For Quick Alerts
ALLOW NOTIFICATIONS  
For Daily Alerts

ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಸಮಸ್ಯೆಗೆ ಅಂಗೈಯಲ್ಲೇ ಇದೆ ಮದ್ದುಗಳು

|

ಮಹಿಳೆಯರ ಸೌಂದರ್ಯವನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಕಣ್ಣಿನಡಿಯಲ್ಲಿ ಕಾಣಿಸಿಕೊಳ್ಳುವಂತಹ ಕಪ್ಪು ವೃತ್ತಗಳು ಯಾವುದೇ ಅಪಾಯವನ್ನು ಉಂಟು ಮಾಡದೆ ಇದ್ದರೂ ಅದರ ನಿವಾರಣೆ ಮಾಡಬೇಕು. ಹಾರ್ಮೋನು ಬದಲಾವಣೆ, ಆರೋಗ್ಯ ಸಂಬಂಧಿ ಸಮಸ್ಯೆ, ಅಸಂಯೋಜಿತ ಆಹಾರ ಕ್ರಮ ಇತ್ಯಾದಿಗಳು ಕಣ್ಣಿನ ಕೆಳಗೆ ಕಪ್ಪು ವೃತ್ತ ಉಂಟು ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.

ಆದರೆ ಈ ಕಪ್ಪು ವೃತ್ತಗಳು ನಮ್ಮ ಅಭ್ಯಾಸದಿಂದಾಗಿ ಮೂಡಿದೆ ಎಂದರೆ ಅಚ್ಚರಿಯಾಗಬಹುದು. ಮೇಕಪ್ ತೆಗೆಯುವ ರೀತಿಯಿಂದಲೂ ಕಣ್ಣ ಕೆಳಗಿನ ಚರ್ಮದ ಮೇಲೆ ಪರಿಣಾಮವಾಗಬಹುದು. ನಮ್ಮ ದೈನಂದಿನ ಅಭ್ಯಾಸಗಳಿಂದ ಕಣ್ಣಿನ ಕೆಳಗಡೆ ಕಪ್ಪು ವೃತ್ತಗಳು ಮೂಡುವುದು ಹೇಗೆ ಎಂದು ಬೋಲ್ಡ್ ಸ್ಕೈ ಇಂದು ನಿಮಗೆ ಹೇಳಿಕೊಡಲಿದೆ. ಕೆಳಗೆ ಕೊಟ್ಟಿರುವ ಅಭ್ಯಾಸಗಳು ನಿಮ್ಮಲ್ಲಿ ಇದ್ದರೆ ಅದನ್ನು ನಿಲ್ಲಿಸಿ ಕಣ್ಣಿನ ಕೆಳಗಿನ ಕಪ್ಪು ವೃತ್ತಗಳನ್ನು ನಿವಾರಿಸಿ.

ಸೂಚನೆ: ಕಪ್ಪು ವೃತ್ತವು ಆರೋಗ್ಯ ಸಮಸ್ಯೆಯಿಂದಲೂ ಬರಬಹುದು. ಇದರಿಂದಾಗಿ ಮೊದಲು ವೈದ್ಯರನ್ನು ಭೇಟಿಯಾಗಿ ಬಳಿಕ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.

ನಿದ್ರಾಹೀನತೆ

ನಿದ್ರಾಹೀನತೆ

ನಿದ್ರಾಹೀನತೆಯಿಂದಾಗಿ ರಕ್ತದ ಸರಬರಾಜು ಕಡಿಮೆಯಾಗುವುದು. ಇದರಿಂದ ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಕಾಣಿಸುವುದು. ಕಪ್ಪು ವೃತ್ತ ಬರಲು ಇದು ಪ್ರಮುಖ ಕಾರಣವಾಗಿದೆ. ಆದರೆ ಇತರ ಹಲವಾರು ಚರ್ಮದ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿರಬಹುದು.

ಕಣ್ಣಿನ ಮೇಕಪ್ ತೆಗೆಯದೆ ಇರುವುದು

ಕಣ್ಣಿನ ಮೇಕಪ್ ತೆಗೆಯದೆ ಇರುವುದು

ಇದು ಪ್ರತಿಯೊಬ್ಬರು ದಿನನಿತ್ಯ ಮಾಡುವಂತಹ ತಪ್ಪಾಗಿದೆ. ಇದರಿಂದ ಕಣ್ಣ ಕೆಳಗಡೆ ಕಪ್ಪು ವೃತ್ತ ಬರುವುದು. ಕಣ್ಣಿನ ಮೇಕಪ್ ಸರಿಯಾಗಿ ತೆಗೆಯದೆ ಇರುವುದರಿಂದ ಕಣ್ಣಿನ ಕೆಳಗಡೆ ಕಪ್ಪು ವೃತ್ತ ಮೂಡುವುದು.

ನಿರ್ಜಲೀಕರಣ

ನಿರ್ಜಲೀಕರಣ

ಕಪ್ಪು ವೃತ್ತಗಳು ಮತ್ತು ನಿರ್ಜಲೀಕರಣಕ್ಕೆ ಸಂಬಂಧವಿದೆ ಎಂಧು ಹಲವಾರು ಅಧ್ಯಯನಗಳು ಹೇಳಿವೆ. ನಿರ್ಜಲೀಕರಣದಿಂದಾಗಿ ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಮೂಡುವುದು. ಚರ್ಮದಲ್ಲಿ ತೇವಾಂಶ ಕಡಿಮೆಯಾಗಿ ಚರ್ಮವು ಒಣ ಹಾಗೂ ಗಡುಸಾಗುವುದು.

ಕಣ್ಣನ್ನು ಅತಿಯಾಗಿ ಉಜ್ಜಿಕೊಳ್ಳುವುದು

ಕಣ್ಣನ್ನು ಅತಿಯಾಗಿ ಉಜ್ಜಿಕೊಳ್ಳುವುದು

ಕಣ್ಣನ್ನು ಅತಿಯಾಗಿ ಉಜ್ಜಿಕೊಳ್ಳುವುದರಿಂದಲೂ ಕಣ್ಣಿನ ಕೆಳಗಡೆ ಕಪ್ಪು ವೃತ್ತ ಬರಬಹುದು. ಕಣ್ಣ ಕೆಳಗಡೆ ಇರುವ ಸೂಕ್ಷ್ಮ ಚರ್ಮವು ಉಜ್ಜುವಿಕೆಯಿಂದ ಹಾನಿಗೊಳಗಾಗುವುದು. ಉಜ್ಜುವುದರಿಂದ ಉರಿಯೂತ ಉಂಟಾಗಿ ಚರ್ಮವು ಕಪ್ಪಾಗುವುದು.

ಬಿಸಿಲಿಗೆ ಮೈಯೊಡ್ಡುವುದು

ಬಿಸಿಲಿಗೆ ಮೈಯೊಡ್ಡುವುದು

ನೇರವಾಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಕಾರಣದಿಂದಾಗಿ ಕಣ್ಣಿನ ಕೆಳಗಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗುವುದು. ಇದರಿಂದ ಕಪ್ಪು ವೃತ್ತ ಕಾಣಿಸುವುದು ಅಥವಾ ವಯಸ್ಸಾಗುವ ಲಕ್ಷಣ ಗೋಚರಿಸಬಹುದು. ಇದನ್ನು ತಪ್ಪಿಸುವ ಸಲುವಾಗಿ ಸೂರ್ಯನ ಬಿಸಿಲಿಗೆ ಹೋಗುವ ಮೊದಲು ಸನ್ ಸ್ಕ್ರೀನ್ ಬಳಸಿ.

ಬಿಸಿ ನೀರಿನಿಂದ ಮುಖ ತೊಳೆಯುವುದು

ಬಿಸಿ ನೀರಿನಿಂದ ಮುಖ ತೊಳೆಯುವುದು

ಕಣ್ಣಿನ ಕಳೆಭಾಗದ ಚರ್ಮವು ತುಂಬಾ ಸೂಕ್ಷ್ಮ ಹಾಗೂ ತೆಳುವಾಗಿರುವ ಕಾರಣದಿಂದಾಗಿ ಬಿಸಿ ನೀರಿನಿಂದ ಮುಖ ತೊಳೆದರೆ ಆಗ ಚರ್ಮದ ವರ್ಣವು ಕಳೆದುಹೋಗಬಹುದು. ಇದು ಕೂಡ ಕಣ್ಣ ಕೆಳಗಡೆ ಕಪ್ಪು ವೃತ್ತ ಕಾಣಿಸಿಕೊಳ್ಳಲು ಇರುವ ಸಾಮಾನ್ಯ ಅಭ್ಯಾಸವಾಗಿದೆ.

ಒರಟಾಗಿ ಮೇಕಪ್ ತೆಗೆಯುವುದು

ಒರಟಾಗಿ ಮೇಕಪ್ ತೆಗೆಯುವುದು

ತುಂಬಾ ಒರಟಾಗಿ ನೀವು ಮೇಕಪ್ ತೆಗೆಯುತ್ತಾ ಇದ್ದೀರಾ? ಹಾಗಾದರೆ ಕಣ್ಣಿನ ಕಳೆಭಾಗದ ಚರ್ಮಕ್ಕೆ ಹಾನಿಯಾಗುವುದು ಖಚಿತ. ಮೇಕಪ್ ತೆಗೆಯುವಾಗ ತುಂಬಾ ನಯವಾಗಿ ಹಾನಿಯಾಗದಂತೆ ಎಚ್ಚರಿಕೆ ವಹಿಸಿ.

ಹೊಟ್ಟೆಯಲ್ಲಿ ಮಲಗುವುದು

ಹೊಟ್ಟೆಯಲ್ಲಿ ಮಲಗುವುದು

ಹೊಟ್ಟೆಯಲ್ಲಿ ಮಲಗುವುದರಿಂದ ಕಣ್ಣಿನ ಕೆಳಗಡೆ ನೀರು ನಿಲ್ಲಬಹುದು. ಇದರಿಂದಾಗಿ ಕಣ್ಣಿನ ಸುತ್ತಲು ಕಪ್ಪು ವೃತ್ತಗಳು ಮೂಡಬಹುದು. ಇದನ್ನು ತಪ್ಪಿಸಲು ಎಡದ ಬದಿಗೆ ಮಲಗುವುದನ್ನು ಅಭ್ಯಾಸ ಮಾಡಿ. ಇದರಿಂದ ರಕ್ತ ಸರಿಯಾಗಿ ಸಂಚಾರವಾಗುವುದು ಮತ್ತು ಕಣ್ಣಿನ ಸುತ್ತಲು ಕಪ್ಪು ವೃತ್ತ ಮೂಡುವುದು ತಪ್ಪುವುದು.

ಕಣ್ಣಿನ ಆರೈಕೆಯ ಉತ್ಪನ್ನ ಸರಿಯಾಗಿ ಬಳಸದಿರುವುದು

ಕಣ್ಣಿನ ಆರೈಕೆಯ ಉತ್ಪನ್ನ ಸರಿಯಾಗಿ ಬಳಸದಿರುವುದು

ಕೊನೆಯದಾಗಿ ಕಣ್ಣಿನ ಆರೈಕೆಗೆ ಬಳಸುವಂತಹ ಉತ್ಪನ್ನಗಳನ್ನು ಸರಿಯಾಗಿ ಬಳಕೆ ಮಾಡದೆ ಇರುವುದು ಕೂಡ ಕಣ್ಣ ಕೆಳಗಡೆ ಕಪ್ಪು ವೃತ್ತ ಮೂಡಲು ಕಾರಣವಾಗಿದೆ. ಸ್ಮಿಯರಿಂಗ್ ಅಥವಾ ಸ್ಲೆಥರಿಂಗ್ ಕ್ರೀಮ್ ನ್ನು ಕಣ್ಣಿನ ಕೆಳಗಡೆ ಹಚ್ಚುವಾಗ ಚರ್ಮಕ್ಕೆ ಹಾನಿ ಉಂಟಾಗಬಹುದು. ಕಣ್ಣ ಕೆಳಗಿನ ಚರ್ಮ ಕ್ರೀಮ್ ಅನ್ನು ಸರಿಯಾಗಿ ಹೀರಿಕೊಳ್ಳಲು ಮತ್ತು ಉತ್ತಮ ಫಲಿತಾಂಶಕ್ಕಾಗಿ ಅದನ್ನು ಕಣ್ಣ ಕೆಳಗಡೆ ಒರೆಸಿಬಿಡಿ.

English summary

Everyday Habits That Cause Dark Circles Under Your Eyes

Dark circles is an exceedingly common skin problem that women of different age groups are plagued with. This under-eye condition can make a person's skin appear dull and lifeless. A variety of factors like hormonal changes, health-related issues, unbalanced diet, etc., can cause darkening of the skin under your eyes. However, more often than not, unappealing dark circles are caused by our own habits. Yep, you read that right! From the way you sleep to the way in which you remove your makeup, it can affect the condition of the skin under your eyes. Today, at Boldsky, we've listed some of those everyday habits that cause under-eye dark circles.
X
Desktop Bottom Promotion