For Quick Alerts
ALLOW NOTIFICATIONS  
For Daily Alerts

ಚೆಲುವೆಯ ಅಂದದ ಮುಖಕ್ಕೆ ಅಕ್ಕಿಯ ಫೇಸ್ ಮಾಸ್ಕ್

By Hemanth
|

ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರಿಗೆ ಅಕ್ಕಿ ಎಂದರೆ ತುಂಬಾ ಇಷ್ಟ. ಯಾಕೆಂದರೆ ಇದೇ ಅಕ್ಕಿಯಿಂದ ಮಾಡುವಂತಹ ಅನ್ನವು ಇಲ್ಲಿನವರ ಪ್ರಮುಖ ಆಹಾರವಾಗಿದೆ. ಅನ್ನವಿಲ್ಲವೆಂದರೆ ಇವರಿಗೆ ಹೊಟ್ಟೆಯೇ ತುಂಬಲ್ಲ. ಆದರೆ ಇದೇ ಅಕ್ಕಿಯನ್ನು ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಕೂಡ ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯಾ? ತ್ವಚೆಯ ಅಂದ ಹೆಚ್ಚಿಸುವ ಮಣ್ಣಿನ ಫೇಸ್ ಮಾಸ್ಕ್

ನೈಸರ್ಗಿಕವಾಗಿರುವಂತಹ ಅಕ್ಕಿಯು ತ್ವಚೆಯನ್ನು ಬಿಳಿ ಮಾಡಿ ಪೋಷಕಾಂಶಗಳನ್ನು ಒದಗಿಸುವುದು. ಹೆಚ್ಚಿನವರಿಗೆ ಅಕ್ಕಿಯಿಂದ ತ್ವಚೆಗೆ ಆಗುವಂತಹ ಲಾಭಗಳ ಬಗ್ಗೆ ತಿಳಿದಿಲ್ಲ. ಅಕ್ಕಿಯನ್ನು ಬಳಸುವುದರಿಂದ ತ್ವಚೆಗೆ ಹಲವಾರು ರೀತಿಯ ಲಾಭಗಳು ಇವೆ. ಬೋಲ್ಡ್ ಸ್ಕೈ ಅಕ್ಕಿಯಿಂದ ತ್ವಚೆಗೆ ತಯಾರಿಸಬಹುದಾದ ಕೆಲವೊಂದು ಮಾಸ್ಕ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದೆ. ಇನ್ನು ಚಿಂತೆ ಬಿಟ್ಟು ಅಕ್ಕಿಯನ್ನು ಸರಿಯಾಗಿ ಬಳಸಿಕೊಳ್ಳಿ...

ಅಕ್ಕಿ ಮತ್ತು ಹಾಲಿನ ಹುಡಿಯ ಫೇಸ್ ಮಾಸ್ಕ್

ಅಕ್ಕಿ ಮತ್ತು ಹಾಲಿನ ಹುಡಿಯ ಫೇಸ್ ಮಾಸ್ಕ್

ಒಂದೆರಡು ಚಮಚ ಅಕ್ಕಿಯನ್ನು ತೆಗೆದುಕೊಂಡು ಸಣ್ಣಗೆ ಹುಡಿ ಮಾಡಿಕೊಳ್ಳಿ, ಇನ್ನು ಇದಕ್ಕೆ ಸ್ವಲ್ಪ ಹಾಲಿನ ಹುಡಿಯನ್ನು ಬೆರೆಸಿಕೊಳ್ಳಿ. ತದನಂತರ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಹಾಲನ್ನು ಇದಕ್ಕೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಅಥವಾ ಹಾಲು ಹಾಕಿಕೊಂಡು ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಈ ಪೇಸ್ಟ್ ನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಮುಖವನ್ನು ತೊಳೆಯಿರಿ. ಈ ಫೇಸ್ ಮಾಸ್ಕ್ ಅನ್ನು ಬಳಸುವುದರಿಂದ ತ್ವಚೆಯು ಮಾಯಿಶ್ಚರೈಸ್ ಆಗುವುದು ಮತ್ತು ದೀರ್ಘ ಸಮಯದ ತನಕ ತೇವಾಂಶ ಉಳಿದುಕೊಳ್ಳುತ್ತದೆ. ಮುಖದ ಸೌಂದರ್ಯ ಹೆಚ್ಚಿಸಲು 'ಅಕ್ಕಿ ಹಿಟ್ಟಿನ' ಫೇಸ್ ಪ್ಯಾಕ್

ಅಕ್ಕಿ ಮತ್ತು ಅರಿಶಿನ ಮಾಸ್ಕ್

ಅಕ್ಕಿ ಮತ್ತು ಅರಿಶಿನ ಮಾಸ್ಕ್

ಅಕ್ಕಿ ಮತ್ತು ಅರಿಶಿನದ ಮಾಸ್ಕ್ ತ್ವಚೆಗೆ ಪೋಷಕಾಂಶ ಹಾಗೂ ಮಾಯಿಶ್ಚರೈಸರ್ ಒದಗಿಸುವುದು ಮಾತ್ರವಲ್ಲದೆ ಇದು ತ್ವಚೆಯನ್ನು ಯುವಿ ಕಿರಣಗಳಿಂದ ರಕ್ಷಿಸುವುದು. ಸ್ವಲ್ಪ ಅಕ್ಕಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ ಹಾಕಿಕೊಳ್ಳಿ. ಒಂದು ಚಮಚ ಕ್ರೀಮ್ ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ ಚೆನ್ನಾಗಿ ರುಬ್ಬಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಇನ್ನೂ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಅಕ್ಕಿಯ ಮಾಸ್ಕ್ ನಿಸ್ತೇಜ, ಒಣ ಮತ್ತು ತುರಿಕೆ ಉಂಟು ಮಾಡುವ ತ್ವಚೆಗೆ ಒಳ್ಳೆಯದು. ಚರ್ಮದ ಕಾಂತಿಗೆ ಬೆಂದ ಅನ್ನ+ಅರಿಶಿನದ ಮಾಸ್ಕ್

ಪಪ್ಪಾಯಿ ಮತ್ತು ಅಕ್ಕಿಯ ಮಾಸ್ಕ್

ಪಪ್ಪಾಯಿ ಮತ್ತು ಅಕ್ಕಿಯ ಮಾಸ್ಕ್

ಪಪ್ಪಾಯಿಯ ತಿರುಳನ್ನು ಸರಿಯಾಗಿ ಕಿವುಚಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ಅರಿಶಿನ ಹಾಕಿ. ಇದಕ್ಕೆ 3-4 ಚಮಚ ಚೆನ್ನಾಗಿ ಪುಡಿ ಮಾಡಿದ ಅಕ್ಕಿಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಪಪ್ಪಾಯಿ ಮತ್ತು ಅಕ್ಕಿಯು ಸರಿಯಾಗಿ ಮಿಶ್ರಣವಾಗಲಿ. ಇನ್ನು ಮುಖ ಹಾಗೂ ಕುತ್ತಿಗೆ ಈ ಮಾಸ್ಕ್ ಅನ್ನು ಸರಿಯಾಗಿ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಇದನ್ನು ತೊಳೆಯಿರಿ. ಪಪ್ಪಾಯಿ ಮತ್ತು ಅಕ್ಕಿಯ ಮಾಸ್ಕ್ ಒಣ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮೊಡವೆ ಹಾಗೂ ಕಲೆಗಳನ್ನು ನಿವಾರಿಸುವುದು.ಕಾಂತಿಯುತ ತ್ವಚೆಗಾಗಿ ಈ ಪಪ್ಪಾಯಿ ಫೇಸ್ ಮಾಸ್ಕ್

ಅಕ್ಕಿ ಮತ್ತು ದಾಲ್ಚಿನ್ನಿ ಮಾಸ್ಕ್

ಅಕ್ಕಿ ಮತ್ತು ದಾಲ್ಚಿನ್ನಿ ಮಾಸ್ಕ್

ಒಣ ಹಾಗೂ ತುರಿಕೆ ಉಂಟು ಮಾಡುವ ತ್ವಚೆಯಿದ್ದರೆ ಅಕ್ಕಿ ಹಾಗೂ ದಾಲ್ಚಿನ್ನಿಯ ಮಾಸ್ಕ್ ಇದಕ್ಕೆ ತುಂಬಾ ಒಳ್ಳೆಯದು. ಒಂದು ಕಪ್ ಅಕ್ಕಿಗೆ ಎರಡು ಚಮಚ ದಾಲ್ಚಿನಿಯನ್ನು ಸೇರಿಸಿಕೊಳ್ಳಿ. ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಗ್ಲಿಸರಿನ್ ಅನ್ನು ಇದಕ್ಕೆ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಮುಖ ತೊಳೆಯಿರಿ.ಕಳೆಗುಂದಿದ ಚರ್ಮದ ಆರೈಕೆಗೆ ದಾಲ್ಚಿನ್ನಿ ಪೌಡರ್!

English summary

Rice Recipes That Can Help To Treat Dull And Dry Skin

Asian woman have always been dependent on rice and rice powder for their natural beauty and today we would mention some of the best rice recipes you should be following. Check out some easy rice recipes that can help to treat dull and dry skin.
X
Desktop Bottom Promotion