For Quick Alerts
ALLOW NOTIFICATIONS  
For Daily Alerts

ಮನೆಯ ಉತ್ಪನ್ನಕ್ಕೆ ಶರಣಾಗಿ ಕೈಗಳ ಸುಕ್ಕನ್ನು ತೆಗೆಯಿರಿ...

ಕೈಗಳ ಚರ್ಮವು ಮುಖದ ಚರ್ಮಗಳಿಗಿಂತ ಬಹಳ ವೇಗವಾಗಿ ಸುಕ್ಕುಗಟ್ಟುತ್ತವೆ. ಹಾಗಂತ ಇವುಗಳ ನಿವಾರಣೆಗೆ ದುಬಾರಿ ಬೆಲೆಯ ಸೌಂದರ್ಯವರ್ಧಕಗಳನ್ನು ಬಳಸಬೇಕಿಲ್ಲ. ಮನೆಯಲ್ಲಿ ಸಿಗುವ ಕೆಲವು ಉತ್ಪನ್ನಗಳಿಂದಲೇ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು.

By Divya
|

ವಯಸ್ಸಾದಂತೆ ತ್ವಚೆಯು ಸುಕ್ಕುಗಟ್ಟುವುದು ಸಹಜ. ಇದು ಪ್ರಕೃತಿಯ ಸಹಜ ನಿಯಮವೂ ಹೌದು. ಕೆಲವೊಮ್ಮೆ ಪ್ರಸವದ ನಂತರವೂ ತ್ವಚೆಯು ಸುಕ್ಕುಗಟ್ಟುವುದು ಉಂಟು. ಅಲ್ಲದೆ ವಿಟಮಿನ್‍ಗಳ ಕೊರತೆ, ಅತಿಯಾದ ಸೂರ್ಯನ ಕಿರಣದಿಂದ ತ್ವಚೆಯು ಬಹುಬೇಗ ಸುಕ್ಕುಗಟ್ಟಬಹುದು. ಕಡಿಮೆ ವಯಸ್ಸಿನಲ್ಲಿ ಉಂಟಾಗುವ ಈ ತೊಂದರೆಗೆ ಸೂಕ್ತ ಕ್ರಮ ಕೈಗೊಳ್ಳುವುದರ ಮೂಲಕ ನಿವಾರಿಸಬಹುದು. ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...

ಸಾಮಾನ್ಯವಾಗಿ ಮಹಿಳೆಯರು ಮುಖದ ಸೌಂದರ್ಯ ಹಾಗೂ ತ್ವಚೆಯ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾರೆ. ತ್ವಚೆಯ ಶುದ್ಧೀಕರಣ, ಫೇಸ್ ಪ್ಯಾಕ್ ಹಾಗೂ ಮಸಾಜ್‍ಗಳನ್ನು ಮಾಡಿಸಿಕೊಳ್ಳುತ್ತಾರೆ. ಅದೇ ಕೈ-ಕಾಲುಗಳ ಕುರಿತು ಹೆಚ್ಚು ಗಮನ ನೀಡುವುದಿಲ್ಲ. ಮುಖದ ಆರೈಕೆಯಿಂದ ಹೆಚ್ಚು ವಯಸ್ಸಾಗಿದ್ದರೂ ಕಡಿಮೆ ವರ್ಷದವರಂತೆ ತೋರುತ್ತಾರೆ. ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

ಕೈ-ಕಾಲುಗಳು ಸಹ ನಮ್ಮ ಸೌಂದರ್ಯ ಹಾಗೂ ವಯಸ್ಸನ್ನು ಸೂಚಿಸುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕೈಗಳ ಮೇಲೂ ಸೂರ್ಯನ ಕಿರಣ ಹೆಚ್ಚಾಗಿ ಬೀಳುವುದರಿಂದ ಮುಖಕ್ಕೆ ಕೊಡುವಷ್ಟೇ ಕಾಳಜಿಯನ್ನು ನೀಡಬೇಕು. ಕೈಗಳ ಚರ್ಮವು ಮುಖದ ಚರ್ಮಗಳಿಗಿಂತ ಬಹಳ ವೇಗವಾಗಿ ಸುಕ್ಕುಗಟ್ಟುತ್ತವೆ. ಹಾಗಂತ ಇವುಗಳ ನಿವಾರಣೆಗೆ ದುಬಾರಿ ಬೆಲೆಯ ಸೌಂದರ್ಯವರ್ಧಕಗಳನ್ನು ಬಳಸಬೇಕಿಲ್ಲ. ಮನೆಯಲ್ಲಿ ಸಿಗುವ ಕೆಲವು ಉತ್ಪನ್ನಗಳಿಂದಲೇ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು....

ಬಾಳೆಹಣ್ಣಿನ ಬಳಕೆ

ಬಾಳೆಹಣ್ಣಿನ ಬಳಕೆ

ಇದರಲ್ಲಿ ಕಬ್ಬಿಣ ಮತ್ತು ಇತರ ಖನಿಜಗಳು ಸಮೃದ್ಧವಾಗಿರುವುದರಿಂದ ತ್ವಚೆಯ ಮೇಲಿರುವ ಸುಕ್ಕುಗಳನ್ನು ತಡೆಯಲು ದಿವ್ಯ ಔಷಧಿ. ಮೃದುವಾದ ಬಾಳೆಹಣ್ಣನ್ನು ಪೇಸ್ಟ್ ರೀತಿ ಮಾಡಿಕೊಂಡು, ಪ್ರತಿದಿನ ಕೈಗಳಿಗೆ ಹಚ್ಚಿಕೊಂಡು ಒಣಗಲು ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯು ಹೆಚ್ಚು ಸುಕ್ಕುಗಟ್ಟದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಆಹಾರ ಪದಾರ್ಥಗಳ ತಯಾರಿಕೆಗೆ ಹಾಗೂ ಮಸಾಜ್ ಮಾಡಲು ಉತ್ತಮವಾದದ್ದು. ಪ್ರತಿದಿನ ಮಲಗುವ ಮುನ್ನ ಅಥವಾ ಸ್ನಾನಕ್ಕೆ ಮುಂಚೆ 30 ನಿಮಿಷ ಮೊದಲು ಆಲಿವ್ ಎಣ್ಣೆ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ತ್ವಚೆಯು ತೇವಾಂಶಭರಿತವಾಗಿರುತ್ತದೆ. ಜೊತೆಗೆ ಸುಕ್ಕುಗಟ್ಟುವುದನ್ನು ತಡೆಯಬಹುದು

ನಿಂಬೆ ರಸ

ನಿಂಬೆ ರಸ

ಅರ್ಧ ನಿಂಬೆಹಣ್ಣಿನ ರಸಕ್ಕೆ ಒಂದು ಚಮಚ ಸಕ್ಕರೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಆ ಮಿಶ್ರಣವನ್ನು ಕೈಗಳಮೇಲೆ ಹಚ್ಚಿಕೊಂಡು ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕೈಗಳ ಮೇಲಿರುವ ಸತ್ತ ಚರ್ಮಗಳು ಸ್ವಚ್ಛವಾಗುತ್ತವೆ. ನಂತರ ಹತ್ತು ನಿಮಿಷಗಳ ಕಾಲ ಹಾಲಿನಲ್ಲಿ ಕೈಯನ್ನು ನೆನೆಯಿಡಬೇಕು. ಹೀಗೆ ಗಣನೀಯವಾಗಿ ಮಾಡುತ್ತಾಬಂದರೆ ಕೈಗಳಮೇಲೆ ಇರುವ ಸುಕ್ಕುಗಳನ್ನು ತೊಡೆದುಹಾಕಬಹುದು.

ಅನಾನಸ್ ಬಳಕೆ

ಅನಾನಸ್ ಬಳಕೆ

ವಿಟಮಿನ್ "ಸಿ'ಯನ್ನು ಸಮೃದ್ಧವಾಗಿರುವ ಅನಾನಸ್ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಈ ಹಣ್ಣನ್ನು ಪೇಸ್ಟ್‍ಮಾಡಿಕೊಂಡು ಕೈಗಳ ಮೇಲೆ ಹಾಗೂ ಬೆರಳುಗಳ ಮಧ್ಯೆ ಹಚ್ಚಿಕೊಂಡು 10-15 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ತೊಳೆದರೆ ತ್ವಚೆಯು ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತದೆ.

ಸೌತೆಕಾಯಿ ಬಳಕೆ

ಸೌತೆಕಾಯಿ ಬಳಕೆ

ಸೌತೆಕಾಯಿಯ ಪೇಸ್ಟ್‍ನಿಂದ ಕೈಗಳ ಮಸಾಜ್ ಅಥವಾ ಸೌತೆಕಾಯಿಯ ತೆಳ್ಳನೆಯ ಚೂರನ್ನು ಸುಕ್ಕುಗಟ್ಟಿರುವ ಜಾಗದಲ್ಲಿ ಇಟ್ಟುಕೊಂಡರೆ, ಸುಕ್ಕುಗಟ್ಟಿರುವುದನ್ನು ತಡೆಯಬಹುದು.

ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು

2 ಚಮಚ ಅಕ್ಕಿಹಿಟ್ಟು, 1 ಚಮಚ ಹಾಲು ಹಾಗೂ ಸ್ವಲ್ಪ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಇದನ್ನು ಕೈಗಳಿಗೆ ಹಚ್ಚಿಕೊಂಡು ಒಣಗಲು ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯು ಹೆಚ್ಚು ಆರೋಗ್ಯಕರವಾಗಿರುತ್ತದೆ.

ಕಲ್ಲಂಗಡಿ

ಕಲ್ಲಂಗಡಿ

ಕಲ್ಲಂಗಡಿಯ ತಿರುಳಿನಿಂದ ಕೈಗಳ ಮಸಾಜ್ ಮಾಡಿಕೊಂಡು 5-10 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ವಾರಕ್ಕೆರಡು ಬಾರಿ ಮಾಡುವುದರಿಂದ ಕೈಗಳ ಚರ್ಮ ತೇವಾಂಶದಿಂದ ಕೂಡಿರುತ್ತದೆ. ಸುಕ್ಕುಗಟ್ಟುವುದನ್ನು ತಡೆಯಬಹುದು.

ಟೊಮೇಟೋ

ಟೊಮೇಟೋ

ಕೈಗೆ ಟೊಮೇಟೋ ರಸವನ್ನು ಬಳಿದುಕೊಂಡು ಒಣಗಿಸಬೇಕು. ನಂತರ ತಣ್ಣೀರಿನಲ್ಲಿ ತೊಳೆದರೆ ಶೀಘ್ರದಲ್ಲಿಯೇ ಸುಕ್ಕುಗಟ್ಟುವುದನ್ನು ತಡೆಯಬಹುದು.

ನಿಂಬೆ ಮತ್ತು ಹಾಲು

ನಿಂಬೆ ಮತ್ತು ಹಾಲು

ಅರ್ಧ ನಿಂಬೆ ರಸ ಮತ್ತು 2 ಚಮಚ ಹಾಲನ್ನು ಸೇರಿಸಿದ ಮಿಶ್ರಣವನ್ನು ಕೈಗೆ ಹಚ್ಚಿಕೊಂಡು ಸುಮಾರು 20 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಕಡ್ಲೆ ಹಿಟ್ಟು

ಕಡ್ಲೆ ಹಿಟ್ಟು

ಪುರಾತನ ಕಾಲದಿಂದಲೂ ತ್ವಚೆಯ ಆರೈಕೆಗೆ ಬಳಸುತ್ತಿದ್ದ ವಸ್ತು ಕಡ್ಲೆ ಹಿಟ್ಟು. ಇದರ ಪೇಸ್ಟ್‍ನಿಂದ ಮಸಾಜ್ ಮಾಡಿಕೊಂಡರೆ ತ್ವಚೆಯಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಕಾಂತಿಯುತವಾಗಿರುವಂತೆ ಮಾಡುತ್ತದೆ. ಜೊತೆಗೆ ತ್ವಚೆಯ ಸುಕ್ಕುಗಟ್ಟುವಿಕೆಯಿಂದ ಮುಕ್ತವಾಗುತ್ತದೆ.

English summary

Natural Home Remedies To Treat Wrinkles On Hand

Wrinkles on the hands occur faster than your face and make you look aged and old. So, do remember to give that proper care to the skin on your hands. As discussed in most of our beauty articles, you need not necessarily go for expensive lotions or creams, but just follow some simple home remedies to get wrinkle-free hands.
Story first published: Tuesday, May 9, 2017, 19:43 [IST]
X
Desktop Bottom Promotion