯಾಕರ್ಷಕವಾಗಿತ್ತು.

ಪೀಚ್ ಲೇಸ್ ಸೀರೆ

ಪೀಚ್ ಲೇಸ್ ಸೀರೆ

ಪೀಚ್ ಲೇಸ್ ಸೀರೆ ಚಿನ್ನದ ದಾರದ ಕಸೂತಿ ಮತ್ತು ಲೇಸ್ ವರ್ಕ್ ಹೊಂದಿತ್ತು. ಇದು ಕೂಡ ನೆಟ್ ಸೀರೆ ಮತ್ತು ಗೋಲ್ಡನ್ ಬಾರ್ಡರ್ ಹೊಂದಿತ್ತು.

ಎವ್ಲಿನ್ ಶರ್ಮ

ಎವ್ಲಿನ್ ಶರ್ಮ

ಎವ್ಲಿನ್ ಶರ್ಮ ತನ್ನ ನೆಚ್ಚಿನ ಫಲ್ಗುಣಿ ಮತ್ತು ಶಾನೆ ಪಿಕಾಕ್ ರ ವಿನ್ಯಾಸದ ದಿರುಸುಗಳನ್ನು ಪ್ರದರ್ಶಿಸಿದಳು. ಆಕೆ ಗೋಲ್ಡನ್ ಲೆಹಂಗಾದಲ್ಲಿ ಬಹಳ ಮನೋಹರವಾಗಿ ಕಾಣುತ್ತಿದ್ದಳು. ಈ ಲೆಹಂಗ ಎಲ್ಲೆಡೆ ಕಸೂತಿ ಒಳಗೊಂಡಿತ್ತು. ಜೊತೆಗೆ ಹೂವಿನ ಚಿತ್ರಗಳನ್ನು ಒಳಗೊಂಡಿತ್ತು.

English summary

IBFW 2013: Falguni and Shane Peacock

Ace designer duo Falguni and Shane Peacock showcased a breathtaking collection at Aamby Valley Bridal Fashion Week 2013 ramp. The designers came forward with some unique designs which were both traditional and contemporary.
Story first published: Monday, December 2, 2013, 15:45 [IST]
X
Desktop Bottom Promotion