For Quick Alerts
ALLOW NOTIFICATIONS  
For Daily Alerts

ಎಣ್ಣೆ ಚರ್ಮದ ಸಮಸ್ಯೆಯೇ? 'ಹಣ್ಣುಗಳ ಸ್ಕ್ರಬ್‌' ಪ್ರಯತ್ನಿಸಿ...

ನಿಮ್ಮ ಚರ್ಮವೂ ಎಣ್ಣೆಚರ್ಮವಾಗಿದ್ದು ಇದುವರೆಗಿನ ಪ್ರಯತ್ನಗಳು ಮತ್ತು ವ್ಯಯಿಸಿದ ಹಣ ಹೊಳೆಯಲ್ಲಿ ಹುಣಸೆ ತೊಳದಷ್ಟೇ ಫಲಕಾರಿಯಾದ್ದರೆ ಇದಕ್ಕೆ ಸುಲಭವಾದ, ಸುರಕ್ಷಿತವಾದ ಮತ್ತು ಅಗ್ಗವೂ ಆದ ನೈಸರ್ಗಿಕ ವಿಧಾನವನ್ನು ಅನುಸರಿಸುವುದೇ ಸೂಕ್ತ.

By Arshad
|

ಎಣ್ಣೆಚರ್ಮದವರು ಇತರರಿಗಿಂತ ಕಡಿಮೆ ಸಮಯದಲ್ಲಿ ಇತರರ ಗಮನ ಸೆಳೆಯ್ತುತಾರೆ. ಎಣ್ಣೆಯ ಪಸೆಯಿಂದ ಹೊಳೆಯುವ ಚರ್ಮದಿಂದಾಗಿ ಅಲ್ಲ, ಬದಲಿಗೆ ಇದರ ಎಣ್ಣೆಪಸೆ, ಮೊಡವೆಗಳು, ಸೂಕ್ಷ್ಮರಂಧ್ರಗಳು ಕಣ್ಣಿಗೆ ಕಾಣುವಷ್ಟು ಹಿಗ್ಗಿರುವುದು, ಬ್ಲಾಕ್ ಹೆಡ್ ಮೊದಲಾದವು ಸ್ಪಷ್ಟವಾಗಿಯೇ ಗೋಚರಿಸುವ ಕಾರಣ ಎದುರಿನವರ ಮನಸ್ಸಿನಲ್ಲಿ ಋಣಾತ್ಮಕ ಭಾವನೆಯನ್ನುಂಟುಮಾಡುತ್ತದೆ. ವಾಸ್ತವವಾಗಿ ಎಣ್ಣೆಚರ್ಮದವರು ಇವುಗಳಿಂದ ಬಿಡುಗಡೆ ಪಡೆಯಲು ಪ್ರಯತ್ನ ಮಾಡದೇ ಇರಲಾರರು, ಆದರೆ ಹೆಚ್ಚಿನ ಪ್ರಯತ್ನಗಳು ಫಲಕಾರಿಯಾಗಿಲ್ಲ ಅಷ್ಟೇ. ನಿಜಕ್ಕೂ ಎಣ್ಣೆಯುಕ್ತ ತ್ವಚೆ ಸೌಂದರ್ಯವನ್ನು ವೃದ್ಧಿಸುತ್ತದೆಯೇ?

ಒಂದು ವೇಳೆ ನಿಮ್ಮ ಚರ್ಮವೂ ಎಣ್ಣೆಚರ್ಮವಾಗಿದ್ದು ಇದುವರೆಗಿನ ಪ್ರಯತ್ನಗಳು ಮತ್ತು ವ್ಯಯಿಸಿದ ಹಣ ಹೊಳೆಯಲ್ಲಿ ಹುಣಸೆ ತೊಳದಷ್ಟೇ ಫಲಕಾರಿಯಾದ್ದರೆ ಇದಕ್ಕೆ ಸುಲಭವಾದ, ಸುರಕ್ಷಿತವಾದ ಮತ್ತು ಅಗ್ಗವೂ ಆದ ನೈಸರ್ಗಿಕ ವಿಧಾನವನ್ನು ಅನುಸರಿಸುವುದೇ ಸೂಕ್ತ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಕೆಲವಾರು ಮಾಹಿತಿಗಳನ್ನು ಸಂಗ್ರಹಿಸಿದ್ದು ಈ ಮೂಲಕ ಮನೆಯಲ್ಲಿಯೇ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸಲು ಮತ್ತು ಸಹಜಸೌಂದರ್ಯ ಹೆಚ್ಚಿಸಲು ಈ ಮೂಲಕ ನೆರವಾಗಲು ಹರ್ಷಿಸುತ್ತದೆ..

ಅನಾನಸ್ ಸ್ಕ್ರಬ್

ಅನಾನಸ್ ಸ್ಕ್ರಬ್

ಒಂದು ಚೆನ್ನಾಗಿ ಹಣ್ಣಾದ ಅನಾನಾಸಿನ ತಿರುಳಿನ ಕೆಲವು ತುಂಡುಗಳನ್ನು ಚಿಕ್ಕದಾಗಿ ತುಂಡರಿಸಿ ತಲಾ ಎರಡು ಚಿಕ್ಕಚಮಚದಷ್ಟು ಆಲಿವ್ ಎಣ್ಣೆ ಮತ್ತು ಪಾರ್ಸ್ಲೆ ಎಲೆಗಳ ಚಿಕ್ಕ ಚಿಕ್ಕ ಚೂರುಗಳನ್ನು ಬೆರೆಸಿ. ಈ ಮಿಶ್ರಣವನ್ನು ಸ್ಕ್ರಬ್ ಪ್ಯಾಡ್ ಬಳಸಿ ನಯವಾಗಿ ಮುಖವನ್ನು ಮಸಾಜ್ ಮಾಡಿ. ಸುಮಾರು ಮೂರರಿಂದ ನಾಲ್ಕು ನಿಮಿಷ ಮಸಾಜ್ ಮಾಡುತ್ತಾ ಒರೆಸಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.ಮುಖದ ಸೌಂದರ್ಯಕ್ಕೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್!

ಬಾಳೆಹಣ್ಣಿನ ಸ್ಕ್ರಬ್

ಬಾಳೆಹಣ್ಣಿನ ಸ್ಕ್ರಬ್

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಳನ್ನು ಕೊಂಚ ಹಸಿ ಹಾಲು ಮತ್ತು ಓಟ್ಸ್ ರವೆಯೊಂದಿಗೆ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಪ್ಪನಾಗಿ ಮುಖದ ಮೇಲೆ ಹಚ್ಚಿ ಕೊಂಚ ಹೊತ್ತಿನ ಬಳಿಕ ಸ್ಕ್ರಬ್ ಪ್ಯಾಡ್ ಒಂದನ್ನು ಬಳಸಿ ನಯಯಾಗಿ ಮಸಾಜ್ ಮಾಡುತ್ತಾ ಒರೆಸಿಕೊಳ್ಳಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಿತ್ತಳೆ ಹಣ್ಣಿನ ಸ್ಕ್ರಬ್

ಕಿತ್ತಳೆ ಹಣ್ಣಿನ ಸ್ಕ್ರಬ್

ಒಂದು ದೊಡ್ಡ ಚಮಚ ಕಿತ್ತಳೆ ಹಣ್ಣಿನ ರಸ ಮತ್ತು ತಲಾ ಒಂದು ಚಿಕ್ಕ ಚಮಚ ಬಿಳಿಸಕ್ಕರೆ ಮತ್ತು ಜೇನು ಬೆರೆಸಿ ಮಿಶ್ರಣ ಮಾಡಿ. ಮೊದಲು ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ಬಳಿಕ ಈ ಮಿಶ್ರಣವನ್ನು ತೆಳುವಾಗಿ ಚರ್ಮದ ಮೇಲೆ ಲೇಪಿಸಿಕೊಳ್ಳಿ. ಬಳಿಕ ಕೊಂಚವೇ ಒತ್ತಡದಿಂದ ಸ್ಕ್ರಬ್ ಪ್ಯಾಡ್ ಬಳಸಿ ನಯವಾಗಿ ಉಜ್ಜಿಕೊಂಡ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಮುಖದ ಅಂದ-ಚೆಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ಪಪ್ಪಾಯಿ ಸ್ಕ್ರಬ್

ಪಪ್ಪಾಯಿ ಸ್ಕ್ರಬ್

ಈ ವಿಧಾನ ಅತಿ ಹೆಚ್ಚು ಎಣ್ಣೆ ಪಸೆ ಇರುವ ಚರ್ಮಕ್ಕೆ ಸೂಕ್ತವಾಗಿದೆ. ಸುಮಾರು ಎರಡು ಮೂರು ಚಿಕ್ಕ ತುಂಡು ಪೊಪಾಯಿಹಣ್ಣಿಗೆ ತಲಾ ಒಂದು ಚಿಕ್ಕ ಚಮಚ ಟೊಮಾಟೋ ಪ್ಯೂರಿ ಮತ್ತು ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದ ಮುಖಕ್ಕೆ ನಯವಾಗಿ ಹಚ್ಚಿ ಮಸಾಜ್ ಮಾಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಪುನರಾವರ್ತಿಸಿ.

ಕಲ್ಲಂಗಡಿ ಹಣ್ಣಿನ ಸ್ಕ್ರಬ್

ಕಲ್ಲಂಗಡಿ ಹಣ್ಣಿನ ಸ್ಕ್ರಬ್

ಸುಮಾರು ಎರಡು ಮೂರು ಚಿಕ್ಕ ತುಂಡು ಕಲ್ಲಂಗಡಿ ಹಣ್ಣಿನ ಬೀಜವಿಲ್ಲದ ತಿರುಳನ್ನು ತಲಾ ಒಂದು ಚಿಕ್ಕಚಮಚ ಸಕ್ಕರೆ ಮತ್ತು ಜೇನು ಬೆರೆಸಿ ಮಿಶ್ರಣ ಮಾಡಿ. ಮೊದಲು ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ಬಳಿಕ ಈ ಮಿಶ್ರಣವನ್ನು ತೆಳುವಾಗಿ ಚರ್ಮದ ಮೇಲೆ ಲೇಪಿಸಿಕೊಳ್ಳಿ. ಬಳಿಕ ಕೊಂಚವೇ ಒತ್ತಡದಿಂದ ಸ್ಕ್ರಬ್ ಪ್ಯಾಡ್ ಬಳಸಿ ನಯವಾಗಿ ಉಜ್ಜಿಕೊಂಡ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.ತ್ವಚೆಯನ್ನು ತಂಪಾಗಿಸುವ 'ಕಲ್ಲಂಗಡಿ ಹಣ್ಣಿನ' ಫೇಸ್​ ಪ್ಯಾಕ್

English summary

Effective Homemade Fruit Scrubs For Oily Skin

If you're someone who has tried a plethora of store-bought skin care products and still has to deal with the trials and tribulations of this skin type, then we suggest you try natural remedies that are safer and affordable. So today at Boldsky, we have compiled a list of oil-fighting fruit scrubs that can be easily prepared in the comfort of your home. Give these scrubs a try to witness the change yourself.
X
Desktop Bottom Promotion