For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ ಮನೆಯಲ್ಲಿಯೇ ಮಾಡಿ-'ಕಾಫಿ ಸ್ಕ್ರಬ್'!

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಸ್ಕ್ರಬ್‌ಗಳು ಲಭ್ಯವಿದ್ದರೂ ಇದಕ್ಕಿಂತಲೂ ಸಮರ್ಥವಾದ ಹಾಗೂ ಅಗ್ಗವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಈ ಕಾಫಿ-ಸಕ್ಕರೆ ಬೆರೆಸಿ ಮಾಡಿದ 'ಬಾಡಿ ಸ್ಕ್ರಬ್' ಅನ್ನು ಪ್ರಯತ್ನಿಸಿ ನೋಡಿ...

By Jaya Subramanya
|

ಮುಂಜಾನೆ ಎದ್ದು ಬಿಸಿ ಬಿಸಿ ಒಂದು ಕಪ್ ಕಾಫಿ ಹೀರಿದರೆ ಅದು ನೀಡುವ ಖುಷಿ ಹೇಳಲು ಸಾಧ್ಯವಿಲ್ಲದೇ ಇರುವಂತಹದ್ದಾಗಿದೆ. ಫಿಲ್ಟರ್ ಕಾಫಿ, ಬ್ಲ್ಯಾಕ್ ಕಾಫಿ, ಹಾಲು ಹಾಕಿ ಮಾಡುವ ಕಾಫಿ, ಕೋಲ್ಡ್ ಕಾಫಿ, ಕ್ಯಾಪಚೀನೊ ಹೀಗೆ ಕಾಫಿಯ ಹಲವಾರು ವಿಧಗಳನ್ನುನೀವು ಕಂಡುಕೊಳ್ಳಬಹುದಾಗಿದ್ದು ನೀವು ಕಾಫಿ ಪ್ರಿಯರಾದಲ್ಲಿ ಯಾವ ಬಗೆಯ ಕಾಫಿ ಕೂಡ ನಿಮಗೆ ಇಷ್ಟವಾಗುತ್ತದೆ.

ಕಾಫಿ ಬೀಜಗಳನ್ನು ಹುರಿದು ಅದನ್ನು ಗ್ರೈಂಡ್ ಮಾಡಿ ಆಸ್ವಾದಿಸುವ ಬಗೆಯಂತೂ ಹೇಳಲು ಅಸದಳವಾದುದು. ನಿಮ್ಮನ್ನು ಉದಾಸೀನದಿಂದ ಮುಕ್ತಗೊಳಿಸಲು ಕಾಫಿ ಒಂದು ಬಗೆಯ ಮದ್ದಾಗಿದೆ. ಅತಿಯಾದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ ಅಧಿಕವಾಗಿ ಕಾಫಿ ಸೇವನೆ ಮಾಡುವುದರಿಂದ ಕೂಡ ನಿಮ್ಮ ದೇಹದ ಉಷ್ಣತೆ ಏರುತ್ತದೆ ಮತ್ತು ಅದರಲ್ಲಿರುವ ಕೆಫೇನ್ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ ಎಂಬ ಮಾತೂ ಕೂಡ ಇದೆ. ಬ್ಯೂಟಿ ಟಿಪ್ಸ್: ಕಾಫಿ-ಸಕ್ಕರೆ ಬೆರೆಸಿ ಮಾಡಿದ 'ಬಾಡಿ ಸ್ಕ್ರಬ್'!

ನಿಮ್ಮ ಮೂಡ್ ಅನ್ನು ಉತ್ತಮಗೊಳಿಸುವ ಕಾಫಿ ನಿಮ್ಮ ಸೌಂದರ್ಯ ವೃದ್ಧಿಯಲ್ಲೂ ಕಮಾಲನ್ನೇ ಉಂಟುಮಾಡಲಿದೆ ಎಂಬ ಅಂಶ ನಿಮಗೆ ಗೊತ್ತೇ? ನಿಮ್ಮ ಸೌಂದರ್ಯವನ್ನು ಉತ್ತಮಗೊಳಿಸುವಲ್ಲಿ ಕಾಫಿ ತುಂಬಾ ಸಹಕಾರಿ ಎಂದೆನಿಸಿದ್ದು ಅದಕ್ಕಾಗಿ ಕಾಫಿಯನ್ನು ಬಳಸಿ ಮಾಡಬಹುದಾದ ಫೇಸ್ ಸ್ಕ್ರಬ್ ಅನ್ನು ಇಂದಿಲ್ಲಿ ತಿಳಿಸುತ್ತಿದ್ದು ನಿಮ್ಮ ತ್ವಚೆಯನ್ನು ಇದು ಉತ್ತಮಗೊಳಿಸುವುದು ಮಾತ್ರವಲ್ಲದೆ ನಿಮ್ಮ ಇತರ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಲಿದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಅವುಗಳೇನು ಎಂಬುದನ್ನು ಅರಿತುಕೊಳ್ಳೋಣ.....

ಕಾಫಿ ಪುಡಿ

ಕಾಫಿ ಪುಡಿ

ಬಿಸಿ ಮಾಡಿದ ಕಾಫಿ ಹುಡಿಯನ್ನು ತಣ್ಣಗಾಗಿಸಿ ನಿಮ್ಮ ಕಣ್ಣುಗಳ ಕೆಳಗೆ ಹಚ್ಚುವುದರಿಂದ ಇದು ಮೃತಕೋಶಗಳನ್ನು ಹೋಗಲಾಡಿಸಲಿದೆ. ಮತ್ತು ಕಣ್ಣಿನ ಕೆಳಗಿನ ಊತವನ್ನು ಇದು ನಿವಾರಣೆ ಮಾಡಲಿದೆ.

ಆಂಟಿ ಸೆಲ್ಯುಲೈಟ್ ಸ್ಕ್ರಬ್

ಆಂಟಿ ಸೆಲ್ಯುಲೈಟ್ ಸ್ಕ್ರಬ್

ಬಳಸಿದ ಅರ್ಧ ಕಪ್ ಕಾಫಿ ಹುಡಿಯನ್ನು ತೆಗೆದುಕೊಳ್ಳಿ ಇದಕ್ಕೆ ಒಂದು ಚಮಚ ಶುಂಠಿ ರಸವನ್ನು ಬೆರೆಸಿ ಇದಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಒಂದು ಚಮಚ ಜೇನನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ಸ್ಕ್ರಬ್ ಮಾಡಿ.

ಫೇಸ್ ಸ್ಕ್ರಬ್

ಫೇಸ್ ಸ್ಕ್ರಬ್

ಇದು ಆಂಟಿ ಟ್ಯಾನ್‌ನಂತೆ ಕೆಲಸ ಮಾಡಲಿದ್ದು, ಇದು ತ್ವಚೆಯ ಉತ್ಪನ್ನವಾಗಿ ಕೂಡ ಕಾರ್ಯನಿರ್ವಹಿಸಲಿದೆ. 1/2 ಕಪ್ ಬಳಸಿದ ಕಾಫಿ ಹುಡಿಯನ್ನು ತೆಗೆದುಕೊಳ್ಳಿ ಇದಕ್ಕೆ 2 ಚಮಚ ಕೋಕಾ ಹುಡಿಯನ್ನು ಬೆರೆಸಿ, 3 ಚಮಚ ಹಾಲನ್ನು ಮಿಕ್ಸ್ ಮಾಡಿಕೊಳ್ಳಿ. ನಿಮ್ಮ ತ್ವಚೆಗೆ ಇದನ್ನು ಹಚ್ಚಿಕೊಳ್ಳಿ ಕೈ ಮತ್ತು ಕಾಲಿಗೂ ಇದನ್ನು ಹಚ್ಚಿರಿ. 2 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಬಿಡಿ. 15-20 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆದುಕೊಳ್ಳಿ.

ಕಾಫಿ ಮತ್ತು ಮೊಸರಿನ ಮಾಸ್ಕ್

ಕಾಫಿ ಮತ್ತು ಮೊಸರಿನ ಮಾಸ್ಕ್

ಎರಡು ಚಮಚ ಮೊಸರನ್ನು ಒಂದು ಚಮಚ ಕಾಫಿ ಹುಡಿಯೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷಗಳ ಕಾಲ ಬಿಡಿ. ಇದು ರಕ್ತಸಂಚಾರವನ್ನು ವೃದ್ಧಿ ಮಾಡಲಿದೆ ಅಂತೆಯೇ ಮೊಸರು ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ.

ಕಾಫಿ ಐಸ್ ಕ್ಯೂಬ್ಸ್

ಕಾಫಿ ಐಸ್ ಕ್ಯೂಬ್ಸ್

ಐಸ್ ಕ್ಯೂಬ್ ಟ್ರೇನಲ್ಲಿ ಕಾಫಿ ಹುಡಿಯನ್ನು ಹಾಕಿ ನಂತರ ನೀರಿನಲ್ಲಿ ಇದನ್ನು ತುಂಬಿಸಿಕೊಳ್ಳಿ. ಅದನ್ನು ಫ್ರೀಜ್ ಮಾಡಿಕೊಂಡು ನಿಮ್ಮ ಮುಖಕ್ಕೆ ನಿಯಮಿತವಾಗಿ ಹಚ್ಚಿಕೊಳ್ಳಿ.

ನಿಮ್ಮ ತುಟಿಗಳ ಸೌಂದರ್ಯಕ್ಕಾಗಿ

ನಿಮ್ಮ ತುಟಿಗಳ ಸೌಂದರ್ಯಕ್ಕಾಗಿ

ಇದನ್ನು ಬಳಸಿಕೊಂಡು ಲಿಪ್ ಸ್ಕ್ರಬ್ ತಯಾರಿಸಿಕೊಂಡು ನಿಮ್ಮ ತುಟಿಗಳ ಸೌಂದರ್ಯವನ್ನು ವೃದ್ಧಿ ಮಾಡಿಕೊಳ್ಳಬಹುದಾಗಿದೆ. ಬಳಸಿದ ಕಾಫಿ ಹುಡಿಗೆ ಒಂದು ಚಮಚ ಜೇನನ್ನು ಬೆರೆಸಿ. ನಿಮ್ಮ ತುಟಿಗೆ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿ. ಸ್ವಲ್ಪ ನಿಮಿಷಗಳ ನಂತರ ತೊಳೆದುಕೊಳ್ಳಿ. ದಿನವೂ ಈ ಹಂತವನ್ನು ಅನುಸರಿಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ಆಲೀವ್ ಆಯಿಲ್ ಮತ್ತು ಕಾಫಿ ಹುಡಿ ಸ್ಕ್ರಬ್

ಆಲೀವ್ ಆಯಿಲ್ ಮತ್ತು ಕಾಫಿ ಹುಡಿ ಸ್ಕ್ರಬ್

1/2 ಕಪ್‌ನಷ್ಟು ಕಾಫಿ ಹುಡಿಯನ್ನು ತೆಗೆದುಕೊಂಡು ಒಂದು ಚಮಚ ಆಲೀವ್ ಎಣ್ಣೆಯನ್ನು ಇದಕ್ಕೆ ಬೆರೆಸಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿ. ಕಣ್ಣಿನ ಪ್ರದೇಶವನ್ನು ಬಿಡಿ. ಇನ್ನೊಂದು 30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ. ಇದು ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ. ಅಂತೆಯೇ ಆಲೀವ್ ಆಯಿಲ್ ಬೇಕಾದ ಮಾಯಿಶ್ಚರೈಸ್ ಅನ್ನು ನೀಡುತ್ತದೆ.



English summary

Use Coffee Grounds scrub for Skin Care Routine In These 7 Ways!

After making your morning pot of coffee, keep it aside to dry while you enjoy your favourite drink of the day.And the grainy coffee remains can be used from tinting your hair to tightening your skin. So, here are 7 amazing coffee ground scrubs that you can make at home to get a tighter and healthier skin.
Story first published: Thursday, May 4, 2017, 12:11 [IST]
X
Desktop Bottom Promotion