For Quick Alerts
ALLOW NOTIFICATIONS  
For Daily Alerts

ಹಣ್ಣುಗಳ ಫೇಸ್ ಮಾಸ್ಕ್ ಪ್ರಯತ್ನಿಸಿ, ಇನ್ನಷ್ಟು ಮುದ್ದಾಗಿ ಕಾಣುವಿರಿ!

ತ್ವಚೆಯ ನೆರಿಗೆಯನ್ನು ಕುಗ್ಗಿಸಿ ವಯಸ್ಸಾಗುವಿಕೆಯನ್ನು ತಡೆಹಿಡಿಯುವ ಕೆಲವೊಂದು ನೈಸರ್ಗಿಕ ಉತ್ಪನ್ನಗಳ ವಿವರಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇವುಗಳು ಹಣ್ಣುಗಳ ಫೇಸ್‌ಪ್ಯಾಕ್ ಆಗಿರುವುದರಿಂದ ನಿಮಗೆ ಇದರಿಂದ ಹಾನಿ ಖಂಡಿತ ಉಂಟಾಗುವುದಿಲ್ಲ.

By Manu
|

ಸ್ತ್ರೀಯರು ಆಂತರಿಕ ಸೌಂದರ್ಯದೊಂದಿಗೆ ಬಾಹ್ಯ ಸೌಂದರ್ಯಕ್ಕೂ ಹೆಚ್ಚಿನ ಗಮನವನ್ನು ನೀಡುತ್ತಾರೆ. ತಲೆಯಲ್ಲಿ ಒಂದೆರಡು ಬಿಳಿ ಕೂದಲು ಕಂಡರೂ, ಮುಖದಲ್ಲಿ ಗುಳ್ಳೆ, ಮೊಡವೆಗಳು ಹಾಜರಾದಾಗಲೂ ಚಿಂತೆಯಿಂದ ವ್ಯಾಕುಲರಾಗಿಬಿಡುತ್ತಾರೆ. ಜಾಹೀರಾತಿನಲ್ಲಿ ಬರುವ ಕ್ರೀಮ್, ಲೋಷನ್‌ಗಳನ್ನು ಹಚ್ಚಿ ಅದನ್ನು ಮರೆಮಾಚುವ ಪ್ರಯತ್ನಕ್ಕೆ ತೊಡಗುತ್ತಾರೆ. ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!

ಅಂತೂ ತಮಗೆ ವಯಸ್ಸಾದರೂ ಅದು ಹೊರಕ್ಕೆ ಕಾಣಬಾರದು ಎಂಬುದು ಅವರ ಮನೋಭಾವವಾಗಿರುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಈ ಸಂದರ್ಭದಲ್ಲಿ ನೈಸರ್ಗಿಕ ಉತ್ಪನ್ನಗಳನ್ನು ಮರೆತೇಬಿಡುತ್ತಾರೆ. ನಿಮ್ಮ ಸಕಲ ಸೌಂದರ್ಯ ಸಮಸ್ಯೆಗಳಿಗೆ ಪ್ರಕೃತಿಯೇ ಉತ್ತಮ ಔಷಧವಾಗಿದ್ದು ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ

ಇಂದಿನ ಲೇಖನದಲ್ಲಿ ನಿಮ್ಮ ತ್ವಚೆಯ ನೆರಿಗೆಯನ್ನು ಕುಗ್ಗಿಸಿ ವಯಸ್ಸಾಗುವಿಕೆಯನ್ನು ತಡೆಹಿಡಿಯುವ ಕೆಲವೊಂದು ನೈಸರ್ಗಿಕ ಉತ್ಪನ್ನಗಳ ವಿವರಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇವುಗಳು ಹಣ್ಣುಗಳ ಫೇಸ್‌ಪ್ಯಾಕ್ ಆಗಿರುವುದರಿಂದ ನಿಮಗೆ ಇದರಿಂದ ಹಾನಿ ಖಂಡಿತ ಉಂಟಾಗುವುದಿಲ್ಲ. ಬ್ಯೂಟಿಪಾರ್ಲರ್‌ಗೆ ಹೋಗಿ ಇಂತಹ ಫೇಸ್‌ಪ್ಯಾಕ್‌ಗಳನ್ನು ಪ್ರಯತ್ನಿಸುವುದರ ಬದಲಿಗೆ ಮನೆಯಲ್ಲೇ ಸುಲಭವಾಗಿ ಇದನ್ನು ತಯಾರಿಸಿಕೊಂಡು ನಿಮಗೆ ಟ್ರೈ ಮಾಡಬಹುದಾಗಿದೆ....

ದಾಳಿಂಬೆ ಮಾಸ್ಕ್

ದಾಳಿಂಬೆ ಮಾಸ್ಕ್

ದಾಳಿಂಬೆಯ ಸಿಪ್ಪೆಯ ಭಾಗಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ಒಂದು ಹಿಡಿಯಷ್ಟು ಒಣ ಸಿಪ್ಪೆಗಳನ್ನು ಚಿಕ್ಕದಾಗಿ ಪುಡಿ ಮಾಡಿಕೊಂಡು ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕಂದುಬಣ್ಣ ಬಂದ ಬಳಿಕ ಪಾತ್ರೆಯ ಮುಚ್ಚಳದ ಮೇಲೆ ಹರಡಿ ತಣಿಯಲು ಬಿಡಿ. ತಣಿದ ಪುಡಿಯನ್ನು ನೀರಿಲ್ಲದೇ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. ಈ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಡಿ.

ದಾಳಿಂಬೆ ಮಾಸ್ಕ್

ದಾಳಿಂಬೆ ಮಾಸ್ಕ್

ಪ್ರತಿದಿನ ರಾತ್ರಿ ಮಲಗುವ ಮುನ್ನ ಸಮಪ್ರಮಾಣದ ಲಿಂಬೆರಸ ಅಥವಾ ಗುಲಾಬಿನೀರಿನಲ್ಲಿ ಮಿಶ್ರಣಮಾಡಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮೊಡವೆಗಳ ಮೇಲೆ ದಪ್ಪನಾಗಿಯೂ, ಇತರೆಡೆ ತೆಳುವಾಗಿಯೂ ಲೇಪಿಸಿ. ಸುಮಾರು ಅರ್ಧಗಂಟೆಯಿಂದ ಒಂದು ಗಂಟೆಯವರೆಗೆ ಹಾಗೇ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ (ಸೋಪು ಉಪಯೋಗಿಸದಿರಿ). ಒಂದು ವೇಳೆ ಮೊಡವೆಗಳು ತುಂಬಾ ಹೆಚ್ಚಿದ್ದರೆ ಲಿಂಬೆರಸದ ಪ್ರಮಾಣ ಕಡಿಮೆ ಮಾಡಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಲೇಪನವನ್ನು ತೆಳುವಾಗಿ ಹಚ್ಚಿ ಇಡಿಯ ರಾತ್ರಿ ಬಿಡಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಓಟ್‌ಮೀಲ್ ಮತ್ತು ಜೇನಿನ ಮಾಸ್ಕ್

ಓಟ್‌ಮೀಲ್ ಮತ್ತು ಜೇನಿನ ಮಾಸ್ಕ್

ಜೇನು ಮತ್ತು ಓಟ್‌ಮೀಲ್ ಬಳಸಿಕೊಂಡು ಫೇಸ್ ಮಾಸ್ಕ ಅನ್ನು ತಯಾರಿಸಿ. ನಂತರ 20-30 ನಿಮಿಷ ಇದನ್ನು ಹಚ್ಚಿರಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ತ್ವಚೆಯನ್ನು ಈ ಮಿಶ್ರಣ ಎಕ್ಸ್‌ಫೋಲಿಯೇಟ್ ಮಾಡಲಿದ್ದು ತ್ವಚೆಯಿಂದ ಮೃತಕೋಶಗಳನ್ನು ನಿವಾರಿಸಲಿದೆ. ಇದು ಕೊಲೆಜಾನ್ ಉತ್ಪಾದನೆಯನ್ನು ಹೆಚ್ಚಿಸಲಿದ್ದು, ನಿಮಗೆ ಯುವತ್ವವಿರುವ ತ್ವಚೆಯನ್ನು ನೀಡಲಿದೆ. ವಾರದಲ್ಲಿ 5 ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ ಮತ್ತು ಫಲಿತಾಂಶವನ್ನು ಆನಂದಿಸಿ.

ಬಾಳೆಹಣ್ಣು ಫೇಸ್ ಮಾಸ್ಕ್

ಬಾಳೆಹಣ್ಣು ಫೇಸ್ ಮಾಸ್ಕ್

ಕಳಿತ ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ಧಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.

ಪಪ್ಪಾಯ ಮತ್ತು ಲಿಂಬೆ ರಸ

ಪಪ್ಪಾಯ ಮತ್ತು ಲಿಂಬೆ ರಸ

ಸುಮಾರು ಎರಡು ಚಮಚ ಮಾಗಿದ ಪಪ್ಪಾಯಿಗೆ 10 ರಿಂದ 12 ಹನಿ ಲಿಂಬೆ ರಸವನ್ನು ಹಾಕಿಕೊಂಡು ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆಯಿರಿ. ಕೆಲವು ದಿನಗಳ ಬಳಿಕ ಕಪ್ಪು ಕಲೆ ಹಾಗೂ ಇತರ ಕಲೆಗಳು ದೂರವಾಗುತ್ತದೆ. ಕಾಂತಿಯುತ ಚರ್ಮವನ್ನು ನೀವು ಪಡೆಯಬಹುದು.

ತೆಂಗಿನ ಹಾಲು

ತೆಂಗಿನ ಹಾಲು

ಸ್ವಲ್ಪ ತೆಂಗಿನಹಾಲಿಗೆ, ಗಂಧದ ಪುಡಿಯನ್ನು ಸೇರಿಸಿ. ಅದಕ್ಕೆ ಸ್ವಲ್ಪ ಕೇಸರಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಿ ಮತ್ತು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಇದು ಪ್ಯಾಕ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಹೊಳಪು ಬರುವಂತೆ ಮಾಡುತ್ತೆ. ನೈಸರ್ಗಿಕವಾಗಿ ಮುಖದ ಹೊಳಪು ಹೆಚ್ಚಿಸಲು ಇದು ಸಹಕಾರಿ.

ಇನ್ನೊ0ದು ವಿಧಾನ

ಇನ್ನೊ0ದು ವಿಧಾನ

6 ರಿಂದ 8 ಬಾದಾಮಿಯನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಿಗ್ಗೆ ಅದರ ಚರ್ಮವನ್ನು ತೆಗೆದು ಪೇಸ್ಟ್ ತಯಾರಿಸಿಕೊಳ್ಳಿ. ಕೆಲವು ಹನಿ ತೆಂಗಿನ ಹಾಲು ಮತ್ತು ವಿಟಮಿನ್ ಇ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ. ವಾರದಲ್ಲಿ ಮೂರು ನಾಲ್ಕು ಬಾರಿ ಈ ರೀತಿ ಮುಖಕ್ಕೆ ಹಚ್ಚಿಕೊಂಡು ನಂತ್ರ ತೊಳೆಯಿರಿ. ಚರ್ಮದಲ್ಲಿ ನೆರಿಗೆ ಕಾಣಿಸಿಕೊಂಡು ವಯಸ್ಸಾದಂತೆ ಕಾಣುವುದು, ಮತ್ತು ಚರ್ಮ ಇಳಿಬಿದ್ದಂತಾಗಿರುವ ಸಮಸ್ಯೆ ನಿವಾರಣೆಗೆ ಈ ಮಿಶ್ರಣ ನಿಮಗೆ ಸಹಾಯ ಮಾಡಲಿದೆ.

ಕ್ರೇನ್‌ಬೆರ್ರಿ ಫೇಸ್ ಮಾಸ್ಕ್

ಕ್ರೇನ್‌ಬೆರ್ರಿ ಫೇಸ್ ಮಾಸ್ಕ್

ಕ್ರೇನ್‌ಬೆರ್ರಿಗಳಲ್ಲಿ ವಿಟಮಿನ್ ಸಿ ಅಂಶವಿದ್ದು, ನಿಮಗೆ ಮೃದುವಾದ ಹೊಳೆಯುವ ತ್ವಚೆಯನ್ನು ಇದು ನೀಡಲಿದೆ. ಗೆರೆಗಳು, ಕಪ್ಪು ವರ್ತುಲಗಳು ಮತ್ತು ಗಾಢ ಕಲೆಗಳನ್ನು ಇದು ಹೋಗಲಾಡಿಸಲಿದೆ. ಬೀಜರಹಿತ ಕ್ರೇನ್‌ಬೆರ್ರಿಯನ್ನು ಒಂದು ಮುಷ್ಟಿ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ 5-6 ದ್ರಾಕ್ಷಿ, ಒಂದು ಚಮಚ ಲಿಂಬೆ, ಒಂದು ಚಮಚ ಆಲೊವೇರಾ ಜೆಲ್ ಅನ್ನು ಸೇರಿಸಿಕೊಂಡು ಜ್ಯೂಸ್ ತಯಾರಿಸಿ.ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳು ಹಾಗೆಯೇ ಬಿಡಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ನಿಮ್ಮತ್ವಚೆ ಒಣಗಿದ್ದಲ್ಲಿ ಈ ಫೇಸ್ ಮಾಸ್ಕ್ ಪರಿಣಾಮಕಾರಿ ಪ್ರಯೋಜನವನ್ನು ನೀಡಲಿದೆ. ದೀರ್ಘ ಸಮಯದವರೆಗೆ ಹೈಡ್ರೇಟ್ ಆಗಿ ಮತ್ತು ಮಾಯಿಶ್ಚರೈಸ್ ಆಗಿ ಈ ಫೇಸ್ ಮಾಸ್ಕ್ ಮಾಡಲಿದೆ.

ಸ್ಟ್ರಾಬೆರ್ರಿ ಫೇಸ್ ಮಾಸ್ಕ್

ಸ್ಟ್ರಾಬೆರ್ರಿ ಫೇಸ್ ಮಾಸ್ಕ್

*ಸುಮಾರು ಐದರಿಂದ ಆರು ಚೆನ್ನಾಗಿ ಹಣ್ಣದ ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಕಿವುಚಿ ಇದಕ್ಕೆ ಎರಡು ದೊಡ್ಡಚಮಚ ಜೇನು ಬೆರೆಸಿ

*ಈ ಮಿಶ್ರಣಕ್ಕೆ ಒಂದು ಮಧ್ಯಮ ಗಾತ್ರದ ಮಾವಿನ ಹಣ್ಣಿನ ತಿರುಳನ್ನು ಬೆರೆಸಿ. ಜೊತೆಗೇ ಒಂದು ದೊಡ್ಡಚಮಚ *ಆಲಿವ್ ಎಣ್ಣೆ ಹಾಕಿ ಎಲ್ಲವನ್ನೂ ನಯವಾದ ಲೇಪನವಾಗುವಂತೆ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ನಿಮ್ಮ ಮುಖ, ಕುತ್ತಿಗೆ, ಕೈಗಳಿಗೆ ತೆಳುವಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.

English summary

Face Masks To Keep Your Skin 10 Years Younger

Homemade face masks are excellent for ageing skin, as they do not contain any chemicals or harmful ingredients. Also, due to natural proteins, vitamins and antioxidants present in the face masks, they help give us a younger-looking skin.
Story first published: Tuesday, April 18, 2017, 20:27 [IST]
X
Desktop Bottom Promotion