For Quick Alerts
ALLOW NOTIFICATIONS  
For Daily Alerts

ತ್ವರಿತವಾಗಿ 'ಮೊಡವೆ ಕಲೆ' ಮಾಯ ಮಾಡೋ ಆಯುರ್ವೇದಿಕ್‌ ಔಷಧಿಗಳು

ಕೆಲವೊಂದು ಆಯುರ್ವೇದಿಕ್‌ ಔಷಧಿಗಳು ಮುಖದಲ್ಲಿರುವ ಮೊಡವೆ ಕಲೆಗಳನ್ನು ನಿವಾರಣೆ ಮಾಡಿ ಚರ್ಮಕ್ಕೆ ಯಾವುದೇ ಅಡ್ಡ ಪರಿಣಾಮವಾಗದಂತೆ ನೋಡಿಕೊಳ್ಳುತ್ತದೆ. ಇದು ಯಾವುದೆಂದು ನೀವು ತಿಳಿದುಕೊಳ್ಳಿ..

By Hemanth
|

ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡರೆ ಅದಕ್ಕಿಂತ ಕೆಟ್ಟ ಅನುಭವ ಬೇರೊಂದಿಲ್ಲ. ಮುಖದಲ್ಲಿ ಮೊಡವೆಗಳು ಮೂಡಿದ ಬಳಿಕ ಅದರ ನಿವಾರಣೆಗೆ ಹಲವಾರು ರೀತಿಯ ಮದ್ದುಗಳನ್ನು ಬಳಸುತ್ತೇವೆ. ಇದು ಆಯುರ್ವೇದ ಅಥವಾ ಬೇರೆ ಯಾವುದೇ ಇರಲಿ. ಈ ಔಷಧಿಗಳಿಂದ ಮುಖದಲ್ಲಿನ ಮೊಡವೆಗಳು ಮಾಯವಾಗಬಹುದು. ಮೊಡವೆ ಕಲೆ ನಿವಾರಣೆಗೆ 10 ವಿಧಾನ

ಆದರೆ ಮೊಡವೆಗಳ ಕಲೆಗಳು ಮಾತ್ರ ಹಾಗೆ ಉಳಿದುಕೊಳ್ಳುತ್ತದೆ. ಇದು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಕೆಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಕಲೆಗಳನ್ನು ನಿವಾರಣೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಕ್ರೀಮ್‌ಗಳನ್ನು ಬಳಸಿ ನೋಡಿದರೂ ನಿಮಗೆ ಯಾವುದೇ ಪ್ರಯೋಜನವಾಗಿರಲಿಕ್ಕಿಲ್ಲ. ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಇದಕ್ಕಾಗಿ ಕೆಲವೊಂದು ಆಯುರ್ವೇದಿಕ್‌ ಔಷಧಿಗಳು ಮುಖದಲ್ಲಿರುವ ಮೊಡವೆ ಕಲೆಗಳನ್ನು ನಿವಾರಣೆ ಮಾಡಿ ಚರ್ಮಕ್ಕೆ ಯಾವುದೇ ಅಡ್ಡ ಪರಿಣಾಮವಾಗದಂತೆ ನೋಡಿಕೊಳ್ಳುತ್ತದೆ. ಇದು ಯಾವುದೆಂದು ನೀವು ತಿಳಿದುಕೊಳ್ಳಿ....

ತುಳಸಿ

ತುಳಸಿ

ತುಳಸಿ ಎನ್ನುವುದು ಭಾರತೀಯರಿಗೆ ತುಂಬಾ ಪೂಜ್ಯನೀಯ ಮತ್ತು ಇದು ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುವುದು. ತುಳಸಿಯು ಮೊಡವೆಗಳ ಕಲೆಗಳನ್ನು ನಿವಾರಿಸುವಲ್ಲಿ ಅಗ್ರಗಣ್ಯವೆನಿಸಿದೆ. ತುಳಸಿ ಎಲೆಗಳು ಮತ್ತು ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಭಾದಿತ ಜಾಗಕ್ಕೆ ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರರಿಂದ ನಾಲ್ಕು ಸಲ ಇದನ್ನು ಹಚ್ಚಿಕೊಂಡರೆ ಸಮಸ್ಯೆ ನಿವಾರಣೆಯಾಗುವುದು.

ಗಂಧ(ಚಂದನ)

ಗಂಧ(ಚಂದನ)

ಆಯುರ್ವೇದದ ಹಲವಾರು ಔಷಧಿಗಳಲ್ಲಿ ಗಂಧವನ್ನು ಬಳಸಿರುವುದನ್ನು ನಾವು ನೋಡಿರುತ್ತೇವೆ. ಶಮನಕಾರಿ ಹಾಗೂ ತಂಪಾಗಿಸುವ ಗುಣವನ್ನು ಹೊಂದಿರುವಂತಹ ಗಂಧವು ತುಂಬಾ ಪರಿಣಾಮಕಾರಿಯಾಗಿದೆ. ಇದು ಕಲೆಗಳನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಲಿದೆ.

ಬಳಕೆ ಮಾಡುವ ವಿಧಾನ

ಬಳಕೆ ಮಾಡುವ ವಿಧಾನ

ಚಂದನಕ್ಕೆ ರೋಸ್ ವಾಟರ್ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಮೊಡವೆಗಳ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದ ಬಳಿಕ ನೀರಿನಿಂದ ತೊಳೆಯಿರಿ. ಪ್ರತೀ ದಿನ ಇದನ್ನು ಬಳಸಿದರೆ ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ, ಚಂದನದ ಫೇಸ್ ಪ್ಯಾಕ್....

ಪುದೀನಾ

ಪುದೀನಾ

ಪುದೀನಾ ಎಲೆಗಳು ತುಂಬಾ ರುಚಿಕರ ಹಾಗೂ ಕೆಲವೊಂದು ಆರೋಗ್ಯಕಾರಿ ಗುಣಗಳನ್ನು ಹೊಂದಿವೆ. ಇದರಲ್ಲಿರುವ ತಂಪಾಗಿಸುವ ಹಾಗೂ ಸಂಕೋಚನ ಅಂಶಗಳು ಮೊಡವೆಗಳು ಉಂಟುಮಾಡುವಂತಹ ತುರಿಕೆಯನ್ನು ಇದು ಕಡಿಮೆ ಮಾಡಿ ಕಲೆಗಳು ಮೂಡದಂತೆ ನೋಡಿಕೊಳ್ಳುವುದು. ಪುದೀನಾ ಎಲೆಗಳ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಹೇಗೆ?

ಬೇವು

ಬೇವು

ಭಾರತೀಯರು ಹೆಚ್ಚಾಗಿ ಬೇವಿನ ಮರಗಳನ್ನು ಬೆಳೆಸಿರುವುದು ಯಾಕೆಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಬೇವಿನ ಮರಗಳನ್ನು ಪ್ರತಿಯೊಂದು ಕಡೆಗಳಲ್ಲೂ ಬೆಳೆಸಲಾಗಿದೆ. ಬೇವಿನ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಮೊಡವೆ ಹಾಗು ಮೊಡವೆಯ ಕಲೆಗಳನ್ನು ದೂರವಿಡುವುದು. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಬೇವಿನ ಎಲೆಗಳಿಗೆ ನೀರನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಹಾಲ ಹಾಗೆ ಬಿಡಿ. ಇದು ಒಣಗಿದ ಬಳಿಕ ನೀರು ಹಾಕಿ ತೊಳೆಯಿರಿ. ನಿತ್ಯವೂ ನೀವು ಬಳಸಿದಾಗ ಫಲಿತಾಂಶವನ್ನು ಪಡೆಯಬಹುದು.

English summary

Effective Ayurvedic Remedies To Remove Pimple Marks

If you too are left wondering, if you will ever be able to get rid of these pimples and their stubborn marks, then fret not. The good news is that Ayurveda has many natural herbs tucked away that can help you get rid of the pimple marks. Here's presenting to you some of the Ayurvedic remedies that help get rid of those stubborn pimple marks
X
Desktop Bottom Promotion