For Quick Alerts
ALLOW NOTIFICATIONS  
For Daily Alerts

ಕಡಲೆ ಹಿಟ್ಟಿನ ಫೇಸ್‌ಪ್ಯಾಕ್‌ -ತ್ವಚೆಯ ಎಲ್ಲಾ ಸಮಸ್ಯೆಗೂ ಪರಿಹಾರ

By Hemanth
|

ಕೆಲವೊಂದು ಕಡೆಗಳಲ್ಲಿ ಈಗಲೂ ಮಕ್ಕಳನ್ನು ಸ್ನಾನ ಮಾಡಿಸಲು ಕಡಲೆ ಹಿಟ್ಟನ್ನು ಬಳಸುವುದು ಇದೆ. ಕಡಲೆ ಹಿಟ್ಟು ತ್ವಚೆ ತುಂಬಾ ಒಳ್ಳೆಯದು ಎನ್ನುವ ಕಾರಣಕ್ಕಾಗಿ ಇದನ್ನು ಬಳಸಲಾಗುತ್ತದೆ. ನಾವು ಬಳಸುವಂತಹ ಸೋಪಿಗಿಂತ ಕಡಲೆ ಹಿಟ್ಟು ಚರ್ಮಕ್ಕೆ ಒಳ್ಳೆಯದು. ಕಡಲೆಹಿಟ್ಟಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಇರುವುದಿಲ್ಲ. ಬ್ಯೂಟಿ ಟಿಪ್ಸ್: ಕ್ಯಾರೆಟ್, ಮೊಸರು, ಕಡಲೆ ಹಿಟ್ಟಿನ ಮಾಸ್ಕ್

ನಮ್ಮ ಹಿರಿಯರು ಹಿಂದಿನಿಂದಲೂ ಕಡಲೆಹಿಟ್ಟನ್ನು ಚರ್ಮದ ಆರೈಕೆಗೆ ಬಳಸಿಕೊಂಡು ಬಂದಿದ್ದಾರೆ. ಕಡಲೆಹಿಟ್ಟನ್ನು ಬಳಸಿದರೆ ಚರ್ಮದ ಕಲೆಗಳನ್ನು ನಿವಾರಿಸಬಹುದು. ಕಡಲೆಹಿಟ್ಟಿನಿಂದ ಒಳ್ಳೆಯ ತ್ವಚೆಯನ್ನು ಕೂಡ ಪಡೆಯಬಹುದಾಗಿದೆ. ನಿಯಮಿತವಾಗಿ ದೇಹಕ್ಕೆ ಕಡಲೆಹಿಟ್ಟನ್ನು ಬಳಸುವುದರಿಂದ ಕಾಂತಿಯುತ ತ್ವಚೆಯು ನಮ್ಮದಾಗುತ್ತದೆ. ಕಡಲೆಹಿಟ್ಟನ್ನು ಬಳಸಿ ನಿವಾರಿಸಬಹುದಾದ ಕೆಲವೊಂದು ಸಮಸ್ಯೆಗಳು.

besan flour

ಕಪ್ಪು ಕಲೆಗಳು
ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದ ಬಳಿಕ ಮುಖದ ಮೇಲೆ ಕಪ್ಪು ಕಲೆಗಳು ಬಿದ್ದಿದೆಯಾ? ಹಾಗಾದರೆ ಕಡಲೆಹಿಟ್ಟಿನಿಂದ ಇದನ್ನು ನಿವಾರಿಸಬಹುದು. ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಅರಶಿನ, ಕೆಲವು ಹನಿ ನಿಂಬೆರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ ಹೀಗೆ ಮಾಡಿ. ಕಲೆಗಳು ನಿಧಾನವಾಗಿ ಮಾಯವಾಗುವುದನ್ನು ಕಾಣಬಹುದು. ಮುಖದ ಕಪ್ಪು ಅಥವಾ ಕೆಂಪು ಕಲೆ ನಿವಾರಣೆಗೆ 8 ಟಿಪ್ಸ್

ಎಣ್ಣೆಯಂಶವಿರುವ ತ್ವಚೆಗೆ
ಎಣ್ಣೆಯಂಶವಿರುವ ತ್ವಚೆಯ ಆರೈಕೆಯಲ್ಲಿ ಕಡಲೆಹಿಟ್ಟು ಪ್ರಮುಖಪಾತ್ರ ನಿರ್ವಹಿಸುತ್ತದೆ. ಸ್ವಲ್ಪ ಕಡಲೆಹಿಟ್ಟನ್ನು ರೋಸ್ ವಾಟರ್ ಜತೆ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಎಣ್ಣೆಯಂಶವಿರುವ ಚರ್ಮವು ಸಾಮಾನ್ಯವಾಗುವುದು.

ಮೊಡವೆ
ಮೊಡವೆ ನಿವಾರಿಸುವಲ್ಲಿ ಕಡಲೆಹಿಟ್ಟು ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ಚಮಚ ಕಡಲೆಹಿಟ್ಟು, ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿಕೊಳ್ಳಿ. ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಹಿಡಿಯಷ್ಟು ಅರಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಬಳಸಿಕೊಳ್ಳಿ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

English summary

Here’s why besan flour is good for your skin

When it comes to skin issues, there's nothing like going back to grandmother's tricks. Besan, or gram flour, is one among those tricks, which helps treat a variety of skin problems. Use besan flour with readily available ingredients to see results. Regular use of besan also makes your skin glow. Here are a few things that can be treated using besan flour...
Story first published: Saturday, January 7, 2017, 18:12 [IST]
X
Desktop Bottom Promotion