For Quick Alerts
ALLOW NOTIFICATIONS  
For Daily Alerts

ಇಂತಹ ಟಿಪ್ಸ್ ಅನುಸರಿಸಿ-ಮುಖ ಇನ್ನಷ್ಟು ಫ್ರೆಶ್ ಆಗಿ ಕಾಣುತ್ತೆ...

By Arshad
|

ಇಂದು ನಮ್ಮಲ್ಲಿ ಯಾರಿಗೂ ಸಮಯವಿಲ್ಲ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಕಾರಣ ಆರೋಗ್ಯದ ಕಡೆಗೆ ಗಮನವೂ ಕಡಿಮೆಯಾಗಿದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ತ್ವಚೆಯ ಆರೈಕೆ ಮಾಡುವುದೂ ಹೊರೆಯಂತೆ ಭಾಸವಾಗುತ್ತಿದೆ. ಪರಿಣಾಮವಾಗಿ ತ್ವಚೆಗೆ ಪೋಷಣೆಯ ಕೊರತೆಯುಂಟಾಗಿ ಜೋಲುಬಿದ್ದಂತೆ, ವಯಸ್ಸಾದಂತೆ ಮತ್ತು ಬಳಲಿದಂತೆ ತೋರುತ್ತದೆ. ಬೆಳಿಗ್ಗೆದ್ದ ಎದ್ದ ತಕ್ಷಣ ಮುಖ ಫ್ರೆಶ್ ಆಗಿ ಕಾಣಬೇಕೇ?

ಈ ಬಳಲಿದ ತ್ವಚೆಯನ್ನು ಉಪೇಕ್ಷಿಸುವುದು ಸರ್ವಥಾ ತರವಲ್ಲ. ಆದ್ದರಿಂದ ಎಷ್ಟೇ ಕೆಲಸಬಾಹುಳ್ಯವಿದ್ದರೂ, ಸೌಂದರ್ಯದ ಕಾಳಜಿಗಾಗಿ ಕೊಂಚ ಸಮಯ ತೆಗೆಯುವುದು ಅನಿವಾರ್ಯ. ಈ ಕಾಳಜಿಯನ್ನು ನಿಸರ್ಗದ ನೆರವಿನಿಂದ ಪೂರೈಸಿದರೆ ಬಳಲಿದ ತ್ವಚೆಯನ್ನು ಮತ್ತೆ ಮೊದಲಿನಂತೆ ಪ್ರಜ್ವಲಿಸಲು ಸಾಧ್ಯ. ಮನೆಯಲ್ಲೇ ಇದೆ ಸೌಂದರ್ಯವರ್ಧಕ! ಹಣ ಖರ್ಚು ಮಾಡಬೇಡಿ!

ಇಂದು ಬೋಲ್ಡ್ ಸ್ಕೈ ತಂಡ ತ್ವಚೆಯನ್ನು ಪುನಃಶ್ಚೇತನಗೊಳಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ಕಂಡುಕೊಂಡಿದ್ದು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ. ಇವೆಲ್ಲವೂ ನೈಸರ್ಗಿಕ ಸಾಮಾಗ್ರಿಗಳನ್ನೇ ಬಳಸಿರುವ ಕಾರಣ ಸುರಕ್ಷಿತವೂ ಪರಿಣಾಮಕಾರಿಯೂ ಆಗಿದ್ದು ಬೆಳಗ್ಗಿನಿಂದ ಸಂಜೆಯವರೆಗೂ ತಾಜಾತನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಇದಕ್ಕಾಗಿ ತುಂಬಾ ಹೆಚ್ಚು ಹೊತ್ತೇನೂ ಅಗತ್ಯವಿಲ್ಲ. ಕೇವಲ ಐದರಿಂದ ಹತ್ತು ನಿಮಿಷ ವ್ಯಯಿಸಿದರೆ ಸಾಕಾಗುತ್ತದೆ. ಬನ್ನಿ, ಈ ವಿಧಾನಗಳು ಯಾವುವು ಎಂಬುದನ್ನು ನೋಡೋಣ....

ಗುಲಾಬಿ ನೀರಿನ ಸಿಂಪಡಿಕೆ

ಗುಲಾಬಿ ನೀರಿನ ಸಿಂಪಡಿಕೆ

ಅತ್ಯಂತ ಕ್ಷಿಪ್ರ ಸಮಯದಲ್ಲಿ ಬಳಲಿದ ತ್ವಚೆಗೆ ಆರೈಕೆ ನೀಡುವ ವಿಧಾನವೆಂದರೆ ತಣ್ಣನೆಯ ಗುಲಾಬಿ ನೀರನ್ನು ಚಿಮುಕಿಸಿಕೊಳ್ಳುವುದು. ಈ ನೀರನ್ನು ಒರೆಸದೇ ಕೊಂಚ ಕಾಲ ಹಾಗೇ ಬಿಡುವ ಮೂಲಕ ಬಳಲಿದ ಚರ್ಮ ತಕ್ಷಣವೇ ಕಾಂತಿಯುಕ್ತವಾಗುತ್ತದೆ ಮತ್ತು ತಾಜಾತನವನ್ನು ಪಡೆಯುತ್ತದೆ. ಮೊಡವೆಯ ಸಮಸ್ಯೆಗೆ ಗುಲಾಬಿ ನೀರಿನ ನಲ್ಮೆಯ ಆರೈಕೆ

ಸೌತೆಕಾಯಿಯ ರಸ

ಸೌತೆಕಾಯಿಯ ರಸ

ತಕ್ಷಣವೇ ಪರಿಣಾಮವನ್ನು ಪಡೆಯಬಹುದಾದ ಇನ್ನೊಂದು ವಿಧಾನವೆಂದರೆ ಈಗತಾನೇ ಹಿಂಡಿದ ಸೌತೆಕಾಯಿಯ ರಸವನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದು. ಸೌತೆರಸವನ್ನು ನೀರು ಬೆರೆಸದೇ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿಕೊಂಡು ನಾಲ್ಕಾರು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಕೆಲವೇ ನಿಮಿಷಗಳಲ್ಲಿ ಚರ್ಮ ಕಾಂತಿಯನ್ನೂ ತಾಜಾತನವನ್ನೂ ಪಡೆಯುತ್ತದೆ.ಮುಖದ ಅಂದವನ್ನು ಹೆಚ್ಚಿಸುವ 'ಸೌತೆಕಾಯಿ' ಫೇಸ್ ಪ್ಯಾಕ್!

ಟೊಮೇಟೊ ಹಣ್ಣಿನ ಬಿಲ್ಲೆಗಳು

ಟೊಮೇಟೊ ಹಣ್ಣಿನ ಬಿಲ್ಲೆಗಳು

ಬಳಲಿದ ಚರ್ಮದ ಮೇಲೆ ಚೆನ್ನಾಗಿ ಹಣ್ಣಾದ ಟೊಮಾಟೋ ಹಣ್ಣಿನ ಅಡ್ಡಲಾಗಿ ಕತ್ತರಿಸಿದ ಬಿಲ್ಲೆಗಳನ್ನು ಕೊಂಚವೇ ಒತ್ತಡದಿಂದ ಹಚ್ಚಿಕೊಳ್ಳುವ ಮೂಲಕ ಶೀಘ್ರವೇ ತಾಜಾತನವನ್ನು ಮತ್ತು ಕಾಂತಿಯನ್ನು ಪಡೆಯಬಹುದು. ಈ ವಿಧಾನವನ್ನು ಭಾರತದಲ್ಲಿ ನೂರಾರು ವರ್ಷದಿಂದ ಅನುಸರಿಸಲಾಗುತ್ತಾ ಬರಲಾಗಿದೆ. ಸುಮಾರು ಎರಡು ನಿಮಿಷಗಳವರೆಗೆ ಈ ಬಿಲ್ಲೆಯಿಂದ ನಯವಾಗಿ ಉಜ್ಜಿಕೊಂಡು ಕೆಲನಿಮಿಷ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಸಾಕಾಗುತ್ತದೆ.ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಚರ್ಮ ಒಣಗಿದ್ದಾಗ ನಯವಾಗಿ ಉಜ್ಜಿಕೊಳ್ಳುವುದು (dry brushing)

ಚರ್ಮ ಒಣಗಿದ್ದಾಗ ನಯವಾಗಿ ಉಜ್ಜಿಕೊಳ್ಳುವುದು (dry brushing)

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಮಳಿಗೆಗಳಲ್ಲಿ ಈ ವಿಧಾನವನ್ನು ಅನುಸರಿಸಲಾಗಿದ್ದು ಬಳಲಿದ ಚರ್ಮ ಒಣಗಿಯೇ ಇದ್ದಂತೆ ನಯವಾಗಿ ಸೌಮ್ಯ ಬ್ರಶ್ ಒಂದನ್ನು ಬಳಸಿ ಉಜ್ಜುವ ಮೂಲಕ ಮುಖದ ಚರ್ಮದಲ್ಲಿ ರಕ್ತ ಸಂಚಾರ ಹೆಚ್ಚಿಸುವಂತೆ ಮಾಡಿ ನೈಸರ್ಗಿಕವಾಗಿ ಬಳಲಿಕೆಯನ್ನು ಕಡಿಮೆ ಮಾಡಲಾಗುತ್ತದೆ. ಹೆಚ್ಚಿನ ರಕ್ತಸಂಚಾರ ಚರ್ಮದ ಒಳಗಿನಿಂದ ಹೆಚ್ಚಿನ ಪೋಷಣೆಯನ್ನು ನೀಡಿ ತ್ವಚೆ ಸಹಜಕಾಂತಿಯಿಂದ ಪ್ರಜ್ವಲಿಸಲು ನೆರವಾಗುತ್ತದೆ.

ರಾತ್ರಿ ಸಮಯದಲ್ಲಿ ಕ್ರೀಂ ಹಚ್ಚಿ

ರಾತ್ರಿ ಸಮಯದಲ್ಲಿ ಕ್ರೀಂ ಹಚ್ಚಿ

ರಾತ್ರಿಯ ಹೊತ್ತು ಮೊಯಿಶ್ಚರೈಸರ್ ಹಚ್ಚುವುದರಿಂದ ನೈಸರ್ಗಿಕವಾಗಿ ನಿಮ್ಮ ಚರ್ಮದಲ್ಲಿರುವ ಜೀವಕೋಶಗಳ ಮರುನಿರ್ಮಾಣ ಮತ್ತು ಅಸ್ತ ವ್ಯಸ್ತವಾಗಿರುವ ಕೋಶಗಳ ರಿಪೇರಿಗೆ ಸಹಾಯಕವಾಗುತ್ತದೆ. ಪ್ರತಿದಿನ ಮೊಯಿಶ್ಚರೈಸರ್ ಹಚ್ಚುವುದರಿಂದ ಸುಕ್ಕುಗಳು ಬರುವುದಿಲ್ಲ ಮತ್ತು ತ್ವಚೆಯು ತನ್ನ ಮೃದುತ್ವವನ್ನು, ಹೊಳಪನ್ನು ಉಳಿಸಿಕೊಳ್ಳುತ್ತದೆ.

ಸರಿಯಾಗಿ ನಿದ್ದೆ ಮಾಡಿ

ಸರಿಯಾಗಿ ನಿದ್ದೆ ಮಾಡಿ

ನಿದ್ದೆಯನ್ನು ಸರಿಯಾಗಿ ಮಾಡದಿದ್ದರೆ ನಿಮ್ಮ ತ್ವಚೆಯು ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಆಯಾಸಗೊಳ್ಳುತ್ತದೆ. ಹಾಗಾಗಿ ಪ್ರತಿದಿನವು ಅಗತ್ಯ ಪ್ರಮಾಣದಷ್ಟು ನಿದ್ದೆಯನ್ನು ಮಾಡುವುದರಿಂದ ನಿಮಗೆ ಆರೋಗ್ಯಕರ ಮತ್ತು ಯೌವನಭರಿತ ತ್ವಚೆಯು ಲಭಿಸುತ್ತದೆ. ನೀವು ನಿದ್ರಿಸುವಾಗ ನಿಮ್ಮ ದೇಹದಲ್ಲಿರುವ ಚರ್ಮದ ಕೋಶಗಳು ನಿರ್ಮಾಣ ಮತ್ತು ಮರು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ. ಇದರಿಂದ ನಿಮ್ಮ ತ್ವಚೆಯಲ್ಲಿ ಸುಕ್ಕುಗಳಾಗುವುದು ಮತ್ತು ವಯಸ್ಸಾದಂತೆ ಕಾಣುವುದು ತಡೆಯುತ್ತದೆ.

English summary

Natural Ways To Brighten Tired Skin

These ways are safe, inexpensive and highly effective. Just dedicate 5-10 minutes of your time to make your skin look bright and fresh through the course of the day. Read on to know more about them.
X
Desktop Bottom Promotion